Indian Railway: ಇಡೀ ದೇಶಕ್ಕೆ ಒಂದೇ ರೈಲು ವೇಳಾಪಟ್ಟಿ: ಇಲ್ಲಿ ಸಿಗುತ್ತೆ ಹೊಸ ಟೈಮ್ ಟೇಬಲ್
ಭಾರತೀಯ ರೈಲ್ವೆ ಇಲಾಖೆಯೂ ಇಡೀ ಭಾರತಕ್ಕೆ ಒಂದೇ ಆಗಿರುವ, ಬದಲಾವಣೆಗಳನ್ನು ಒಳಗೊಂಡ ಹಾಗೂ ಹಲವು ಸುಧಾರಿಸಿದ ಅಂಶಗಳನ್ನು ಒಳಗೊಂಡ ಅಖಿಲ ಭಾರತ ರೈಲ್ವೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿನ್ನೆ (ಅಕ್ಟೋಬರ್ 1) ಈ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯೂ ಇಡೀ ಭಾರತಕ್ಕೆ ಒಂದೇ ಆಗಿರುವ, ಬದಲಾವಣೆಗಳನ್ನು ಒಳಗೊಂಡ ಹಾಗೂ ಹಲವು ಸುಧಾರಿಸಿದ ಅಂಶಗಳನ್ನು ಒಳಗೊಂಡ ಅಖಿಲ ಭಾರತ ರೈಲ್ವೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿನ್ನೆ (ಅಕ್ಟೋಬರ್ 1) ಈ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ರೈಲ್ವೇ ಸಚಿವಾಲಯವು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.indianrailways.gov.in ನಲ್ಲಿ ಈ ಹೊಸ ವೇಳಾಪಟ್ಟಿಯನ್ನು ಹಾಕಿದ್ದು, ಟ್ರೇನ್ಸ್ ಅಟ್ ಎ ಗ್ಲಾನ್ಸ್ (TAG) ಎಂಬ ಹೆಸರಿನಡಿ ಈ ವೇಳಾಪಟ್ಟಿ ಲಭ್ಯವಿದೆ. ಇಲ್ಲಿ ನೀವು ದೇಶದ ಎಲ್ಲಾ ರೈಲುಗಳ ವೇಳಾಪಟ್ಟಿಯನ್ನು ಗಮನಿಸಬಹುದಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ಗತಿಮಾನ್ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್ (Rajdhani Express), ಶತಾಬ್ದಿ ಎಕ್ಸ್‌ಪ್ರೆಸ್, ಹಮ್ಸಫರ್ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್, ದುರಂತೋ ಎಕ್ಸ್‌ಪ್ರೆಸ್, ಅಂತ್ಯೋದಯ ಎಕ್ಸ್‌ಪ್ರೆಸ್, ಗರೀಬ್ ರಥ ಎಕ್ಸ್‌ಪ್ರೆಸ್, ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (Sampark Kranti Express), ಯುವ ಎಕ್ಸ್‌ಪ್ರೆಸ್, ಉದಯ್ ಎಕ್ಸ್‌ಪ್ರೆಸ್ (Uday Express), ಜನಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಇತರ ಎಲ್ಲಾ ರೈಲುಗಳ ವೇಳಾಪಟ್ಟಿ ಟ್ರೇನ್ಸ್ ಅಟ್ ಎ ಗ್ಲಾನ್ಸ್ ನಡಿ ನಿಮಗೆ ಸಿಗಲಿದೆ. ಇವುಗಳು ಸೇರಿದಂತೆ ಒಟ್ಟು 3,240 ರೈಲುಗಳನ್ನು ಭಾರತೀಯ ರೈಲ್ವೆ ನಿರ್ವಹಿಸುತ್ತಿದೆ.
ಕಾಶ್ಮೀರದ ಸೌಂದರ್ಯಕ್ಕೆ ಕಳಶವಿಟ್ಟ ರೈಲ್ವೆ ಬ್ರಿಡ್ಜ್: ಡ್ರೋಣ್ ಸೆರೆ ಹಿಡಿದ ಅದ್ಭುತ ಫೋಟೋಗಳು
ಇವುಗಳ ಜೊತೆ ಹೆಚ್ಚುವರಿಯಾಗಿ ಸುಮಾರು 3,000 ಪ್ಯಾಸೆಂಜರ್ ರೈಲುಗಳು ಮತ್ತು 5,660 ಉಪ ನಗರ ರೈಲುಗಳು (Sub urbun train) ಭಾರತೀಯ ರೈಲ್ವೆ ಜಾಲದ ಮೂಲಕ ಕಾರ್ಯನಿರ್ವಹಿಸುತ್ತವೆ. ಭಾರತೀಯ ರೈಲ್ವೆಯೂ ಪ್ರತಿದಿನ ತಾನು ಅತ್ತಿಂದಿತ್ತ ಸಾಗಿಸುವ ಪ್ರಯಾಣಿಕರ ಸಂಖ್ಯೆ ಸುಮಾರು 2.23 ಕೋಟಿ. ಹೆಚ್ಚುವರಿ ಜನ ದಟ್ಟಣೆಯ ನಿವಾರಣೆಗೆ ಹಾಗೂ ಪ್ರಯಾಣಿಕರ ಬೇಡಿಕೆ ಈಡೇರಿಸಲು 2021-22ರಲ್ಲಿ 65,000 ಕ್ಕೂ ಹೆಚ್ಚು ವಿಶೇಷ ರೈಲು ಟ್ರಿಪ್‌ಗಳನ್ನು ಭಾರತೀಯ ರೈಲ್ವೆ ನಡೆಸಿದೆ.
ಪ್ರಯಾಣಿಕರ ಸಾಗಾಟ ಸಾಮರ್ಥ್ಯ ಹೆಚ್ಚಿಸಲು ಸುಮಾರು 566 ಕೋಚ್‌ಗಳನ್ನು ಶಾಶ್ವತವಾಗಿ ಹೆಚ್ಚಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ರೇಕ್‌ಗಳ ಪರಿಶೀಲನೆ ವೇಳೆ ಸೇವೆಗಳನ್ನು ವಿಸ್ತರಿಸಲು ಹಾಗೂ ಹೆಚ್ಚಿಸಲು ರೇಕ್‌ಗಳನ್ನು ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬುದನ್ನು ರೈಲ್ವೆ ಇಲಾಖೆ ಗಮನಿಸಿದೆ. 2021-22ನೇ ಸಾಲಿನಲ್ಲಿ ರೈಲ್ವೆಯೂ 106 ಹೊಸ ಸೇವೆಗಳನ್ನು ಆಯೋಜಿಸಿದೆ ಹಾಗೂ 212 ಸೇವೆಗಳನ್ನು ವಿಸ್ತರಿಸಿದೆ.
Indian Railways: ರೈಲು ಪ್ರಯಾಣದ ಅನುಭವ ಹೆಚ್ಚಿಸಲು ಸಿದ್ಧವಾದ ವಂದೇ ಭಾರತ್ 2..! ವೈಶಿಷ್ಟ್ಯಗಳು ಹೀಗಿವೆ..
ಪ್ರಸ್ತುತ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ನವದೆಹಲಿ -ವಾರಣಾಸಿ ಮತ್ತು ನವದೆಹಲಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (Matha Vaishnodevi)ನಡುವೆ ಕಾರ್ಯನಿರ್ವಹಿಸುತ್ತಿವೆ. ಸೆಪ್ಟೆಂಬರ್ 30 ರಿಂದ ಗಾಂಧಿನಗರ ಕ್ಯಾಪಿಟಲ್ (Gandhingara Capital) ಮತ್ತು ಮುಂಬೈ ಸೆಂಟ್ರಲ್ ನಡುವೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಭಾರತೀಯ ರೈಲ್ವೆ ಜಾಲದ ಮೂಲಕ ಹೆಚ್ಚಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ತೇಜಸ್ ಎಕ್ಸ್‌ಪ್ರೆಸ್ ರೈಲ ಈಗಾಗಲೇ, ಮನೋರಂಜನೆ, ಸ್ಥಳೀಯ ಪಾಕ ಪದ್ಧತಿ, ವೈ-ಫೈ (Wi-Fi)ಮುಂತಾದ ಆನ್‌ಬೋರ್ಡ್ ಸೇವೆಗಳನ್ನು ಒದಗಿಸುತ್ತಿದೆ. ಈ ವ್ಯವಸ್ಥೆಯನ್ನು ಬೇರೆ ರೈಲುಗಳಿಗೂ ವಿಸ್ತರಿಸುವ ಯೋಜನೆ ಇದೆ. ಪ್ರಸ್ತುತ, ಏಳು ಜೋಡಿ ತೇಜಸ್ ಎಕ್ಸ್‌ಪ್ರೆಸ್ ಸೇವೆಗಳು (Tejas Express services) ಭಾರತೀಯ ರೈಲ್ವೇಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸಮಯಪಾಲನೆಯನ್ನು ಸುಧಾರಿಸಲು ವೇಳಾಪಟ್ಟಿಯಲ್ಲಿ ಅಗತ್ಯ ಬದಲಾವಣೆಗಳನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಹೇಳಿದೆ. ಸಂಘಟಿತ ಪ್ರಯತ್ನಗಳಿಂದಾಗಿ, ಕೋವಿಡ್‌ಗೆ ಮುಂಚಿನ (2019-20) ಸಮಯಕ್ಕೆ ಹೋಲಿಸಿದರೆ ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಸಮಯದ ನಿಷ್ಠತೆ ಸುಮಾರು 9 ಪ್ರತಿಶತದಷ್ಟು ಹೆಚ್ಚಗಿದೆ ಎಂದು ರೈಲ್ವೆ ಹೇಳಿದೆ.