Asianet Suvarna News Asianet Suvarna News

ಲೈಂಗಿಕ ಸ್ವಾತಂತ್ರ್ಯ ಇರೋ ಈ ಮಹಿಳೆಯರು ಜೀವನದಲ್ಲಿ ಒಂದೇ ದಿನ ಸ್ನಾನ ಮಾಡೋದಂತೆ!

ವಿಶ್ವದಲ್ಲಿ ಸಾವಿರಾರು ಪದ್ಧತಿ, ಸಂಸ್ಕೃತಿಗಳಿವೆ. ಒಂದೊಂದು ಭಾಗದ ಜನರ ವಾಸ, ನಿಯಮಗಳು ಭಿನ್ನತೆಯನ್ನು ಹೊಂದಿವೆ. ಕೆಲ ಸಮುದಾಯದ ಜನರು ಪಾಲನೆ ಮಾಡ್ತಿರುವ ನಿಯಮಗಳು ಅಚ್ಚರಿ ಹುಟ್ಟಿಸುತ್ತವೆ. ಹೀಗೂ ಇರುತ್ತಾ ಎಂಬ ಪ್ರಶ್ನೆ ಹುಟ್ಟುಹಾಕುತ್ತೆ.

Namibia Himba Tribe Women Bath Once In A Lifetime Make Relation With Many Men roo
Author
First Published Sep 27, 2023, 5:21 PM IST

ಒಂದೆರಡು ದಿನ ಸ್ನಾನ ಮಾಡ್ದೆ ಅದ್ಹೇಗೋ ಇರ್ಬಹುದು. ಸ್ನಾನ ಮಾಡದೆ ಇರುವ ದಿನದ ಸಂಖ್ಯೆ ಮೂರು, ನಾಲ್ಕಕ್ಕೆ ಏರಿದಾಗ ಮೈನಿಂದ ವಾಸನೆ ಬರಲು ಶುರುವಾಗುತ್ತೆ. ತುರಿಕೆ ಕಾಣಿಸಿಕೊಳ್ಳುತ್ತೆ. ಅನಿವಾರ್ಯ ಪರಿಸ್ಥಿತಿ ಬಿಟ್ಟರೆ ನಮ್ಮಲ್ಲಿ ಪ್ರತಿಯೊಬ್ಬರೂ ಬಹುತೇಕ ಪ್ರತಿ ದಿನ ಸ್ನಾನ ಮಾಡ್ತಾರೆ. ಕೆಲವರು ದಿನದಲ್ಲಿ ಎರಡು ಬಾರಿ ಸ್ನಾನ ಮಾಡೋದು ಇದೆ. ಸ್ನಾನ ಮಾಡೋದ್ರಿಂದ ದೇಹ ಮತ್ತು ಮನಸ್ಸು ಎರಡೂ ಫ್ರೆಶ್ ಆಗುತ್ತೆ. ಕೆಲಸ ಮಾಡಲು ಉತ್ಸಾಹ ಬರುತ್ತೆ. ಆದ್ರೆ ನಮ್ಮಂತೆ ವಿಶ್ವದ ಎಲ್ಲ ಜನರೂ ಪ್ರತಿ ದಿನ ಸ್ನಾನ ಮಾಡ್ತಾರೆ ಅನ್ನೋಕೆ ಸಾಧ್ಯವಿಲ್ಲ. ವಿಶ್ವದಲ್ಲಿ ಅನೇಕ ಬುಡಕಟ್ಟು ಜನಾಂಗಗಳಿವೆ. ಅವರ ಜೀವನಶೈಲಿ ಭಿನ್ನವಾಗಿದೆ. ಕೆಲ ಬುಡಕಟ್ಟು ಜನಾಂಗದ ಜನರು ಈಗ್ಲೂ ಹಳೇ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಅದಕ್ಕೆ ನಾನಾ ಕಾರಣ ಕೂಡ ಇದೆ. ನಾವಿಂದು ಅಚ್ಚರಿಯಾಗುವ ಒಂದು ಸಂಗತಿ ಹೇಳ್ತೇವೆ. ನಾವು ಹೇಳ ಹೊರಟಿರುವ ಪ್ರದೇಶದ ಮಹಿಳೆಯರು ಮದುವೆ ದಿನ ಬಿಟ್ರೆ ಮತ್ತ್ಯಾವಾಗ್ಲೂ ಸ್ನಾನ ಮಾಡೋದಿಲ್ಲ. ಇದು ಆಘಾತಕಾರಿಯಾಗಿದ್ರೂ ಸತ್ಯ.

ಮದುವೆ (Marriage) ದಿನ ಮಾತ್ರ ಸ್ನಾನ (Bath) ಮಾಡ್ತಾರೆ ಈ ದೇಶದ ಮಹಿಳೆಯರು : ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಮಹಿಳೆಯರು ದಕ್ಷಿಣ ಆಫ್ರಿಕಾ (South Africa) ದ ನಮೀಬಿಯಾ ದೇಶದಲ್ಲಿದ್ದಾರೆ. ಹಿಂಬಾ ಬುಡಕಟ್ಟಿನ ಈ ಮಹಿಳೆಯರು ನಮೀಬಿಯಾದ ಕ್ವಾನೆನ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ಹಿಂಬಾ ಬುಡಕಟ್ಟಿನ ಜನರನ್ನು ಓವಹಿಂಬಾ ಅಥವಾ ಓಮುಹಿಂಬಾ ಎಂದೂ ಕರೆಯುತ್ತಾರೆ. ಈ ಮಹಿಳೆಯರಿಗೆ ನೀರಿನಿಂದ ಸ್ನಾನ ಮಾಡಲು ಅವಕಾಶವಿಲ್ಲ. ಇಲ್ಲಿನ ಜನರು ಬಟ್ಟೆ ಒಗೆಯಲು ಕೂಡ ನೀರು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ತಮ್ಮ ಜೀವನದಲ್ಲಿ ಒಮ್ಮೆ ಸ್ನಾನ ಮಾಡಿದರೂ ಇಲ್ಲಿನ ಮಹಿಳೆಯರು ಕೊಳಕಾಗಿಲ್ಲ. ಅವರು ಸದಾ ಫ್ರೆಶ್ ಆಗಿರ್ತಾರೆ.

ಅತ್ಯಂತ ಕಡಿಮೆ ಬೆಲೆಗೆ ಮದ್ಯ ಸಿಗೋ ಈ ರಾಜ್ಯ ಜನರ ಅಚ್ಚುಮೆಚ್ಚು!

ಇವರು ನೀರು ಬಳಸಿ ಏಕೆ ಸ್ನಾನ ಮಾಡಲ್ಲ ಗೊತ್ತಾ? : ಮದುವೆ ದಿನವೊಂದೇ ಏಕೆ ನೀರು ಬಳಸ್ಬೇಕು, ಉಳದಿ ದಿನ ನೀರಿನಲ್ಲಿ ಏಕೆ ಸ್ನಾನ ಮಾಡಬಾರದು, ಬಟ್ಟೆ ಏಕೆ ತೊಳೆಯಬಾರದು ಎಂಬ ಪ್ರಶ್ನೆ ಕಾಡೋದು ಸಹಜ. ಅದಕ್ಕೆ ಮಹತ್ವದ ಕಾರಣವಿದೆ. ಅಲ್ಲಿನ ಪರಿಸರವೇ ಅದಕ್ಕೆ ಕಾರಣ. ಹಿಂಬಾ ಬುಡಕಟ್ಟು ಜನರು ವಾಸಿಸುವ ಸ್ಥಳದಲ್ಲಿ  ನೀರಿನ ತೀವ್ರ ಕೊರತೆಯಿದೆ. ಮರುಭೂಮಿಯ ಒಣ ಹವಾಮಾನ ದೊಡ್ಡ ಸಮಸ್ಯೆಯಾಗಿದೆ. ಈ ಕಾರಣದಿಂದ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಮಾತ್ರ ನೀರು ಬಳಸುತ್ತಿದ್ದಾರೆ.  

ಅಚಾನಕ್ ಕಾಣೆಯಾಗುವ ಈ ಜಾಗದಲ್ಲಿ ಕೇಳುತ್ತೆ ವಿಚಿತ್ರ ಶಬ್ಧ!

ನೀರು ಬಳಸದೆ ಹೇಗೆ ಸ್ವಚ್ಛತೆ ಕಾಪಾಡಿಕೊಳ್ತಾರೆ ಗೊತ್ತಾ? : ಹಿಂಬಾ ಬುಡಕಟ್ಟಿನ ಮಹಿಳೆಯರು ನೀರನ್ನು ಬಳಸಿ ಸ್ನಾನ ಮಾಡದೆ ಇರಬಹುದು ಆದ್ರೆ ಸ್ವಚ್ಛತೆಗಾಗಿ ವಿಶೇಷ ಗಿಡಮೂಲಿಕೆಗಳನ್ನು ಬಳಸುತ್ತಾರೆ. ಅವರು ಗಿಡಮೂಲಿಕೆಗಳನ್ನು ಸುಟ್ಟು ಅವುಗಳಿಂದ ಹೊರಹೊಮ್ಮುವ ಹೊಗೆಯಿಂದ ಸ್ನಾನ ಮಾಡುತ್ತಾಳೆ. ಗಿಡಮೂಲಿಕೆಗಳ ಹೊಗೆಯಿಂದ ಸ್ನಾನ ಮಾಡುವುದರಿಂದ ಚರ್ಮದ ಮೇಲೆ ಸಂಗ್ರಹವಾಗಿರುವ ಎಲ್ಲಾ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ದೇಹವು ಶುದ್ಧವಾಗಿರುತ್ತದೆ. 

\ಒಂದಕ್ಕಿಂತ ಹೆಚ್ಚು ಪುರುಷರ ಜೊತೆ ಸಂಬಂಧ ಬೆಳೆಸಲು ಅವಕಾಶ : ಇಲ್ಲಿನ ಮಹಿಳೆಯರಿಗೆ ನೀರು ನಿಷೇಧವಿರಬಹುದು ಆದ್ರೆ ಉಳಿದೆಲ್ಲ ವಿಷ್ಯದಲ್ಲಿ ಅತೀ ಎನ್ನುವಷ್ಟು ಸ್ವಾತಂತ್ರ್ಯವಿದೆ. ಇಲ್ಲಿನ ಮಹಿಳೆಯರು ಮದುವೆಯಾಗಿದ್ದರೂ ಇನ್ನೊಬ್ಬನ ಜೊತೆ ಸಂಬಂಧ ಬೆಳೆಸಬಹುದು. ಈ ಅಧಿಕಾರಿ ಪತಿಗೂ ಇದೆ. ಮನೆಗೆ ಅತಿಥಿಗಳು ಬಂದಾಗ ಆತನಿಗೆ ಲೈಂಗಿಕ ಸುಖ ನೀಡುವ ಕಾರಣಕ್ಕೆ ಪತಿ ತನ್ನ ಪತ್ನಿಯನ್ನು ಅವನ ಜೊತೆ ಬಿಡುವ ಪದ್ಧತಿ ಕೂಡ ಇಲ್ಲಿ ಜಾರಿಯಲ್ಲಿದೆ. 
 

Follow Us:
Download App:
  • android
  • ios