ಡೈಮಂಡ್ ಕ್ರಾಸಿಂಗ್ ಭಾರತದ ವಿಶಿಷ್ಟ ರೈಲ್ವೆ ಜಂಕ್ಷನ್ ಆಗಿದೆ. ಇಲ್ಲಿ ನಾಲ್ಕು ದಿಕ್ಕುಗಳಿಂದ ರೈಲುಗಳು ಬರುತ್ತವೆ, ಆದರೂ ಇಲ್ಲಿಯವರೆಗೆ ಯಾವುದೇ ಅಪಘಾತ ಸಂಭವಿಸಿಲ್ಲ.
ನವದೆಹಲಿ: ಭಾರತೀಯ ರೈಲ್ವೆಯನ್ನು ದೇಶದ ಜೀವನಾಡಿ ಎಂದು ಕರೆಯಲಾಗುತ್ತದೆ. ರೈಲು ಪ್ರಯಾಣದ ಜೊತೆ ಭಾರತೀಯ ರೈಲ್ವೆಯ ನಿಯಮಗಳನ್ನು ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ರೈಲುಗಳು ಒಂದು ಹಳಿಯಿಂದ ಮತ್ತೊಂದು ಹಳಿಗೆ ಬದಲಾಗುತ್ತಿರೋದನ್ನು ಬಹುತೇಕ ಎಲ್ಲರೂ ಗಮನಿಸಿರುತ್ತಾರೆ. ಪ್ರತಿಯೊಂದು ನಿಲ್ಗದಾಣ ಗಳಲ್ಲಿಯೂ ರೈಲುಗಳು ಟ್ರ್ಯಾಕ್ ಬದಲಿಸುತ್ತಿರುತ್ತವೆ. ಆದ್ರೆ ಭಾರತದ ಈ ನಗರದ ಒಂದು ಸ್ಥಳದಲ್ಲಿ ನಾಲ್ಕು ದಿಕ್ಕುಗಳಿಂದಲೂ ರೈಲುಗಳು ಬರುತ್ತವೆ. ಆದ್ರೆ ಇದುವರೆಗೂ ಇಲ್ಲಿ ಒಂದೇ ಒಂದು ಅಪಘಾತ ಸಂಭವಿಸಿಲ್ಲ. ಈ ಸ್ಥಳವನ್ನು ಡೈಮಂಡ್ ಕ್ರಾಸಿಂಗ್ (Diamond Crossing) ಎಂದು ಕರೆಯಲಾಗುತ್ತದೆ.
ಈ ಡೈಮಂಡ್ ಕ್ರಾಸಿಂಗ್ ಸ್ಥಳದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಡೈಮಂಡ್ ಕ್ರಾಸಿಂಗ್ ನೋಡಲು ಜನರು ಇಲ್ಲಿಗೆ ಬರುತ್ತಿರುತ್ತಾರೆ. ಈ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ವಾಹನಗಳನ್ನು ನಿಲ್ಲಿಸಿ ಡೈಮಂಡ್ ಕ್ರಾಸಿಂಗ್ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಆದ್ರೆ ಯಾರೂ ಸಹ ಹೆಚ್ಚು ಸಮಯ ಇಲ್ಲಿರದಂತೆ ನಿಬಂದನೆ ಹಾಕಲಾಗಿದೆ
ಎಲ್ಲಿದೆ ಡೈಮಂಡ್ ಕ್ರಾಸಿಂಗ್?
ಮಹಾರಾಷ್ಟ್ರದ ನಾಗ್ಪುರಲ್ಲಿ ಡೈಮಂಡ್ ಕ್ರಾಸಿಂಗ್ ನೋಡಬಹುದು. ಇಲ್ಲಿ ರೈಲುಗಳು ಹಳಿ ತಪ್ಪದಂತೆ, ಒಂದಕ್ಕೊಂದು ಡಿಕ್ಕಿಯಾಗದಂತೆ ಟ್ರ್ಯಾಕ್ ನಿರ್ಮಿಸಲಾಗಿದೆ. ರೈಲು ಹಳಿಗಳನ್ನು ಟ್ರೈನ್ ಮಾರ್ಗಕ್ಕೆ ತಕ್ಕಂತೆ ಅಳವಡಿಸಲಾಗಿದೆ. ಆದ್ರೆ ಏಕಕಾಲದಲ್ಲಿ ನಾಲ್ಕು ಭಾಗದಿಂದ ರೈಲುಗಳು ಇಲ್ಲಿ ಕ್ರಾಸ್ ಮಾಡಲು ಆಗಲ್ಲ. ಒಂದೊಂದಾಗಿಯೇ ಸಿಗ್ನಲ್ ನೀಡುವ ಮೂಲಕ ರೈಲುಗಳ ಚಲನೆಗೆ ಅನುಮತಿಸಲಾಗುತ್ತದೆ. ನಾಗ್ಪುರದ ಸಂಪ್ರಿತ್ ನಗರದಲ್ಲಿರು ಈ ಕ್ರಾಸಿಂಗ್ ಡೈಮಂಡ್ ವಿನ್ಯಾಸದಲ್ಲಿ ಕಾಣಿಸುತ್ತದೆ. ಹಾಗಾಗಿ ಇದನ್ನು ಡೈಮಂಡ್ ಕ್ರಾಸಿಂಗ್ ಎಂದು ಕರೆಯಲಾಗುತ್ತದೆ. ಒಂದೇ ಸ್ಥಳದಲ್ಲಿ ನಿಂತತೆ ನಿಮಗೆ ನಾಲ್ಕು ರೈಲುಗಳು ಕ್ರಾಸ್ ಆಗೋದನ್ನು ಗಮನಿಸಬಹುದು.
ಇದನ್ನೂ ಓದಿ: ಗಂಡ್ಮಕ್ಕಳಿಗೂ ಕಾಟ, ರೈಲಿನಲ್ಲಿ ಮಲಗಿದ್ದವನಿಗೆ ಮುತ್ತಿಕ್ಕಿ ರೊಮ್ಯಾನ್ಸ್‌ಗಿಳಿದ ವ್ಯಕ್ತಿ
ಡೈಮಂಡ್ ಕ್ರಾಸಿಂಗ್ ಸುತ್ತಲಿನ ಪ್ರದೇಶ ಸಂಪೂರ್ಣವಾಗಿ ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಜನರು ಹೆಚ್ಚು ಸಮಯ ಇಲ್ಲಿಯ ನಿಂತುಕೊಳ್ಳುವಂತಿಲ್ಲ. ಹಾಗೆ ರೈಲು ಬೋಗಿಗಳ ಸಮೀಪಕ್ಕೂ ಹೋಗದಂತೆ ನಿಬಂದನೆ ಹಾಕಲಾಗಿದೆ. ಸುರಕ್ಷಿತ ಕಾರಣಗಳಿಂದ ರೈಲು ಹಳಿಗಳ ಬಳಿಯೂ ಸಾರ್ವಜನಿಕರು ತೆರಳುವಂತಿಲ್ಲ. ಆದ್ರೂ ದೇಶದ ಹಲವು ಭಾಗಗಳಿಂದ ಜನರು ಈ ಡೈಮಂಡ್ ಕ್ರಾಸಿಂಗ್ ನೋಡಲು ಬರುತ್ತಾರೆ.
ಎಲ್ಲಿಂದ ಎಲ್ಲಿಗೆ ಬರುತ್ತವೆ ರೈಲುಗಳು?
ಇಲ್ಲಿ ನಾಲ್ಕು ದಿಕ್ಕುಗಳಿಂದ ಬೇರೆ ಬೇರೆ ಮಾರ್ಗಗಳಿಂದ ರೈಲುಗಳು ಬರುತ್ತವೆ. ಪೂರ್ವದ ಗೋಂದಿಯಾದಿಂದ ಬರುವ ಟ್ರ್ಯಾಕ್, ಹೌರಾ-ರೌರಕೆಲಾ-ರಾಯ್ಪುರ ಮಾರ್ಗ ಹೊಂದಿದೆ. ಮತ್ತೊಂದು ಟ್ರ್ಯಾಕ್ ದೆಹಲಿಯಿಂದ ಬರುವ ಮಾರ್ಗವಾಗವಿದೆ. ಪಶ್ಚಿಮದ ಮುಂಬೈನಿಂದಲೂ ಮತ್ತೊಂದು ಮಾರ್ಗವಿಲ್ಲಿದೆ.
ಇದನ್ನೂ ಓದಿ: ಮಂಗಳೂರು-ಮುಂಬೈ ಇನ್ನು ಕೇವಲ 12 ಗಂಟೆ, ಶೀಘ್ರದಲ್ಲೇ ಹೊಸ ವಂದೇ ಭಾರತ್ ರೈಲು
