ರೈಲು ತಡವಾದರೆ IRCTC ಯಿಂದ ನೀವು ಈ ಸೌಲಭ್ಯ ಪಡೆದುಕೊಳ್ಳಬಹುದು..!

ನಿಮ್ಮ ರೈಲು ತಡವಾದರೆ ನಿಮಗಾಗುವ ತೊಂದರೆಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..? ಪ್ರಯಾಣಿಕರಾಗಿ ನಿಮಗೂ ಕೆಲ ಹಕ್ಕುಗಳಿವೆ. ಅದೇನು ಅಂತೀರಾ..? ಇಲ್ಲಿದೆ ವಿವರ..

passengers have right to avail this facility from irctc if the train is late ash

ರೈಲು ಪ್ರಯಾಣ (Train Journey) ಮಾಡುವವರ ಸಂಖ್ಯೆ ದೇಶದಲ್ಲಿ ಹೆಚ್ಚೇ ಇದೆ. ಅದರಲ್ಲೂ, ಕೆಲವರಂತೂ ದಿನನಿತ್ಯ ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಇದೇ ರೀತಿ, ನೀವೂ ಸಹ ರೈಲಿನಲ್ಲಿ ಪ್ರಯಾಣಿಸುತ್ತಿರುತ್ತೀರಲ್ಲ. ಈ ವೇಳೆ, ಕೆಲವು ಸಮಯದಲ್ಲಿ ರೈಲು ವಿಳಂಬದಿಂದಾಗಿ (Train Late) ನೀವು ತೊಂದರೆಯನ್ನು ಎದುರಿಸಿರಬೇಕು. ಆದರೆ, ಭವಿಷ್ಯದಲ್ಲಿ ರೈಲು ಕೆಲ ಸಮಯ ತಡವಾಗಿ ಬಂದರೆ ನಿಮ್ಮ ಸಮಸ್ಯೆಯನ್ನು ನೀವು ಕಡಿಮೆ ಮಾಡಬಹುದು ಗೊತ್ತಾ..? ಅದ್ಹೇಗೆ ಅಂತೀರಾ..? ಪ್ರಯಾಣಿಕರಾಗಿ (Passengers) ನಿಮಗೂ ಕೆಲವು ಹಕ್ಕುಗಳಿವೆ (Rights) ಅನ್ನೋದು ನಿಮಗೆ ಗೊತ್ತಿದ್ಯಾ..? ಹೌದು, ಇದು ಆಶ್ಚರ್ಯಕರವಾದರೂ ಸತ್ಯ. ಅಂತಹ ಹಕ್ಕಿನ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ. ರೈಲು ತಡವಾದರೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (Indian Railway Catering and Tourism Corporation) (IRCTC) ನಿಮಗೆ ಯಾವ ಸೇವೆಗಳನ್ನು ಉಚಿತವಾಗಿ ನೀಡುತ್ತದೆ ನೋಡಿ..
 
ರೈಲು ತಡವಾದಾಗ IRCTC ಉಚಿತ ಆಹಾರ ನೀಡುತ್ತದೆ
ನಿಮ್ಮ ರೈಲು ವೇಳಾಪಟ್ಟಿಗಿಂತ ತಡವಾಗಿದ್ದರೆ, IRCTC ನಿಮಗೆ ಆಹಾರ ಮತ್ತು ತಂಪು ಪಾನೀಯವನ್ನು ನೀಡುತ್ತದೆ. IRCTC ಯಿಂದ ಈ ಆಹಾರವನ್ನು ನಿಮಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉಚಿತ ಆಹಾರ (Free Food) ಮತ್ತು ತಂಪು ಪಾನೀಯದ (Soft Drink) ನಿಮ್ಮ ಹಕ್ಕನ್ನು ಚಲಾಯಿಸಲು ನೀವು ಹಿಂಜರಿಯುವ ಅಗತ್ಯವಿಲ್ಲ. IRCTC ನಿಮಗೆ ಒದಗಿಸಿದ ಹಕ್ಕನ್ನು ನೀವು ಪಡೆದುಕೊಳ್ಳಿ. ಭಾರತೀಯ ರೈಲ್ವೆ ನಿಯಮಗಳ (Indian Railway Rules) ಪ್ರಕಾರ, ರೈಲು ತಡವಾಗಿ ಬಂದಾಗ ಪ್ರಯಾಣಿಕರಿಗೆ IRCTC ಕ್ಯಾಟರಿಂಗ್ ನೀತಿಯಡಿಯಲ್ಲಿ ಉಪಾಹಾರ ಮತ್ತು ಲಘು ಊಟವನ್ನು ನೀಡಲಾಗುತ್ತದೆ. 

Indian Railways: ಹೀಗಿರುತ್ತೆ ನೋಡಿ ನವದೆಹಲಿ ನವೀಕೃತ ರೈಲು ನಿಲ್ದಾಣ..
 
ಈ ಸೌಲಭ್ಯ ಯಾವಾಗ ದೊರೆಯುತ್ತದೆ..?

IRCTC ನಿಯಮಗಳ ಪ್ರಕಾರ, ಪ್ರಯಾಣಿಕರಿಗೆ ಉಚಿತ ಆಹಾರ ನೀಡಲಾಗುತ್ತದೆ. ಆದರೆ ರೈಲು 20 - 30 ನಿಮಿಷ ತಡವಾದರೆ ಊಟದ ಸೌಲಭ್ಯ ಸಿಗುತ್ತದೆ ಎಂದಲ್ಲ. IRCTC ನೀತಿಯ ಅಡಿಯಲ್ಲಿ, ರೈಲು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ತಡವಾಗಿದ್ದರೆ ಶತಾಬ್ದಿ (Shatabdi) , ರಾಜಧಾನಿ (Rajadhani) ಮತ್ತು ದುರಂತೋವನ್ನು (Duronto) ಒಳಗೊಂಡಿರುವ ಎಕ್ಸ್‌ಪ್ರೆಸ್ ರೈಲುಗಳ (Express Trains) ಪ್ರಯಾಣಿಕರಿಗೆ ಈ ಸೌಲಭ್ಯ ನೀಡಲಾಗುತ್ತದೆ.
 
ಈ ಸೌಲಭ್ಯಗಳನ್ನು IRCTC ಒದಗಿಸುತ್ತದೆ
IRCTC ನೀತಿಯ ಪ್ರಕಾರ, ಉಪಾಹಾರದಲ್ಲಿ (Breakfast) ಚಹಾ ಅಥವಾ ಕಾಫಿ ಮತ್ತು 2 ಬಿಸ್ಕತ್ತುಗಳನ್ನು ನೀಡಲಾಗುತ್ತದೆ. ಹಾಗೆ ಸಂಜೆಯ ಸ್ನ್ಯಾಕ್ಸ್‌ನಲ್ಲಿ (Evening Snack) ಚಹಾ ಅಥವಾ ಕಾಫಿ ಮತ್ತು ನಾಲ್ಕು ಬ್ರೆಡ್ ಸ್ಲೈಸ್‌ಗಳನ್ನು (ಕಂದು/ಬಿಳಿ), ಬಟರ್‌ ಚಿಪೋಟ್ಲೆ ನೀಡಲಾಗುತ್ತದೆ. ಅದೇ ರೀತಿ, IRCTC ಯಿಂದ ಪ್ರಯಾಣಿಕರಿಗೆ ಮಧ್ಯಾಹ್ನದ ಊಟಕ್ಕೆ (Lunch) ಅಥವಾ ರಾತ್ರಿಯ ಊಟಕ್ಕೆ (Dinner) ಅನ್ನ, ದಾಲ್‌ ಮತ್ತು ಉಪ್ಪಿನಕಾಯಿ ಪ್ಯಾಕೆಟ್‌ಗಳನ್ನು ನೀಡಲಾಗುತ್ತದೆ. ಅಥವಾ 7 ಪೂರಿ, ಮಿಕ್ಸ್ ವೆಜ್/ಆಲೂ ಭಜಿ, ಉಪ್ಪಿನಕಾಯಿ ಪ್ಯಾಕೆಟ್ ಮತ್ತು ತಲಾ ಒಂದು ಪ್ಯಾಕೆಟ್ ಉಪ್ಪು ಹಾಗೂ ಮೆಣಸು ನೀಡಲಾಗುತ್ತದೆ.

ಹೌದು, ನೀವೂ ಸಹ ಶತಾಬ್ದಿ, ರಾಜಧಾನಿ ಎಕ್ಸ್‌ಪ್ರೆಸ್‌ ಹಾಗೂ ದುರಂತೋ ರೈಲಿನಲ್ಲಿ ಪ್ರಯಾಣ ಮಾಡಬೇಕಿದ್ದು ಹಾಗೂ ರೈಲು 2 ಗಂಟೆಗೂ ಹೆಚ್ಚು ಕಾಲ ತಡವದರೆ ನೀವೂ ಸಹ IRCTC ಯಿಂದ ಈ ಸೇವೆಗಳನ್ನು ಪಡೆದುಕೊಳ್ಳಬಹುದು. 

ನೀವು ಆನ್ಲೈನ್‌ ಆರ್ಡರ್ ಮಾಡ್ತೀರಾ: ರೈಲಿನಲ್ಲಿ ಬಂದ ಪಾರ್ಸೆಲ್ ಹೆಂಗೆ ಬಿಸಾಕ್ತಾರೆ ನೋಡಿ

Latest Videos
Follow Us:
Download App:
  • android
  • ios