ಮಾಲ್ಡೀವ್ಸ್‌ ಬಗ್ಗೆ ಹಸ್ತಕ್ಷೇಪ ಸಲ್ಲ: ಮುಯಿಜು ಭೇಟಿ ಬೆನ್ನಲ್ಲೇ ಭಾರತಕ್ಕೆ ಚೀನಾ ಪರೋಕ್ಷ ಟಾಂಗ್

ಮುಯಿಜು ಭೇಟಿಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ ಸರ್ಕಾರ, ಮಾಲ್ಡೀವ್ಸ್‌ ತನ್ನ ರಾಷ್ಟ್ರೀಯ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಘನತೆಯನ್ನು ಕಾಪಾಡಿಕೊಳ್ಳಲು ಚೀನಾ ನೆರವು ನೀಡಲಿದೆ. ಅಲ್ಲದೇ ಇತರ ದೇಶಗಳು ಮಾಲ್ಡೀವ್ಸ್‌ನ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದುನ್ನು ಸಹಿಸುವುದಿಲ್ಲ ಎಂದು ಹೇಳಿದೆ.

china firmly opposes external interference in maldives as president mohamed muizzu winds up visit ash

ಬೀಜಿಂಗ್‌ (ಜನವರಿ 12, 2024): ದ್ವೀಪರಾಷ್ಟ್ರವಾದ ಮಾಲ್ಡೀವ್ಸ್‌ನ ಆಂತರಿಕ ವಿಷಯದಲ್ಲಿ ಯಾವುದೇ ದೇಶ ಹಸ್ತಕ್ಷೇಪ ಮಾಡುವುದನ್ನು ಸಹಿಸುವುದಿಲ್ಲ ಎಂದು ಚೀನಾ ಗುರುವಾರ ಹೇಳಿದೆ. ಈ ಮೂಲಕ ಭಾರತಕ್ಕೆ ಪರೋಕ್ಷವಾಗಿ ಟಾಂಗ್‌ ನೀಡಿದೆ.

ಮಾಲ್ಡೀವ್ಸ್‌ನಲ್ಲಿನ ಭಾರತದ ಸೇನಾ ನೆಲೆ ತೆರವು ಕುರಿತಾಗಿ ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ಬಿಕ್ಕಟ್ಟು ತಲೆದೋರಿತ್ತು. ಇದರ ನಡುವೆಯೇ ಉಭಯ ದೇಶಗಳ ನಡುವೆ ಮತ್ತೊಂದು ರಾಜತಾಂತ್ರಿಕ ಸಮಸ್ಯೆ ತಲೆದೋರಿದ್ದು, ಇದರ ಬೆನ್ನಲ್ಲೇ ಚೀನಾ ಎಚ್ಚರಿಕೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಸಚಿವರನ್ನು ಅಮಾನತುಗೊಳಿಸಿದ ಬಳಿಕ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಚೀನಾಗೆ ಭೇಟಿ ನೀಡಿದ್ದರು. ಈ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಾಗೂ ಮುಯಿಜು 20 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಇದನ್ನು ಓದಿ: ‘ಇಂಡಿಯಾ ಫಸ್ಟ್' ನಿಲುವಿನೊಂದಿಗೆ ಮಾಲ್ಡೀವ್ಸ್‌ನಿಂದ ಕಾಲ್ತೆಗೆದ ಭಾರತ!

ಮುಯಿಜು ಭೇಟಿಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ ಸರ್ಕಾರ, ‘ಮಾಲ್ಡೀವ್ಸ್‌ ತನ್ನ ರಾಷ್ಟ್ರೀಯ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಘನತೆಯನ್ನು ಕಾಪಾಡಿಕೊಳ್ಳಲು ಚೀನಾ ನೆರವು ನೀಡಲಿದೆ. ಅಲ್ಲದೇ ಇತರ ದೇಶಗಳು ಮಾಲ್ಡೀವ್ಸ್‌ನ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದುನ್ನು ಸಹಿಸುವುದಿಲ್ಲ’ ಎಂದು ಹೇಳಿದೆ.

ಚೀನಾ ಪರ ನಿಲುವು ಹೊಂದಿರುವ ಮುಯಿಜು ಮಾಲ್ಡೀವ್ಸ್‌ ಅಧ್ಯಕ್ಷರಾದ ಬಳಿಕ ಚೀನಾದೊಂದಿಗೆ ಸಂಪರ್ಕ ಮತ್ತಷ್ಟು ಹೆಚ್ಚಾಗಿದ್ದು, ಮಾಲ್ಡೀವ್ಸ್‌ ಅಭಿವೃದ್ಧಿಗೆ ಎಲ್ಲಾ ರೀತಿಯ ಬೆಂಬಲವನ್ನು ಚೀನಾ ಘೋಷಿಸಿದೆ.

ಇದನ್ನು ಓದಿ: ಭಾರತೀಯ ಸೇನೆ ಬಗ್ಗೆ ಕಿರಿಕ್‌ ಆಯ್ತು: ಈಗ 100 ಒಪ್ಪಂದ ಮರುಪರಿಶೀಲನೆಗೆ ಮಾಲ್ಡೀವ್ಸ್‌ ಸರ್ಕಾರ ನಿರ್ಧಾರ

Latest Videos
Follow Us:
Download App:
  • android
  • ios