Asianet Suvarna News Asianet Suvarna News

ಮದುವೆ ಮಾಡ್ಕೊಂಡು ಹನಿಮೂನ್‌ ಮುಗ್ಸಿ, ಡಿವೋರ್ಸ್ ನೀಡಿ – ಒಂದೇ ಪ್ಯಾಕೇಜಲ್ಲಿ ಎಲ್ಲ ಅನುಭವ!

ಲೈಫ್ ನಲ್ಲಿ ಒಮ್ಮೆಯಾದ್ರೂ ಮದುವೆ ಆಗ್ಬೇಕು ಅನ್ನೋರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಮದುವೆ ಆಗಿ, ಹನಿಮೂನ್ ಮುಗಿಸಿ, ಬೋರ್ ಆದಾಗ ಡಿವೋರ್ಸ್ ನೀಡ್ಬಹುದು. ಜೇಬಿನಲ್ಲಿ ಹಣವಿದ್ರೆ ವರ್ಷಗಟ್ಟಲೆ ತಾತ್ಕಾಲಿಕ ಪತ್ನಿ ಜೊತೆಗಿರ್ಬಹುದು. 
 

tourist wedding temperory wife divorce after trip pleasure marriage roo
Author
First Published Oct 7, 2024, 11:02 AM IST | Last Updated Oct 7, 2024, 12:31 PM IST

ಭಾರತ (India)ದಲ್ಲಿ ಒಂದೇ ಒಂದು  ಮದುವೆ ಆಗ್ತೇವೆ ಅಂದ್ರೂ ಹುಡುಗ್ರಿಗೆ ವಧು (bride) ಸಿಗ್ತಿಲ್ಲ. ಆದ್ರೆ ಈ ದೇಶದಲ್ಲಿ ಹೋದವ್ರೆಲ್ಲ ಮದುವೆ ಆಗ್ಬಹುದು. ಸ್ವಲ್ಪ ದಿನ ಲೈಫ್ ಎಂಜಾಯ್ ಮಾಡಿ ನಂತ್ರ ಡಿವೋರ್ಸ್ ನೀಡಿ, ನಿಮ್ಮ ಮನೆಗೆ ವಾಪಸ್ ಬರ್ಬಹುದು. ಒಂಟಿಯಾಗಿ ಪ್ರವಾಸಕ್ಕೆ ಹೋಗುವ ಜನರಿಗೆ ಸಂಗಾತಿ ಇರೋರನ್ನು ನೋಡಿದ್ರೆ ಹೊಟ್ಟೆಕಿಚ್ಚು ಬರುತ್ತೆ. ನನಗೂ ಒಬ್ಬ ಜೊತೆಗಾರ್ತಿ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅನ್ನಿಸುತ್ತೆ. ಆ ಲೈಫ್ ನೀವೂ ಎಂಜಾಯ್ ಮಾಡ್ಬೇಕು ಅಂದ್ರೆ ಇಂಡೋನೇಷ್ಯಾಗೆ ಹೋಗಿ. ಅಲ್ಲಿ ಮದುವೆಗೆ ಹುಡುಗಿ ಸಿಗ್ತಾಳೆ. ನಿಮ್ಮ ಟ್ರಿಪ್ ಮುಗಿದ್ಮೇಲೆ ಆಕೆಗೆ ಡಿವೋರ್ಸ್ ನೀಡಿ, ಬೈ ಬೈ ಅಂತ ನೀವು ವಾಪಸ್ ಆಗ್ಬಹುದು. ಇವರು ಪುಕ್ಕಟ್ಟೆ ಸಿಗಲ್ಲ ಅನ್ನೋದು ಮಾತ್ರ ನೆನಪಿರಲಿ. 

ಇಂಡೋನೇಷ್ಯಾ (Indonesia) ದಲ್ಲಿ ಈ ಮದುವೆಯನ್ನು ಪ್ಲೆಜರ್ ಮ್ಯಾರೇಜ್ ( Pleasure Marriage) ಅಂತ ಕರೀತಾರೆ. ಆಗ್ನೇಯ ಏಷ್ಯಾ ದೇಶಗಳಲ್ಲಿ ಈ ಸಂತೋಷದ ಮದುವೆ ಕಾನ್ಸೆಪ್ಟ್ ಹೆಚ್ಚಾಗಿದೆ. ಇಂಡೋನೇಷ್ಯಾದಲ್ಲಿ ಇದೊಂದು ದೊಡ್ಡ ಉದ್ಯಮವಾಗಿ ಬೆಳೀತಾ ಇದೆ. ಹಣ ಸಂಪಾದನೆಗೆ ಮಹಿಳೆಯರು ಈ ಬ್ಯುಸಿನೆಸ್ ಗೆ ಕಾಲಿಡ್ತಿದ್ದಾರೆ. 

ಬೆಂಗಳೂರಿನ ಪಕ್ಕದಲ್ಲೇ ಇದೆ ಈ ಸುಂದರ ಗಿರಿಧಾಮ, ಮಿಸ್ ಮಾಡ್ದೆ ಹೋಗ್ಬನ್ನಿ

ಇಂಡೋನೇಷ್ಯಾದ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರು ಈ ಉದ್ಯಮವನ್ನು ಅಪ್ಪಿಕೊಂಡಿದ್ದಾರೆ. ಕೆಲವರು ಒತ್ತಾಯಕ್ಕೆ ಈ ಬ್ಯುಸಿನೆಸ್ ಗೆ ಬಂದ್ರೆ ಮತ್ತೆ ಕೆಲವರು ಹಣ ಸಂಪಾದನೆಗಾಗಿಯೇ ಈ ಕೆಲಸ ಮಾಡ್ತಿದ್ದಾರೆ. ಇಂಡೋನೇಷ್ಯಾಕ್ಕೆ ಹೋಗುವ ನೀವು, ಹೆಂಡ್ತಿ ಬೇಕು ಅಂದ್ರೆ ಬ್ರೋಕರ್ ಸಂಪರ್ಕ ಮಾಡ್ಬೇಕು. ಅವರು ಒಂದಿಷ್ಟು ಹುಡುಗಿಯರನ್ನು ನಿಮಗೆ ತೋರಿಸ್ತಾರೆ. ನಿಮಗೆ ಇಷ್ಟವಾದ ಹುಡುಗಿ ಜೊತೆ ಮದುವೆ ಮಾಡ್ಕೊಳ್ಳಬೇಕು. ನೀವು ಎಷ್ಟು ದಿನಗಳ ಕಾಲ ಆಕೆ ಜೊತೆಗಿರ್ತೀರಿ ಎನ್ನುವುದರ ಮೇಲೆ ಬೆಲೆ ನಿರ್ಧಾರವಾಗುತ್ತೆ. ಕೊನೆಯಲ್ಲಿ ಆಕೆಗೆ ಡಿವೋರ್ಸ್ ನೀಡಿ ನೀವು ಮನೆಗೆ ಬರಬಹುದು.

ಇಲ್ಲಿನ ಅನೇಕ ಮಹಿಳೆಯರು 15 -20 ಮದುವೆ ಆಗಿದ್ದಾರೆ. ಇಂಡೋನೇಷ್ಯಾದಲ್ಲಿ ಈ ಹ್ಯಾಪಿ ಮ್ಯಾರೇಜನ್ನು ನಿಷೇಧಿಸಲಾಗಿದೆ. ಆದ್ರೆ ಯಾವುದೇ ಕಠಿಣ ಕಾನೂನು ಜಾರಿಯಲ್ಲಿಲ್ಲ. ಹಾಗಾಗಿ ಈ ಬ್ಯುಸಿನೆಸ್ ಅತಿ ವೇಗವಾಗಿ ಹೆಚ್ಚಾಗ್ತಿದೆ. ಮಹಿಳೆಯೊಬ್ಬಳು ತನ್ನ ಕಥೆಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾಳೆ. 

ಭಾರತದಲ್ಲಿರುವ ಈ ಹುಲಿ ಅಭಯಾರಣ್ಯದಲ್ಲಿ ಒಮ್ಮೆಯಾದ್ರೂ ರೋಮಾಂಚಕ ಜೀಪ್ ಸಫಾರಿ ಮಾಡಿ

ಹೆಸರು ಬದಲಿಸಲಾಗಿದ್ದು, ಕಹಾಯಾ 17ನೇ ವಯಸ್ಸಿನಲ್ಲಿರುವಾಗ್ಲೇ ಈ ಬ್ಯುಸಿನೆಸ್ ಗೆ ಇಳಿದಿದ್ದಾಳೆ. ಈವರೆಗೆ 15 ಮದುವೆ ನಡೆದಿದೆ. 13ನೇ ವಯಸ್ಸಿನಲ್ಲೇ ಬಾಲ್ಯ ಸ್ನೇಹಿತನ ಜೊತೆ ಮದುವೆ ಆಗಿತ್ತು. ಒಂದು ಹೆಣ್ಣು ಮಗುವಿನ ತಾಯಿ ಕಹಾಯಾ. 17ನೇ ವಯಸ್ಸಿನಲ್ಲಿರುವಾಗ, ಕಹಾಯಾ ಅಜ್ಜ – ಅಜ್ಜಿಗೆ, ವಧುವನ್ನು ಹುಡುಕ್ತಿದ್ದ ವಿದೇಶಿಗನೊಬ್ಬ ಸಿಕ್ಕಿದ್ದ. ಆತನನ್ನು ಮದುವೆ ಆಗುವಂತೆ ಅವರು ಒತ್ತಡ ಹೇರಿದ್ದರು. ಹಣ ನೋಡಿ, ಹುಡುಗಿ ಒಪ್ಪಿಕೊಂಡಿದ್ದಳು. ಸೌದಿ ಅರೇಬಿಯಾದ ಆ ವ್ಯಕ್ತಿ, 580 ಡಾಲರ್ ಅಂದ್ರೆ ಸುಮಾರು 70 ಸಾವಿರ ರೂಪಾಯಿ ನೀಡಿದ್ದ. ಆತ ಇಂಡೋನೇಷ್ಯಾದಲ್ಲಿ ಇರುವವರೆಗೂ ಆತನ ಜೊತೆ ಪತ್ನಿಯಾಗಿದ್ದಳು. ಆದ್ರೆ ಈ ವಿಷ್ಯ ತಿಳಿದ ಕಹಾಯಾ ಪತಿ, ವಿಚ್ಛೇದನ ನೀಡಿದ್ದ. ಮಗುವಿನ ಜೊತೆ ಜೀವನ ನಡೆಸೋದು ಅನಿವಾರ್ಯವಾದ ಕಾರಣ ಕಹಾಯಾ ಫುಲ್ ಟೈಂ ಈ ಬ್ಯುಸಿನೆಸ್ ಗೆ ಇಳಿದಿದ್ದಳು. ಸೌದಿ ಅರೇಬಿಯಾ ವ್ಯಕ್ತಿ ಜೊತೆ ಕಳೆದ ದಿನಗಳು ಭಯಾನಕವಾಗಿದ್ದವು ಎಂದು ಕಹಾಯಾ ಹೇಳಿದ್ದಾಳೆ. ಆತ ಸೌದಿ ಅರೇಬಿಯಾಕ್ಕೆ ಈಕೆಯನ್ನು ಕರೆದೊಯ್ದಿದ್ದ. ಅಲ್ಲಿ ಕಹಾಯಾ ಜೀವನ ನರಕವಾಗಿತ್ತು. ಹೇಗೋ ತಪ್ಪಿಸಿಕೊಂಡು ಬಂದವಳು ಆ ನಂತ್ರ 14 ಮಂದಿಯನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದಾಳೆ. ತಿಂಗಳ ಲೆಕ್ಕದಲ್ಲಿ ಅವರಿಗೆ ಹಣ ನೀಡಬೇಕಾಗುತ್ತದೆ. 

Latest Videos
Follow Us:
Download App:
  • android
  • ios