Asianet Suvarna News Asianet Suvarna News

ಮೊದಲ ಬಾರಿ ವಿಮಾನವೇರಿದ ಹಿರಿಜೀವಗಳು... ಅಮೇಲೇನಾಯ್ತು ನೋಡಿ..

ಇತ್ತೀಚೆಗೆ ವಿಮಾನ ಪ್ರಯಾಣ ತುಂಬಾ ಸಾಮಾನ್ಯ ಎನಿಸಿದೆ ಬಿಡಿ. ಆದರೆ ಹಳೆಯ ತಲೆಮಾರಿನವರಿಗೆ ಇದೊಂದು ಕನಸೇ ಸರಿ. ಬಹಳಷ್ಟು ಜನರಿಗೆ ಇದೊಂದು ಸೋಜಿಗ. ಈ ಪುರಾಣವೆಲ್ಲಾ ಈಗ್ಯಾಕೆ ಅಂತೀರಾ? ವಿಷ್ಯ ಇದೆ ಮುಂದೆ ಓದಿ...

elederly couple first time boarded a flight  what happen next linkdin Post Goes viral akb
Author
First Published Nov 5, 2022, 3:09 AM IST

ವಿಮಾನದಲ್ಲೊಮ್ಮೆ ಪ್ರಯಾಣಿಸಬೇಕು ಎಂಬುದು ಬಹುತೆಕ ಜನರ ಬಹುದಿನಗಳ ಕನಸು. ಶ್ರೀಮಂತರು ಹಾಗೂ ಶ್ರೀಮಂತ ಮಾಧ್ಯಮವರ್ಗದವರಿಗೆ ಇದು ಸಾಮಾನ್ಯ ವಿಚಾರ. ಕೆಳ ಮಾಧ್ಯಮವರ್ಗದವರು ಇದಕ್ಕಾಗಿ ಒಂದೊಂದು ರೂಪಾಯಿಯನ್ನು ಕೂಡಿಡುವ ಪ್ರಯತ್ನ ಮಾಡುತ್ತಾರೆ. ಇತ್ತೀಚೆಗೆ ವಿಮಾನ ಪ್ರಯಾಣ ತುಂಬಾ ಸಾಮಾನ್ಯ ಎನಿಸಿದೆ ಬಿಡಿ. ಆದರೆ ಹಳೆಯ ತಲೆಮಾರಿನವರಿಗೆ ಇದೊಂದು ಕನಸೇ ಸರಿ. ಬಹಳಷ್ಟು ಜನರಿಗೆ ಇದೊಂದು ಸೋಜಿಗ. ಈ ಪುರಾಣವೆಲ್ಲಾ ಈಗ್ಯಾಕೆ ಅಂತೀರಾ? ವಿಷ್ಯ ಇದೆ ಮುಂದೆ ಓದಿ...

ಜೀವನದ ಪ್ರತಿ ಮೊದಲಿನಲ್ಲೂ ಏನೋ ಒಂದು ಕುತೂಹಲ ಕೌತುಕ, ಮುಗ್ಧತೆ ಆಸಕ್ತಿ ಇರುತ್ತದೆ. ಅದೇ ರೀತಿ ಅಲ್ಲೊಂದು ಕಡೆ ಹಿರಿಜೀವಗಳು ಮೊದಲ ಬಾರಿ ವಿಮಾನ ಏರಿದ್ದಾರೆ. ಆಗಾಗ ವಿಮಾನದಲ್ಲಿ ಪ್ರಯಾಣಿಸುವವರಿಗೆ ವಿಮಾನ ಪ್ರಯಾಣದ ಬಗ್ಗೆ ಅಂತಹ ಏನು ದೊಡ್ಡ ಉತ್ಸಾಹ ಇಲ್ಲದಿದ್ದರೂ. ಮೊದಲ ಬಾರಿ ವಿಮಾನ ಏರಿದ ಈ ಹಿರಿಜೀವಗಳ ಮುಖದಲ್ಲಿ ಒಂದು ರೀತಿಯ ಆತಂಕ, ಮತ್ತೊಂದು ಕಡೆ ಖುಷಿ ಭಯ ಎಲ್ಲವೂ ಮಿಶ್ರಿತವಾದ ಒಂದು ಭಾವ ಎದ್ದು ಕಾಣತ್ತಿತ್ತು. ನೋಡುವವರಿಗೆ ಇವರು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬುದು ಎದ್ದು ಕಾಣುತ್ತಿತ್ತು.

13,560 ಕಿಮೀ ಹಕ್ಕಿಯ ನಾನ್‌ಸ್ಟಾಪ್‌ ಯಾನ, ವಿಮಾನ, ಜಿಪಿಎಸ್ ಯಾವ ಲೆಕ್ಕ?

ಬಸ್‌, ರೈಲುಗಳಲ್ಲಾದರೆ ಹಿರಿಯ ಜೀವಗಳನ್ನು ದೂರ ಕಳುಹಿಸಬೇಕಾದರೆ, ಆತ್ಮೀಯರು ಕುಟುಂಬದವರು ಬಸ್‌ವರೆಗೆ ಅಥವಾ ರೈಲಿನ ಒಳಗೂ ಬಂದ ಲಗೇಜುಗಳನ್ನೆಲ್ಲಾ ಅವರು ಹೋಗುವ ಊರು ತಲುಪಿದ ನಂತರ ಇಳಿಸಲು ಸುಲಭವಾಗುವಂತೆ ಅವರ ಹತ್ತಿರವೇ ಇರಿಸಿ. ಇನ್ನೇನು ಬಸ್ ಅಥವಾ ರೈಲು ಹೊರಡುತ್ತದೆ ಅನ್ನುವಷ್ಟರಲ್ಲಿ ಅವರು ಟಾಟಾ ಬೈ ಬೈ ಹೇಳಿ ಅಲ್ಲಿಂದ ಇಳಿದು ಹೋಗಿ ಬಿಡುತ್ತಾರೆ. ಆದರೆ ವಿಮಾನ ಪ್ರಯಾಣದಲ್ಲಿ (Flight journey) ಹಾಗಲ್ಲ. ಪ್ರವೇಶ ದ್ವಾರದವರಗಷ್ಟೇ ಸಂಬಂಧಿಗಳು, ಆತ್ಮೀಯರು ಬರಲು ಸಾಧ್ಯ. ನಂತರ ಲಗೇಜ್ ಚೆಕ್‌ಅಪ್ ನಡೆದು ಲಗೇಜೊಂದು ಕಡೆ ಹೋದರೆ ನಮ್ಮನ್ನು ವಿಮಾನವಿರುವ ಜಾಗಕ್ಕೆ ಬಸ್‌ನಲ್ಲಿ ಕರೆದುಕೊಂಡು ಹೋಗಿ ಬಿಡುತ್ತಾರೆ. ಹೀಗಿರುವಾಗ ಮೊದಲ ಬಾರಿ ವಿಮಾನವೇರಿ ಬರುವವರಿಗೆಲ್ಲಾ ಎಲ್ಲವೂ ಹೊಸದು ಎಲ್ಲವೂ ಅಪರಿಚಿತ ಎಲ್ಲಿ ಹೋಗಬೇಕು ಎಂದು ತಿಳಿಯದೇ ಗೊಂದಲದಲ್ಲಿರುತ್ತಾರೆ.

ಉಚಿತವಾಗಿ 5 ಲಕ್ಷ ಏರ್ ಟಿಕೆಟ್ ನೀಡ್ತಿದೆಯಂತೆ ಹಾಂಗ್ ಕಾಂಗ್ ಸರ್ಕಾರ!

ಹೀಗಾಗಿಯೇ ಮೊದಲ ಬಾರಿ ವಿಮಾನವೇರಿದ ಉತ್ತರ ಪ್ರದೇಶದ ಮೂಲದ ಹಿರಿಯ ದಂಪತಿಗಳು (Elderly Couple) ಬೆರಗು ಆತಂಕದ ಕಣ್ಣುಗಳಿಂದ ನೋಡುತ್ತಿದ್ದು, ಇವರನ್ನು ಲಿಂಕ್ಡಿನ್‌ ಬಳಕೆದಾರರೊಬ್ಬರು ಗುರುತಿಸಿ, ಮಾತನಾಡಿಸಿದ್ದಾರೆ. ಇನ್ಸ್‌ಪಿರೇಷನ್ ಅಧಿಕಾರಿಯಾಗಿ ಕೆಲಸ ಮಾಡುವ ಅಮಿತಾಬ್ ಶಾ ಎಂಬುವವರು ಈ ಹಿರಿಯ ದಂಪತಿಯೊಂದಿಗೆ ಮಾತುಕತೆ ನಡೆಸಿದ್ದು, ಭಯ ಆತಂಕದಲ್ಲಿದ್ದ ದಂಪತಿಯೂ ಕೂಡ ಇವರಲ್ಲಿ ಸ್ನೇಹಿತನನ್ನು ಕಂಡಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ಈ ವೃದ್ಧ ದಂಪತಿಗೆ ಕೇವಲ ಮಾರ್ಗದರ್ಶನ ನೀಡಿದ್ದು, ಮಾತ್ರವಲ್ಲದೇ ಅವರು ಹಸಿದಿರುವುದನ್ನು ಗಮನಿಸಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಸ್ಯಾಂಡ್‌ವಿಚ್ ತೆಗೆಸಿ ಕೊಟ್ಟಿದ್ದಾರೆ. 

ಈ ದಂಪತಿಯೊಂದಿಗಿನ ಭೇಟಿಯ ಬಗ್ಗೆ ದಂಪತಿಯ ಫೋಟೋದೊಂದಿಗೆ ಅವರು ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡಿದ್ದು, ಆ ಪೋಸ್ಟ್ ಸಖತ್ ವೈರಲ್ ಆಗಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಅವರು ಬರೆದ ಪೋಸ್ಟ್‌ನ ಸಾರಾಂಶ ಇಲ್ಲಿದೆ. 

ನಾನು ನಿನ್ನೆ ದೆಹಲಿ ವಿಮಾನ ನಿಲ್ದಾಣದಿಂದ ಕಾನ್ಪುರಕ್ಕೆ (Kanpur) ಹೋಗುತ್ತಿದ್ದೆ. ಫೋಟೋದಲ್ಲಿ ಕಾಣಿಸುವ ಈ ಅದ್ಭುತವಾದ, ಆದರೆ ದಣಿದಿದ್ದ ದಂಪತಿಗಳು ದೀರ್ಘ ಪ್ರಯಾಣವನ್ನು ಮಾಡಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಉತ್ತರಪ್ರದೇಶದ ದೂರದ ಹಳ್ಳಿಯಿಂದ ಬಂದಿದ್ದ ಅವರು, ದೆಹಲಿ ವಿಮಾನ ನಿಲ್ದಾಣ (Delhi Airport) ತಲುಪಲು 8 ಗಂಟೆಗಳ ಕಾಲ ಬಸ್‌ನಲ್ಲಿ ಪ್ರಯಾಣಿಸಿದ್ದರು. ಮತ್ತು ಅಲ್ಲಿಂದ ಅವರು ನನ್ನೊಂದಿಗೆ ಕಾನ್ಪುರಕ್ಕೆ ವಿಮಾನ ಏರಿದ್ದರು. ಅದಕ್ಕೂ ಮೊದಲು  ವಿಮಾನ ನಿಲ್ದಾಣದ ಬೋರ್ಡಿಂಗ್ ಪ್ರದೇಶದಲ್ಲಿ ಯಾವುದೇ ಸುಳಿವಿಲ್ಲದೇ ಗೊಂದಲದಿಂದಿದ್ದ ಅವರನ್ನು ನೋಡಿದ ನನಗೆ ಅವರ ವರ್ತನೆಯಲ್ಲೇ ಅವರು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಲು ಆಗಮಿಸಿದ್ದಾರೆ ಎಂಬುದು ತಿಳಿಯುತ್ತಿತ್ತು. ಅವರಿಗೆ ಇಂಗ್ಲೀಷ್ ಭಾಷೆ (English Language) ಅರ್ಥವಾಗುತ್ತಿರಲಿಲ್ಲ. ನಾನು ನಗುಮುಖದಿಂದ ಅವರ ಬಳಿ ಆಗಮಿಸಿ ನನ್ನನ್ನು ಹಿಂಬಾಲಿಸುವಂತೆ ಹೇಳಿದೆ. ನನ್ನನ್ನು ಅವರು ಏರ್‌ಲೈನ್‌ನಲ್ಲಿ ಕೆಲಸ ಮಾಡುವವ ಎಂದು ಭಾವಿಸಿದ್ದರು ಎಂದು ಶಾ ಬರೆದುಕೊಂಡಿದ್ದಾರೆ. 

ಈ ವಯಸ್ಸಾದ ಮಹಿಳೆ ವಿಮಾನದಲ್ಲಿ ತನ್ನ ಹಾಗೂ ತನ್ನ ಪತಿಯ ಫೋಟೋವನ್ನು ಕ್ಲಿಕ್ ಮಾಡಿ ಬಳಿಕ ಅದನ್ನು ತಮ್ಮ ಮಗಳಿಗೆ ಕಳುಹಿಸಬೇಕೆಂದು ಬಯಸಿದ್ದರು. ಈ ಮೂಲಕ ತಾವು ಆರಾಮವಾಗಿ ಇದ್ದೇವೆ ಎಂಬುದನ್ನು ಮಗಳಿಗೆ ತಿಳಿಸಲು ಬಯಸಿದ್ದರು. ವಿಮಾನದಲ್ಲಿ ನನಗಿಂತ ಮುಂದಿನ ಸೀಟಿನಲ್ಲಿ ಕುಳಿತಿದ್ದ ಅವರಲ್ಲಿ ವಯಸ್ಸಾದ ಮಹಿಳೆ ನಮ್ಮ ಫೋಟೊವೊಂದನ್ನು ತೆಗೆಯಬಹುದಾ ನಾವು ಆ ಫೋಟೋವನ್ನು ಮಗಳಿಗೆ ಕಳುಹಿಸಿದರೆ ಆಕೆಗೆ ನಾವು ಸುರಕ್ಷಿತವಾಗಿದ್ದೇವೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು. 

ಗಗನಸಖಿ ಇವರಿಗೇನಾದರೂ ಬೇಕೆ ಎಂದು ಕೇಳುತ್ತಾ ಬಂದಾಗ ಈ ದಂಪತಿ ಅದನ್ನು ನಿರಾಕರಿಸಿದ್ದರು. ಆದರೆ ಅವರು ಹಸಿದಂತೆ ಕಾಣಿಸುತ್ತಿದ್ದರು. ನಾನು ಗಗನಸಖಿ ಜೊತೆ ಅವರಿಗೆ ಪನೀರ್ ಸ್ಯಾಂಡ್ವಿಚ್ (sandwiches) ಹಾಗೂ ಜ್ಯೂಸ್ (juices) ನೀಡುವಂತೆ ಹೇಳಿದೆ. ಅಲ್ಲದೇ ಉಚಿತ ಊಟವನ್ನು ಗೆದ್ದ ವಿಮಾನ ಪ್ರಯಾಣಿಗರು ನೀವು ಎಂದು ಅವರಿಗೆ ಹೇಳುವಂತೆ ಹೇಳಿದೆ. ಅಲ್ಲದೇ ಅವರಿಗೆ ತಿಳಿಯದಂತೆ ಅವರ ಆಹಾರಕ್ಕೆ ನಾನು ನಂತರ ಪೇ ಮಾಡಿದೆ. ವಿಮಾನ ಇಳಿದ ನಂತರ ಅವರು ಅವರದೇ ದಾರಿಯಲ್ಲಿ ಹೋಗುತ್ತಿರಬೇಕಾದರೆ ಅವರು ನನ್ನನ್ನು ನೋಡಿ ನಗುತ್ತಿದ್ದರು ಎಂದು ಅವರು ಬರೆದುಕೊಂಡಿದ್ದಾರೆ.

Follow Us:
Download App:
  • android
  • ios