ಅಬ್ಬಬ್ಬಾ..ತಿಮಿಂಗಿಲದ ಹೃದಯ ಇಷ್ಟೊಂದು ದೊಡ್ಡದಾ ಎಷ್ಟು ಕೆಜಿಯಿದೆ ಗೊತ್ತಾ?
ತಿಮಿಂಗಿಲ ಅಂದ್ರೇನೆ ಬೃಹತ್ತಾಗಿರುತ್ತದೆ ಎಂಬ ವಿಚಾರವೇ ಎಲ್ಲರ ಕಣ್ಮುಂದೆ ಬರುತ್ತದೆ. ಹಾಗೆಯೇ ತಿಮಿಂಗಿಲದ ಹೃದಯ ಎಷ್ಟು ದೊಡ್ಡದಿರಬಹುದು ಎಂದು ನೀವು ಯೋಚಿಸಿದ್ದೀರಾ? ಆ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಕೆನಡಾ: ನೀಲಿ ತಿಮಿಂಗಿಲಗಳು ಜಗತ್ತಿನ ಭೂಮಿಯಲ್ಲಿರುವ ಬಹುದೊಡ್ಡ ಜೀವಿಗಳಲ್ಲಿ ಒಂದಾಗಿದೆ. ಸದ್ಯ ಕೆನಡಾದ ವಸ್ತು ಸಂಗ್ರಹಾಲಯದಲ್ಲಿರುವ ಬ್ಲೂ ವೇಲ್ ಅಥವಾ ತಿಮಿಂಗಿಲದ ಹೃದಯದ ಪೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಕೆನಡಾದ ರಾಯಲ್ ಒನ್ಟಾರಿಯೋ ವಸ್ತು ಸಂಗ್ರಹಾಲಯದಲ್ಲಿ ತಿಮಿಂಗಿಲದ ಹೃದಯವನ್ನು ಇರಿಸಲಾಗಿದೆ. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ನೀಲಿ ತಿಮಿಂಗಿಲದ ಹೃದಯದ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಜೀವಿಯ ಹೃದಯದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರು ಬೆಚ್ಚಿಬಿದ್ದಿದ್ದಾರೆ.
ಪ್ರಪಂಚ ಎಷ್ಟೇ ಮುಂದುವರೆದರೂ, ಮನುಷ್ಯ ಅದೆಷ್ಟೋ ವಿಚಾರಗಳನ್ನು ತಿಳಿದುಕೊಂಡಿದ್ದರೂ ಹಲವು ವಿಚಾರಗಳು ಇವತ್ತಿಗೂ ಅಚ್ಚರಿಯ ಆಗರ. ಈಗಲೂ ಕೂಡ ಅದೆಷ್ಟೋ ಸಂಗತಿಗಳು ನಮ್ಮ ಊಹೆಗೂ ಮೀರಿದ್ದಾಗಿರುತ್ತವೆ. ಅಂಥಾ ವಿಚಾರಗಳಲ್ಲೊಂದು ತಿಮಿಂಗಿಲದ ಹೃದಯದ ಗಾತ್ರ (Blue Whale Heart), ಹೃದಯದ ಬಡಿತದ ಸದ್ದಿನ ಕುರಿತಾಗಿರುವ ವಿಚಾರ. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿರುವ ಪೋಸ್ಟ್, ಪೂರ್ಣವಾಗಿ ಬೆಳೆದ ನೀಲಿ ತಿಮಿಂಗಿಲದ ಹೃದಯ ಎಷ್ಟು ದೊಡ್ಡದಾಗಿದೆ ಎಂಬುದನ್ನು ತೋರಿಸುತ್ತದೆ.
ಇಲಿಗಳ ಕಾಟ ಹೆಚ್ಚಾಗ್ತಿದ್ಯಾ? ಓಡಿಸಲು ಇಲ್ಲಿದೆ ಅದ್ಭುತ ಹ್ಯಾಕ್ಸ್
ಸಮುದ್ರ ಅನೇಕ ರಹಸ್ಯಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಆಗೊಮ್ಮೆ ಈಗೊಮ್ಮೆ, ಸಾಮಾಜಿಕ ಜಾಲತಾಣದಲ್ಲಿ ಸಮುದ್ರದ ಮೇಲ್ಮೈಯಲ್ಲಿ ವಾಸಿಸುವ ಬೃಹತ್ ಜೀವಿಗಳ ವಿಡಿಯೋಗಳು ಮತ್ತು ಫೋಟೋಗಳು ಜನರನ್ನು ವಿಸ್ಮಯಗೊಳಿಸುತ್ತವೆ. ಇಂಥದ್ದನ್ನೇ ನೋಡೇ ಇರದ ಮಂದಿ ಇವುಗಳ ಬಗ್ಗೆ ತಿಳಿದು ಮೂಕವಿಸ್ಮಿತರಾಗುತ್ತಾರೆ.
ತಿಮಿಂಗಿಲದ ಹೃದಯದ ತೂಕವೆಷ್ಟು ಗೊತ್ತಾ?
ಫೋಟೋದಲ್ಲಿ ಕಾಣುತ್ತಿರುವ ಫೋಟೋ ನೀಲಿ ತಿಮಿಂಗಿಲದ ಸಂರಕ್ಷಿತ ಹೃದಯವಾಗಿದೆ. ಇದು 181 ಕೆಜಿ ತೂಕ (Weight) ಮತ್ತು 4.9 ಅಡಿ ಉದ್ದ ಮತ್ತು 3.9 ಅಡಿ ಅಗಲವಿದೆ. ಇದರ ಹೃದಯ ಬಡಿತ 3.2 ಕಿಮೀಗಿಂತ ಹೆಚ್ಚು ದೂರದವರೆಗೂ ಕೇಳಿಸುತ್ತದೆ ಎಂದು ಹರ್ಷ್ ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
2014ರಲ್ಲಿ ಪತ್ತೆಯಾದ ಹೃದಯ
2014 ರಲ್ಲಿ ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ತೊಳೆದು ಪ್ರದರ್ಶಿಸಲ್ಪಟ್ಟ ನೀಲಿ ತಿಮಿಂಗಿಲದ ಹೃದಯದ ಚಿತ್ರ ಇದಾಗಿದೆ. ಇದು ಸಂಶೋಧನೆಗೆ ಉತ್ತಮ ಸ್ಥಿತಿಯಲ್ಲಿದ್ದು ಕೆನಡಾದ ಟೊರೊಂಟೊದಲ್ಲಿನ ರಾಯಲ್ ಒಂಟಾರಿಯೊ ಮ್ಯೂಸಿಯಂನಲ್ಲಿ ವಿಜ್ಞಾನಿಗಳು (Scientists) ಸಂರಕ್ಷಿಸಿದ್ದಾರೆ.
ಹೊಸ ಫೋಟೋ ಬಳಸಿ: 15 ಕೆ.ಜಿ.ತೆಳ್ಳಗಾದ ಫೋಟೋ ಪೋಸ್ಟ್ ಮಾಡಿದ ಅಶ್ನೀರ್ ಗ್ರೋವರ್
ಟ್ವಿಟರ್‌ನಲ್ಲಿ ತಿಮಿಂಗಿಲದ ಹೃದಯದ ಫೋಟೋ ವೈರಲ್
ಹರ್ಷ್ ಗೊಯೆಂಕಾ ಅವರು ಈ ನೀಲಿ ತಿಮಿಂಗಿಲದ ಹೃದಯದ ಫೋಟೋವನ್ನು ಮಾರ್ಚ್ 13ರಂದು ಪೋಸ್ಟ್ ಮಾಡಿದ್ದಾರೆ. ಇದುವರೆಗೆ ಈ ಫೋಟೋ 166 ಸಾವಿರಾ ವೀಕ್ಷಣೆಯನ್ನು (Views) ಪಡೆದಿದೆ. 2 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದೆ. ಇನ್ನು ಈ ಚಿತ್ರಕ್ಕೆ ಹಲವಾರು ಕಮೆಂಟ್ಗಳು ಬಂದಿವೆ. 'ಅದ್ಭುತ ಪ್ರಕೃತಿಯೇ ಸರ್ವಶ್ರೇಷ್ಠ' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಜಗತ್ತನ್ನು ಎಷ್ಟು ಸುಂದರವಾಗಿ ಚಿತ್ರಿಸಲಾಗಿದೆ ಎಂದು ಆಶ್ಚರ್ಯಕರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.