ಕೈ ತೋರಿಸಿ ರೈಲು ನಿಲ್ಲಿಸಿದ ತಾತ: ವಿಡಿಯೋ ಸಖತ್ ವೈರಲ್
ಅಜ್ಜ ಕೈ ತೋರಿಸಿ ರೈಲು ನಿಲ್ಲಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಸ್ಪಷ್ಟ ಉಲ್ಲೇಖ ಈ ವಿಡಿಯೋದಲ್ಲಿ ಇಲ್ಲ
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯಿಂದ ಕೂಡಿದ ಸಾಕಷ್ಟು ವಿಡಿಯೋಗಳನ್ನು ನಾವು ಈಗಾಗಲೇ ನೋಡಿರುತ್ತೇವೆ. ಕೆಲವೊಂದು ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಕೆಲವೊಂದು ವಿಡಿಯೋಗಳಲ್ಲಿ ಕ್ರಿಯೇಟಿವಿಟಿಯೇ ತುಂಬಿರುತ್ತದೆ. ಮತ್ತೆ ಕೆಲವೊಂದು ವಿಡಿಯೋಗಳು ಬದುಕಿನ ಬಗ್ಗೆ, ಹಲವು ಒಳ್ಳೆ ಒಳ್ಳೆ ಐಡಿಯಾಗಳನ್ನು ನೀಡುತ್ತಿರುತ್ತವೆ. ಕೆಲವು ಸುಂದರ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ. ಅದೇ ರೀತಿ ಈಗ ಇಲ್ಲೊಬ್ಬರು ಅಜ್ಜ ಕೈ ತೋರಿಸಿ ರೈಲು ನಿಲ್ಲಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಸ್ಪಷ್ಟ ಉಲ್ಲೇಖ ಈ ವಿಡಿಯೋದಲ್ಲಿ ಇಲ್ಲ
ಸಾಮಾನ್ಯವಾಗಿ ಬಸ್ ಆಟೋ, ಕ್ಯಾಬ್ (cab) ಮುಂತಾದ ರಸ್ತೆಯಲ್ಲಿ ಚಲಿಸುವ ವಾಹನಗಳನ್ನು ಜನ ಕೈ ತೋರಿಸಿ ಅಥವಾ ಕೈ ಅಡ್ಡ ಹಿಡಿದೋ ಜೋರಾಗಿ ಕೂಗಿಯೋ ನಿಲ್ಲಿಸುತ್ತಾರೆ. ಆದರೆ ಹಳಿಯಲ್ಲಿ ಚಲಿಸುವ ರೈಲು ಎಲ್ಲೆಂದರಲ್ಲಿ ನಿಲ್ಲುವುದಿಲ್ಲ. ಕೇವಲ ರೈಲು ನಿಲ್ದಾಣಗಳಲ್ಲಿ ಮಾತ್ರ ರೈಲು ನಿಲ್ಲುತ್ತದೆ. ಅದಾಗ್ಯೂ ವೃದ್ಧರೊಬ್ಬರು ಬಸ್‌ಗೆ ಕೈ ಅಡ್ಡ ಹಿಡಿದು ನಿಲ್ಲಿಸಿದ್ದಂತೆ ನಿಲ್ದಾಣದಿಂದ ಹೊರಟಿದ್ದ ರೈಲಿಗೆ ಕೈ ಅಡ್ಡ ಹಿಡಿದು ನಿಲ್ಲಿಸಿದ್ದಾರೆ. ಆದರೆ ಅಜ್ಜನಿಗೋಸ್ಕರವೇ ರೈಲು ನಿಲ್ಲಿಸಿದರೋ ಅಥವಾ ಬೇರಾವುದು ತಾಂತ್ರಿಕ ಕಾರಣಕ್ಕೆ ರೈಲು ನಿಲ್ಲಿಸಿದರೊ ಎಂಬುದು ಮಾತ್ರ ತಿಳಿಯುವುದಿಲ್ಲ.
ಆದರೆ ಅಜ್ಜ ಕೈ ಹಿಡಿಯುತ್ತಿದ್ದಂತೆ ರೈಲು ನಿಂತಿದ್ದಂತು ನಿಜ ಜೊತೆಗೆ ಅಜ್ಜ ರೈಲು ಹತ್ತಿ ಹೊರಟಿದ್ದು ಅಷ್ಟೇ ನಿಜ. ಈ ಘಟನೆಯ ವಿಡಿಯೋವನ್ನು ಯಾರೋ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ತುಂಬಾ ಜನ ಅಜ್ಜನ ಸಾಮರ್ಥ್ಯ ಇದು ಎಂಬಂತೆ ಸಖತ್ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು 33 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಜ್ಜ ರೈಲು ನಿಲ್ದಾಣದಲ್ಲಿ (Railway station)ರೈಲು ಹತ್ತುವ ಬದಲು ಬಸ್ ಹತ್ತುವಂತೆ ಕೈ ಹಿಡಿದು ರೈಲೇರಿದ್ದು ಅನೇಕರಿಗೆ ನಗು ಮೂಡಿಸುತ್ತಿದೆ.
ರೈಲು ತಡವಾದರೆ IRCTC ಯಿಂದ ನೀವು ಈ ಸೌಲಭ್ಯ ಪಡೆದುಕೊಳ್ಳಬಹುದು..!
ಸಾಮಾನ್ಯವಾಗಿ ಭಾರತದಲ್ಲಿ ಮಾಡಬೇಡಿ ಎಂಬುದನ್ನೇ ಜನ ಮಾಡೋದು ಹೆಚ್ಚು ರೈಲು ನಿಲ್ದಾಣದಲ್ಲಿ ಹಳಿಯಲ್ಲಿ ನಡೆಯುವುದು, ಟ್ರಾಫಿಕ್‌ನಲ್ಲಿ ಜೀಬ್ರಾ ಕ್ರಾಸಿಂಗ್ ಅನ್ನು ಮೀರಿ ಹೋಗುವುದು. ಹೀಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಜೀವವನ್ನು ಅಪಾಯಕ್ಕೀಡು ಮಾಡಿಕೊಳ್ಳುವವರೇ ಹೆಚ್ಚು.ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಆಗಾಗ ಅನಾಹುತಗಳಾಗುವುದನ್ನು ನೋಡಿದ್ದೇವೆ. ರೈಲು ಬರುತ್ತಿದ್ದರೂ ವೇಗವಾಗಿ ಸಾಗುವ ಧಾವಂತದಲ್ಲಿ ಜೀವವನ್ನು ಅನೇಕರು ಅಪಾಯಕ್ಕೊಡಿದ್ದನ್ನು ನೋಡಬಹುದು. ರೈಲ್ವೆ ಇಲಾಖೆ ಈ ಅಪಾಯಗಳ ಬಗ್ಗೆ ಸದಾಕಾಲ ಮುನ್ನೆಚ್ಚರಿಕೆ ನೀಡುವ ಮೂಲಕ ಅಪಾಯಕ್ಕೊಳಗಾಗದಂತೆ ಜಾಗೃತಿ ಮೂಡಿಸುತ್ತಿರುತ್ತದೆ. ಆದಾಗ್ಯೂ ಕೆಲವರು ವೇಗವಾಗಿ ಹೋಗುವ ಭರದಲ್ಲಿ ಬಾರದ ಲೋಕ ಸೇರುತ್ತಾರೆ. ಅದೇ ರೀತಿ ಇಲ್ಲೊಂದು ಲೆವೆಲ್ ಕ್ರಾಸಿಂಗ್ (Railway Level crossing) ವೇಳೆ ನಡೆದ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದು, ಮೈ ಜುಮ್ಮೆನಿಸುವಂತಿದೆ.
Indian Railways: ಹೀಗಿರುತ್ತೆ ನೋಡಿ ನವದೆಹಲಿ ನವೀಕೃತ ರೈಲು ನಿಲ್ದಾಣ..
ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಅವನೀಶ್ ಶರ್ಮಾ (Awanish sharma) ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಒಂದು ಹಳಿಯ ಮೇಲೆ ರೈಲೊಂದು ಆಗಸ್ಟೇ ಪಾಸ್ ಆಗಿದೆ. ಅದರ ಪಕ್ಕದ ಹಳಿಯಲ್ಲಿ ರೈಲೊಂದು ಬರುತ್ತಿದೆ. ಈ ಹಳಿಗಳ ಪಕ್ಕದಲ್ಲಿ ಹಲವು ಬೈಕ್ ಸವಾರರು ಹಳಿ ಕ್ರಾಸ್ ಮಾಡಲು ಬೈಕ್‌ನ್ನು ನಿಲ್ಲಿಸಿಕೊಂಡಿದ್ದಾರೆ. ಹೀಗೆ ನಿಂತವರು ಇನ್ನೊಂದು ರೈಲು ಬರುವ ಹಳಿಯ ಮೇಲೆಯೇ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ನಿಂತಿದ್ದಾರೆ. ಈ ವೇಳೆ ರೈಲು ದೂರದಲ್ಲಿ ಬರುತ್ತಿರುವುದನ್ನು ನೋಡಿ ಬಹುತೇಕರು ತಮ್ಮ ಬೈಕ್‌ಗಳನ್ನು ಹಿಂದಕ್ಕೆ ಸರಿಸುತ್ತಾರೆ. ಹೀಗೆ ಹಿಂದಕ್ಕೆ ಬೈಕನ್ನು ಸರಿಸುವ ವೇಳೆ ಒಬ್ಬರ ಬೈಕ್ ಟ್ರಾಕ್‌ನಲ್ಲೇ ಸಿಲುಕಿದ್ದು, ಅಷ್ಟರಲ್ಲಿ ರೈಲು ಹತ್ತಿರ ಸಮೀಪಿಸಿದೆ. ಕೂಡಲೇ ಬೈಕ್ ಸವಾರ ತಮ್ಮ ಬೈಕ್‌ನ್ನು ಅಲ್ಲೇ ಬಿಟ್ಟು ಹಿಂದೆ ಸರಿದಿದ್ದಾರೆ. ಪರಿಣಾಮ ಇವರು ಕೂದಲೆಳೆ ಅಂತರದಿಂದ ಪ್ರಾಣ ಉಳಿಸಿಕೊಂಡಿದ್ದರೆ, ಅತ್ತ ಅವರ ಬೈಕ್ ರೈಲಿಗೆ ಸಿಲುಕಿ ಪುಡಿ ಪುಡಿ ಆಗಿದೆ.