ಇತಿಹಾಸದ ಅತಿದೊಡ್ಡ ವಿಮಾನ ಒಪ್ಪಂದಕ್ಕೆ ಸಜ್ಜಾಗುತ್ತಿರುವ ಏರ್‌ಇಂಡಿಯಾ!
ಟಾಟಾ ಮಾಲೀಕತ್ವದ ಅಡಿಯಲ್ಲಿ, ಏರ್‌ಇಂಡಿಯಾವು ಏರ್‌ಬಸ್ ಎಸ್‌ಇಯ A320neo ಫ್ಯಾಮಿಲಿ ಜೆಟ್‌ಗಳು ಅಥವಾ ಬೋಯಿಂಗ್ ಕಾರ್ಪೋರೇಷನ್‌ನ 737 ಮ್ಯಾಕ್ಸ್ ಮಾಡೆಲ್‌ಗಳನ್ನು ಅಥವಾ ಎರಡರ ಮಿಶ್ರಣವನ್ನು ಆರ್ಡರ್ ಮಾಡಬಹುದು ಎಂದು ಅಂದಾಜಿಸಲಾಗಿದೆ.
ನವದೆಹಲಿ (ಜೂನ್ 20): ಏರ್ ಇಂಡಿಯಾ ಲಿಮಿಟೆಡ್ (Air India Ltd) ಸುಮಾರು 300 ನ್ಯಾರೋಬಾಡಿ (Narrow Body) ಜೆಟ್‌ಗಳನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದೆ. ಹಾಗೇನಾದರೂ ಇದು ಖಚಿತವಾದಲ್ಲಿ ಇತಿಹಾಸದಲ್ಲಿಯೇ ಅತಿದೊಡ್ಡ ವಾಣಿಜ್ಯ ವಿಮಾನ ಒಪ್ಪಂದ ಇದಾಗಿರಲಿದೆ ಎಂದು ಹೇಳಲಾಗಿದೆ. ಸರ್ಕಾರಿ ಮಾಲೀಕತ್ವದಿಂದ ಹೊಸ ಮಾಲೀಕರಾದ ಟಾಟಾ (Tata Group) ತೆಕ್ಕೆಗೆ ಸೇರಿದ ಬಳಿಕ ಏರ್‌ಇಂಡಿಯಾವನ್ನು ಸಂಪೂರ್ಣವಾಗಿ ನವೀಕರಣ ಮಾಡುವ ಪ್ರಯತ್ನದ ದಿಸೆಯಲ್ಲಿ ಸಾಗಿದೆ.
ಏರ್‌ಇಂಡಿಯಾ ಲಿಮಿಟೆಡ್, ಏರ್‌ಬಸ್ (AirBus) ಎಸ್‌ಇಯ A320neo ಫ್ಯಾಮಿಲಿ ಜೆಟ್‌ಗಳು ಅಥವಾ ಬೋಯಿಂಗ್ ಕಾರ್ಪೋರೇಷನ್‌ನ (boeing corporation) 737 ಮ್ಯಾಕ್ಸ್ ಮಾಡೆಲ್‌ಗಳನ್ನು ಅಥವಾ ಎರಡರ ಮಿಶ್ರಣವನ್ನು ಆರ್ಡರ್ ಮಾಡಬಹುದು. ಈ ಮಾತುಕತೆಗಳೂ ಇನ್ನು ಗೌಪ್ಯವಾಗಿದೆ ಎಂದು ಈ ವಿಚಾರವನ್ನು ತಿಳಿದ ವ್ಯಕ್ತಿಗಳು ತಿಳಿಸಿದ್ದಾರೆ. ಒಟ್ಟು 300, 737 ಮ್ಯಾಕ್ಸ್-10 ಜೆಟ್ ವಿಮಾನದ ಮೌಲ್ಯ 40.5 ಬಿಲಿಯನ್ ಯುಎಸ್ ಡಾಲರ್ (3156 ಕೋಟಿ) ಎಂದು ಅಂದಾಜಿಸಲಾಗಿತ್ತು. ಇಂಥ ದೊಡ್ಡ ಖರೀದಿಗಳಲ್ಲಿ ದೊಡ್ಡ ಮಟ್ಟದ ರಿಯಾಯಿತಿಗಳೂ ಸಾಮಾನ್ಯವಾಗಿರುತ್ತದೆ.
ಭಾರತದಲ್ಲಿ ನ್ಯಾರೋಬಾಡಿ ಆರ್ಡರರ್ ಗೆಲ್ಲುವುದು ಬೋಯಿಂಗ್ ಪಾಲಿಗೆ ಸವಾಲಿನ ಕೆಲಸ. ಏಕೆಂದರೆ, ಭಾರತದ ಆಗಸದಲ್ಲಿ ಹೆಚ್ಚಾಗಿ ಏರ್‌ಬಸ್ ಕಂಪನಿಯ ವಿಮಾನಗಳೇ ಪ್ರಾಬಲ್ಯ ಸಾಧಿಸಿದೆ. ಕೋವಿಡ್-19 ಸಾಂಕ್ರಾಮಿಕಕ್ಕೂ ಮುನ್ನ ಭಾರತದ ವಿಮಾನಯಾನ ಕ್ಷೇತ್ರವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ವಿಮಾನಯಾನ ಕ್ಷೇತ್ರ ಎನಿಸಿಕೊಂಡಿತ್ತು. ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಇಂಡಿಗೋ (IndiGo), ಯುರೋಪಿಯನ್ ತಯಾರಕರಾದ ಬೋಯಿಂಗ್ ಕಂಪನಿಯ ಅತ್ಯುತ್ತಮವಾಗಿ ಮಾರಾಟವಾಗುವ ವಿಮಾನವಾದ ನ್ಯಾರೋಬಾಡಿ ಜೆಟ್ ನ ದೊಡ್ಡ ಗ್ರಾಹಕನಾಗಿದ್ದು ಈವರೆಗೂ 400ಕ್ಕೂ ಅಧಿಕ ವಿಮಾನದ ಆರ್ಡರ್ ಅನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಟಾಟಾದ ಸಹಮಾಲೀಕತ್ವದಲ್ಲಿರುವ ವಿಸ್ತಾರ, ಗೋ ಏರ್ ಲೈನ್ಸ್ ಇಂಡಿಯಾ ಲಿಮಿಟೆಡ, ಏರ್ ಏಷ್ಯಾ ಇಂಡಿಯಾ ಲಿಮಿಟೆಡ್ ಕುಡ ಬೋಯಿಂಗ್ ಕಂಪನಿಯ ವಿಮಾನಗಳನ್ನೇ ಹಾರಾಟ ಮಾಡುತ್ತದೆ.
300 ವಿಮಾನಗಳ ಉತ್ಪಾದನೆ ಮತ್ತು ವಿತರಣೆಯು ವರ್ಷಗಳು ಅಥವಾ ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಏರ್‌ಬಸ್ ಒಂದು ತಿಂಗಳಲ್ಲಿ ಸುಮಾರು 50 ನ್ಯಾರೋಬಾಡಿ ಜೆಟ್‌ಗಳನ್ನು ನಿರ್ಮಿಸುತ್ತದೆ, ಇದನ್ನು 2023 ರ ಮಧ್ಯದ ವೇಳೆಗೆ 65 ಕ್ಕೆ ಮತ್ತು 2025 ರ ವೇಳೆಗೆ 75 ಕ್ಕೆ ಹೆಚ್ಚಿಸಲು ಯೋಜಿಸಿದೆ.
Air India ಮಹತ್ವದ ನಿರ್ಧಾರ, ಜುಲೈ 26 ರೊಳಗೆ ಸರ್ಕಾರಿ ನಿವಾಸ ಖಾಲಿ ಮಾಡಲು ಸಿಬ್ಬಂದಿಗೆ ಆದೇಶ!
ಏರ್ ಇಂಡಿಯಾ ಮತ್ತು ಬೋಯಿಂಗ್‌ನ ಪ್ರತಿನಿಧಿಗಳು ಈ ಕುರಿತಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಏರ್‌ಬಸ್ ಪ್ರತಿನಿಧಿಯೊಬ್ಬರು ಕಂಪನಿಯು ಯಾವಾಗಲೂ ಅಸ್ತಿತ್ವದಲ್ಲಿರುವ ಮತ್ತು ಸಂಭಾವ್ಯ ಗ್ರಾಹಕರೊಂದಿಗೆ ಸಂಪರ್ಕದಲ್ಲಿರುತ್ತದೆ. ಆದರೆ ಯಾವುದೇ ಚರ್ಚೆಗಳು ಗೌಪ್ಯವಾಗಿರುತ್ತವೆ ಎಂದಿದ್ದಾರೆ.
ನಡು ಆಗಸದಲ್ಲಿ ತಾಂತ್ರಿಕ ದೋಷ: ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಏರ್ ಇಂಡಿಯಾದ ಮಾಲೀಕರಾಗಿರುವ ಟಾಟಾ ಗ್ರೂಪ್ ಕೂಡ ಏರ್‌ಬಸ್ A350 ದೀರ್ಘ-ಶ್ರೇಣಿಯ ಜೆಟ್‌ಗಳ ಆರ್ಡರ್‌ನ ಸನಿಹದಲ್ಲಿದೆ. ಈ ವಿಮಾನವು ನವದೆಹಲಿಯಿಂದ ಅಮೆರಿಕದ ಪಶ್ಚಿಮ ಕರಾವಳಿಯವರೆಗೆ ಯಾವುದೇ ಅಡೆತಡೆ ಇಲ್ಲದೆ ಹಾರಬಲ್ಲುದು ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ. ಹಿಂದೊಮ್ಮೆ ತನ್ನ ಪ್ರೀಮಿಯಂ ಸೇವೆಗಳು ಮತ್ತು ಬಾಲಿವುಡ್ ತಾರೆಯರನ್ನು ಒಳಗೊಂಡ ಜಾಹೀರಾತುಗಳಿಗೆ ಹೆಸರುವಾಸಿಯಾಗಿದ್ದ ಕಂಪನಿಯು, ಈಗಳು ಕೂಡ ಹೆಚ್ಚಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಲಾಭದಾಯಕ ಲ್ಯಾಂಡಿಂಗ್ ಸ್ಲಾಟ್‌ಗಳನ್ನು ಹೊಂದಿದೆ. ಆದರೆ ಇದು ಭಾರತಕ್ಕೆ ತಡೆರಹಿತ ಸೇವೆಗಳನ್ನು ನೀಡುವ ವಿದೇಶಿ ವಿಮಾನಯಾನ ಸಂಸ್ಥೆಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ, ಜೊತೆಗೆ ಮಧ್ಯಪ್ರಾಚ್ಯದಲ್ಲಿ ಹಬ್‌ಗಳ ಮೂಲಕ ಹಾರುವ ವಿಮಾನ ಕಂಪನಿಗಳಿಂದಲೂ ಸ್ಪರ್ಧೆಯನ್ನು ಎದುರಿಸುತ್ತಿದೆ.