ನದಿಯೇ ಇಲ್ಲದ ದೇಶ ಗೊತ್ತು, ಹಾವು, ಸೊಳ್ಳೆ, ಜೈಲು ದೇವಸ್ಥಾನವೇ ಇಲ್ಲದ ದೇಶವೂ ಇವೆ!
ನಮ್ಮ ಪ್ರಪಂಚದ ಬಗ್ಗೆ ತಿಳಿಯುವುದು ಸಾಕಷ್ಟಿದೆ. ನೀವು ಮಾಹಿತಿ ಪಡೆಯುತ್ತಾ ಹೋದಂತೆ ಹೊಸ ಹೊಸ ವಿಷ್ಯ ಹೊರಗೆ ಬರುತ್ತದೆ. ನಿಮ್ಮ ಜ್ಞಾನ ವೃದ್ಧಿಯಾಗುತ್ತೆ. ಇಂದು ಈ ಕೆಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳಿ.
ಸಾಮಾನ್ಯ ಜ್ಞಾನದ ವಿಷ್ಯಕ್ಕೆ ಬಂದಾಗ ನಾವು ತಿಳಿದುಕೊಳ್ಳುವುದು ಸಾಕಷ್ಟಿದೆ. ಪ್ರತಿ ದಿನ ಒಂದಿಷ್ಟು ವಿಷ್ಯಗಳು ಇದ್ರಲ್ಲಿ ಸೇರ್ಪಡೆಯಾಗುತ್ತವೆ. ನಮ್ಮ ದೇಶ ಸೇರಿದಂತೆ ವಿಶ್ವದಾದ್ಯಂತ ಇರುವ ದೇಶಗಳಲ್ಲಿ ಸಾಕಷ್ಟು ಭಿನ್ನತೆ ಇದೆ. ಒಂದು ದೇಶ ನದಿಗಳಿಂದ ತುಂಬಿ ಹೋಗಿದ್ರೆ ಮತ್ತೊಂದು ದೇಶದಲ್ಲಿ ನದಿಗಳೇ ಇಲ್ಲದಿರಬಹುದು. ಇನ್ನೊಂದು ದೇಶದಲ್ಲಿ ಪೊಲೀಸ್ ಇಲ್ಲ. ಮತ್ತೊಂದು ದೇಶದಲ್ಲಿ ಜೈಲೇ ಇಲ್ಲ. ಹೀಗೆ ಪ್ರತಿ ದೇಶವೂ ಸಾಕಷ್ಟು ವಿಶೇಷತೆಗಳಿಂದ ತುಂಬಿದೆ. ನಾವಿಂದು ಕೆಲ ದೇಶಗಳ ವಿಶೇಷತೆ ಬಗ್ಗೆ ನಿಮಗೆ ಹೇಳ್ತೇವೆ.
ನದಿ (River) ಯಿಲ್ಲದ ದೇಶ ಯಾವುವು ಗೊತ್ತಾ? : ವಿಶ್ವದಲ್ಲಿ ಅತ್ಯಂತ ಚಿಕ್ಕ ದೇಶವಾಗಿರುವ ವ್ಯಾಟಿಕನ್ ಸಿಟಿ (Vatican City) ಯಲ್ಲಿ ಯಾವುದೇ ನದಿ ಇಲ್ಲ.
ಬೆಂಗಳೂರಲ್ಲಿ ಬನಾರಸಿ ಫಾಸ್ಟ್ ಫುಡ್ ತಿನ್ಬೇಕಾದ್ರೆ ಈ ಸ್ಥಳ ಬೆಸ್ಟ್
ರಾಜಧಾನಿ ಇಲ್ಲದ ದೇಶ ಯಾವುದು ಗೊತ್ತಾ? : ಎಲ್ಲ ದೇಶಕ್ಕೂ ಒಂದೊಂದು ರಾಜಧಾನಿ ಇರುತ್ತೆ ಅಂತಾ ನಾವು ನಂಬಿದ್ದೇವೆ. ಆದ್ರೆ ರಾಜಧಾನಿ ಇಲ್ಲದ ದೇಶವೂ ಇದೆ. ಅದರ ಹೆಸರು ನೌರು. ಇದೊಂದು ದ್ವೀಪರಾಷ್ಟ್ರವಾಗಿದೆ.
ಹಾವಿಲ್ಲದ ದೇಶ ಇದು : ನಿಮಗೆ ಅಚ್ಚರಿ ಆಗ್ಬಹುದು. ಆದ್ರೆ ನ್ಯೂಜಿಲ್ಯಾಂಡ್ ನಲ್ಲಿ ನಿಮಗೆ ಒಂದೇ ಒಂದು ಹಾವು ಸಿಗೋದಿಲ್ಲ. ಹಾವಿಲ್ಲದ ದೇಶವೆಂದೇ ಅದನ್ನು ಕರೆಯಬಹುದು.
ಲೈಂಗಿಕ ಸ್ವಾತಂತ್ರ್ಯ ಇರೋ ಈ ಮಹಿಳೆಯರು ಜೀವನದಲ್ಲಿ ಒಂದೇ ದಿನ ಸ್ನಾನ ಮಾಡೋದಂತೆ!
ರೈಲ್ವೆ ಸಂಪರ್ಕವಿಲ್ಲದ ದೇಶ : ರೈಲು ಭಾರತೀಯರ ಪ್ರಮುಖ ಸಾರಿಗೆ. ಮೂಲೆ ಮೂಲೆ ಜನರಿಗೆ ಸಂಪರ್ಕ ಕಲ್ಪಿಸುವ ಹಾಗೂ ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ರೈಲು. ಆದ್ರೆ ರೈಲ್ವೆ ಸಂಪರ್ಕವೇ ಇಲ್ಲದ ದೇಶವಿದೆ. ಅದೇ ಅಪಘಾನಿಸ್ತಾನ. ಇಲ್ಲಿ ರೈಲ್ವೆ ಹಳಿಯೂ ಇಲ್ಲ, ರೈಲೂ ಇಲ್ಲ.
ಜೈಲಿಲ್ಲದ ದೇಶ ಇದು : ಅಪರಾಧ ಮಾಡಿದೋರನ್ನು ನಮ್ಮ ದೇಶದಲ್ಲಿ ಜೈಲಿಗೆ ಹಾಕಿ ಶಿಕ್ಷೆ ನೀಡ್ತೇವೆ. ಆದ್ರೆ ನೆದರ್ಲ್ಯಾಂಡ್ ನಲ್ಲಿ ಜೈಲು ವ್ಯವಸ್ಥೆಯೇ ಇಲ್ಲ.
ದೇವಸ್ಥಾನವಿಲ್ಲದ ದೇಶ : ಅರಬ್ ದೇಶಗಳಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಿದೆ. ಅವರು ಇಸ್ಲಾಂ ಮೇಲೆ ನಂಬಿಕೆಯಿಟ್ಟಿದ್ದಾರೆ. ಬೇರೆ ಧರ್ಮಕ್ಕೆ ಇಲ್ಲಿ ಆದ್ಯತೆ ನೀಡೋದಿಲ್ಲ. ಚರ್ಚ್ ಹಾಗೂ ದೇವಸ್ಥಾನ ನಿರ್ಮಾಣಕ್ಕೂ ಅವರು ಅವಕಾಶ ನೀಡೋದಿಲ್ಲ. ಸೌದಿ ಅರೇಬಿಯಾದಲ್ಲಿ ಯಾವುದೇ ದೇವಸ್ಥಾನವಿಲ್ಲ. ಕುವೈತ್ ನಲ್ಲಿ ನೀವು ಚರ್ಚ್ ನೋಡಬಹುದು.
ಸೂರ್ಯ ಮುಳುಗದ ನಾಡು : ಎಲ್ಲರಿಗೂ ತಿಳಿದಿರುವಂತೆ ಸೂರ್ಯ ಮುಳುಗದ ನಾಡು ನಾರ್ವೆ. ಇಲ್ಲಿ ದಿನದ 24 ಗಂಟೆಯೂ ಸೂರ್ಯನ ಬೆಳಕಿರುತ್ತದೆ. ಸುಮಾರು 76 ದಿನಗಳವರೆಗೆ ಸೂರ್ಯಾಸ್ತವಾಗೋದಿಲ್ಲ.
ಪೊಲೀಸ್ ಇಲ್ಲದ ದೇಶ : ಪುಲಾವ್ ದೇಶಕ್ಕೆ ಯಾವುದೇ ಸ್ವಂತ ಪೊಲೀಸ್ ಪಡೆಯಿಲ್ಲ. ಯುಎಸ್ ಎ ಈ ದೇಶದ ಸಂಪೂರ್ಣ ರಕ್ಷಣೆ ಹೊಣೆಯನ್ನು ಹೊತ್ತುಕೊಂಡಿದೆ. ಅದೇ ಅತಿ ಹೆಚ್ಚು ಪೊಲೀಸ್ ಪಡೆ ಹೊಂದಿರುವ ದೇಶದ ಬಗ್ಗೆ ಹೇಳೋದಾದ್ರೆ ಅದು ರಷ್ಯಾ. ಇಲ್ಲಿ 100,000 ಜನರಿಗೆ 975 ಪೊಲೀಸರಿದ್ದಾರೆ.
ಸೊಳ್ಳೆ ಇಲ್ಲದ ದೇಶ ಯಾವುದು ಗೊತ್ತಾ? : ಬೆಳಿಗ್ಗೆ ರಾತ್ರಿ ಎನ್ನದೆ ಗುಯ್ ಎನ್ನುವ ಸೊಳ್ಳೆ ಕಾಟಕ್ಕೆ ನಮ್ಮ ದೇಶದ ಜನ ಬೇಸತ್ತಿದ್ದಾರೆ. ಪ್ರಪಂಚದಾದ್ಯಂತ 2500 ಕ್ಕೂ ಹೆಚ್ಚು ಜಾತಿಯ ಸೊಳ್ಳೆಗಳಿವೆ. ಆದ್ರೆ ಐಸ್ಲ್ಯಾಂಡ್ ನಲ್ಲಿ ಸೊಳ್ಳೆ ಕಾಟವೇ ಇಲ್ಲ. ಇಲ್ಲಿನ ವಾತಾವರಣಕ್ಕೆ ಸೊಳ್ಳೆ ಬದುಕುಳಿಯಲು ಸಾಧ್ಯವಿಲ್ಲ.
ರಾಷ್ಟ್ರ ಗೀತೆ ಇಲ್ಲದ ದೇಶ : ಸೈಪ್ರಸ್ ದೇಶಕ್ಕೆ ತನ್ನದೇ ಆತ ರಾಷ್ಟ್ರಗೀತೆ ಇಲ್ಲ. ಸೈಪ್ರಸ್ ಮೆಡಿಟರೇನಿಯನ್ ಸಮುದ್ರದಲ್ಲಿರುವ ಒಂದು ದ್ವೀಪ ರಾಷ್ಟ್ರವಾಗಿದೆ. ಗ್ರೀಸ್ ರಾಷ್ಟ್ರಗೀತೆಯನ್ನೇ ಇಲ್ಲಿ ಹೇಳಲಾಗುತ್ತದೆ.