ಥೈಲ್ಯಾಂಡ್‌ಗಿಂತ ದುಬಾರಿಯಾಯ್ತು ಗೋವಾ 1 ರಾತ್ರಿ ತಂಗಲು ವಿಧಿಸುವ ಶುಲ್ಕ ಇಷ್ಟೊಂದಾ?

ಎಲ್ಲರ ಕೈಗೆಟುವ ಗೋವಾ ಈಗ ಥೈಲ್ಯಾಂಡ್ ಹಾಗೂ ವಿಯೆಟ್ನಾಂಗಿಂತಲೂ ದುಬಾರಿ ಎಂಬ ವಿಚಾರ ನಿಮಗೆ ಗೊತ್ತಾ? ಅಚ್ಚರಿ ಎನಿಸಿದರು ಇದು ಸತ್ಯ. ಈ ಬಗ್ಗೆ ಒಂದು ವರದಿ ಇಲ್ಲಿದೆ.

Goa Becomes More Expensive Than Thailand and Vietnam for Indian Tourists

ಗೋವಾ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ.  ದುಡ್ಡಿರುವವರೆಲ್ಲಾ ಹನಿಮೂನ್ ಅಥವಾ ರಜಾ ಸಮಯಗಳನ್ನು ಕಳೆಯಲು ವಿದೇಶಗಳಿಗೆ ಹೋದರೆ ಸಾಮಾನ್ಯ ಮಾಧ್ಯಮವರ್ಗದ ಜನರು, ಹತ್ತಿರದ ಹಾಗೂ ನೆಚ್ಚಿನ ತಾಣ ವೆನಿಸಿದ ಗೋವಾವನ್ನೇ ತಮ್ಮ ಖುಷಿಯ ಕ್ಷಣಗಳನ್ನು ಕಳೆಯಲು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಎಲ್ಲರ ಕೈಗೆಟುವ ಗೋವಾ ಈಗ ಥೈಲ್ಯಾಂಡ್ ಹಾಗೂ ವಿಯೆಟ್ನಾಂಗಿಂತಲೂ ದುಬಾರಿ ಎಂಬ ವಿಚಾರ ನಿಮಗೆ ಗೊತ್ತಾ? ಅಚ್ಚರಿ ಎನಿಸಿದರು ಇದು ಸತ್ಯ. ಈ ಬಗ್ಗೆ ಒಂದು ವರದಿ ಇಲ್ಲಿದೆ.

ಪ್ರವಾಸಿ ತಾಣಗಳೆಂದರೆ ಸಾಮಾನ್ಯವಾಗಿ ಬೇರೆ ಕಡೆಗೆ ಹೋಲಿಸಿದರೆ ತುಂಬಾ ದುಬಾರಿ ಎನಿಸುತ್ತವೆ. ಅದು ಯಾವುದೇ ಪ್ರವಾಸಿ ತಾಣವಿರಬಹುದು. ಅಲ್ಲಿನ ಆಹಾರ, ಊಟ ಉಪಹಾರಗಳಿಂದ ಹಿಡಿದು ವಾಸ್ತವ್ಯದವರೆಗೆ ಅತೀ ದುಬಾರಿ ಎನಿಸುತ್ತದೆ. ಇದಕ್ಕೆ ಯಾವ ಪ್ರವಾಸಿ ತಾಣಗಳು ಕೂಡ ಹೊರತಲ್ಲ, ಅದರಲ್ಲೂ ಸಮೀಪವೇ ಬೀಚ್‌ಗಳು ಬೋಟಿಂಗ್ ಮುಂತಾದ ನೈಸರ್ಗಿಕ ಮನೋರಂಜನೆಯ ತಾಣಗಳಿದ್ದರಂತೂ ಅಲ್ಲಿ ನಿಮಗೇನನ್ನು ನಿಮ್ಮ ಹಣಕ್ಕಿರುವ ಮೌಲ್ಯಕ್ಕೆ ತಕ್ಕಂತೆ ಕೊಳ್ಳಲಾಗದು, ಕೊಂಡರೆ ಕೈ ಸುಟ್ಟುಕೊಳ್ಳಬೇಕಷ್ಟೇ. ಅದೇ ರೀತಿ ಈಗ ಭಾರತೀಯ ನೆಚ್ಚಿನ ತಾಣವೆನಿಸಿರುವ ಗೋವಾ ಕೂಡ ಜನಸಾಮಾನ್ಯರ ಕೈಗೆ ಸಿಗದಷ್ಟು ದುಬಾರಿ ಎನಿಸಿವೆ ಎಂದು ಹೇಳುತ್ತಿವೆ ವರದಿಗಳು.

ಹೌದು ಗೋವಾದಲ್ಲಿ ಒಂದು ರಾತ್ರಿ ಕಳೆಯಲು ಹೊಟೇಲ್‌ಗಳು ತಗಲುವ ವೆಚ್ಚ ತುಂಬಾ ದುಬಾರಿಯಾಗಿದೆ. ಇಬ್ಬರು ಒಂದು ರಾತ್ರಿ ಕಳೆಯಲು ಇಲ್ಲಿನ 4 ಸ್ಟಾರ್‌ ಹೋಟೇಲ್‌ಗಳು ವಿಧಿಸುವ ಶುಲ್ಕ 8 ಸಾವಿರ ರೂಪಾಯಿಗಳು. ವಿಯೆಟ್ನಾಂ ಹಾಗೂ ಥೈಲ್ಯಾಂಡ್‌ನ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಇದು 3-4 ಪಟ್ಟು ಹೆಚ್ಚು. ವಿಯೆಟ್ನಾಂನ  4 ಸ್ಟಾರ್‌ ಹೋಟೇಲ್‌ಗಳು ಒಂದು ರಾತ್ರಿಗೆ ಇಬ್ಬರಿಗೆ 2 ಸಾವಿರ ಚಾರ್ಜ್‌ ವಿಧಿಸಿದರೆ ಥೈಲ್ಯಾಂಡ್ ಒಂದು ರಾತ್ರಿಗೆ 3 ಸಾವಿರ ರೂಪಾಯಿಗಳನ್ನು ಚಾರ್ಜ್ ಮಾಡುತ್ತದೆ. 

ವಿದೇಶಿ ಪ್ರವಾಸಿಗರಿಗೂ ಗೋವಾ ನೆಚ್ಚಿನ ತಾಣವಾಗಿದ್ದು, ಪ್ರತಿವರ್ಷ ಲಕ್ಷಾಂತರ ಜನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದು ಇಲ್ಲಿನ ಹೊಟೇಲ್ ದರಗಳನ್ನು ದುಬಾರಿಯಾಗುವಂತೆ ಮಾಡಿದೆ.  2019ರಲ್ಲಿ ಗೋವಾ ಕನಿಷ್ಠ 9.4 ಲಕ್ಷ ಜನ ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿತ್ತು. ಆದರೆ 2023ರ ಹೊತ್ತಿಗೆ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದ್ದು,  4.03 ಲಕ್ಷ ಜನ ವಿದೇಶಿಗರು ಆ ವರ್ಷದಲ್ಲಿ ಗೋವಾಗೆ ಭೇಟಿ ನೀಡಿದ್ದಾರೆ. ವಿದೇಶಿ ಪ್ರವಾಸಿಗರ ಸಂಖ್ಯೆ  ಇಳಿಕೆಯಾದರೂ ಗೋವಾದಲ್ಲಿ ಏರಿರುವ ಹೊಟೇಲ್‌ ದರಗಳ ಶುಲ್ಕ ಕಡಿಮೆ ಆಗಿಲ್ಲ, 

Latest Videos
Follow Us:
Download App:
  • android
  • ios