ಸಕತ್ ಸುದ್ದಿಯಲ್ಲಿರೋ ಲಕ್ಷದ್ವೀಪ ಹೇಗಿದೆ? ರೋಚಕ ಮಾಹಿತಿ ನೀಡುತ್ತಲೇ ಸಂಪೂರ್ಣ ದರ್ಶನ ಮಾಡಿಸಿದ ಡಾ.ಬ್ರೋ...
ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿರುವ ಡಾ.ಬ್ರೋ. ಅದರ ಸಂಪೂರ್ಣ ದರ್ಶನ ಮಾಡಿಸಿದ್ದಾರೆ. ರೋಚಕ ಮಾಹಿತಿಯನ್ನೂ ನೀಡಿದ್ದಾರೆ.
ಈಗ ಎಲ್ಲೆಲ್ಲೂ ಲಕ್ಷದ್ವೀಪದ್ದೇ ಹವಾ. ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಲಕ್ಷದ್ವೀಪ ಹಲ್ಚಲ್ ಸೃಷ್ಟಿಸಿಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ 3-4 ಫೋಟೋಗಳಿಂದಲೇ ಈ ಪರಿಯ ಬದಲಾವಣೆ ಆಗಿಬಿಟ್ಟಿದೆ. ಗೂಗಲ್ನಲ್ಲಿ ಲಕ್ಷದ್ವೀಪವನ್ನು ಹುಡುಕಿದವರ ಸಂಖ್ಯೆ ಸಾರ್ವಕಾಲಿಕ ದಾಖಲೆ ಬರೆದಿದೆ. ಭಾರತವನ್ನು ಎದುರು ಹಾಕಿಕೊಂಡ ಮಾಲ್ಡೀವ್ಸ್ಗೆ ಮಾಸ್ಟರ್ಸ್ಟ್ರೋಕ್ ಕೊಟ್ಟಿರೋ ಈ ಲಕ್ಷದ್ವೀಪಕ್ಕೆ ಭೇಟಿ ಕೊಡಲು ಜಗತ್ತಿನಾದ್ಯಂತದ ಪ್ರವಾಸಿಗರು ಇದಾಗಲೇ ಉತ್ಸುಕರಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಂತೂ ಬೈಕಾಟ್ ಮಾಲ್ಡೀವ್ಸ್ ಎನ್ನುತ್ತಲೇ ಲಕ್ಷದ್ವೀಪಕ್ಕೆ ಸ್ವಾಗತ ಎನ್ನುತ್ತಿದ್ದಾರೆ. ಇದರಿಂದ ಪ್ರವಾಸಿಗರಲ್ಲಿ ಇನ್ನಷ್ಟು ಉತ್ಸಾಹ ತುಂಬಿ ತುಳುಕಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಲಕ್ಷದ್ವೀಪದಲ್ಲಿ ಹೂಡಿಕೆ ಮಾಡಲು ಹಲವರು ಉತ್ಸುಕರಾಗಿದ್ದಾರೆ. ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣವೂ ಆಗಲಿದೆ ಎಂದು ಇದಾಗಲೇ ಘೋಷಿಸಲಾಗಿದೆ. ಹೀಗೆ ಲಕ್ಷದ್ವೀಪಕ್ಕೆ ಶುಕ್ರದೆಸೆ ಬರುತ್ತಲೇ ಭಾರತದಲ್ಲಿ ಕಡೆಗಣಿಸಲ್ಪಟ್ಟಿರುವ ಅತ್ಯಂತ ಸುಂದರ ತಾಣಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ.
ಆದರೆ ಅದೆಷ್ಟೋ ಮಂದಿಗೆ ಲಕ್ಷದ್ವೀಪವನ್ನು ಕಣ್ಣಾರೆ ಕಣ್ತುಂಬಿಸಿಕೊಳ್ಳುವ ಅವಕಾಶ ಸಿಗದೇ ಇರಬಹುದು. ಅಥವಾ ಈಕ್ಷಣದಲ್ಲಿ ಇಷ್ಟೆಲ್ಲಾ ಫೇಮಸ್ ಆಗಿರುವ ಲಕ್ಷದ್ವೀಪ ಹೇಗಿರಬಹುದು ಎಂದು ತಿಳಿದುಕೊಳ್ಳುವುದು ಕಷ್ಟ. ಇಂಟರ್ನೆಟ್ನಲ್ಲಿ ಇವುಗಳ ಬಗ್ಗೆ ತಿಳಿದುಬಂದರೂ ನಮ್ಮದೇ ಕನ್ನಡ ಭಾಷೆಯಲ್ಲಿ, ಅಷ್ಟೇ ಸುಂದರವಾಗಿ, ಅಷ್ಟೇ ಸೊಗಸಾಗಿ ಹೇಳುವವರು ಇದ್ದರೆ ಎಷ್ಟು ಚೆನ್ನಾಗಿತ್ತು ಎಂದುಕೊಳ್ಳುವ ಎಲ್ಲರಿಗೂ ಇದೀಗ ಕನ್ನಡದ ಕುವರ ಡಾ.ಬ್ರೋ ಖುಷಿಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಲಕ್ಷದ್ವೀಪದ ಸಂಪೂರ್ಣ ವಿವರಣೆ ನೀಡಿದ್ದಾರೆ.
ಲಕ್ಷದ್ವೀಪವೀಗ ಹಾಟ್ ಬೆಡಗಿಯರ ತಾಣ- ಏನಂದ್ರು ಕೇಳಿ ಈ ಬಾಲಿವುಡ್ ಸುಂದರಿಯರು
ಇಲ್ಲಿ 36 ದ್ವೀಪಗಳು ಮಾತ್ರವಿದೆ. ಆದರೂ ಇವು ಲಕ್ಷದ ರೀತಿಯಲ್ಲಿ ಕಾಣಿಸುವ ಕಾರಣ ಲಕ್ಷದ್ವೀಪ ಎಂಬ ಹೆಸರು ಬಂದಿದೆ ಎನ್ನುವ ಮಾಹಿತಿಯ ಜೊತೆಗೆ ಲಕ್ಷದ್ವೀಪದ ಸಂಪೂರ್ಣ ದರ್ಶನ ಮಾಡಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿರುವ ಕಡ್ಮಟ್ ದ್ವೀಪಕ್ಕೆ ಭೇಟಿ ಕೊಟ್ಟು ಅಲ್ಲಿರುವ ಕುತೂಲಹದ ಮಾಹಿತಿಯನ್ನು ಡಾ.ಬ್ರೋ ಹಂಚಿಕೊಂಡಿದ್ದಾರೆ. ಮಂಗಳೂರು ದ್ವೀಪದಿಂದ ಲಕ್ಷದ್ವೀಪಕ್ಕೂ ತುಂಬಾ ಹತ್ತಿರವಿದೆ ಎಂದಿರುವ ಗಗನ್, ಸರ್ಕಾರಿ ರೆಸಾರ್ಟ್ನಲ್ಲಿ ಕೊಟ್ಟಿರುವ ಅದ್ಭುತ ಸ್ವಾಗತದ ಕುರಿತು ತಮ್ಮದೇ ಆದ ವಿಶೇಷ ರೀತಿಯಲ್ಲಿ ವಿವರಣೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಭಾಗವಾದಾಗ, ಎರಡೂ ದೇಶಗಳು ಲಕ್ಷದ್ವೀಪ ತಮಗೇ ಸೇರಬೇಕು ಎಂದು ಜಗಳ ಮಾಡಿದ್ದರು. ಆದರೆ ಪಾಕಿಸ್ತಾನ ಇಡೀ ಬೆಟಾಲಿಯನ್ ಜೊತೆ ಬರುವುದಕ್ಕೂ ಮುನ್ನ ಭಾರತದ ಇಬ್ಬರೇ ಇಬ್ಬರು ಯೋಧರು ಇಲ್ಲಿ ಭಾರತದ ಧ್ವಜವನ್ನು ಹಾರಿಸಿ ಬಿಟ್ಟಿದ್ದರಿಂದ ಲಕ್ಷದ್ವೀಪ ಭಾರತದ ಪಾಲಿಗೆ ಉಳಿದ ವಿಶೇಷ ಮಾಹಿತಿಯನ್ನೂ ಡಾ.ಬ್ರೋ ಹೇಳಿದ್ದಾರೆ. ಇದೇ ವೇಳೆ ಸಮುದ್ರದ ಮೇಲೆ ಮಾಡಿರುವ ಅಮೋಘ ಸೇತುವೆಯ ಕುರಿತೂ ವಿವರಣೆ ನೀಡಿದ್ದಾರೆ. ಇವರ ಈ ವಿವರಣೆ ಹಾಗೂ ಲಕ್ಷದ್ವೀಪದ ಸೌಂದರ್ಯ ನೋಡಿರುವ ನೆಟ್ಟಿಗರು ಡಾ.ಬ್ರೋ ಅವರಿಗೆ ಕೋಟಿ ಕೋಟಿ ನಮನ ಹೇಳುತ್ತಿದ್ದಾರೆ. ನೀವೇ ನಮ್ಮ ಹೀರೋ ಎಂದೆಲ್ಲಾ ಹಾಡಿ ಕೊಂಡಾಡುತ್ತಿದ್ದಾರೆ.
ಲಕ್ಷದ್ವೀಪದಲ್ಲಿ ಮೋದಿ: ಉಡುಪಿ ಬೀಚ್ಗೂ ಬಂತು ಶುಕ್ರದೆಸೆ- ಅಮಿತಾಭ್, ಸೆಹ್ವಾಗ್ ಹೇಳಿದ್ದೇನು?