ಲಕ್ಷದ್ವೀಪವೀಗ ಹಾಟ್​ ಬೆಡಗಿಯರ ತಾಣ- ಏನಂದ್ರು ಕೇಳಿ ಈ ಬಾಲಿವುಡ್​ ಸುಂದರಿಯರು

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ನಂತರ ಲಕ್ಷದ್ವೀಪದ ಚಿತ್ರಣವೇ ಬದಲಾಗಿದೆ. ಬಾಲಿವುಡ್​ ಬೆಡಗಿಯರು ಲಕ್ಷದ್ವೀಪವನ್ನು ಹಾಡಿ ಹೊಗಳಿದ್ದಾರೆ ಕೇಳಿ... 
 

Bollywood actresses  praises of Lakshadweep after Prime Minister visit suc

ಭಾರತವನ್ನು ಎದುರು ಹಾಕಿಕೊಂಡ ಮಾಲ್ಡೀವ್ಸ್​ಗೆ  ಮಾಸ್ಟರ್​ಸ್ಟ್ರೋಕ್​ ಆಗುತ್ತಲೇ ಇದೆ.  ಭಾರತೀಯರ ಪ್ರವಾಸೋದ್ಯಮದಿಂದಲೇ ಸಮೃದ್ಧಭರಿತವಾಗಿದ್ದ ಮಾಲ್ಡೀವ್ಸ್​ ಇದೀಗ ಜರ್ಜರಿತವಾಗುತ್ತಿದೆ. ಪ್ರಧಾನಿ ನರೇಂದ್ರ  ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ಫೋಟೋಗಳು ಇಡೀ ವಿಶ್ವಾದ್ಯಂತ ಹಲ್​ಚಲ್​ ಸೃಷ್ಟಿಸುತ್ತಿದೆ. ಭಾರತದಲ್ಲಿನ ಕೆಲವರು ಪ್ರಧಾನಿಯವರ ಈ ಭೇಟಿಯ ಉದ್ದೇಶ ತಿಳಿದುಕೊಳ್ಳದೇ ಟ್ರೋಲ್​ ಮಾಡುತ್ತಿದ್ದರೆ, ನರೇಂದ್ರ  ಮೋದಿಯವರ ವಿರುದ್ಧ ಟ್ರೋಲ್​ ಮಾಡಿದ್ದ ಮಾಲ್ಡೀವ್ಸ್​ ಅಲ್ಲಿಯ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ಮಾಲ್ಡೀವ್ಸ್ ಸರ್ಕಾರ ಇದಾಗಲೇ ಅಮಾನತುಗೊಳಿಸಿದೆ. ಮಾಲ್ಡೀವ್ಸ್​ ಸರ್ಕಾರ ಭಾರತದ ಕ್ಷಮೆ ಕೋರಿದ್ದೂ ಆಗಿದೆ. ಬಾಲಿವುಡ್​ ಸೆಲೆಬ್ರಿಟಿಗಳು ಕೂಡ ಇದಾಗಲೇ ಲಕ್ಷದ್ವೀಪಕ್ಕೆ ಭೇಟಿಕೊಡುವ ಅಭಿಮಾನ ಶುರು ಮಾಡುತ್ತಿದ್ದಾರೆ.  ಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಲಕ್ಷದ್ವೀಪದಲ್ಲಿ ಹೂಡಿಕೆ ಮಾಡಲು ಹಲವರು ಉತ್ಸುಕರಾಗಿದ್ದಾರೆ. ಬೈಕಾಟ್​ ಮಾಲ್ಡೀವ್ಸ್​ ಟ್ರೆಂಡ್​ ಶುರು ಆಗುವುದರ ಜೊತೆಗೆ ಇತ್ತ ವೆಲ್​ಕಮ್​ ಟು ಲಕ್ಷದ್ವೀಪ್​ ಹ್ಯಾಷ್​ಟ್ಯಾಗ್​ ಕೂಡ ಶುರುವಾಗಿದೆ. ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣವೂ ಆಗಲಿದೆ ಎಂದು ಇದಾಗಲೇ ಘೋಷಿಸಲಾಗಿದೆ. ಹೀಗೆ ಲಕ್ಷದ್ವೀಪಕ್ಕೆ ಶುಕ್ರದೆಸೆ ಬರುತ್ತಲೇ ಭಾರತದಲ್ಲಿ ಕಡೆಗಣಿಸಲ್ಪಟ್ಟಿರುವ ಅತ್ಯಂತ ಸುಂದರ ತಾಣಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ. ಅದರ ಜೊತೆಗೆ ಉಡುಪಿಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. 

ಮಾಲ್ಡೀವ್ಸ್​ನ ಸೌಂದರ್ಯಕ್ಕೆ ಮಾರು ಹೋಗದ ಬಾಲಿವುಡ್​ ಸೆಲೆಬ್ರಿಟಿಗಳು ಇಲ್ಲವೇ ಎನ್ನಬಹುದೇನೋ. ವೆಕೇಷನ್​ನಲ್ಲಿ ಅಥವಾ ಪಾರ್ಟಿ, ಫಂಕ್ಷನ್​, ಮೋಜು, ಮಸ್ತಿ ಎಲ್ಲವುಗಳಿಗೂ ಸಿನಿಮಾ ತಾರೆಯರ ಮೊದಲ ಆಯ್ಕೆ ಮಾಲ್ಡೀವ್ಸ್​ ಆಗಿತ್ತು. ಆದರೆ ಇದೀಗ ಏಕಾಏಕಿ ಎಲ್ಲವೂ ಬದಲಾಗಿ ಬಿಟ್ಟಿದೆ. ಚೀನಾದ ಜೊತೆ ಕೈಜೋಡಿಸಿ ಭಾರತವನ್ನೇ ಬೈಕಾಟ್​ ಮಾಡಲು ಹುನ್ನಾರ ನಡೆಸಿದ್ದ ಮಾಲ್ಡೀವ್ಸ್​ ಅನ್ನೇ ಈಗ ಭಾರತೀಯರು, ಭಾರತೀಯ ಮನಸ್ಥಿತಿ ಇರುವವರು ಬೈಕಾಟ್​ ಎನ್ನುತ್ತಿದ್ದಾರೆ. ಬಾಲಿವುಡ್​ನಿಂದಾಗಿ ಮಾಲ್ಡೀವ್ಸ್​ ಪ್ರವಾಸೋದ್ಯಮ ಭಾರಿ ಚಿಗುರುತ್ತಲೇ ಸಾಗಿತ್ತು. ಆದರೆ ಇದೀಗ ಪ್ರವಾಸೋದ್ಯಮಕ್ಕೆ ಭಾರಿ ಏಟು ಬಿದ್ದಿದೆ. ಭಾರತದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ ಮಾಲ್ಡೀವ್ಸ್​ ಅನ್ನೇ ಬೈಕಾಟ್​ ಮಾಡುತ್ತಿರುವ ಸೆಲೆಬ್ರಿಟಿಗಳಂತೆಯೇ ಇದೀಗ ಬಾಲಿವುಡ್​ನ ಹಾಟ್​ ಬ್ಯೂಟಿಗಳೂ ಲಕ್ಷದ್ವೀಪದತ್ತ ಗಮನ ಹರಿಸಿದ್ದಾರೆ. 

ಲಕ್ಷದ್ವೀಪದಲ್ಲಿ ಮೋದಿ: ಉಡುಪಿ ಬೀಚ್​ಗೂ ಬಂತು ಶುಕ್ರದೆಸೆ- ಅಮಿತಾಭ್, ಸೆಹ್ವಾಗ್​​ ಹೇಳಿದ್ದೇನು?


ಇದೀಗ ಲಕ್ಷದ್ವೀಪದ ಗುಣಗಾನ ಮಾಡಿದ್ದಾರೆ ಬಾಲಿವುಡ್​ ನಟಿಯರಾದ ಸಾರಾ ಅಲಿ ಖಾನ್​, ಜಾಹ್ನವಿ ಕಪೂರ್​, ಊರ್ವಶಿ ರೌಟೇಲಾ. ಬಿಕಿನಿ ಸುಂದರಿಯರು ಎಂದೇ ಖ್ಯಾತಿ ಪಡೆದಿರುವ ಈ ನಟಿಯರು, ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಳಿಕ ಲಕ್ಷದ್ವೀಪವನ್ನು ಹಾಡಿ ಹೊಗಳಿದ್ದಾರೆ. ಇಂಥ ಒಂದು ನಿಧಿ ನಮ್ಮ ದೇಶದಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆ, ಇನ್ನು ಮುಂದೆ ನಾನು ಇಲ್ಲಿಗೇ ಭೇಟಿ ಕೊಡುವುದು ಎಂದು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಹೇಳಿದ್ದರೆ, ಲಕ್ಷದ್ವೀಪದಂಥ ಅದೆಷ್ಟು ಸುಂದರ ತಾಣಗಳು ನಮ್ಮ ದೇಶದಲ್ಲಿಯೇ ಇದ್ದು, ಇನ್ನು ಅಲ್ಲಿಗೇ ಪ್ರವಾಸ ಬೆಳೆಸುವೆ ಎಂದಿದ್ದಾರೆ ಇನ್ನೋರ್ವ ನಟಿ ಊರ್ವಶಿ ರೌಟೇಲಾ. ಇದಾಗಲೇ ಹಲವಾರು ಕಡೆ ಪ್ರವಾಸ ಮಾಡಿದ್ದು, ಇದೀಗ ನಮ್ಮ ದೇಶದ ಚೆಲುವನ್ನು ಆಸ್ವಾದಿಸುವ ಸಮಯ ಎಂದು ಹಾಡಿ ಹೊಗಳಿದ್ದಾರೆ ಸಾರಾ ಅಲಿ ಖಾನ್​. 

ಇದಾಗಲೇ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​  ಟ್ವೀಟ್​ ಮಾಡುವ ಮೂಲಕ  ಉಡುಪಿ, ಪಾಂಡಿಚೆರಿ, ಅಂಡಮಾನ್​ ಮುಂತಾದ ಬೀಚ್​ಗಳು ಸುಂದರವಾಗಿವೆ. ಭಾರತದಲ್ಲಿ ಇಂಥ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಪ್ರವಾಸೋದ್ಯಮ ವೃದ್ಧಿಸಬೇಕು. ನಿಮಗೆ ತಿಳಿದಿರುವ ಇಂತಹ ಸ್ಥಳಗಳ ಬಗ್ಗೆ ಹೇಳಿ ಎಂದಿದ್ದರು.  ಇದಕ್ಕೆ ರಿಪ್ಲೈ ಮಾಡಿದ್ದ ಅಮಿತಾಭ್​ ಬಚ್ಚನ್​, ನೀವು ಹೇಳುತ್ತಿರುವುದು ಸರಿಯಾಗಿದೆ. ಇದು ಸೂಕ್ತ ಸಮಯ. ನಮ್ಮ ಸ್ಥಳಗಳೇ ಅತ್ಯುತ್ತಮವಾಗಿವೆ. ನಾನು ಅಂಡಮಾನ್​ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇನೆ. ಅವು ತುಂಬ ಸುಂದರವಾದ ಸ್ಥಳಗಳು. ಅಲ್ಲಿನ ಅಂಡರ್​ವಾಟರ್​ ಅನುಭವ ತುಂಬ ಚೆನ್ನಾಗಿದೆ ಎಂದಿದ್ದರು. 

ಲಕ್ಷದ್ವೀಪಕ್ಕೆ ಸ್ವಾಗತ: ಇರುವೆ ಬಿಟ್ಕೊಂಡ ಮಾಲ್ಡೀವ್ಸ್​ಗೆ ಮುಟ್ಟುನೋಡಿಕೊಳ್ಳೋ ಪಾಠ ಕಲಿಸಿದ ಬಾಲಿವುಡ್​!

Latest Videos
Follow Us:
Download App:
  • android
  • ios