13,560 ಕಿಮೀ ಹಕ್ಕಿಯ ನಾನ್‌ಸ್ಟಾಪ್ ಯಾನ, ವಿಮಾನ, ಜಿಪಿಎಸ್ ಯಾವ ಲೆಕ್ಕ?
ಹಕ್ಕಿ ಹಾರುತಿದೆ ನೋಡಿದಿರಾ ? ಖಂಡಿತ ನೋಡೇ ಇರ್ತೀರಾ ಬಿಡಿ. ಆದ್ರೆ ಹಕ್ಕಿಯೊಂದು ನಿರಂತರವಾಗಿ ಹಾರುತ್ತಲೇ 13,560 ಕಿಮೀ 13,560 ಕಿಮೀ ಕ್ರಮಿಸಿದೆ ಎಂದ್ರೆ ನೀವು ನಂಬ್ತೀರಾ ? ಅಚ್ಚರಿಯೆನಿಸಿದರೂ ಇದು ನಿಜ. ಗೋಡ್ವಿಟ್ ಜಾತಿಗೆ ಸೇರಿದ ಹಕ್ಕಿ ಸತತ 11 ದಿನಗಳ ಕಾಲ ನಿರಂತರವಾಗಿ ಹಾರಿದ್ದು, ತನ್ನ ಹಾರಾಟದ ಮೂಲಕವೇ ವಿಶ್ವ ದಾಖಲೆ ಬರೆದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅನೇಕ ಪ್ರಾಣಿ-ಪಕ್ಷಿಗಳು ಆಹಾರವನ್ನು ಹುಡುಕಲು ಅಥವಾ ತಮ್ಮ ಕಾಲೋಚಿತ ಸಂತಾನೋತ್ಪತ್ತಿಗೆ ಮರಳಲು ಸಾಕಷ್ಟು ದೂರವನ್ನು ಪ್ರಯಾಣಿಸುತ್ತವೆ. ಕೆಲವೊಂದು ಋತುಮಾನದಲ್ಲಿ ಹಕ್ಕಿಗಳು ಹಿಂಡು ಹಿಂಡಾಗಿ ಹಾರಿ ಹೋಗುವುದನ್ನು ನಾವು ನೋಡಬಹುದು. ಇದು ಹಕ್ಕಿಗಳು ವಲಸೆ ಹೋಗುವ ಪ್ರಕ್ರಿಯೆಯಾಗಿದೆ. ಹಾಗೆಯೇ ಬಾರ್-ಟೈಲ್ಡ್ ಗೋಡ್ವಿಟ್ ಹಕ್ಕಿಗಳು ವಲಸೆಗೆ ಹೆಸರುವಾಸಿ. ಉತ್ತರಧ್ರುವ-ದಕ್ಷಿಣಧ್ರುವ ನಡುವೆ ಈ ಹಕ್ಕಿಗಳು ಆಹಾರ ವಿಹಾರಕ್ಕಾಗಿ ಹಾರಾಡುತ್ತವೆ. ಹಕ್ಕಿಗಳು ಹೀಗೆ ಹಾರುವುದೇನೋ ಸಹಜ. ಆದರೆ ಹೀಗೆ ವಲಸೆ ಹೋಗುವ ಸಂದರ್ಭ ಅವು ಕ್ರಮಿಸಿದ ದೂರ ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಅಕ್ಟೋಬರ್‌ನಲ್ಲಿ ವಲಸೆ (Migration) ಅಧ್ಯಯನಕ್ಕಾಗಿ ವಿಜ್ಞಾನಿಗಳು ಐದು ತಿಂಗಳು ಪ್ರಾಯದ 400 ಗ್ರಾಂ ತೂಕದ ಗೋಡ್ವಿಟ್ ಹಕ್ಕಿ (Godwit bird)ಯೊಂದಕ್ಕೆ 5G ಸಾಟಲೈಟ್ ಟ್ಯಾಂಗಿಂಗ್ ಮಾಡಿದ್ದಾರೆ. ಆಮೇಲೆ ಅದು ಎಲ್ಲಿಗೆ ಹೋಗುತ್ತದೆ,ಏನು ಮಾಡುತ್ತದೆ ಎಂದು ಹಾರಾಟವನ್ನು ಮಾನಿಟರ್ ಮಾಡಿದ್ದಾರೆ. ಇದರಲ್ಲಿ ತಿಳಿದುಬಂದಿದ್ದು ಎಲ್ಲರೂ ನಿಬ್ಬೆರಗಾಗುವಂಥಾ ವಿಷಯ.
ಮುಗಿಲು ನೋಡ್ತಾ ಹಾಡು ಕೇಳ್ತಾ ಮಲಗಿದ್ದ ಯುವತಿಯ ಇಯರ್ ಬಡ್ ಹೊತ್ತೊಯ್ದ ಹಕ್ಕಿ
13,560 ಕಿಮೀ ದೂರ ನಾನ್‌ಸ್ಟಾಪ್ ಯಾನ
ಅಲಾಸ್ಕಾದಿಂದ ಅಕ್ಟೋಬರ್ 13ರಂದು ಈ ಹಕ್ಕಿ ಹಾರಿದೆ. ಆಮೇಲೆ ಎಲ್ಲೂ ಇಳಿದಿಲ್ಲ. ಆಹಾರ (Food), ನೀರು (Water) ಸೇವಿಸದೇ, ಸಮುದ್ರ ಸಾಗರಗಳ ಮೇಲೆ ಹಾರುತ್ತಾ ಹಾರುತ್ತಾ ಹನ್ನೊಂದನೇ ದಿನ ಆಸ್ಟ್ರೇಲಿಯಾದ ತಾಸ್ಮಾನಿಯಾದಲ್ಲಿ ಬಂದಿಳಿದಿದೆ. ಗಂಟೆಗೆ 51 ಕಿಮೀ ವೇಗದಲ್ಲಿ ಹಕ್ಕಿ ನಿರಂತರವಾಗಿ ಪಯಣ (Travel) ಮಾಡಿದೆ.
ತನ್ನ ಹಾರಾಟದ ಮೂಲಕವೇ ವಿಶ್ವ ದಾಖಲೆ ಬರೆದ ಹಕ್ಕಿ
ಸೆಪ್ಟೆಂಬರ್ 16ರಂದು ಅಮೇರಿಕಾದ ನೈರತ್ಯ ಅಲಾಸ್ಕಾದಿಂದ ಹಾರಾಟ ಪ್ರಾರಂಭಿಸಿದ ಈ ಹಕ್ಕಿ 11 ದಿನ ಕಳೆಯುವಷ್ಟರಲ್ಲಿ ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಬಂದು ತಲುಪಿದೆ ಎಂದು ಎಂದು ತಿಳಿದುಬಂದಿದೆ. ತನ್ನ ಅತಿ ದೀರ್ಘದ ಹಾರಾಟದ ಮೂಲಕ ಗೋಡ್ವಿಟ್ ಹಕ್ಕಿ ಈ ಹಿಂದೆ 2007ರಲ್ಲಿ 11680 ಕಿಲೋಮೀಟರ್ ಕ್ರಮಿಸಿದ್ದ ಹೆಣ್ಣು ಶೋರ್‌ಬರ್ಡ್ ಹಕ್ಕಿಯ ದಾಖಲೆ (Record)ನ್ನು ಮುರಿದು ಹಾಕಿದೆ.
ಅಲೆಲೆ... ಈ ಪುಟ್ಟ ಹಕ್ಕಿ ಸ್ಮೋಕ್ ಮಾಡ್ತಿದ್ಯಾ... ವಿಡಿಯೋ ನೋಡಿ
ಜೆಟ್ ಫೈಟರ್‌ಗಳ ರೀತಿ ಇರುತ್ತೆ ಹಕ್ಕಿಗಳ ದೇಹ ವಿನ್ಯಾಸ
ಗಾಡ್ವಿಟ್ ಪಕ್ಷಿಗಳು ನಿರಂತರವಾಗಿ ಹಾರಾಟ ನಡೆಸುತ್ತಲೇ ಇರುತ್ತವೆ. ತಮ್ಮ ಪ್ರಯಾಣ ಕಾಲದಲ್ಲಿ ನಿದ್ದೆ (Sleep) ಮಾಡುದಿಲ್ಲವಂತೆ. ಮಾತ್ರವಲ್ಲ ಗಂಡು ಗೋಡ್ವಿಟ್ ಹಕ್ಕಿ ಹಾರಾಟದ ವೇಳೆ ತನ್ನ ಆಂತರಿಕ ಅಂಗಗಳನ್ನು ಕುಗ್ಗಿಸೋ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ಗೋಡ್ವಿಟ್ ಇನ್ನಷ್ಟು ವೇಗವಾಗಿ (Fast) ಹಾರಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ. ಗೋಡ್ವಿಟ್ ಹಕ್ಕಿಗಳು ದೇಹ ವಿನ್ಯಾಸ ಜೆಟ್ ಫೈಟರ್‌ಗಳ ರೀತಿ ಇರುತ್ತೆ ಅಂತಾರೆ ಗ್ಲೋಬಲ್ ಫ್ಲೈ ವೇ ನೆಟ್‌ವರ್ಕ್‌ನ ಡಾ.ಜೆಸ್ಸಿ ಕಾಂಕ್ಲೀನ್. ಇವುಗಳ ಉದ್ದನೆಯ ಮೊನಚಾದ ರೆಕ್ಕೆಗಳು ಹಾಗೂ ಅದರ ವಿನ್ಯಾಸ ಈ ಹಕ್ಕಿಯ ನಿರಂತರ ಹಾರಾಟಕ್ಕೆ ಪೂರಕಾಗಿದೆ ಎಂದು ತಿಳಿಸಿದರು.
ಮಂಗೋಲಿಯಾದಲ್ಲಿ ಒಂದು ಬೂದು ತೋಳವು ವರ್ಷದಲ್ಲಿ 4,503 ಮೈಲುಗಳಷ್ಟು ಸುತ್ತಾಡುತ್ತಿತ್ತು, ಹಂಪ್‌ಬ್ಯಾಕ್ ತಿಮಿಂಗಿಲಗಳು ಋತುಗಳು ಬದಲಾದಂತೆ ಅದೇ ದೂರವನ್ನು ಈಜುತ್ತವೆ ಮತ್ತು ಸಾಲ್ಮನ್‌ಗಳು ಸಹ ನದಿಗಳು ಮತ್ತು ತೊರೆಗಳ ಪ್ರವಾಹಗಳ ವಿರುದ್ಧ ನೂರಾರು ಮೈಲುಗಳಷ್ಟು ಈಜುತ್ತವೆ. ಪ್ರಾಣಿ ಸಾಮ್ರಾಜ್ಯವು ಹೊಸ ವಲಸೆ-ಸಂಬಂಧಿತ ದಾಖಲೆಯನ್ನು ಹೊಂದಿದೆ. ಹಾಗೆಯೇ 5 ತಿಂಗಳ ವಯಸ್ಸಿನ ಬಾರ್-ಟೈಲ್ಡ್ ಗಾಡ್‌ವಿಟ್ ಅಲಾಸ್ಕಾದಿಂದ ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾದವರೆಗಿನ 8,426 ಮೈಲಿ ಪ್ರಯಾಣದಲ್ಲಿ ಸುದೀರ್ಘ ನಿರಂತರ ಹಾರಾಟಕ್ಕಾಗಿ ವಿಶ್ವದಾಖಲೆ ಮಾಡಿದೆ.
Mandya: ಮದ್ದೂರಲ್ಲಿ ಪೆಲಿಕನ್ ಪಕ್ಷಿಗೆ ಜಿಪಿಎಸ್: ದೇಶದಲ್ಲೇ ಫಸ್ಟ್