ದೆವ್ವ – ಭೂತಕ್ಕೆ ಹೆದರಲ್ಲ ಅನ್ನೋರು ಈ ಪ್ಲೇಸ್ ಗೆ ಭೇಟಿ ನೀಡಿ Dark Tourism ಕ್ರೇಜ್ ಹೆಚ್ಚುತ್ತಿದೆ
ಭಾರತದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ದೇವಸ್ಥಾನ, ಚಾರಣ, ಫಾಲ್ಸ್, ಪಾರ್ಕ್ ಹೀಗೆ ನಾನಾ ಜಾಗಗಳಿದ್ದು ಅದ್ರಲ್ಲಿ ಡಾರ್ಕ್ ಟೂರಿಸಂ ಕೂಡ ಸೇರಿದೆ. ಧೈರ್ಯ ಇರೋರು, ಯಾವುದಕ್ಕೂ ಹೆದರಲ್ಲ ಅನ್ನೋರು ಈ ಪ್ರವಾಸಿ ತಾಣಕ್ಕೆ ಹೋಗಿ ಬರಬಹುದು.
ದೇವಸ್ಥಾನಗಳಿಗೆ ಹೋದಾಗ ಪಾಸಿಟಿವ್ ಎನರ್ಜಿ (Positive Energy at Temples) ಸಿಕ್ಕಂತೆ ಕೆಲ ಸ್ಥಳಗಳಲ್ಲಿ ನೆಗೆಟಿವ್ ಎನರ್ಜಿ (Nagative Energy) ಹೆಚ್ಚಿರುತ್ತದೆ. ಅಲ್ಲಿಗೆ ಹೋಗಲು ಗುಂಡಿಗೆ ಬೇಕು. ವಿಶ್ವದಲ್ಲಿ ಅನೇಕ ಇಂಥ ಭಯಾನಕ ಸ್ಥಳಗಳಿವೆ. ಕೆಲ ಪ್ರದೇಶಕ್ಕೆ ಜನರು ರಾತ್ರಿ ಇರಲಿ ಹಗಲು ಹೋಗಲು ಭಯಪಡ್ತಾರೆ. ಇಂಥ ಜಾಗಗಳನ್ನು ಡಾರ್ಕ್ ಟೂರಿಸಂ ಪ್ಲೇಸ್ ಅಂತ ಕರೆಯುತ್ತಾರೆ. ಹಬ್ಬಗಳು ಬಂದಾಗ ಜನರು ದೇವಸ್ಥಾನಕ್ಕೆ ಹೋದಂತೆ ದೆವ್ವ, ಭೂತ ಅಥವಾ ದುರಂತ ಘಟನೆ ನಡೆದ ಸ್ಥಳವನ್ನು ವೀಕ್ಷಿಸಲು ಆಸಕ್ತಿ ಇರುವವರು ಇಂಥ ಸ್ಥಳಗಳಿಗೆ ಹೋಗ್ತಾರೆ. ಇನ್ನೇನು ಹಬ್ಬಗಳ ಸಾಲು ಶುರುವಾಗ್ತಿದೆ. ಒಂದಾದ್ಮೇಲೆ ಒಂದರಂತೆ ರಜೆ ಬರ್ತಿದೆ. ಈ ಸಮಯದಲ್ಲಿ ನೀವೂ ಇಂಥ ಭಯಾನಕ ಪ್ರದೇಶವನ್ನು ವೀಕ್ಷಣೆ ಮಾಡ್ಬೇಕು ಅಂದ್ರೆ ಭಾರತದಲ್ಲಿರುವ ಕೆಲ ಡಾರ್ಕ್ ಟೂರಿಸಂ ಪ್ಲೇಸ್ ಗಳ ಬಗ್ಗೆ ತಿಳಿದುಕೊಳ್ಳಿ.
ಕಪ್ಪು ಪ್ರವಾಸಿ ತಾಣಗಳು (Dark Tourism) :
ಭಂಗರ್ ಕೋಟೆ (Bhangar Fort) , ರಾಜಸ್ತಾನದ : ಅಲ್ವಾರ್ ಜಿಲ್ಲೆಯಲ್ಲಿರುವ ಈ ಭಂಗರ್ ಕೋಟೆ, ಡಾರ್ಕ್ ಟೂರಿಸಂಗೆ ಅತ್ಯುತ್ತಮ ಜಾಗ. ಇದನ್ನು ಕಪ್ಪು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಡಲಾಗಿದೆ. ಭಾರತೀಯ ಪುರಾತತ್ವ ಸಮೀಕ್ಷೆ (ASI) ಸೂರ್ಯಾಸ್ತದ ನಂತ್ರ ಪ್ರವೇಶ ನಿಷೇಧಿಸಿದೆ. ಇಲ್ಲಿಗೆ ಹೋದ, ಉಳಿದುಕೊಂಡ ಜನರು ವಾಪಸ್ ಬರಲಿಲ್ಲ ಎನ್ನಲಾಗುತ್ತದೆ. ಇಲ್ಲಿ ಅನೇಕ ವಿಚಿತ್ರ ಘಟನೆಗಳು ಅನುಭವಕ್ಕೆ ಬರುತ್ತವೆ. ಮಾಂತ್ರಿಕನೊಬ್ಬ ರಾಜಕುಮಾರಿಯನ್ನು ಪ್ರೀತಿಸಿದ್ದ. ಆದ್ರೆ ರಾಜಕುಮಾರಿಯಿಂದಲೇ ಆತ ಸಾವನ್ನಪ್ಪುತ್ತಾನೆ. ಈ ವೇಳೆ ಆತ, ಶೀಘ್ರದಲ್ಲೇ ಈ ಜಾಗ ನಾಶವಾಗಿ ಬಂಜರಾಗುತ್ತದೆ ಎಂದು ಶಾಪ ಹಾಕುತ್ತಾನೆ. ಅದರಂತೆ ಮೊಘಲರು ಇಲ್ಲಿ ದಾಳಿ ನಡೆಸಿ, ಇಲ್ಲಿನ ನಿವಾಸಿಗಳ ಹತ್ಯೆ ಮಾಡುತ್ತದೆ. ನಂತ್ರ ಈ ಜಾಗ ಬಂಜರಾಗಿದೆ ಎಂಬ ಇತಿಹಾಸವಿದೆ. ಇಲ್ಲಿಗೆ ಪ್ರವಾಸಕ್ಕೆ ಬರುವ ಅನೇಕರು ತಮ್ಮ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Wayanad landslide: ಬದುಕಿನ ದಾರಿಗೆ ಅದೆಷ್ಟು ವಿಘ್ನ,ಇಡೀ ಊರೇ ನಿದ್ರಿಸುತ್ತಿದ್ದ ವೇಳೆ ಕುಸಿದ ಆ ಎರಡು ಬೆಟ್ಟ!
ಗೋವಾ (Goa) : ಸುಂದರ ಕಡಲ ತೀರ, ಹನಿಮೂನ್ ಗೆ ಪ್ರಸಿದ್ಧ ಜಾಗ ಗೋವಾ. ಆದ್ರೆ ಇಲ್ಲಿಯೂ ಕಪ್ಪು ಟೂರಿಸಂಗೆ ಪ್ರಸಿದ್ಧವಾದ ಕೆಲ ಸ್ಥಳಗಳಿವೆ. ಹಳೆ ಚರ್ಚ್, ಹಳೆ ಜಾಗಗಳಲ್ಲಿ ಊಹೆಗೆ ನಿಲುಕದ ಅನುಭವಗಳಾಗ್ತಿರುತ್ತವೆ ಎಂದು ಪ್ರವಾಸಿಗರು ಹೇಳ್ತಾರೆ. ಪಿಆರ್ ಮಿಥಿಲಾ ಎನ್ನುವವರು ಗೋವಾದ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದ ಭಯಾನಕ ಅನುಭವ ಹಂಚಿಕೊಂಡಿದ್ದಾರೆ. 2018ರಲ್ಲಿ ಅವರ ಪತಿ ಸುಸಜ್ಜಿತ ಅಪಾರ್ಟ್ಮೆಂಟ್ ನಲ್ಲಿ ತಂಗಿದ್ದರಂತೆ. ಈ ವೇಳೆ ಅವರ ಬೆಡ್ ಪಕ್ಕದಲ್ಲಿ ಇನ್ನೊಬ್ಬರು ಮಲಗಿದ್ದ ಅನುಭವವಾಗಿತ್ತಂತೆ. ಅವರ ಉಸಿರಾಟ ಇವರಿಗೆ ಕೇಳ್ತಿತ್ತಂತೆ. ಅದು ಅತ್ಯಂತ ಭಯಾನಕ ಎಂದು ಮಿಥಿಲಾ ಹೇಳಿದ್ದಾರೆ.
ಡುಮಾಸ್ ಬೀಚ್, ಸೂರತ್ : ಸೂರತ್ ನಲ್ಲಿರುವ ಡುಮಾಸ್ ಬೀಚ್ ಸುಂದರವಾಗಿದೆ. ಹಗಲಿನಲ್ಲಿ ಪ್ರವಾಸಿಗರನ್ನು ಸೆಳೆಯುವ ಈ ಬೀಚ್, ಸೂರ್ಯಾಸ್ತವಾಗುತ್ತಿದ್ದಂತೆ ಶಾಂತವಾಗುತ್ತದೆ. ಡಾರ್ಕ್ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಇಲ್ಲಿ ಸೂರ್ಯಾಸ್ತನ ನಂತ್ರ ಉಳಿದವರು ಮರಳಿ ಬರೋದಿಲ್ಲ. ಹಿಂದೆ ಹಿಂದುಗಳ ಸಮಾಧಿಯಾಗಿದ್ದ ಈ ಕಡಲ ತೀರದಲ್ಲಿ ಈಗ್ಲೂ ಆತ್ಮಗಳಿವೆ ಎಂದು ನಂಬಲಾಗಿದೆ. ಮೃತರ ಸಮಾಧಿ ಬೂದಿ, ಸಮುದ್ರದ ಬಿಳಿ ಮರಳಿನ ಜೊತೆ ಸೇರಿಕೊಂಡಾಗ ಗಾಢ ಬಣ್ಣಕ್ಕೆ ತಿರುಗುತ್ತದೆ ಎಂದು ಜನರು ನಂಬುತ್ತಾರೆ.
ರೂಪಕುಂಡ್ ಸರೋವರ, ಉತ್ತರಾಖಂಡ : ಆರಂಭದಲ್ಲಿ ಈ ಹಿಮ ನದಿ ಸರೋವರ ನೋಡೋದು ಬಹಳ ಅಧ್ಬುತ. ಆದ್ರೆ ಹಿಮ ನಿಧಾನವಾಗಿ ಕರಗಿದಾಗ ಸರೋವರದ ಮೇಲ್ಮೈಯಲ್ಲಿ ಮಾನವ ಅಸ್ಥಿಪಂಜರಗಳು ಕಾಣಿಸುತ್ತವೆ. ಅದನ್ನು ಬರಿಗಣ್ಣಿನಲ್ಲಿ ನೋಡಬಹುದು. ಹಾಗಾಗಿಯೇ ಈ ಸರೋವರವನ್ನು ಅಸ್ಥಿಪಂಜರ ಸರೋವರ ಎಂದು ಕರೆಯಲಾಗುತ್ತದೆ. 19 ನೇ ಶತಮಾನದಲ್ಲಿ ಹಿಮಪಾತದ ಸಮಯದಲ್ಲಿ ನಾಶವಾದ ಬುಡಕಟ್ಟು ಜನಾಂಗದವರ ಅಸ್ಥಿಪಂಜರ ಅದು ಎನ್ನಲಾಗಿದೆ.
ಡ್ಯಾನ್ಸ್, ಶೂಟಿಂಗ್ ಬ್ರೇಕ್ ನೀಡಿ ಗೌಡಗೆರೆ ಚಾಮುಂಡೇಶ್ವರಿ ದರ್ಶನ ಪಡೆದ ನಮ್ರತಾ ಗೌಡ
ಸೆಲ್ಯುಲರ್ ಜೈಲ್ ಅಂಡಮಾನ್ ಮತ್ತು ನಿಕೋಬಾರ್ : ಭಾರತದ ಸ್ವರ್ಗ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಪ್ರಸಿದ್ಧಿ ಪಡೆದಿವೆ. ಆದರೆ ಈ ಸ್ಥಳಕ್ಕೆ ಒಂದು ಕರಾಳ ಮುಖವಿದೆ. ಈ ಸ್ಥಳದಲ್ಲಿ ಸೆಲ್ಯುಲಾರ್ ಜೈಲ್ ಇದೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕೈದಿಗಳನ್ನು ಇಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಸಾಕಷ್ಟು ಚಿತ್ರಹಿಂಸೆಯನ್ನು ಕೈದಿಗಳು ಅನುಭವಿಸುತ್ತಿದ್ದರು. ಭಾರತಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರಿಗೆ ಗೌರವ ಸಲ್ಲಿಸಲು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇದನ್ನು ಡಾರ್ಕ್ ಟೂರಿಸಂನಲ್ಲಿ ಸೇರಿಸಲಾಗಿದೆ.