ಎದೆಬಡಿತ ಹೆಚ್ಚಿಸುವ ಈ ಜಾಹೀರಾತು ನಿಜಕ್ಕೂ ಬುರ್ಜ್ ಖಲೀಫಾ ಮೇಲೆ ಚಿತ್ರೀಕರಿಸಲ್ಪಟ್ಟಿದೆಯಾ?

  • ಎದೆ ಬಡಿತ ಹೆಚ್ಚಿಸುವ ಎಮಿರೈಟ್ಸ್ ಜಾಹೀರಾತು ವೈರಲ್
  • ವಿಶ್ವದ ಅತೀ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಜಾಹೀರಾತು ಶೂಟಿಂಗ್
  • ಅನುಮಾನಗಳಿಗೆ ಉತ್ತರ ನೀಡಿದ  ಎಮಿರೈಟ್ಸ್
     
Real or fake UAE airlines Emirates clarified on Ad Really Filmed On Top Of Burj Khalifa ckm

ಯುಎಇ(ಆ.10): ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಎಮಿರೈಟ್ಸ್ ಜಾಹೀರಾತು ವೈರಲ್ ಆಗಿದೆ. ಕೇವಲ 30 ಸೆಕೆಂಡ್ ಜಾಹೀರಾತು ಎದೆ ಝಲ್ ಎನಿಸುವಂತಿದೆ. ಇದು ಎಮಿರೈಟ್ಸ್ ವಿಮಾನ ಸಂಸ್ಥೆಯ ಜಾಹೀರಾತು. ಅತಿ ಎತ್ತರದಲ್ಲಿ ಹಾರಾಡುವ ವಿಮಾನದ ಜಾಹೀರಾತನ್ನು ಅತೀ ಎತ್ತರದ ದುಬೈನ ಬುರ್ಜ್ ಖಲೀಫಾ ಕಟ್ಟಡದ ತುತ್ತು ತುದಿಯಲ್ಲಿ ಚಿತ್ರೀಕರಿಸಲಾಗಿದೆ. ಇದೇ ಕಾರಣದಿಂದ ಈ ಜಾಹೀರಾತು ವೈರಲ್ ಆಗಿದೆ.

ಎಮಿರೇಟ್ಸ್ ಡೈಮಂಡ್ ವಿಮಾನ: ಓದಿದ್ರೆ ಬಗೆಹರಿಯುತ್ತೆ ಅನುಮಾನ!

ನಿಕೋಲ್ ಸ್ಮಿತ್ ಲುಡ್ವಿಕ್ ಈ ಜಾಹೀರಾತಿನಲ್ಲಿ ಗಗನಸಖಿಯಾಗಿ ಕಾಣಿಸಿಕೊಂಡಿದ್ದಾರೆ. ಬುರ್ಜ್ ಖಲೀಫಾ ಕಟ್ಟದ ತುದಿಯಲ್ಲಿ ನಿಂತು ಒಂದೊಂದೇ ಸೈನ್ ಬೋರ್ಡ್ ಮೂಲಕ ವಿಷಯ ಹೇಳುತ್ತಾರೆ. ಆರಂಭದಲ್ಲಿ ಈ ಜಾಹೀರಾತಿನಲ್ಲಿ ಅಂತಹ ವಿಶೇಷ ಏನಿದೆ ಅನ್ನೋ ಭಾವನೆ ಮೂಡುವುದು ಸಹಜ. ಆದರೆ ಕ್ಯಾಮಾರಾ ಹಿಂದಕ್ಕೆ ಹೋದಂತೆ ಇದು ಅಂತಿಂತ ಜಾಹೀರಾತಲ್ಲ ಅನ್ನೋದು ಅರಿವಾಗುತ್ತದೆ.

 

ನಿಕೋಲ್ ಸ್ಮಿತ್ ಲುಡ್ವಿಕ್  2,722 ಅಡಿ ಎತ್ತರದಲ್ಲಿ ನಿಂತು ಜಾಹೀರಾತು ಮಾಡಿದ್ದಾಳೆ. ಇದು ಸಾಮಾನ್ಯ ಮಾತಲ್ಲ. ಹೀಗಾಗಿಯೇ ಈ ಜಾಹೀರಾತನ್ನು ಗ್ರೀನ್ ಮ್ಯಾಟ್ ಮೂಲಕ ಶೂಟ್ ಮಾಡಲಾಗಿದೆ. ಇದು ನಿಜವಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಎಮಿರೈಟ್ಸ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡೋ ಮೂಲಕ ಇದು ಬುರ್ಜ್ ಖಲೀಫಾ ಮೇಲೆ ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಪಪಡಿಸಿದೆ.

 

ಕೊರೋನಾದಿಂದ ಪಾರಾಗಲು ವಿದೇಶಕ್ಕೆ ಪಲಾಯನ; ಗಗನಕ್ಕೇರಿದ ವಿಮಾನ ದರ!

30 ಸೆಕೆಂಡ್ ಜಾಹೀರಾತಿಗಾಗಿ ಪಟ್ಟ ಶ್ರಮ ಅಷ್ಟಿಟ್ಟಲ್ಲ. ತೆಗೆದುಕೊಂಡು ಸುರಕ್ಷತಾ ವಿಧಾನಗಳು ಅಪಾರ. ಇನ್ನು ಈಕೆಯ ಧೈರ್ಯವನ್ನು ಮೆಚ್ಚಲೇಬೇಕು. ಭೂಮಿ ಮೇಲೆ ನಿಂತು ಸರಾಗವಾಗಿ, ಯಾವುದೇ ಅಳುಕಿಲ್ಲದೇ ಜಾಹೀರಾತಿನಲ್ಲಿ ಪಾಲ್ಗೊಂಡು ನಿಕೋಲ್ ಎಲ್ಲರ ನಿದ್ದೆಗೆಡಿಸಿದ್ದಾಳೆ.

Latest Videos
Follow Us:
Download App:
  • android
  • ios