ಆಹಾರ - ಮದುವೆ: ಯಹೂದಿಗಳ ನಿಯಮ ಕಟ್ಟುನಿಟ್ಟು
ವಿಶ್ವದಲ್ಲಿ ಸಾಕಷ್ಟು ಧರ್ಮ, ಜಾತಿಗಳಿವೆ. ಪ್ರತಿಯೊಬ್ಬರೂ ತಮ್ಮದೇ ಕಾನೂನು, ಸಂಪ್ರದಾಯ ಪಾಲನೆ ಮಾಡ್ತಿದ್ದಾರೆ. ಯಹೂದಿಗಳ ಬಗ್ಗೆಯೂ ತಿಳಿಯೋದು ಸಾಕಷ್ಟಿದೆ. ಪುರಾತನ ಧರ್ಮ ಪಾಲನೆ ಮಾಡುವ ಇವರು, ಕಠಿಣ ನಿಯಮ ಅನುಸರಿಸ್ತಾರೆ.
ವಿಶ್ವದ ಏಕೈಕ ಯಹೂದಿ ರಾಷ್ಟ್ರವಾದ ಇಸ್ರೇಲ್ (Jewish nation of Israel) ಪ್ರಸ್ತುತ ಅನೇಕ ರಂಗಗಳಲ್ಲಿ ಹೋರಾಡುತ್ತಿದೆ. ಇರಾನ್, ಲೆಬನಾನ್, ಯೆಮೆನ್ ಮತ್ತು ಗಾಜಾ ಪಟ್ಟಿಯ ಬಂಡುಕೋರರನ್ನು ಏಕಕಾಲದಲ್ಲಿ ಎದುರಿಸುತ್ತಿರುವ ಯಹೂದಿಗಳ ಧರ್ಮದ ಬೇರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಆಳವಾಗಿ ಸಂಬಂಧ ಹೊಂದಿದೆ. ವಿಶ್ವದ ಅತ್ಯಂತ ಹಳೆಯ ಧರ್ಮಗಳಲ್ಲಿ ಇದು ಒಂದಾಗಿದೆ. ಹಿಂದೂ ಧರ್ಮದಲ್ಲಿ ಅನೇಕ ಜಾತಿ, ಪಂಡಗಗಳಿದ್ದಂತೆ ಯಹೂದಿಯಲ್ಲೂ ನಾಲ್ಕು ಭಿನ್ನ ಪಂಗಡಗಳಿವೆ. ಅವು ತಮ್ಮದೇ ಪದ್ಧತಿಯನ್ನು ಆಚರಿಸಿಕೊಂಡು ಬಂದಿವೆ.
ಯಹೂದಿಯನ್ನು ಹರೇದಿ, ದಾತಿ, ಮಸೋರ್ತಿ,ಹಿಲೋನಿ ಎಂದು ವಿಂಗಡಿಸಲಾಗಿದೆ. ಈ ಪಂಗಡಕ್ಕೆ ಸೇರುವ ಜನರು ತಮ್ಮದೇ ಸಂಪ್ರದಾಯ, ನಿಯಮಗಳನ್ನು ಪಾಲಿಸ್ತಾರೆ. ಹರೇದಿ ಪಂಗಡವನ್ನು ಅತ್ಯಂತ ಸಂಪ್ರದಾಯವಾದಿ (conservative) ಗಳು ಎಂದು ಪರಿಗಣಿಸಲಾಗುತ್ತದೆ. ಈ ಪಂಗಡಕ್ಕೆ ಸೇರಿದ ಜನರು ಯಹೂದಿ ಕಾನೂನಾದ ಹಲ್ಕಾ ಪಾಲನೆ ಮಾಡ್ತಾರೆ. ಹಲ್ಕಾ (Halka) ಪಾಲನೆ ಮಾಡುವ ಯಹೂದಿಗಳು ಹಾಗೂ ಸಮಾಜವಾದಿ ಯಹೂದಿಗಳ ಮಧ್ಯೆಯೇ ಭಿನ್ನಾಭಿಪ್ರಾಯವಿದೆ.
ಮಹಿಳೆಯಂತೆ ಬಟ್ಟೆ ಧರಿಸಿ ಗರ್ಬಾ ನೃತ್ಯ ಮಾಡುವ ಪುರುಷರು, ಪದ್ಧತಿ ಹಿಂದಿದೆ ನೊಂದವಳ ಶಾಪ
ಹಲ್ಕಾ ಕಾನೂನಿನಲ್ಲೇನಿದೆ? : ಹಲ್ಕಾ ಕಾನೂನು ಮುಸ್ಲಿಂ ಷರಿಯತ್ ಕಾನೂನಿಗಿಂತ ಕಠಿಣವಾಗಿದೆ. ಅಲ್ಲಿ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡ್ತಾರೆ. ಪುರುಷರು ಮೂರು ಬಾರಿ ಪ್ರಾರ್ಥನೆ ಮಾಡಿದ್ರೆ ಮಹಿಳೆಯರು ಎರಡು ಬಾರಿ ಪ್ರಾರ್ಥನೆ ಮಾಡ್ತಾರೆ. ಹಿಲೋನಿ ಯಹೂದಿಗಳು,ಹರೇದಿ ಯಹೂದಿಗಳನ್ನು ಮದುವೆಯಾಗಲು ಒಪ್ಪುವುದಿಲ್ಲ. ಯಹೂದಿಗಳು ತಮ್ಮನ್ನು ಬಿಟ್ಟು ಬೇರೆ ಯಾವುದೇ ಧರ್ಮದವರ ಜೊತೆ ಸ್ನೇಹ ಬೆಳೆಸುವುದಿಲ್ಲ.
ಕಶ್ರುತ್ ಯಹೂದಿ ಕಾನೂನಿನ ಭಾಗವಾಗಿದ್ದು, ಆಹಾರ ಸೇವನೆಯಲ್ಲೂ ಅವರು ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸ್ತಾರೆ. ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನಬಾರದು ಎಂಬುದನ್ನು ಇದರಲ್ಲಿ ಹೇಳಲಾಗಿದೆ. ಗೋ ಮಾಂಸ, ಕುರಿ, ಆಡನ್ನು ತಿನ್ನುವ ಇವರು, ಪ್ರಾಣಿಯ ಮುಂಭಾಗವನ್ನು ಮಾತ್ರ ಬಳಸ್ತಾರೆ. ಕೋಶರ್ ಪ್ರಾಣಿಗಳ ಹಾಲನ್ನು ಸೇವನೆ ಮಾಡುವ ಇವರು, ಹಾಲು ಮತ್ತು ಮಾಂಸವನ್ನು ಒಟ್ಟಿಗೆ ಸೇವನೆ ಮಾಡೋದಿಲ್ಲ. ಮೀನು, ಮೊಟ್ಟೆ, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಅವರು ತಿನ್ನಬಹುದು. ಮಾಂಸ ತಯಾರಿಸಿದ ಪಾತ್ರೆಯಲ್ಲಿ ಡೈರಿ ಉತ್ಪನ್ನದ ಆಹಾರವನ್ನು ತಯಾರಿಸುವುದಿಲ್ಲ. ಯಹೂದಿಯಲ್ಲದವರು ತಯಾರಿಸಿದ ದ್ರಾಕ್ಷಿ ಉತ್ಪನ್ನಗಳನ್ನು ಇವರು ತಿನ್ನುವುದಿಲ್ಲ. ಟೋರಾದಲ್ಲಿ ರಕ್ತದ ಸೇವನೆಯನ್ನು ನಿಷೇಧಿಸಲಾಗಿದೆ. ರಕ್ತದ ಕಲೆ ಇರುವ ಮೊಟ್ಟೆಯನ್ನು ತಿನ್ನುವಂತಿಲ್ಲ.
ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆಯವರೆಗೆ ಯಹೂದಿಗಳು ರಜೆಯಲ್ಲಿ ಇರುತ್ತಾರೆ. ಈ ಸಮಯದಲ್ಲಿ ಅವರು ಯಾವುದೇ ಕೆಲಸವನ್ನು ಮಾಡುವುದಿಲ್ಲ. ದೇಹಕ್ಕೆ ಸುಸ್ತಾಗುವ ಕೆಲಸದಿಂದ ದೂರ ಇರ್ತಾರೆ. ಪೇಪರ್ ಕತ್ತರಿಸುವುದರಿಂದ ಹಿಡಿದು, ಕಾರು, ಬಸ್ ಸೇರಿದಂತೆ ಯಾವುದೇ ವಾಹನದಲ್ಲಿ ಅವರು ಸಂಚರಿಸುವುದಿಲ್ಲ. ಇದರ ಜೊತೆಗೆ ಅವರು ಎಲೆಕ್ಟ್ರಿಕ್ ವಸ್ತುಗಳಿಂದ ದೂರವಿರುತ್ತಾರೆ.
ಮದುವೆ ಮಾಡ್ಕೊಂಡು ಹನಿಮೂನ್ ಮುಗ್ಸಿ, ಡಿವೋರ್ಸ್ ನೀಡಿ – ಒಂದೇ ಪ್ಯಾಕೇಜಲ್ಲಿ ಎಲ್ಲ ಅನುಭವ!
ಹಲ್ಕಾ ಕಾನೂನಿನಲ್ಲಿ ನಿದ್ದಾ ಎಂಬ ವಿಷ್ಯವನ್ನು ಅಳವಡಿಸಲಾಗಿದೆ. ಇದು ಮಹಿಳೆಯ ಪಿರಿಯಡ್ಸ್ ವಿಷ್ಯಕ್ಕೆ ಸಂಬಂಧಿಸಿದೆ. ನಿದ್ದಾ ಎಂಬ ಪದದ ಅರ್ಥ ಪ್ರತ್ಯೇಕತೆ. ಆಕೆಯ ಮುಟ್ಟಿನ ಸಮಯದಲ್ಲಿ ಮತ್ತು ನಂತರ ಹಲವಾರು ದಿನಗಳವರೆಗೆ ಯಹೂದಿ ಮಹಿಳೆಯನ್ನು ನಿದ್ದಾ ಎಂದು ಪರಿಗಣಿಸಲಾಗುತ್ತದೆ. ಆಕೆಯನ್ನು ಪತಿಯಿಂದ ದೂರವಿಡಲಾಗುತ್ತದೆ. ಮುಟ್ಟಿನ ನಂತರ ಮಿಕ್ವೆಹ್ ( ಶುದ್ಧ ಸ್ನಾನ)ದ ನಂತ್ರ ಆಕೆಯನ್ನು ಶುದ್ಧ ಎಂದು ಪರಿಗಣಿಸಲಾಗುತ್ತದೆ.
ಯಹೂದಿ ಸಮುದಾಯದಲ್ಲಿ ವಿಚ್ಛೇದನವನ್ನು ಪ್ರೋತ್ಸಾಹಿಸಲಾಗುವುದಿಲ್ಲ, ಆದರೆ ಅದನ್ನು ಪಾಪವೆಂದು ಪರಿಗಣಿಸಲಾಗುವುದಿಲ್ಲ. ದುಃಖ, ಕೆಲವೊಮ್ಮೆ ಅತೃಪ್ತಿಕರ ವೈವಾಹಿಕ ಸಂಬಂಧಕ್ಕೆ ಅಗತ್ಯವಾದ ಪರಿಹಾರ ಎಂದು ಪರಿಗಣಿಸುತ್ತದೆ. ವಿಚ್ಛೇದನ ನೀಡುವ ಪತಿ ಗೆಟ್ ಜಿಟಿ ಎನ್ನುವ ದಾಖಲೆ ನೀಡಬೇಕಾಗುತ್ತದೆ. ಈ ಪತ್ರ ಸಿಕ್ಕಿದ ಮೇಲೆ ಮಹಿಳೆ ಬೇರೆ ವ್ಯಕ್ತಿ ಜೊತೆ ಮದುವೆ ಆಗ್ಬಹುದು.