ಮಹಿಳೆಯಂತೆ ಬಟ್ಟೆ ಧರಿಸಿ ಗರ್ಬಾ ನೃತ್ಯ ಮಾಡುವ ಪುರುಷರು, ಪದ್ಧತಿ ಹಿಂದಿದೆ ನೊಂದವಳ ಶಾಪ

ನವರಾತ್ರಿಯ ರಂಗು ಎಲ್ಲೆಡೆ ಹರಡಿದೆ. ದುರ್ಗಾ ಪೂಜೆಯಲ್ಲಿ ಭಕ್ತರು ತಲ್ಲೀನರಾಗಿದ್ದಾರೆ. ಗರ್ಬಾ, ದಾಂಡಿಯಾ ಸೇರಿದಂತೆ ನೃತ್ಯ ಕಾರ್ಯಕ್ರಮ ಹಬ್ಬದ ಮೆರಗನ್ನು ಹೆಚ್ಚಿಸಿದೆ. ಈ ಊರಿನಲ್ಲಿ ಮಾತ್ರ ಗರ್ಬಾ ವಿಶೇಷತೆ ಪಡೆದಿದೆ. ಅಲ್ಲಿ ಮಹಿಳೆಯರ ಬಟ್ಟೆಗೆ ಪುರುಷರಿಂದ ಬೇಡಿಕೆ ಹೆಚ್ಚಿದೆ. ಯಾಕೆ ಎಂಬ ವಿವರ ಇಲ್ಲಿದೆ.
 

Men dress up women in Ahmedabad 200 year old ritual Navratri durga puja roo

ದೇಶದಾದ್ಯಂತ ನವರಾತ್ರಿ ಸಂಭ್ರಮ (Navratri celebration) ಮನೆ ಮಾಡಿದೆ. ನವರಾತ್ರಿಯಲ್ಲಿ ದುರ್ಗಾ ಪೂಜೆ (Durga Puja) ಜೊತೆ ದಾಂಡಿಯಾ, ಗರ್ಬಾ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳು ತಮ್ಮದೇ ಪದ್ಧತಿಯಲ್ಲಿ ಹಬ್ಬವನ್ನು ಆಚರಿಸುತ್ತಿವೆ. ನವರಾತ್ರಿ ಎಂದಾಗ ಮೊದಲು ನೆನಪಾಗೋದು ಗುಜರಾತಿನ ಗರ್ಬಾ. ಪ್ರತಿ ವರ್ಷವೂ ನವರಾತ್ರಿಯ ಒಂಭತ್ತು ದಿನ ಗರ್ಬಾ ನಡೆಯುತ್ತದೆ. ಗುಜರಾತಿನ ರಾಜಧಾನಿ ಅಹಮದಾಬಾದ್ ಸಂಪೂರ್ಣ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರೂ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಗರ್ಬಾದಲ್ಲಿ ಕುಣಿದು ಕುಪ್ಪಳಿಸ್ತಾರೆ. ಆದ್ರೆ ಗುಜರಾತಿನ ಒಂದು ಹಳ್ಳಿಯಲ್ಲಿ ಗರ್ಬಾಕ್ಕೆ ಚೋಲಿ ಖರೀದಿ ಮಾಡುವವರಲ್ಲಿ ಪುರುಷರು ಸೇರಿದ್ದಾರೆ. ಅಲ್ಲಿನ ಪುರುಷರು, ಮಹಿಳೆಯಂತೆ ಸೀರೆಯುಟ್ಟು, ಸಿಂಗಾರಗೊಂಡು ಗರ್ಬಾ ನೃತ್ಯ (Garba Dance) ಮಾಡ್ತಾರೆ. 

ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನ ಶಾಹಪುರ್ ಪ್ರದೇಶದಲ್ಲಿ ಸಾಧು ಮಾತಾ ಗಲಿ ಮತ್ತು ಅಂಬಾ ಮಾತಾ ದೇವಾಲಯದಲ್ಲಿ ಈ ವಿಶೇಷ ಗರ್ಬಾ ನಡೆಯುತ್ತದೆ. ಇಲ್ಲಿ ನವರಾತ್ರಿಯ ಎಂಟನೆಯ ದಿನದಂದು ಅಂದ್ರೆ ಅಷ್ಠಮಿಯಂದು ರಾತ್ರಿ ಎಲ್ಲ ಗಂಡಸರು ಹೆಣ್ಣಿನ ರೀತಿ ವೇಷ ಧರಿಸಿ, ಸೀರೆ ಉಟ್ಟು ಗರ್ಬಾ ನೃತ್ಯವನ್ನು ವಿಜೃಂಭಣೆಯಿಂದ ಮಾಡ್ತಾರೆ. ಈ ಸಮುದಾಯದಲ್ಲಿ ಸುಮಾರು 1000 ಜನರಿದ್ದಾರೆ. ದೇವಸ್ಥಾನದಲ್ಲಿ, ಬೀದಿ ಬೀದಿಯಲ್ಲಿ ಗರ್ಬಾ ನೃತ್ಯ ಮಾಡ್ತಾರೆ. 

ದೇವರಿಗೆ ಅರ್ಪಿಸಿದ ಹೂವುಗಳನ್ನು ಮರುಬಳಕೆ ಮಾಡುವುದು ಹೇಗೆ? ಹೀಗೂ ಮಾಡಬಹುದಾ!

200 ವರ್ಷಗಳಿಂದ ನಡೆದುಕೊಂಡು ಬಂದಿದೆ ಈ ಸಂಪ್ರದಾಯ : ಪುರುಷರು, ಮಹಿಳೆಯರ ಉಡುಪು ಮತ್ತು ಸೀರೆಯನ್ನು ಧರಿಸಿ ಗರ್ಬಾ ಆಡುವ ಸಂಪ್ರದಾಯ ಸುಮಾರು 200 ವರ್ಷಗಳಿಂದ ನಡೆದುಕೊಂಡು ಬಂದಿದೆ. ಅವರು ಸೀರೆಯುಟ್ಟು ಡಾನ್ಸ್ ಮಾಡಲು ಮಹತ್ವದ ಕಾರಣವೊಂದಿದೆ. ಬರೋಟ್ ಸಮುದಾಯದ ಪುರುಷರು ಸಾದುಬೆನ್ ಎಂಬ ಮಹಿಳೆಯಿಂದ ಶಾಪಗ್ರಸ್ತರಾಗಿದ್ದರು ಎಂದು ನಂಬಲಾಗಿದೆ. ಅದರ ಪ್ರಾಯಶ್ಚಿತವಾಗಿ ಗರ್ಬಾ ನಡೆಯುತ್ತದೆ. ಈ ಕಥೆಯು ಮೊಘಲರು ಭಾರತವನ್ನು ಆಳಿದ ಕಾಲದ್ದು. ಸಾದುಬೆನ್ ಎಂಬ ಮಹಿಳೆಯ ಮೇಲೆ ಮೊಘಲರ ಕೆಟ್ಟ ಕಣ್ಣು ಬಿದ್ದಿತ್ತು. ಮೊಘಲರ ರಾಜ ಅವಳನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಬಯಸಿದ್ದ. ಸಾದುಬೆನ್ ಮೊಘಲರಿಂದ ತನ್ನನ್ನು ರಕ್ಷಿಸಿಕೊಳ್ಳಲು ಬರೋಟ್ ಸಮುದಾಯದ ಸಹಾಯವನ್ನು ಕೋರಿದ್ದಳು. ದುರದೃಷ್ಟವಶಾತ್ ಬರೋಟ್  ಸಮುದಾಯದ ಪುರುಷರು ಅವಳನ್ನು ಮೊಘಲರ ಕೈಯಿಂದ ರಕ್ಷಿಸಲಿಲ್ಲ. ಇದರಿಂದಾಗಿ ಅವಳ ಮಗು ಸಾವನ್ನಪ್ಪಿತ್ತು. ಕೋಪಗೊಂಡ ಸಾದುಬೆನ್, ಬರೋಟ್ ಸಮುದಾಯದ ಪುರುಷರಿಗೆ ಶಾಪ ನೀಡಿದ್ದಳು. ಮುಂದಿನ ಪೀಳಿಗೆಗಳು ಹೇಡಿಗಳಾಗುತ್ತವೆ ಎಂದು ಶಾಪವಿತ್ತಳು. ಇದಾದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಳು.  

ಮಣ್ಣಿನ ದೇವಿ ಬದಲಿಗೆ ಪಂಚಲೋಹದ ದೇವಿ ಪ್ರತಿಷ್ಠಾಪನೆ: ದೇವಿದರ್ಶನಕ್ಕೆ ಮುಗಿಬೀಳ್ತಿರೋ ಭಕ್ತರು!

ಈ ಘಟನೆ ನಂತ್ರ ಬರೋಟ್ ಸಮುದಾಯದ ಜನರಲ್ಲಿ ಭಯ ಆವರಿಸಿತ್ತು. ಆತ್ಮವನ್ನು ಸಮಾಧಾನಪಡಿಸಲು ಮತ್ತು ಶಾಪದಿಂದ ಮುಕ್ತಿಪಡೆಯಲು ಅಹಮದಾಬಾದ್‌ನಲ್ಲಿ ಅವಳ ದೇವಾಲಯವನ್ನು ನಿರ್ಮಿಸಲಾಯಿತು. ಅಲ್ಲದೆ  ಈ ಶಾಪದಿಂದ ಮುಕ್ತಿಪಡೆಯಲು ಅವರು ನವರಾತ್ರಿಯಲ್ಲಿ ಸೀರೆ ಉಟ್ಟು ಗರ್ಬಾ ಆಡುತ್ತಾರೆ.  ಇದನ್ನು ಶೇರಿ ಗರ್ಬಾ ಎಂದು ಕರೆಯಲಾಗುತ್ತದೆ. ಈ ಸಂಪ್ರದಾಯವನ್ನು ವೀಕ್ಷಿಸಲು ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಬರ್ತಾರೆ. ಸಾಮಾನ್ಯವಾಗಿ, ಸ್ತ್ರೀಯರ ಉಡುಪುಗಳನ್ನು ಧರಿಸುವ ಪುರುಷರನ್ನು ಕೀಳಾಗಿ ನೋಡಲಾಗುತ್ತದೆ. ಆದರೆ ಬರೋಟ್ ಸಮುದಾಯದ ಪುರುಷರು ಅದನ್ನು ಮಹಿಳೆಯರ ಬಗ್ಗೆ ನಮ್ರತೆ ಮತ್ತು ಗೌರವದ ಸಂಕೇತವಾಗಿ ನೋಡುತ್ತಾರೆ. ನಂಬಿಕೆಗಳ ಪ್ರಕಾರ, ಶೇರಿ ಗರ್ಬಾ ಮಾಡುವುದರಿಂದ ವ್ಯಾಪಾರದಲ್ಲಿ ಪ್ರಗತಿ, ಉತ್ತಮ ಆರೋಗ್ಯ, ಆರೋಗ್ಯವಂತ ಮಗುವಿನ ಜನನ ಸೇರಿದಂತೆ ಎಲ್ಲ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗರ್ಬಾ ನಡೆಯಲಿದ್ದು, ಅದಕ್ಕೆ ತಯಾರಿ ನಡೆದಿದೆ. 

Latest Videos
Follow Us:
Download App:
  • android
  • ios