ಭಾರತದಲ್ಲಿ ವಿವಾಹದ ನಂತರ ಮಹಿಳೆಯರು ಗಂಡನ ಮನೆಗೆ ಹೋಗುವುದು ಸಾಮಾನ್ಯ. ಆದರೆ ಮೇಘಾಲಯ ಮತ್ತು ಅಸ್ಸಾಂನ ಖಾಸಿ ಜನಾಂಗದಲ್ಲಿ ಇದು ವಿರುದ್ಧವಾಗಿದೆ. ಇಲ್ಲಿ ಪುರುಷರು ಮದುವೆಯಾದ ನಂತರ ಹೆಂಡತಿಯ ಮನೆಗೆ ಹೋಗುತ್ತಾರೆ. ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ, ಆಸ್ತಿ ಮತ್ತು ಆಡಳಿತದ ಹಕ್ಕುಗಳನ್ನು ಹೊಂದಿದ್ದಾರೆ. ಆದರೆ ಈಗ ಪುರುಷರು ಸಮಾನ ಹಕ್ಕುಗಳಿಗಾಗಿ ಬೇಡಿಕೆ ಇಡುತ್ತಿದ್ದಾರೆ.

ಹುಡುಗಿಯರು ಮದುವೆ (marriage) ಆಗ್ತಿದ್ದಂತೆ ತವರನ್ನು ತೊರೆಯಬೇಕು. ಅಮ್ಮ – ಅಪ್ಪನ ಮನೆ ಬಿಟ್ಟು, ಕಣ್ಣೀರಿಡ್ತಾ ಗಂಡನ ಮನೆಗೆ ಹೋಗ್ಬೇಕು. ಮದುವೆ ಆದ್ಮೇಲೆ ಗಂಡನ ಮನೆಯೇ ಆಕೆಯ ಮನೆಯಾಗುತ್ತೆ. ತನ್ನೆಲ್ಲ ವಸ್ತುವನ್ನು ಗಂಟು ಮೂಟೆ ಕಟ್ಟಿ ಗಂಡನ ಮನೆಗೆ ಸಾಗಿಸ್ತಾಳೆ. ವಿವಾಹದ ನಂತ್ರ ಮನೆ, ಕುಟುಂಬ, ಹೆಸರು ಸೇರಿದಂತೆ ಅನೇಕ ವಿಷ್ಯದಲ್ಲಿ ಹುಡುಗಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಭಾರತವನ್ನು ಪುರುಷ ಪ್ರಧಾನ ದೇಶ ಎಂದೇ ಕರೆಯಲಾಗುತ್ತದೆ. ಇಲ್ಲಿ ಬಹುತೇಕ ಎಲ್ಲ ಕಡೆ ಪುರುಷರಿಗೆ ಪ್ರಾಮುಖ್ಯತೆ. ಪುರುಷರ ಆಳ್ವಿಕೆ ಚಾಲ್ತಿಯಲ್ಲಿದೆ. ಮನೆ ಆಡಳಿತ, ಮನೆ ಹೊರಗಿನ ಕೆಲಸವನ್ನು ಪುರುಷ ಮಾಡಿದ್ರೆ, ಮಹಿಳೆ ಮನೆ ಕೆಲಸ, ಮಕ್ಕಳ ಆರೈಕೆ ಜವಾಬ್ದಾರಿ ಹೊರಬೇಕು. ಪ್ರಾಚೀನ ಕಾಲದಿಂದಲೂ ಈ ಪದ್ಧತಿ ಭಾರತದಲ್ಲಿ ಜಾರಿಯಲ್ಲಿದೆ. ಆದ್ರೆ ಪುರುಷರಿಗೆ ಹೆಚ್ಚು ಮಹತ್ವ ನೀಡುದ ಈ ದೇಶದಲ್ಲಿ ಮಹಿಳೆಯರನ್ನು ಪೂಜಿಸುವ, ಮಹಿಳೆಯರಿಗೆ ಆಡಳಿತದ ಜವಾಬ್ದಾರಿ ನೀಡುವ ಜನಾಂಗವೊಂದಿದೆ. ಅಲ್ಲಿನ ವಿಶೇಷ ಅಂದ್ರೆ, ಮದುವೆಯಾದ ಹುಡುಗಿ ಗಂಡನ ಮನೆಗೆ ಹೋಗೋದಿಲ್ಲ. ಪತಿಯಾದವನು, ಪತ್ನಿ ಮನೆಗೆ ಬಂದು ಸೇರ್ತಾನೆ.

ಮಹಿಳೆಯರೇ ಇಲ್ಲಿ ಒಡತಿ : ಭಾರತದ ಎರಡು ಈಶಾನ್ಯ ರಾಜ್ಯಗಳಾದ ಮೇಘಾಲಯ (Meghalaya) ಮತ್ತು ಅಸ್ಸಾಂ (Assam)ನಲ್ಲಿ ನೀವು ಈ ಪದ್ಧತಿಯನ್ನು ಕಾಣ್ಬಹುದು. ಇಲ್ಲಿ ಖಾಸಿ ಬುಡಕಟ್ಟು ಜನಾಂಗ (Khasi tribe) ವಾಸವಾಗಿದೆ. ಖಾಸಿ ಜನಾಂಗದಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಾಬಲ್ಯ ಹೆಚ್ಚಿದೆ. ಇಲ್ಲಿ ಪುರುಷರ ಬದಲಿಗೆ ಮಹಿಳೆಯರನ್ನು ಪೂಜಿಸಲಾಗುತ್ತದೆ, ಗೌರವಿಸಲಾಗುತ್ತದೆ. ಈ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ಆಳ್ವಿಕೆ ನಡೆಸುತ್ತಾರೆ. ಮಹಿಳೆಯರ ಪ್ರತಿಯೊಂದು ಅಭಿಪ್ರಾಯಕ್ಕೂ ಪ್ರಾಮುಖ್ಯತೆ ನೀಡಲಾಗುತ್ತದೆ.

ವಿದೇಶದಿಂದ ಬರ್ತಾರೆ, 'ಶುದ್ಧ ಆರ್ಯ'ರಿಂದ ಗರ್ಭ ಧರಿಸಿ ಹೋಗ್ತಾರೆ... ಗರ್ಭಧಾರಣೆ

ಮದುವೆ ನಂತ್ರ ಹುಡುಗರು ತಮ್ಮ ವಸ್ತುಗಳನ್ನು ಪ್ಯಾಕ್ ಮಾಡ್ಕೊಂಡು ಪತ್ನಿ ಮನೆಗೆ ಬಂದು ಸೇರ್ತಾರೆ. ಮದುವೆಯಾದ ಮಹಿಳೆ ತನ್ನ ಉಪ ನಾಮವನ್ನು ಬದಲಿಸುವುದಿಲ್ಲ. ಪತಿ, ಉಪನಾಮವನ್ನು ಬದಲಿಸಬೇಕು. ಅಲ್ಲದೆ ಹುಟ್ಟುವ ಮಕ್ಕಳಿಗೂ ಅಮ್ಮನ ಉಪನಾಮವನ್ನು ಇಡಲಾಗುತ್ತದೆ. ಬಾಂಗ್ಲಾ ದೇಶದ ಕೆಲ ಪ್ರದೇಶದಲ್ಲೂ ಖಾಸಿ ಜನಾಂಗ ವಾಸವಾಗಿದ್ದು, ಅಲ್ಲಿಯೂ ಈ ಪದ್ಧತಿ ಜಾರಿಯಲ್ಲಿದೆ. ಇಲ್ಲಿ, ಶತಮಾನಗಳಿಂದ, ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಉನ್ನತ ಸ್ಥಾನಮಾನವನ್ನು ನೀಡಲಾಗಿದೆ. ಈ ಬುಡಕಟ್ಟು ಸಂಪೂರ್ಣವಾಗಿ ಹುಡುಗಿಯರಿಗೆ ಸಮರ್ಪಿತವಾಗಿದೆ. ಇಲ್ಲಿ ಹೆಣ್ಣು ಮಗು ಜನಿಸಿದಾಗ ಸಂಭ್ರಮಾಚರಣೆ ಜೋರಾಗಿರುತ್ತದೆ. ಅದೇ ಗಂಡು ಮಗು ಹುಟ್ಟಿದರೆ ಕೆಟ್ಟದೆಂದು ಪರಿಗಣಿಸಲಾಗುತ್ತದೆ. ಖಾಸಿ ಬುಡಕಟ್ಟು ಜನಾಂಗದಲ್ಲಿ ಭಾರತೀಯ ಸಂಸ್ಕೃತಿಗೆ ಸಂಪೂರ್ಣವಾಗಿ ವಿರುದ್ಧವಾದ ಅನೇಕ ಸಂಪ್ರದಾಯಗಳಿವೆ. ಇಲ್ಲಿ ಆಸ್ತಿ, ಸಂಪತ್ತಿಗೆ ಮಹಿಳೆಯರು ಒಡತಿಯರಾಗಿರುತ್ತಾರೆ. ಮಾರುಕಟ್ಟೆಗಳು ಮತ್ತು ಅಂಗಡಿಗಳಲ್ಲಿ ಮಹಿಳೆಯರು ಮಾತ್ರ ಕೆಲಸ ಮಾಡುತ್ತಾರೆ. ಖಾಸಿ ಸಮುದಾಯದಲ್ಲಿ, ಕಿರಿಯ ಮಗಳು ಪಿತ್ರಾರ್ಜಿತ ಆಸ್ತಿಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಾಳೆ. ಈ ಕಾರಣಕ್ಕಾಗಿ, ಅವಳು ತನ್ನ ಹೆತ್ತವರು, ಅವಿವಾಹಿತ ಸಹೋದರ ಸಹೋದರಿಯರು ಮತ್ತು ಆಸ್ತಿಯನ್ನು ನೋಡಿಕೊಳ್ಳಬೇಕಾಗುತ್ತದೆ. ಕಿರಿಯ ಮಗಳನ್ನು ಖತಾದುಹ್ ಎಂದು ಕರೆಯಲಾಗುತ್ತದೆ. ಅವರ ಮನೆ ಪ್ರತಿಯೊಬ್ಬ ಸಂಬಂಧಿಕರಿಗೂ ತೆರೆದಿರಬೇಕು.

ಈ ದೇವಾಲಯದಲ್ಲಿ ಸಿಗರೇಟ್ ಕೊಡುವುದೇ ಭಕ್ತರ ಹರಕೆ!

ಬದಲಾವಣೆ ಬಯಸುತ್ತಿರುವ ಪುರುಷರು : ಮಹಿಳೆಯರೇ ಪ್ರಾಬಲ್ಯ ಹೊಂದಿರುವ ಈ ಜನಾಂಗದ ಪುರುಷರು ಬದಲಾವಣೆ ಬಯಸುತ್ತಿದ್ದಾರೆ. ಮಹಿಳೆಯರಿಗೆ ಸಮಾನವಾದ ಹಕ್ಕನ್ನು ಪುರುಷರು ಬಯಸುತ್ತಿದ್ದಾರೆ. ಮಹಿಳೆರನ್ನು ಕೀಳಾಗಿ ನೋಡುತ್ತಿಲ್ಲ, ನಮಗೂ ಹಕ್ಕು ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.