Asianet Suvarna News Asianet Suvarna News

ಮುಸ್ಲಿಂ ದೇಶ ಇಂಡೋನೇಷ್ಯಾದಲ್ಲಿ ಅಷ್ಟೊಂದು ಹಿಂದೂಗಳಿರೋದು ಹೇಗೆ? ಡಾ. ಬ್ರೋ ಏನಂತಾರೆ?

ಇಂದು ಇಂಡೊನೇಷ್ಯಾ ಮುಸ್ಲಿಂ ಆಡಳಿತದ ದೇಶ. ಆದರೆ ಹಿಂದೂಗಳೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಆಚರಣೆಗಗಳನ್ನು ನೋಡಿದರೆ, ಥೇಟ್ ನಮ್ಮನ್ನೇ ನೋಡಿಕೊಂಡಂತಾಗುತ್ತದೆ. ಶಿವ, ವಿಷ್ಣುವನ್ನು ಪೂಜಿಸುತ್ತಾರೆ. ಮುಸ್ಲಿಂ ದೇಶವಾದ ಇಂಡೋನೇಷ್ಯಾದಲ್ಲಿ ಹಿಂದೂ ದೇವಾಲಯಗಳು ಯಾಕಿವೆ?

how hindu religion spread in indonasia country? dr.bro vlog tells
Author
First Published Feb 12, 2023, 3:07 PM IST

ಫ್ರಾನ್ಸ್‌ನ ನೆಪೋಲಿಯನ್ (Napolean) ಎಂಬ ರಾಜನ ಬಗ್ಗೆ ನಮ್ಮ ಹಿಸ್ಟರಿಯಲ್ಲಿ ಪುಟಗಟ್ಟಲೆ ಪಾಠ ಕೊಟ್ಟಿರ್ತಾರೆ. ಆದರೆ ನಮ್ಮ ವಿಕ್ರಮಾದಿತ್ಯ (Vikramaditya) ಸಾಮ್ರಾಟನ ರಾಜ್ಯ ಜರ್ಮನಿಯವರೆಗೂ ಹರಡಿತ್ತು ಅಂತ ಕಲಿಸೋದೇ ಇಲ್ಲ. ಇಂಡೋನೇಷ್ಯಾ ಎಂಬ ದೂರದ ದೇಶದವರೆಗೂ ನಮ್ಮ ತಮಿಳುನಾಡಿನ ರಾಜರಾಜ ಚೋಳನ (Raja Raja Colan) ಸಾಮ್ರಾಜ್ಯ ವಿಸ್ತರಿಸಿತ್ತು ಎಂಬ ವಿಷಯವನ್ನು ಪಾಠವಾಗಿಡುವುದೇ ಇಲ್ಲ. ಹೀಗಂತ ಯೂಟ್ಯೂಬ್‌ನ ಫೇಮಸ್ ಟ್ರಾವೆಲ್ ವ್ಲಾಗರ್ ಡಾ.ಬ್ರೊ (dr.Bro) ತಮ್ಮ ಇಂಡೋನೇಷ್ಯಾದ (Indonasia) ಪ್ರವಾಸ ವ್ಲಾಗ್ (travel vlog) ಅನ್ನು ಶುರುಮಾಡ್ತಾರೆ. ಇದು ನಿಜವಾ? ಹೌದು, ಇದರಲ್ಲಿ ಎಳ್ಳಿನಷ್ಟೂ ಸುಳ್ಳಿಲ್ಲ. ಇಂದು ಇಂಡೊನೇಷ್ಯಾ ಮುಸ್ಲಿಂ ಆಡಳಿತದ ದೇಶ. ಆದರೆ ಹಿಂದೂಗಳೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಆಚರಣೆಗಗಳನ್ನು ನೋಡಿದರೆ, ಥೇಟ್ ನಮ್ಮನ್ನೇ ನೋಡಿಕೊಂಡಂತಾಗುತ್ತದೆ.   

ಭಾರತದಿಂದ ದಕ್ಷಿಣಕ್ಕೆ, ಶ್ರೀಲಂಕಾವನ್ನೂ ದಾಟಿ, ಭಾರತದ ಪೂರ್ವ ದಿಕ್ಕಿನ ಬಂದರು ನಗರ ಚೆನ್ನೈಯಿಂದ ಸುಮಾರು ೩೬೦೦ ಕಿಲೋಮೀಟರ್ ಹಡಗಿನಲ್ಲಿ ಪ್ರಯಾಣಿಸಿದರೆ ಸಿಗುವ ದೇಶವೇ ಇಂಡೋನೇಷ್ಯಾ. ಇದರ ರಾಜಧಾನಿ ಬಾಲಿ. ಇಲ್ಲಿ ಶಿವನ ದೇವಾಲಯವಿದೆ. ಲಕ್ಷಾಂತರ ಭಕ್ತರು ಇಲ್ಲಿ ಶಿವನಿಗಿದ್ದಾರೆ. ಈ ಶಿವನನ್ನು ಇವರು ಕರೆಯುವುದು 'ಜೀವ' ಎಂದು. ಇದು ಶಿವನಲ್ಲದೇ ಬೇರೆಯಲ್ಲ. ಭಾರತದ ಹಿಂದೂ ಧರ್ಮ ೩೬೦೦ ಕಿಲೋಮೀಟರ್ ಪ್ರಯಾಣಿಸಿ ಇಂಡೋನೇಷ್ಯಾ ತಲುಪಿದ್ದು ಹೇಗೆ?

ಮೊದಲು ಇಲ್ಲಿ ವಾಸವಾಗಿದ್ದವರು ಜಾವಾನೀಸ್ ಬುಡಕಟ್ಟಿನ ಮಂದಿ. ಇವರ ಜೀವನ ಮೀನುಗಾರಿಕೆ ಮತ್ತು ಕೃಷಿಯನ್ನು ಅವಲಂಬಿಸಿತ್ತು. ಕ್ರಿಸ್ತಶಕ ಒಂದನೇ ಶತಮಾನದ ಸುಮಾರಿಗೆ ಇಲ್ಲಿಗಗೆ ಭಾರತೀಯ ವರ್ತಕರು ವ್ಯಾಪಾರ ಮಾಡುತ್ತಾ ಮಾಡುತ್ತಾ  ಹಡಗುಗಳಲ್ಲಿ ತಲುಪಿದರು. ನಂತರ ಅವರ ಹಿಂದೆಯೇ  ಕ್ಷತ್ರಿಯರು, ಪುರೋಹಿತರು, ಧಾರ್ಮಿಕ ವ್ಯಕ್ತಿಗಳೆಲ್ಲ ತಲುಪಿದರು. ನಿಧಾನವಾಗಿ ಇಲ್ಲಿ ಹಿಂದೂ ಧರ್ಮ ಹರಡತೊಡಗಿತು.

ಇದೇ ಕಾಲಕ್ಕೆ ಭಾರತದ ದಕ್ಷಿಣದಲ್ಲಿ ರಾಜ ರಾಜ ಚೋಳನ್ ಎಂಬ ಚೋಳ ವಂಶದ ಪ್ರಬಲ ರಾಜ ಸಾಮ್ರಾಜ್ಯ ವಿಸ್ತರಿಸುತ್ತಿದ್ದ. ಅವನು ತನ್ನ ಸೈನ್ಯವನ್ನು ಕಳಿಸಿ ಶ್ರೀಲಂಕವನ್ನು ಗೆದ್ದ. ಅಲ್ಲಿಂದ ದಕ್ಷಿಣಕ್ಕೆ ಇಂಡೋನೇಷ್ಯಾಕ್ಕೂ ಸೈನ್ಯ ಕಳಿಸಿ ಅದನ್ನೂ ವಶಪಡಿಸಿಕೊಂಡ. ಅದಕ್ಕೂ ಮೊದಲು ಇಲ್ಲಿ ರಾಜರು, ಸೈನ್ಯ ಇರಲೇ ಇಲ್ಲ. ನಿಧಾನವಾಗಿ ಇಲ್ಲಿ ತಮಿಳುನಾಡಿನಿಂದ ಹೋದ ಹಿಂದೂಗಳು ಶೈವ ಪರಂಪರೆ, ನಡವಳಿಕೆಗಳನ್ನು ಅಲ್ಲಿಗೆ ತಲುಪಿಸಿದರು. ಅವರ ಹಿಂದೆಯೇ ಶಿವಪೂಜೆಯೂ ಹೋಯಿತು. 

ಈ ರಾಜರಾಜ ಚೋಳನ ಸಾಮ್ರಾಜ್ಯ ಬಾಂಗ್ಲಾ, ಮ್ಯಾನ್ಮಾರ್, ಸುಮಾತ್ರ ದ್ವೀಪಗಗಳಿಗೆಲ್ಲಾ ವಿಸ್ತರಿಸಿತ್ತು. ಇವನ ಬಳಿಕದ ಹಲವು ರಾಜರೂ ಈ ಪ್ರಾಂತ್ಯವನ್ನು ಆಳಿದರು. ಇಂಡೋನೇಷ್ಯಾದ ನಾನಾ ಕಡೆ ಪಾಳುಬಿದ್ದ ಹಿಂದೂ ದೇವಾಲಯಳನ್ನು ನೋಡಬುದು. ಇವೆಲ್ಲಾ ಏನಿಲ್ಲ ಅಂದರೂ ಸಾವಿರದೈನೂರು ವರ್ಷಗಳಷ್ಟು ಹಳೆಯವು. ಕ್ರಿಸ್ತಶಕ ೧೨ನೇ ಶತಮಾನದ ನಂತರ ಮುಸ್ಲಿಮರು ಬರತೊಡಗಿದ ಮೇಲೆ, ಚೋಳ ಸಾಮ್ರಾಜ್ಯದ ರಾಜರು ದುರ್ಬಲವಾಗತೊಡಗಿದ ಬಳಿಕ ಇವರ ಹಿಡಿತ ತಪ್ಪಿ ಮುಸ್ಲಿಮರು ಇಲ್ಲಿ ಗಟ್ಟಿಯಾದರು. 

ಒಂದೇ ಒಂದು ದಿನ ಎಲ್ಲಿಗಾದರೂ ಹೋಗಿ ಬರ್ಬೇಕು ಅಂದ್ರೆ ಈ ಪ್ಲೇಸಸ್ ಬೆಸ್ಟ್!

ಇಂಡೋನೇಷ್ಯಾಕ್ಕೆ ತಲುಪಿದ ಭಾರತದ ಮಹಾ ಸಾಂಸ್ಕೃತಿಕ ಕೊಡುಗೆ ಎಂದರೆ ರಾಮಾಯಣ ಕಾವ್ಯ. ಇಂದಿಗೂ ಅಲ್ಲಿ ರಾಮಾಯಣದ ಕಾವ್ಯ ಪ್ರಚಲಿತ. ಅದು ಈ ನೂರಾರು ವರ್ಷಗಳಲ್ಲಿ ಹಲವು ಬಗೆಯ ಬದಲಾವಣೆಗಳನ್ನು ಕಂಡಿದೆ.  ಭಾರತದ ರಾಮಾಯಣವೇ ಬೇರೆ, ಇಂಡೋನೇಷ್ಯಾದ ರಾಮಾಯಣವೇ ಬೇರೆ ಎಂಬ ಹಾಗಿದೆ. ಆದರೆ ರಾಮ- ಸೀತೆ- ರಾವಣ ಎಲ್ಲ ಅದೇ, ಕತೆಯೂ ಅದೇ. ರಾಮಾಯಣವನ್ನು ಆಧರಿಸಿದ ನಾಟ್ಯ ನಾಟಕ ಕಲೆಗಳೂ ಇವೆ. 

ಡಾ. ಬ್ರೋ ಮಾಡಿರುವ ಒಂದು ವಿಡಿಯೋದಲ್ಲಿ ಅಲ್ಲಿನವರು ರಾಮಾಯಣ ರೂಪಕವನ್ನು ಪ್ರದರ್ಶಿಸುವುದನ್ನು ಕಾಣಬಹುದು. ಅದರಲ್ಲಿ ಸೀತೆಯನ್ನು ರಾವಣ ಅಪಹರಿಸುವುದು, ಜಟಾಯು ಬಂದು ಎದುರಿಸುವುದು, ಹನುಮಂತನ ಸಾಹಸ ಎಲ್ಲವನ್ನೂ ತೋರಿಸಲಾಗಿದೆ.  

ಇಂಡೋನೇಷ್ಯಾದ ರಾಜಧಾನಿಯಾದ ಬಾಲಿಯಲ್ಲಿ ಉಲುವಾಟು ಎಂಬ ಬೆಟ್ಟದ ಮೇಲಿರುವ ಶಿವನ ದೇವಸ್ಥಾನವನ್ನು, ಅಲ್ಲಿ ಶಿವನ ಆರಾಧನೆ ಮಾಡುತ್ತಿರುವ ಹಿಂದೂಗಳನ್ನು ತೋರಿಸಿದ್ದಾರೆ. ಅಲ್ಲಿನ ಪದ್ಧತಿ ಇಲ್ಲಿನಂತೆಯೇ ಇದೆ. ಇದೇ ರೀತಿ ಪೂಜೆ ಮಾಡುತ್ತಾರೆ, ಪ್ರಸಾದ- ತೀರ್ಥ ಸೇವನೆ ಇದೆ. ದೇವಸ್ಥಾನದೊಳಗೂ ಚಪ್ಪಲಿ ಧರಿಸಿ ಓಡಾಡುತ್ತಾರೆ ಎಂದು ಬ್ರೋ ವಿವರಿಸಿದ್ದಾರೆ.  

ಭಾರತದ ಅತೀ ಸ್ವಚ್ಛ ಗ್ರಾಮವಿದು, ಊರೆಲ್ಲಾ ಹುಡುಕಿದರೂ ಒಂಚೂರು ಕಸವಿಲ್ಲ

Follow Us:
Download App:
  • android
  • ios