ಕೇವಲ ಎರಡು ಅಡಿ : ಈತ ವಿಶ್ವದ ಅತೀ ಕುಳ್ಳ ವ್ಯಕ್ತಿ : ಗಿನ್ನೆಸ್ ಪುಟ ಸೇರಿದ ಅಫ್ಸಿನ್

ಇರಾನ್‌ನ ವ್ಯಕ್ತಿಯೊಬ್ಬ ವಿಶ್ವದಲ್ಲೇ ಅತ್ಯಂತ ಕುಳ್ಳ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದು, ಈ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾನೆ. ಇರಾನ್‌ ಅಫ್ಸಿನ್ ಘದೆರ್ಜಾಡ್ ಎಂಬಾತನೇ ತನ್ನ ಕುಬ್ಜತೆಯಿಂದಲೇ ಗಿನ್ನೆಸ್ ಪುಟ ಸೇರಿದ ಕುಳ್ಳ.

Guinness World Records World shortest man 20 year old Afshin from Iran akb

ಇರಾನ್‌ನ ವ್ಯಕ್ತಿಯೊಬ್ಬ ವಿಶ್ವದಲ್ಲೇ ಅತ್ಯಂತ ಕುಳ್ಳ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದು, ಈ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾನೆ. ಇರಾನ್‌ ಅಫ್ಸಿನ್ ಘದೆರ್ಜಾಡ್ ಎಂಬಾತನೇ ತನ್ನ ಕುಬ್ಜತೆಯಿಂದಲೇ ಗಿನ್ನೆಸ್ ಪುಟ ಸೇರಿದ ಕುಳ್ಳ. ಕೇವಲ 65.24 ಸೆಂಟಿ ಮೀಟರ್ ಅಂದರೆ 2.ಅಡಿ 1.68 ಇರುವ ಈತನನ್ನು ದುಬೈನಲ್ಲಿ ಡಿಸೆಂಬರ್ 13 ರಂದು ಅಳತೆ ಮಾಡಲಾಯಿತು. ಅಲ್ಲದೇ ಗಿನ್ನೆಸ್ ವಿಶ್ವ ದಾಖಲೆಯ ಸಂಸ್ಥೆ ಕೂಡ ಈ ವಿಚಾರವನ್ನು ಘೋಷಣೆ ಮಾಡಿದೆ. ಈ ಹಿಂದೆ ಈ ದಾಖಲೆ ಹೊಂದಿದ್ದ ವ್ಯಕ್ತಿಗಿಂತ 7 ಸೆಂಟಿ ಮೀಟರ್‌ನಷ್ಟು ಕಡಿಮೆ ಎತ್ತರ ಹೊಂದಿದ್ದರಿಂದ ಅಫ್ಸಿನ್ ಇಸ್ಮಾಯಿಲ್ ಘದೆರ್ಜದ್ ಅವರು ಅತ್ಯಂತ ಕುಳ್ಳ ವ್ಯಕ್ತಿ ಎನಿಸಿಕೊಂಡರು. 20 ವರ್ಷದ ಅಫ್ಸಿನ್ ಇಸ್ಮಾಯಿಲ್ ಘದೆರ್ಜದ್ ಅವರು ಈಗ 65.24 ಸೆಂಟಿಮೀಟರ್ ಎತ್ತರದೊಂದಿಗೆ ವಿಶ್ವದ ಅತ್ಯಂತ ಕುಬ್ಜ ವ್ಯಕ್ತಿ ಎನಿಸಿದ್ದಾರೆ.

ಈ ಹಿಂದೆ ಅತ್ಯಂತ ಕುಬ್ಜ ಎಂಬ ಹೆಗ್ಗಳಿಕೆ ಕೊಲಂಬಿಯಾದ 36 ವರ್ಷದ ಎಡ್ವರ್ಡ್ ನಿನೊ ಹೆರ್ನಾನ್ಡೆಜ್ (Edward "Nino" Hernandez) ಅವರ ಹೆಸರಿನಲ್ಲಿತ್ತು. ಆದರೆ ಇರಾನ್‌ನ ಈ ಅಫ್ಸಿನ್ ಅವರು,  ಎಡ್ವರ್ಡ್ ಅವರಿಗಿಂತಲೂ 7 ಸೆಂಟಿ ಮೀಟರ್ ಕಡಿಮೆ ಎತ್ತರ ಇರುವುದರಿಂದ ಈಗ ಆ ದಾಖಲೆ ಅಫ್ಸಿನ್ ಪಾಲಾಗಿದೆ. ಹಾಗೆಯೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ (Guinness World Records) ಸಂಸ್ಥೆ ಇದುವರೆಗೆ ದಾಖಲಿಸಿದ ಅತ್ಯಂತ ಕಿರಿಯ ವ್ಯಕ್ತಿಗಳ ಪೈಕಿ ಅಫ್ಸಿನ್ ನಾಲ್ಕನೇಯವರು.  ತಮ್ಮ ಈ ಕುಬ್ಜತೆಯನ್ನು ದಾಖಲಿಸುವ ಸಲುವಾಗಿ ಅಫ್ಸಿನ್ ಇರಾನ್‌ನಿಂದ ದುಬೈಗೆ (Dubai) ಆಗಮಿಸಿದ್ದರು. ಅಲ್ಲಿ ಅವರ ಸರಿಯಾದ ಎತ್ತರವನ್ನು ದಾಖಲಿಸುವ ಸಲುವಾಗಿ 24 ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಅಳತೆ ಮಾಡಲಾಯಿತು. ಇದರ ಜೊತೆ ಅಫ್ಸಿನ್ ದುಬೈನಲ್ಲಿ ಕೆಲ ಸ್ಥಳಗಳಿಗೆ ಭೇಟಿ ನೀಡಿದರು.  ಮೊದಲಿಗೆ ಟೈಲರ್ ಹಾಗೂ ಬಾರ್ಬರ್ ಶಾಪ್‌ಗೆ ಭೇಟಿ ನೀಡಿದ ಅಫ್ಸಿನ್ ನಂತರ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎನಿಸಿದ ಬುರ್ಜ್ ಖಲೀಫಾಗೆ (Burj Khalifa) ಭೇಟಿ ನೀಡಿದರು. 

Guinness World Record: ಅಬ್ಬಬ್ಬಾ..ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಅಫ್ಸಿನ್ ಅವರು ಇರಾನ್‌ ನ ಪಶ್ಚಿಮ ಅಜೆರ್ಬಿಜನ್ (West Azerbaijan) ಪ್ರದೇಶದ ಬುಕನ್ ಕೌಂಟಿ (Bukan County) ಎಂದ ಪುಟ್ಟ ಹಳ್ಳಿಯವರಾಗಿದ್ದು, ಕುರ್ದಿಶ್ (Kurdish) ಹಾಗೂ ಪರ್ಶಿಯನ್ (Persian) ಭಾಷೆಯಲ್ಲಿ ಸ್ಪುಟವಾಗಿ ಮಾತನಾಡಬಲ್ಲರು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.  ಅಂದಹಾಗೆ ಅಫ್ಸಿನ್ ಅವರು ಹುಟ್ಟುವಾಗ ಕೇವಲ 700 ಗ್ರಾಂ ತೂಕವಿದ್ದರು. ಅಲ್ಲದೇ ಇಲ್ಲಿಯವರೆಗೆ 6.5 ಕೆಜಿಯವರೆಗೆ ಬೆಳೆದಿದ್ದಾರೆ. ತಮ್ಮ ಕುಬ್ಜತೆಯಿಂದಾಗಿ ಅಫ್ಸಿನ್ ಅವರಿಗೆ ಎಲ್ಲರಂತೆ ಸಾಮಾನ್ಯ ಬದುಕು ಸಾಧ್ಯವಾಗುತ್ತಿಲ್ಲ. ತಮ್ಮ ಈ ಸಣ್ಣ ಗಾತ್ರದಿಂದಾಗಿ ಅವರಿಗೆ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಇದು ಅವರ ಶಿಕ್ಷಣದ (education) ಮೇಲೆ ನಕರಾತ್ಮಕ ಪರಿಣಾಮ ಬೀರಿತು. ನಿರಂತರ ಚಿಕಿತ್ಸೆ ಹಾಗೂ ದೈಹಿಕ ಅಸಮರ್ಥತೆ (physical weakness) ನನ್ನ ಪುತ್ರ ಶಿಕ್ಷಣ ನಿಲ್ಲಿಸಲು ಪ್ರಮುಖ ಕಾರಣ. ಇದರ ಹೊರತಾಗಿ ಆತನಿಗೆ ಯಾವುದೇ ಮಾನಸಿಕ ಸಮಸ್ಯೆಗಳು ಇಲ್ಲ ಎಂದು ಅಫ್ಸಿನ್ ತಂದೆ ಇಸ್ಮಾಯಿಲ್ ಘದೆರ್ಜಾದ್ (Esmaeil Ghaderzadeh) ಹೇಳಿದರು.

Guinness World Record: ಬರೋಬ್ಬರಿ 58 ಗಂಟೆ ​ಲಿಪ್​ಕಿಸ್ ಮಾಡಿ​ ಗಿನ್ನಿಸ್​ ದಾಖಲೆ

<p>
 

 

Latest Videos
Follow Us:
Download App:
  • android
  • ios