Guinness World Record: ಬರೋಬ್ಬರಿ 58 ಗಂಟೆ ​ಲಿಪ್​ಕಿಸ್ ಮಾಡಿ​ ಗಿನ್ನಿಸ್​ ದಾಖಲೆ

ಕಿಸ್ ಮಾಡೋದು ರೋಮ್ಯಾಂಟಿಕ್ ಕ್ಷಣಗಳಲ್ಲಿ ಒಂದು. ಹೀಗಾಗಿಯೇ ಮು್ತ್ತು ಕೊಡೋಕೆ, ಪಡ್ಕೊಳ್ಳೋಕೆ ಎಲ್ರೂ ಇಷ್ಟಪಡ್ತಾರೆ. ಆದ್ರೆ ಕಿಸ್ ಮಾಡಿ ಕೂಡಾ ವರ್ಲ್ಡ್‌ ರೆಕಾರ್ಡ್‌ ಮಾಡ್ಬೋದು ಅನ್ನೋದನ್ನು ಇಲ್ಲೊಂದು ಜೋಡಿ ಸಾಬೀತು ಪಡಿಸಿದೆ. ಅರೆ, ಕಿಸ್‌ನಲ್ಲೂ ವರ್ಲ್ಡ್‌ ರೆಕಾರ್ಡ್‌ ಅದ್ಹೇಗೆ ಸಾಧ್ಯಾನಪ್ಪಾ ಅಂತೀರಾ ? ಇಲ್ಲಿದೆ ನೋಡಿ ಮಾಹಿತಿ.

Couple Who Holds Guinness World Record For Longest Underwater Kiss Vin

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಭಿನ್ನ ರೀತಿಯ ಸಾಧನೆ ದಾಖಲಾಗಿರುವುದನ್ನು ನೀವು ಕೇಳಿರಬಹುದು. ಉದ್ದ ಕೂದಲು, ಉದ್ದ ಉಗುರು, ಕೆಲವೇ ಕ್ಷಣಗಳಲ್ಲಿ ನಿರ್ಧಿಷ್ಟ ಕೆಲಸವನ್ನು ಮುಗಿಸಿ ಸಾಧನೆ (Achievement) ಮಾಡಿದವರಿದ್ದಾರೆ. ಆದರೆ ಇಲ್ಲೊಂದು ಜೋಡಿ ಸುದೀರ್ಘವಾಗಿ ಕಿಸ್ ಮಾಡಿ ದಾಖಲೆ ಬರೆದಿದೆ. ಹೌದು, ಥಾಯ್ಲೆಂಡ್‌ನ ಎಕ್ಕಚೈ ತಿರಾನರತ್ ಮತ್ತು ಲಕ್ಸಾನಾ ಈ ಜೋಡಿಯ ಹೆಸರು. ಅತ್ಯಂತ ದೀರ್ಘ ಕಾಲದವರೆಗೆ ಪರಸ್ಪರರಿಗೆ ಮುತ್ತಿಕ್ಕಿದ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 58 ಗಂಟೆಗಳ ಸುದೀರ್ಘ ಕಿಸ್‌ ಮಾಡಿಕೊಂಡ ಜೋಡಿಯ (Couple) ಹೆಸರು ಗಿನ್ನಿಸ್ ದಾಖಲೆಗೆ (Record) ಸೇರಿದೆ.

58 ಗಂಟೆ, 35 ನಿಮಿಷ, 58 ಸೆಕೆಂಡುಗಳ ಕಾಲ ಮುತ್ತಿಕ್ಕಿ ದಾಖಲೆ
ತಿರಾನರತ್ ದಂಪತಿಯ 58 ಗಂಟೆ, 35 ನಿಮಿಷ, 58 ಸೆಕೆಂಡುಗಳ ಕಾಲ ಮುತ್ತಿಕ್ಕುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಪ್ರೇಮಿಗಳ ದಿನದಂದು ಆಯೋಜಿಸಿದ್ದ ಕಿಸ್ಸಾಥಾನ್‌ನಲ್ಲಿ ತಿರಾನರತ್ ದಂಪತಿ ಈ ದಾಖಲೆ ನಿರ್ಮಿಸಿದ್ದಾರೆ. ಮುತ್ತು ನೀಡುತ್ತಿದ್ದ ಇತರ ಕೆಲ ಜೋಡಿಗಳು ಸುದೀರ್ಘ ಚುಂಬನ (Kiss) ನೀಡಲಾಗದೆ ನಿಶ್ಯಕ್ತಿಯಿಂದ ಮೂರ್ಛೆ ಹೋದರು.

ಬೆಟ್ ಕಟ್ಟಿ ಕಿಸ್ ಕೊಟ್ಟ ವರ, ಸಿಟ್ಟಿಗೆದ್ದ ವಧು ಪೊಲೀಸರನ್ನು ಕರೆದಾಗ ಬೆಪ್ಪಾದ !

2010ರಲ್ಲಿ ದಾಖಲಾಗಿದ್ದ ರೆಕಾರ್ಡ್‌ ಮುರಿದ ಜೋಡಿ
ಈ ಮೊದಲಿನ ದಾಖಲೆಯು ಇಟಾಲಿಯನ್ ಟಿವಿ ಶೋ 'ಲೋ ಶೋ ಡೀ ರೆಕಾರ್ಡ್'ನ ಭಾಗವಾಗಿತ್ತು. ದೀರ್ಘವಾದ ನೀರೊಳಗಿನ ಚುಂಬನವು 3 ನಿಮಿಷ 24 ಸೆಕೆಂಡ್ 34 ಫ್ರೇಮ್‌ಗಳವರೆಗೆ ಇತ್ತು ಮತ್ತು 18 ಮಾರ್ಚ್ 2010 ರಂದು ಇಟಲಿಯ ರೋಮ್‌ನಲ್ಲಿ ಲೋ ಶೋ ಡೀ ರೆಕಾರ್ಡ್‌ನ ಸೆಟ್‌ನಲ್ಲಿ ಮೈಕೆಲ್ ಫುಕಾರಿನೋ ಮತ್ತು ಎಲಿಸಾ ಲಾಝಾರಿನಿ ಇದನ್ನು ಸಾಧಿಸಿದ್ದರು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅದರ ವೆಬ್‌ಸೈಟ್‌ನಲ್ಲಿ ಹೇಳಿದೆ.

2013ರಲ್ಲಿ ಪ್ರೇಮಿಗಳ ದಿನದಂದು ಥಾಯ್ ದಂಪತಿಗಳು ಸುದೀರ್ಘ ನಿರಂತರ ಚುಂಬನಕ್ಕಾಗಿ ನಂತರದ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಎಕ್ಕಚೈ ತಿರನರತ್ ಮತ್ತು ಅವರ ಪತ್ನಿ ಲಕ್ಷಣಾ ಅವರು 58 ಗಂಟೆ, 35 ನಿಮಿಷ ಮತ್ತು 58 ಸೆಕೆಂಡುಗಳ ಕಾಲ ಲಿಪ್ ಲಾಕ್ ಮಾಡಿದ್ದಾರೆ. ಈ ಜೋಡಿಯು ಎಂಟು ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಚುಂಬನದ ಹಿಂದಿನ ದಾಖಲೆಯನ್ನು ಮುರಿದಿದೆ. ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಚುಂಬಿಸಿದರು.

ಅಬ್ಬಬ್ಬಾ..ಹತ್ತು ಸೆಕೆಂಡ್‌ನ ಸುದೀರ್ಘ ಫ್ರೆಂಚ್‌ ಕಿಸ್‌ನಿಂದ ಇಷ್ಟೆಲ್ಲಾ ಪ್ರಯೋಜನವಿದೆಯಂತೆ !

2 ಲಕ್ಷ ಹಾಗೂ  2 ವಜ್ರದ ಉಂಗುರ ಬಹುಮಾನ
ಆದರೆ ಜೋಡಿ ಎರಡೂವರೆ ದಿನಗಳ ಕಾಲ ನಿದ್ರೆ (Sleep) ಮಾಡದ ಕಾರಣ ತುಂಬಾ ದಣಿದಿದ್ದರು, ಅವರು ಎಲ್ಲಾ ಸಮಯದಲ್ಲೂ ನಿಲ್ಲಬೇಕಾಗಿತ್ತು, ಆದ್ದರಿಂದ ಅವರು ತುಂಬಾ ದುರ್ಬಲರಾಗಿದ್ದರು ಎಂದು ಈವೆಂಟ್ ಆರ್ಗನೈಸರ್ ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್‌ನ ಉಪಾಧ್ಯಕ್ಷ ಸೋಂಪ್ರಾನ್ ನಕ್ಸುಟ್ರಾಂಗ್ ಹೇಳಿದರು. ಈ ಸ್ಪರ್ಧೆಯಲ್ಲಿ (Competition) ಹಲವು ನಿಯಮದ ಪ್ರಕಾರ ಶೌಚಾಲಯಕ್ಕೆ ಹೋಗಬೇಕಾದರು ಚುಂಬಿಸುತ್ತಲೇ ಹೋಗಬೇಕಾಗಿತ್ತು. ಥಾಯ್ಲೆಂಡ್‌ನ ಈ ದಂಪತಿ ದಾಖಲೆ ನಿರ್ಮಿಸಿ 2 ಲಕ್ಷದ 69 ಸಾವಿರ ರೂಪಾಯಿ ಬಹುಮಾನ ಪಡೆದಿದ್ದಾರೆ. ಇದಕ್ಕಾಗಿ ಅವರು 2 ವಜ್ರದ ಉಂಗುರ (Diamond ring)ಗಳನ್ನು ಸಹ ಪಡೆದಿದ್ದಾರೆ.

Parenting Tips: ಮಕ್ಕಳ ತುಟಿಗಳಿಗೆ ಪೋಷಕರು ಮುತ್ತು ಕೊಡಬಹುದಾ?

Latest Videos
Follow Us:
Download App:
  • android
  • ios