Christmas 2022: ಸಾಂತಾ ಟೋಪಿ ಧರಿಸಿರುವ ಎಮಿರೇಟ್ಸ್ ವಿಮಾನದ ಪೋಸ್ಟ್ ವೈರಲ್
ಸಾಂತಾಕ್ಲಾಸ್ ಕ್ರಿಸ್‌ಮಸ್‌ನೊಂದಿಗೆ ಹೆಚ್ಚು ಆಳವಾದ ನಂಟನ್ನು ಹೊಂದಿದೆ. ಹೀಗಿರುವಾಗ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ಏರ್‌ಲೈನ್ಸ್ ಕೂಡ ತನ್ನ ಪ್ರಯಾಣಿಕ ವಿಮಾನಗಳಲ್ಲಿ ಒಂದನ್ನು ಸಾಂತಾ ಜಾರುಬಂಡಿಯಾಗಿ ಪರಿವರ್ತಿಸುವ ಮೂಲಕ ರಜೆಯ ಮೂಡ್‌ಗೆ ಬರುತ್ತಿದೆ.
ಜಗತ್ತಿನಾದ್ಯಂತ ಎಲ್ಲರೂ ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಕ್ರಿಸ್‌ಮಸ್ ಹಬ್ಬ (Christmas festival) ಎಂದಾಕ್ಷಣ ತಕ್ಷಣಕ್ಕೆ ಸಾಂತಾ ಕ್ಲಾಸ್, ಗಿಫ್ಟ್, ಜಿಂಗಲ್ ಬೆಲ್, ಕೇಕ್, ಕುಕೀಸ್ ನೆನಪಾಗುತ್ತವೆ. ಅದರಲ್ಲೂ ಸಾಂತಾಕ್ಲಾಸ್ ಕ್ರಿಸ್‌ಮಸ್‌ನೊಂದಿಗೆ ಹೆಚ್ಚು ಆಳವಾದ ನಂಟನ್ನು ಹೊಂದಿದೆ. ಸಾಂತಾ ಕ್ಲಾಸ್ ರಜಾದಿನಗಳಲ್ಲಿ ಸುರಕ್ಷಿತ ಪ್ರಯಾಣ (Safe travel) ಮತ್ತು ಸಹಿಷ್ಣುತೆ ಸೇರಿದಂತೆ ಅನೇಕ ಸಕಾರಾತ್ಮಕ ವಿಷಯಗಳನ್ನು ಪ್ರತಿನಿಧಿಸುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ಏರ್‌ಲೈನ್ಸ್ ಕೂಡ ತನ್ನ ಪ್ರಯಾಣಿಕ ವಿಮಾನಗಳಲ್ಲಿ ಒಂದನ್ನು ಸಾಂತಾ ಜಾರುಬಂಡಿಯಾಗಿ ಪರಿವರ್ತಿಸುವ ಮೂಲಕ ರಜೆಯ ಮೂಡ್‌ಗೆ (Holidays) ಬರುತ್ತಿದೆ.
ವಿಮಾನಯಾನ ಸಂಸ್ಥೆಯು ಸಾಂತಾ ಟೋಪಿಯನ್ನು ಧರಿಸಿರುವ ವಿಮಾನವನ್ನು (Flight) ನೆಲದಿಂದ ಎತ್ತುವ ಮತ್ತು ಹಿಮಸಾರಂಗವು ಅತ್ಯಂತ ಕ್ರಿಸ್‌ಮಸ್ ತರಹದ ರೀತಿಯಲ್ಲಿ ಆಕಾಶಕ್ಕೆ ಕೊಂಡೊಯ್ಯುವ ಕಿರು ವೀಡಿಯೊ ಕ್ಲಿಪ್ ಅನ್ನು Instagram ನಲ್ಲಿ ಹಂಚಿಕೊಂಡಿದೆ. ಎಮಿರೇಟ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ "ಕ್ಯಾಪ್ಟನ್ ಕ್ಲಾಸ್" ಎಂಬ ಶೀರ್ಷಿಕೆಯೊಂದಿಗೆ ಟೇಕಾಫ್ ಮಾಡಲು ಅನುಮತಿಯನ್ನು ವಿನಂತಿಸುವ ಮೂಲಕ ವೀಡಿಯೊವನ್ನು ಹಂಚಿಕೊಂಡಿದೆ. 'ಮೆರ್ರಿ ಕ್ರಿಸ್ಮಸ್ ಫ್ರಂ ಎಮಿರೇಟ್ಸ್' ಎಂದು ತಿಳಿಸಲಾಗಿದೆ.
ಭಾರತದ ಈ ಸ್ಥಳಗಳ Christmas celebration ಪ್ರಪಂಚದಾದ್ಯಂತ ಫೇಮಸ್
ಇದು "ಜಿಂಗಲ್ ಬೆಲ್ಸ್, ಜಿಂಗಲ್ ಬೆಲ್ಸ್, ಜಿಂಗಲ್ ಆಲ್ ವೇ, 'ಕ್ಯಾಪ್ಟನ್' ಕ್ಲಾಸ್ ಜಾರುಬಂಡಿಯಲ್ಲಿ ಓಡಿಸುತ್ತಿರುವ ಸಮಯ." ಎಂದು ಕಾಮೆಂಟ್ ಮಾಡಲಾಗಿದೆ. ದುಬೈ ಮೂಲದ ವೀಡಿಯೋ ಕಲಾವಿದ ಮೊಸ್ಟಾಫಾ ಎಲ್ಡಿಯಾಸ್ಟಿಯ ವಿಶುವಲ್ ಎಫೆಕ್ಟ್ಸ್ ಕೆಲಸದಿಂದಾಗಿ ಜೆಟ್ ಅನ್ನು ಈ ರೀತಿ ಪರಿವರ್ತಿಸಲಾಯಿತು. ಇದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಎಮಿರೇಟ್ಸ್ ಅದ್ಭುತ ಕೆಲಸವನ್ನು ಮಾಡಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು, ವಾವ್ಹ್ ಈ ವೀಡಿಯೋ ಮ್ಯಾಜಿಕ್‌ನಂತಿದೆ ಎಂದು ಕಾಮೆಂಟಿಸಿದ್ದಾರೆ. ಮತ್ತೊಬ್ಬರು wooowwww ಈಗಿನಿಂದ ನನ್ನ ಮೆಚ್ಚಿನ ಕ್ರಿಸ್ಮಸ್ ವೀಡಿಯೊ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಎಲ್ಡಿಯಾಸ್ಟಿ ಮತ್ತು ಎಮಿರೇಟ್ಸ್ ಈ ಮೊದಲು ಒಟ್ಟಿಗೆ ಕೆಲಸ ಮಾಡಿದೆ. ವೀಡಿಯೊ ತಯಾರಕರ ಹಿಂದಿನ ಮೇರುಕೃತಿಯು ಎಮಿರೇಟ್ಸ್ ಜೆಟ್ ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಇಳಿಯುವ ಮೊದಲು ಪಕ್ಷಿಯನ್ನು ಅನುಕರಿಸುವದನ್ನು ತೋರಿಸಿದೆ. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಕೂಡ ವಿಡಿಯೋವನ್ನು ಮರು ಪೋಸ್ಟ್ ಮಾಡಿದ್ದಾರೆ.
Christmas 2022: ಬಾಯಲ್ಲಿ ನೀರೂರಿಸೋ ಸ್ಪೆಷಲ್ ಕುಕೀಸ್, ಸಿಂಪಲ್ ರೆಸಿಪಿ ಇಲ್ಲಿದೆ
ಕ್ರಿಸ್ಮಸ್ ದಿನದ ವಿಶೇಷತೆ, ಸಂಪ್ರದಾಯಗಳೇನು?
ಕ್ರಿಸ್‌ಮಸ್ ಎಂದರೆ ಕ್ರಿಶ್ಚಿಯನ್ನರು ನಂಬಿರುವ ದೇವರ ಮಗ ಕ್ರಿಸ್ತನ ಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ದಿನ. ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫ್ ಮಗನಾಗಿ ಇಂದಿನ ಇಸ್ರೇಲ್ನಲ್ಲಿರುವ ಬೆತ್ಲಹೆಮ್ ಎಂಬ ಊರಿನಲ್ಲಿ ಹುಟ್ಟಿದ. ಆತ ಹುಟ್ಟಿದ ದಿನ ಸಂಭ್ರಮಿಸಲು ಅಂದು ಎಲ್ಲೆಡೆ ವರ್ಣರಂಜಿತ ಅಲಂಕಾರ, ದೀಪಗಳು, ಕ್ರಿಸ್ಮಸ್ ಟ್ರೀಗಳು, ಸಂತೋಷದ ವಾತಾವರಣ ಕಂಡುಬರುತ್ತದೆ.
'ಕ್ರಿಸ್ಮಸ್' ಎಂಬ ಪದವು ಮಾಸ್ ಆಫ್ ಕ್ರೈಸ್ಟ್‌ನಿಂದ ಬಂದಿದೆ. ಜೀಸಸ್ ಮರಣ ಹೊಂದಿದ ನಂತರ ಮತ್ತೆ ಜೀವಕ್ಕೆ ಬಂದದ್ದನ್ನು ಕ್ರಿಶ್ಚಿಯನ್ನರು ನೆನಪಿಸಿಕೊಳ್ಳುವ ದಿನ ಇದಾಗಿದೆ. ಯೂಲ್ ಎಂಬ ಪದವು ಕ್ರಿಸ್‌ಮಸ್‌ಗೆ ಸಂಬಂಧಿಸಿದೆ. ಇದು ಚಳಿಗಾಲದ ಅಯನ ಸಂಕ್ರಾಂತಿಯ ಹಬ್ಬವನ್ನು ಸೂಚಿಸುವ ಜರ್ಮನಿಕ್ "ಜೊಲ್" ಅಥವಾ ಆಂಗ್ಲೋ-ಸ್ಯಾಕ್ಸನ್ 'ಜಿಯೋಲ್'ನಿಂದ ಬಂದಿರಬಹುದು. ಕ್ರಿಸ್ಮಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
ಕ್ರಿಸ್ಮಸ್ ಇತಿಹಾಸ: ಜೀಸಸ್ ಕ್ರೈಸ್ಟ್ ಅವರ ನಿಜವಾದ ಜನ್ಮ ದಿನಾಂಕ ತಿಳಿದಿಲ್ಲ ಮತ್ತು ಡಿಸೆಂಬರ್ 25 ಅನ್ನು ಅವರ ಜನ್ಮ ದಿನಾಂಕವಾಗಿ ಯಾವಾಗ ನಿಗದಿಪಡಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದನ್ನು ಮೊದಲು 221ರಲ್ಲಿ ಸೆಕ್ಸ್ಟಸ್ ಜೂಲಿಯಸ್ ಆಫ್ರಿಕನಸ್ ಅವರು ಯೇಸುವಿನ ಜನ್ಮ ದಿನಾಂಕ ಎಂದು ಗುರುತಿಸಿದರು. ನಂತರ ಇದು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿತು.
ಎದೆಬಡಿತ ಹೆಚ್ಚಿಸುವ ಈ ಜಾಹೀರಾತು ನಿಜಕ್ಕೂ ಬುರ್ಜ್ ಖಲೀಫಾ ಮೇಲೆ ಚಿತ್ರೀಕರಿಸಲ್ಪಟ್ಟಿದೆಯಾ?