Snakes Garden: ಹೂವಲ್ಲ ಹಾವಿನ ಗಾರ್ಡನ್..! ಕೈ ಹಾಕಿದ್ರೆ ಬುಸ್ ಎನ್ನುತ್ತೆ ನಾಗ
ವಿಶ್ವದಲ್ಲಿ ಚಿತ್ರವಿಚಿತ್ರ ಪ್ರದೇಶಗಳಿವೆ. ಹೂ, ಹಣ್ಣಿನ ಗಾರ್ಡನ್ ನಾವು ನೋಡಿದ್ದೇವೆ. ಆದ್ರೆ ಅಲ್ಲಿರೋದು ಅಂತಿಂಥ ಗಾರ್ಡನ್ ಅಲ್ಲ. ಹಾವಿನ ಗಾರ್ಡನ್. ಹೆಸರು ಕೇಳಿದ್ರೆ ಭಯ ಹುಟ್ಟಿಸುವ ಗಾರ್ಡನ್ ನೋಡೋಕೆ ಹೇಗಿರಬೇಡ?
ಬೆಳಿಗ್ಗೆ – ಸಂಜೆಯ ವಾಕಿಂಗ್ ಗೆ, ವೀಕೆಂಡ್ ನಲ್ಲಿ ಮಕ್ಕಳ ಟೈಂ ಪಾಸ್ ಗೆ ಪಾರ್ಕ್ ಸೂಕ್ತ ಸ್ಥಳ. ಪಾರ್ಕ್ ಎಂದಾಕ್ಷಣ ಅಲ್ಲಿನ ಹಸಿರು ಹುಲ್ಲುಗಾವಲು, ಹೂವಿನ ಗಿಡಗಳು, ಮಕ್ಕಳ ಆಟಿಕೆ ಕಣ್ಣೆದುರು ಬರುತ್ತವೆ. ಆದರೆ ಇಂದು ನಾವು ನಿಮಗೆ ಬಹಳ ವಿಚಿತ್ರವಾದ, ಅಪರೂಪವಾದ ಒಂದು ಗಾರ್ಡನ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಎಲ್ಲ ಗಾರ್ಡನ್ (Garden) ಗಳಲ್ಲಿ ಹೂವು, ಹಣ್ಣು ಇದ್ದರೆ ಇಂದು ನಾವು ನಿಮಗೆ ಹೇಳಲಿರುವ ಈ ಗಾರ್ಡನ್ ನಲ್ಲಿ ಹೂವುಗಳ ಬದಲು ಹಾವುಗಳೇ ತುಂಬಿಹೋಗಿವೆ. ಆಶ್ಚರ್ಯ ಎನಿಸಿದರೂ ಇದು ನಿಜ. ತೀರ ಅಪರೂಪವಾದ ಈ ಗಾರ್ಡನ್ ಈಗ ಬಹಳ ಪೇಮಸ್ ಆಗಿದೆ. ಹಾವು (Snake) ಗಳಿಂದಲೇ ತುಂಬಿಹೋಗಿರುವ ಈ ಗಾರ್ಡನ್ ಅನ್ನು ನೋಡಲು ಲಕ್ಷಾಂತರ ಮಂದಿ ಬರುತ್ತಿದ್ದಾರೆ. ಭಯಾನಕವಾಗಿರುವ ಈ ಸ್ನೇಕ್ ಗಾರ್ಡನ್ ಅನೇಕ ಮಂದಿಯ ಕುತೂಹಲಕ್ಕೆ ಕಾರಣವಾಗಿದೆ.
ಜಗತ್ತಿನ ಅತ್ಯಂತ ಅಪರೂಪದ ಗಾರ್ಡನ್ ಇದು : ವಿಯೆಟ್ನಾಂ (Vietnam ) ನಲ್ಲಿರುವ ಈ ಅಪರೂಪದ ಹಾಗೂ ಭಯಾನಕ ಉದ್ಯಾನವನದ ಹೆಸರು ತ್ರೈ ರ್ಯಾನ್ ಡಾಂಗ್ ಟ್ಯಾಮ್ ಎಂದಾಗಿದೆ. 12 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿರುವ ಈ ಹಾವಿನ ಗಾರ್ಡನ್ ಅನ್ನು ಹಾವಿನ ಸಾಕಣಿಗೆಂದೇ ನಿರ್ಮಿಸಲಾಗಿದೆ. ಇಲ್ಲಿ ನಾನಾ ಬಗೆಯ ಹಾವಿನ ಜೊತೆಗೆ ವಿವಿಧ ರೀತಿಯ ಗಿಡಗಂಟಿಗಳನ್ನು ಕೂಡ ಕಾಣಬಹುದು. ಸಾಮಾನ್ಯವಾಗಿ ಎಲ್ಲ ಪಾರ್ಕ್ ಗಳಲ್ಲಿರುವ ಮರದಲ್ಲಿ ಹೂವು, ಹಣ್ಣು, ಎಲೆಗಳು ಕಾಣಿಸಿದರೆ ಈ ಪಾರ್ಕ್ ನಲ್ಲಿ ಎಲ್ಲೆಂದರಲ್ಲಿ ಹಾವುಗಳೇ ಕಾಣಿಸಿಕೊಳ್ಳುತ್ತವೆ. ಪಾರ್ಕ್ ಅನ್ನು ನೋಡಲು ಬರುವ ಜನರು ಇಲ್ಲಿನ ಹಾವುಗಳನ್ನು ನೋಡಿ ದಂಗಾಗುತ್ತಾರೆ.
ಹಾವಿನ ವಿಷದಿಂದಲೇ ಔಷಧಿ ತಯಾರಿಕೆ : ತ್ರೈ ರ್ಯಾನ್ ಡಾಂಗ್ ಟ್ಯಾಮ್ ಹಾವಿನ ಪಾರ್ಕ್ ನಲ್ಲಿ 400 ಕ್ಕೂ ಹೆಚ್ಚು ವಿಷಕಾರಿ ಸರ್ಪಗಳಿವೆ. ಈ ಹಾವುಗಳ ವಿಷವನ್ನು ಔಷಧಿ ತಯಾರಿಕೆ ಮತ್ತು ಅವುಗಳ ವಿಷವನ್ನು ತೆಗೆಯಲು ಎಂಟಿಡೋಜ್ ಗಳನ್ನು ತಯಾರಿಸಲಾಗುತ್ತದೆ. ಹಾವುಗಳು ಕಡಿದಾಗ ಇಂತಹ ಎಂಟಿಡೋಜ್ ಗಳು ಬಹಳ ಪರಿಣಾಮಕಾರಿಯಾಗಿವೆ. ಪ್ರತಿ ವರ್ಷವೂ ಸುಮಾರು 2000 ಮಂದಿ ಹಾವಿನ ಕಡಿತಕ್ಕೆ ಒಳಗಾದವರು ಇಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಹಾವುಗಳ ಕುರಿತಾಗಿ ಇಲ್ಲಿ ಅನೇಕ ರೀತಿಯ ರಿಸರ್ಚ್ ಗಳು ಕೂಡ ನಡೆಯುತ್ತವೆ. ಪ್ರತಿದಿನವೂ ಇಲ್ಲಿರುವ ಹಾವುಗಳ ಮೇಲೆ ಅನೇಕ ರೀತಿಯ ಪ್ರಯೋಗಗಳನ್ನು ನಡೆಸಲಾಗುತ್ತದೆ. ಇಲ್ಲಿರುವ ಅನೇಕ ಹಾವುಗಳ ವಿಷವು ಹಾವಿನ ವಿಷವನ್ನು ತೆಗೆದುಹಾಕುವ ಎಂಟಿಡೋಜ್ ಆಗಿಯೇ ಬಳಕೆಯಾಗುತ್ತೆ.
ನೋಡಲು ಅದ್ಭುತವಾಗಿದ್ರೂ ಪ್ರಪಂಚದ ಈ ಸ್ಥಳಗಳಿಗೆ ಯಾರೂ ಹೋಗೋಲ್ಲ, ಯಾಕೆ?
ಟೂರಿಸ್ಟ್ ಸ್ಪಾಟ್ ಆಗಿದೆ ಈ ಹಾವಿನ ಉದ್ಯಾನವನ: ಹಾವಿನ ಕುರಿತು ಅನೇಕ ರೀತಿಯ ಸಂಶೋಧನೆಗಳನ್ನು ನಡೆಸಲು ಈ ಸ್ನೇಕ್ ಫಾರ್ಮ್ ಅನ್ನು ಪ್ರಾರಂಭಿಸಲಾಗಿತ್ತು. ಮೊದಲು ಈ ಫಾರ್ಮ್ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೆ ಈಗ ಇದು ಒಂದು ಪ್ರವಾಸೀ ಸ್ಥಳವಾಗಿ ಖ್ಯಾತವಾಗಿದೆ. ಇಲ್ಲಿ ಹಲವಾರು ರೀತಿಯ ಸೌಲಭ್ಯಗಳು ಕೂಡ ಇವೆ. ಇಲ್ಲಿ ನಡೆಯುವ ಸಂಶೋಧನೆ ಮತ್ತು ಚಿಕಿತ್ಸೆಯಿಂದ ಹಾವಿನಿಂದಾಗುವ ಅನೇಕ ದುರ್ಘಟನೆಗಳು ಕಡಿಮೆಯಾಗಿವೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಈ ಸ್ನೇಕ್ ಗಾರ್ಡನ್ ವಿಡಿಯೋ ಹೆಚ್ಚು ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನೀವು ಹಸಿರು ಹಾವನ್ನು ಕಾಣ್ಬಹುದು. 12 ಎಕರೆ ವಿಸ್ತೀರ್ಣದಲ್ಲಿರುವ ಎಲ್ಲ ಮರಗಳಲ್ಲಿ ಲಕ್ಷಾಂತರ ಹಾವುಗಳು ಹರಿದಾಡುವುದು ವೀಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದೆ. ಜಗತ್ತಿನಲ್ಲಿ ಇಂತಹ ಒಂದು ಗಾರ್ಡನ್ ಕೂಡ ಇದೆಯಾ ಎಂದು ಅನೇಕ ಮಂದಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.