ನೋಡಲು ಅದ್ಭುತವಾಗಿದ್ರೂ ಪ್ರಪಂಚದ ಈ ಸ್ಥಳಗಳಿಗೆ ಯಾರೂ ಹೋಗೋಲ್ಲ, ಯಾಕೆ?
ಪ್ರಪಂಚದಲ್ಲಿ ಹಲವಾರು ಸುಂದರ ಪ್ರದೇಶಗಳಿವೆ. ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಕಣ್ತುಂಬಿಕೊಳ್ಳುತ್ತಾರೆ. ಹಾಗೆಯೇ ಜಗತ್ತಿನಲ್ಲಿ ಜನರು ಹೋಗದೇ ಪಾಳು ಬಿದ್ದಿರುವ ಅನೇಕ ಜಾಗಗಳಿವೆ ಆ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಪಂಚದಲ್ಲಿ ಎಷ್ಟೆಷ್ಟೋ ಸುಂದರ ಪ್ರವಾಸಿ ತಾಣಗಳಿವೆ. ಹಾಗೆಯೇ ಜನರು ಅತ್ತ ಸುಳಿಯೋಕೆ ಸಹ ಭಯಪಡುವ ಕೆಲವು ಭಯಾನಕ ಜಾಗಗಳೂ ಇವೆ.
ಇಂದು ನಾವು ನಿಮ್ಮನ್ನು ಪ್ರಪಂಚದ ಅಂತಹ ಕೆಲವು ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತವೆ. ಈ ಪ್ರದೇಶಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಈ ಜಾಗಗಳು ತುಂಬಾ ಸುಂದರವಾಗಿದ್ದರೂ ಇಲ್ಲಿಗೆ ಜನರು ಆಗಮಿಸುವುದಿಲ್ಲ.
ಈ ಸ್ಥಳಗಳು ಒಂದು ಕಾಲದಲ್ಲಿ ಜನರಿಂದ ತುಂಬಿದ್ದವು. ಆದರೆ ಕೆಲವು ನಿರ್ಧಿಷ್ಟ ಕಾರಣಗಳಿಂದ ಜನರು ಅದನ್ನು ತೊರೆದರು ಮತ್ತು ನಂತರ ಅವುಗಳನ್ನು ನಿರ್ಜನ ಸ್ಥಳಗಳು ಎಂದು ಕರೆಯಲಾಯಿತು. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಭಾರತ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ಹೀಗೆ ದೀರ್ಘಕಾಲದವರೆಗೆ ನಿರ್ಜನವಾಗಿ, ಪಾಳು ಬಿದ್ದಿರುವ ಪ್ರದೇಶಗಳ ಬಗ್ಗೆ.
ಪ್ರಪಂಚದಾದ್ಯಂತ ಅಂತಹ ಅನೇಕ ಸ್ಥಳಗಳಿವೆ, ಅದನ್ನು ನೋಡುವಾಗ ಅಲ್ಲಿನ ಸೌಂದರ್ಯವನ್ನು ಮೆಚ್ಚುತ್ತಲೇ ಇರಬೇಕೆಂದು ತೋರುತ್ತದೆ. ಆದರೆ ಸುಂದರವಾಗಿದ್ದರೂ ನಿರ್ಜನವಾಗಿರುವ ಇಂತಹ ಅನೇಕ ಸ್ಥಳಗಳಿವೆ. ರಾಸ್ ದ್ವೀಪ, ಬ್ಯಾನರ್ಮನ್ ಕ್ಯಾಸಲ್, ಮಿರಾಂಡಾ ಕೋಟೆ ಮೊದಲಾದ ಕಡೆ ಜನರು ತಪ್ಪಿಯೂ ಸುಳಿಯುವುದಿಲ್ಲ.
ಮಿರಾಂಡಾ ಕೋಟೆ
ಬೆಲ್ಜಿಯಂನ ರಾಜಕೀಯ ಕಾರ್ಯಕರ್ತ, ಬ್ಯೂಫೋರ್ಟ್‌ನ ಕೌಂಟ್ ಲಿಡೆಕರ್ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ತನ್ನ ಮನೆಯನ್ನು ತೊರೆದು ಕುಟುಂಬದೊಂದಿಗೆ ನೆರೆಯ ದೇಶಗಳಿಗೆ ಹೋಗಬೇಕಾಯಿತು. 1866ರಲ್ಲಿ, ಇಂಗ್ಲಿಷ್ ವಾಸ್ತುಶಿಲ್ಪಿ ಎಡ್ವರ್ಡ್ ಮಿಲ್ನರ್ ಬೇಸಿಗೆಯ ಮನೆಯನ್ನು ನಿರ್ಮಿಸಲು ಆರಂಭಿಸಿದರು. ಆದರೆ ಅರಮನೆಯು ಪೂರ್ಣಗೊಳ್ಳುವ ಮೊದಲು ಮಿಲ್ನರ್ ನಿಧನರಾದರು. ನಂತರ ಅರಮನೆಯು ವಿಶ್ವ ಸಮರ IIರ ಸಮಯದಲ್ಲಿ ಬೆಲ್ಜಿಯನ್ ನ್ಯಾಷನಲ್ ರೈಲ್ವೇ ಕಂಪನಿಯ ಅಡಿಯಲ್ಲಿ ರಜಾ ಶಿಬಿರವಾಗಿ ಮತ್ತು ಅನಾಥಾಶ್ರಮವಾಗಿ ಕಾರ್ಯನಿರ್ವಹಿಸಿತು. ನಂತರ ಹೆಚ್ಚಿನ ನಿರ್ವಹಣಾ ವೆಚ್ಚದ ಕಾರಣ 1991 ರಲ್ಲಿ ಅರಮನೆಯನ್ನು ಕೈಬಿಡಲಾಯಿತು. ಈಗ ಈ ಸ್ಥಳವು ಪಾಳು ಬಿದ್ದಿದೆ
ರಾಸ್ ದ್ವೀಪ
ನೀವು ಅಂಡಮಾನ್ ಹೆಸರನ್ನು ಕೇಳಿರಬಹುದು ಆದರೆ ನೀವು ರಾಸ್ ದ್ವೀಪದ ಹೆಸರನ್ನು ಕೇಳಿದ್ದೀರಾ? ಇದು ಹ್ಯಾವ್ಲಾಕ್ ಮತ್ತು ರಾಧಾನಗರ ಬೀಚ್ ಬಳಿಯಿದೆ. ಅಚ್ಚರಿಯ ವಿಷಯವೆಂದರೆ ಈ ದ್ವೀಪ 1941ರಿಂದಲೂ ನಿರ್ಜನವಾಗಿದೆ. 1941ರಲ್ಲಿ ಭೂಕಂಪದ ಕಾರಣ, ಬ್ರಿಟಿಷ್ ವಸಾಹತುಶಾಹಿಗಳು ಈ ಸ್ಥಳವನ್ನು ಬಿಟ್ಟು ಹೋದರು. ಅಲ್ಲಿಂದ ಇಲ್ಲಿಯವರೆಗೂ ಯಾರೂ ಅಲ್ಲಿಗೆ ಹೋಗುವ ಪ್ರಯತ್ನ ಮಾಡಿ
ಹಶಿಮಾ ದ್ವೀಪ
ಜಪಾನ್‌ನಲ್ಲಿ ಈ ಅನೇಕ ವರ್ಷಗಳಿಂದ ನಿರ್ಜನವಾಗಿರುವ ದ್ವೀಪವಿದೆ. ಇದು ನಾಗಸಾಕಿಯ ತೀರದಲ್ಲಿರುವ ಹಶಿಮಾ ದ್ವೀಪ. 1887 ಮತ್ತು 1974ರ ನಡುವೆ ಗಣಿಗಾರಿಕೆ ಚಟುವಟಿಕೆಗಳಿಗೆ ಪ್ರಸಿದ್ಧವಾಗಿತ್ತು. ಆದರೆ ಪ್ರಾಕೃತಿಕ ವಿಕೋಪ ಬಂದ ತಕ್ಷಣ ಇಲ್ಲಿನ ಸೊಬಗು ಕಳೆಗುಂದಿತು. ಜನರಿಲ್ಲದೆ ನಿರ್ಜನವಾಯಿತು.
ಬ್ಯಾನರ್ಮನ್ ಕ್ಯಾಸಲ್
ಬ್ಯಾನರ್‌ಮ್ಯಾನ್ ಕ್ಯಾಸಲ್ ನ್ಯೂ ನಾಕ್‌ನಲ್ಲಿದೆ, ಇದು ಸ್ಪ್ಯಾನಿಷ್ ಯುದ್ಧದಿಂದ ಅಮೇರಿಕನ್ ಮಿಲಿಟರಿ ಹೆಚ್ಚುವರಿ ಖರೀದಿಸಿದ ನಂತರ ಫ್ರಾನ್ಸಿಸ್ ಬ್ಯಾನರ್‌ಮನ್ VI ನಿರ್ಮಿಸಿದ ವಿಶೇಷ ಸ್ಥಳವಾಗಿದೆ. ಈ ಸ್ಥಳವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಪೊಲೊಪೆಲ್ ದ್ವೀಪ, ಪೊಲೊಪೆಲ್ ದ್ವೀಪ, ಬ್ಯಾನರ್‌ಮ್ಯಾನ್ ದ್ವೀಪ ಮತ್ತು ಬ್ಯಾನರ್‌ಮ್ಯಾನ್ ದ್ವೀಪ ಎಂದು ಕರೆಯುತ್ತಾರೆ. ಈ ದ್ವೀಪವು ನ್ಯೂಯಾರ್ಕ್ ನಗರದ ಉತ್ತರಕ್ಕೆ ಸುಮಾರು 50 ಮೈಲುಗಳು (80 ಕಿಮೀ) ಇದೆ., 1920 ರಲ್ಲಿ ಮದ್ದುಗುಂಡುಗಳ ಬೃಹತ್ ಸ್ಫೋಟದ ನಂತರ ಅರಮನೆಯ ಬಹುಭಾಗ ನಾಶವಾಯಿತು. ಆ ನಂತರ ಜನವಾಸವಿಲ್ಲದೆ ಸಂಪೂರ್ಣ ಪಾಳು ಬಿತ್ತು.