Asianet Suvarna News Asianet Suvarna News

150 ನಿಮಿಷದಲ್ಲಿ ಗುಜರಾತಿಂದ ಮುಂಬೈಗೆ ಜೀವಂತ ಹೃದಯ ರವಾನೆ: ಇಂಡಿಗೋ ಕಾರ್ಯಕ್ಕೆ ಶ್ಲಾಘನೆ

ಇಂಡಿಗೋ ತಂಡವು ಎರಡು ಗಂಟೆ ಇಪ್ಪತ್ತೆರಡು ನಿಮಿಷಗಳಲ್ಲಿ ವಡೋದರಾದ ಆಪರೇಷನ್ ಥಿಯೇಟರ್‌ನಿಂದ ಮುಂಬೈನ ಗ್ಲೋಬಲ್ ಆಸ್ಪತ್ರೆಗೆ ಜೀವಂತ ಹೃದಯವನ್ನು ಸುರಕ್ಷಿತವಾಗಿ ವರ್ಗಾಯಿಸಿದೆ. 

IndiGo Transports Live Heart From Vadodara To Mumbai Hospital In 150 Minutes Saves Life mnj
Author
Bengaluru, First Published Jun 13, 2022, 5:20 PM IST

ಮುಂಬೈ (ಜೂ. 13): ಜೂನ್ 7 ರಂದು ಇಂಡಿಗೋ ವಿಮಾನದ ಮೂಲಕ ಗುಜಾರಾತಿನ ಬರೋಡಾದಿಂದ ಮುಂಬೈಗೆ ಜೀವಂತ ಹೃದಯವನ್ನು ಕೇವಲ ಎರಡು ಗಂಟೆಗಳಲ್ಲಿ ಯಶಸ್ವಿಯಾಗಿ ಸಾಗಿಸಲಾಗಿದೆ. ಹೃದಯವನ್ನು ವಡೋದರಾದ ಆಸ್ಪತ್ರೆಯಿಂದ ಕಸಿಗಾಗಿ ಮುಂಬೈನ ಆಸ್ಪತ್ರೆಗೆ ವರ್ಗಾಯಿಸಲಾಯಿತು ಎಂದು ಇಂಡಿಗೋ ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಹೃದಯವನ್ನು ವಿಮಾನ ನಿಲ್ದಾಣದಿಂದ ಮುಂಬೈ ಆಸ್ಪತ್ರೆಗೆ ಕೊಂಡೊಯ್ಯಲು ಇಂಡಿಗೋ  ಸಾರಿಗೆ ವ್ಯವಸ್ಥೆಯನ್ನು ಸಹ ಒದಗಿಸಿದೆ.

ಇಂಡಿಗೋ ತಂಡವು ಎರಡು ಗಂಟೆ ಇಪ್ಪತ್ತೆರಡು ನಿಮಿಷಗಳಲ್ಲಿ ವಡೋದರಾದ ಆಪರೇಷನ್ ಥಿಯೇಟರ್‌ನಿಂದ ಮುಂಬೈನ ಗ್ಲೋಬಲ್ ಆಸ್ಪತ್ರೆಗಳಿಗೆ ಜೀವಂತ ಹೃದಯವನ್ನು ಸುರಕ್ಷಿತವಾಗಿ ವರ್ಗಾಯಿಸಿದೆ. ಗ್ಲೋಬಲ್ ಹಾಸ್ಪಿಟಲ್ಸ್, ಪರೇಲ್‌ನ ತಂಡವು ವಡೋದರಾದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೃದಯನ್ನು ಪಡೆದು, ನಂತರ ಅದನ್ನು ಯಶಸ್ವಿ ಕಸಿಗಾಗಿ ಮುಂಬೈನ ಆಸ್ಪತ್ರೆಗೆ ವರ್ಗಾಯಿಸಿ ವ್ಯಕ್ತಿಯೊಬ್ಬರ ಜೀವವನ್ನು ಉಳಿಸಿದೆ. 

ಈ ಬೆನ್ನಲ್ಲೇ ಇಂಡಿಗೋ ಸಿಇಒ ರೊನೊಜೋಯ್ ದತ್ತಾ ಅವರ ತಂಡವನ್ನು ಅಭಿನಂದಿಸಿದ್ದು ಅವರ ವಿಮಾನಯಾನ ಸಂಸ್ಥೆಯು ಜೀವ ಉಳಿಸಲು ಅವಕಾಶ ಪಡೆದದ್ದಕ್ಕಾಗಿ ಹೆಮ್ಮೆ ಪಡುತ್ತದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ವಿಮಾನ ಸಂಸ್ಥೆಯಾದ ಇಂಡಿಗೋ ಮೇ 20 ರಂದು ಪುಣೆಯಿಂದ ಹೈದರಾಬಾದ್‌ಗೆ ಜೀವಂತ ಶ್ವಾಸಕೋಶಗಳನ್ನು ಸಾಗಿಸಲು ಸಹಾಯ ಮಾಡಿತ್ತು. 

ಇದನ್ನೂ ಓದಿ: ಯುವಜನರು ಹಾರ್ಟ್‌ ಸ್ಕ್ರೀನಿಂಗ್ ಮಾಡೋದ್ರಿಂದ ಹೃದಯಾಘಾತ ತಪ್ಪಿಸಬಹುದಾ?

ಸಿಬ್ಬಂದಿಗಳಿಗೆ ಅಭಿನಂದನೆ:  "ಸುರಕ್ಷಿತ ಮತ್ತು ದಕ್ಷ ಲಾಜಿಸ್ಟಿಕ್ಸ್ ಮೂಲಕ ಸ್ವೀಕರಿಸುವವರಿಗೆ ಸಮಯಕ್ಕೆ ಸರಿಯಾಗಿ ಜೀವಂತ ಅಂಗವನ್ನು (ಹೃದಯ) ವರ್ಗಾಯಿಸುವಲ್ಲಿ ಗ್ಲೋಬಲ್ ಆಸ್ಪತ್ರೆಗಳ ತಂಡವನ್ನು ಬೆಂಬಲಿಸಿದ್ದಕ್ಕಾಗಿ ನಾವು ಹೆಮ್ಮೆ ಪಡುತ್ತೇವೆ. ಪ್ರತಿಯೊಂದು ಜೀವವೂ ಅಮೂಲ್ಯವಾಗಿದೆ ಮತ್ತು  ಒಂದು ಜೀವ ಉಳಿಸಲು ನೀಡಿದ ಅವಕಾಶವನ್ನು ಇಂಡಿಗೋ ಪ್ರಶಂಸಿಸುತ್ತದೆ. ನಾನು ವಡೋದರಾ ಮತ್ತು ಮುಂಬೈನಲ್ಲಿರುವ ನಮ್ಮ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಈ ಪ್ರಯತ್ನಕ್ಕೆ ಸಹಕರಿಸಿದ ಸಿಬ್ಬಂದಿಯನ್ನು ಅಭಿನಂದಿಸಲು ಇಷ್ಟಪಡುತ್ತೇನೆ" ಎಂದು ಇಂಡಿಗೋ ಸಿಇಒ ಹೇಳಿದ್ದಾರೆ. 

ಇನ್ನು ಗ್ಲೋಬಲ್ ಹಾಸ್ಪಿಟಲ್ಸ್,  ಜೀವಂತ ಹೃದಯವನ್ನು ಯಶಸ್ವಿಯಾಗಿ ಸಾಗಿಸಿದ್ದಕ್ಕಾಗಿ ಇಂಡಿಗೋ ತಂಡಕ್ಕೆ ತನ್ನ ಕೃತಜ್ಞತೆಯನ್ನು ತಿಳಿಸಿದೆ. "ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋದ ಭದ್ರತಾ ವ್ಯವಸ್ಥಾಪಕರಾದ ಮನೋಜ್ ದಳವಿ ಮತ್ತು ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ಇಂಡಿಗೋದ ಭದ್ರತಾ ವ್ಯವಸ್ಥಾಪಕರಾದ ರಾಮಚಂದ್ರ ದ್ವಿವೇದಿ ಅವರಿಗೆ ಟ್ರಾನ್ಸ್‌ಪ್ಲಾಂಟ್ ತಂಡದ ಜತೆ ಸಹಕರಿಸಿ ಮತ್ತು ಸಹಾಯ ಮಾಡಿದ್ದಕ್ಕಾಗಿ ನಾವು ಧನ್ಯವಾದ ಹೇಳಲು ಬಯಸುತ್ತೇವೆ" ಎಂದು ಗ್ಲೋಬಲ್ ಹಾಸ್ಪಿಟಲ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಇದನ್ನೂ ಓದಿ: ವಿಕಲಚೇತನ ಬಾಲಕನ ವಿಮಾನ ಹತ್ತಲು ಬಿಡದ IndiGo ಏರ್‌ಲೈನ್ಸ್‌ಗೆ 5 ಲಕ್ಷ ದಂಡ!

"ಮುಂಬೈಗೆ ಅಂಗಗಳ ಸುರಕ್ಷಿತ, ಕ್ಷಿಪ್ರ ಮತ್ತು ಸುಗಮ ವರ್ಗಾವಣೆಗಾಗಿ ಇಂಡಿಗೋ ಜೊತೆ ಪಾಲುದಾರಿಕೆಯಲ್ಲಿ ನಾವು ಅಪಾರ ಹೆಮ್ಮೆಪಡುತ್ತೇವೆ. ಇಂಡಿಗೋ ತಂಡವು ಯಾವಾಗಲೂ ತಮ್ಮ ಸದಾ ಸಿದ್ಧ ಮನೋಭಾವ ಮತ್ತು ದಿನದ ಯಾವುದೇ ಸಮಯದಲ್ಲಿ ನಮಗೆ ಬೆಂಬಲ ನೀಡುವ ಸಿದ್ಧತೆಯೊಂದಿಗೆ ನಮ್ಮನ್ನು ಬೆರಗುಗೊಳಿಸುತ್ತದೆ. ನಾವು ಮತ್ತೊಮ್ಮೆ ತಂಡಕ್ಕೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಅವರ ನಿರಂತರ ಬೆಂಬಲವನ್ನು ಶಾಶ್ವತವಾಗಿ ಎದುರುನೋಡುತ್ತೇವೆ!" ಎಂದು ಗ್ಲೋಬಲ್ ಹಾಸ್ಪಿಟಲ್ಸ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Follow Us:
Download App:
  • android
  • ios