ರೈಲಿನ ಈ ವೀಡಿಯೋ ನೋಡಿದ್ರೆ ನೀವು ಇನ್ಮೇಲೆ ರೈಲಲ್ಲಿ ಟೀ ಕುಡಿಯಲ್ಲ..!

ರೈಲಿನಲ್ಲಿ ಚಹಾ ತರುವ ಕಂಟೈನರ್‌ಗಳನ್ನು ರೈಲಿನ ಶೌಚಾಲಯದಲ್ಲೇ ತೊಳೆಯುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Indian Railways Viral video cleaning tea containers in train toilet

ರೈಲಿನಲ್ಲಿ ನೀವು ಕುಳಿತಲ್ಲಿಗೆ ಟೀ ಕಾಫಿ, ಉಪಾಹಾರ ಊಟ ಬರುವುದು ಸಾಮಾನ್ಯ. ರೈಲು ಸ್ಟೇಷನ್ ಒಳಗೆ ನಿಂತ ಕೂಡಲೇ ರೈಲಿನೊಳಗೆ ಆಗಮಿಸುವ ಚಹಾ, ಟೀ ಮಾರಾಟಗಾರರು ಕರೆದು ಕರೆದು ಚಹಾ ನೀಡುವುದನ್ನು ನೀವು ನೋಡಿರಬಹುದು. ಹೀಗೆ ರೈಲಿನಲ್ಲಿ ನೀಡುವ ಆಹಾರದ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತಿವೆ. ಆಹಾರ ಕಳಪೆಯಾಗಿರುತ್ತದೆ, ಹಣಕ್ಕೆ ತಕ್ಕ ಗುಣಮಟ್ಟವಿಲ್ಲ ಎಂದು ಪ್ರಯಾಣಿಕರು ಆರೋಪ ಮಾಡುವುದನ್ನು ನೀವು ಕೇಳಿರಬಹುದು. ಆದರೆ ಹೀಗೆ ರೈಲಿನಲ್ಲಿ ಚಹಾ ತರುವ ಕಂಟೈನರ್‌ಗಳನ್ನು ರೈಲಿನ ಶೌಚಾಲಯದಲ್ಲೇ ತೊಳೆಯುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಆಯೂಬ್ ಎಂಬುವವರು ಪೋಸ್ಟ್ ಮಾಡಿದ್ದು, ಟ್ರೈನ್ ಕಾ ಚಾಯ್ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು 80 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಚಹಾ ಮಾರಾಟಗಾರನೋರ್ವ ತಾನು ರೈಲಿನಲ್ಲಿ ಟೀ ಪೂರೈಕೆ ಮಾಡುವ ಕಂಟೈನರ್‌ನ್ನು ರೈಲಿನ ಶೌಚಾಲಯದ ಜೆಟ್‌ಸ್ಪ್ರೇ ಬಳಸಿ ತೊಳೆಯುತ್ತಿರುವುದು ಕಾಣಿಸುತ್ತಿದೆ.  

ಅಯ್ಯೋ ರೈಲಿನಲ್ಲಿ ಟೀ ಕುಡಿಯುತ್ತಲೇ ಈ ವೀಡಿಯೋವನ್ನು ನೋಡುತ್ತಿದ್ದೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇಷ್ಟೊಂದು ರುಚಿ ಚಹಾಗೆ ಎಲ್ಲಿಂದ ಬಂತು ಅಂತ ನೋಡುತ್ತಿದ್ದೆ ಅಷ್ಟರಲ್ಲಿ ಈ ವೀಡಿಯೋ ಕಾಣಿಸಿತು ಎಂದು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಸದ್ಯ ನಾನು ರೈಲಿನಲ್ಲಿ ಚಹಾ ಕುಡಿಯದೇ ಒಳ್ಳೆ ಕೆಲಸ ಮಾಡಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಯಾವ ರೈಲಿನಲ್ಲಿ ಯಾವಾಗ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ರೈಲಿನಲ್ಲಿ ಸಿಗುವ ಚಹಾವನ್ನು ಕುಡಿಯಬೇಕೆ ಬೇಡವೇ ಎಂದು ಯೋಚಿಸುವಂತೆ ಮಾಡಿದೆ. 

Latest Videos
Follow Us:
Download App:
  • android
  • ios