Asianet Suvarna News Asianet Suvarna News

ಲಕ್ಷದ್ವೀಪದಲ್ಲಿ ಮೋದಿ: ಉಡುಪಿ ಬೀಚ್​ಗೂ ಬಂತು ಶುಕ್ರದೆಸೆ- ಅಮಿತಾಭ್, ಸೆಹ್ವಾಗ್​​ ಹೇಳಿದ್ದೇನು?

ಲಕ್ಷದ್ವೀಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಉಡುಪಿ ಬೀಚ್​ಗೂ ಶುಕ್ರದೆಸೆ ಬಂದಿದೆ. ಅಷ್ಟಕ್ಕೂ ಆಗಿದ್ದೇನು? 
 

Virender Sehwag and Aitabh Bhachchan about Udupi beach after Maldives contraversy suc
Author
First Published Jan 8, 2024, 5:57 PM IST

ಭಾರತವನ್ನು ಎದುರು ಹಾಕಿಕೊಂಡ ಮಾಲ್ಡೀವ್ಸ್​ಗೆ ಬಾಲಿವುಡ್​ ಸೆಲೆಬ್ರಿಟಿಗಳು ಸೇರಿದಂತೆ ಭಾರತದ ಮೇಲೆ ಪ್ರೀತಿ ಇರುವವರೆಲ್ಲರೂ ಮಾಸ್ಟರ್​ಸ್ಟ್ರೋಕ್​ ಕೊಡುತ್ತಲೇ ಇದ್ದಾರೆ. ಭಾರತೀಯರ ಪ್ರವಾಸೋದ್ಯಮದಿಂದಲೇ ಸಮೃದ್ಧಭರಿತವಾಗಿದ್ದ ಮಾಲ್ಡೀವ್ಸ್​ ಇದೀಗ ಜರ್ಜರಿತವಾಗುತ್ತಿದೆ. ಪ್ರಧಾನಿ ನರೇಂದ್ರ  ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ಫೋಟೋಗಳು ಇಡೀ ವಿಶ್ವಾದ್ಯಂತ ಹಲ್​ಚಲ್​ ಸೃಷ್ಟಿಸುತ್ತಿದೆ. ಭಾರತದಲ್ಲಿನ ಕೆಲವರು ಪ್ರಧಾನಿಯವರ ಈ ಭೇಟಿಯ ಉದ್ದೇಶ ತಿಳಿದುಕೊಳ್ಳದೇ ಟ್ರೋಲ್​ ಮಾಡುತ್ತಿದ್ದರೆ, ನರೇಂದ್ರ  ಮೋದಿಯವರ ವಿರುದ್ಧ ಟ್ರೋಲ್​ ಮಾಡಿದ್ದ ಮಾಲ್ಡೀವ್ಸ್​ ಅಲ್ಲಿಯ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿದೆ. 

ಅದೇ ಇನ್ನೊಂದೆಡೆ, ಲಕ್ಷದ್ವೀಪಕ್ಕೆ ಶುಕ್ರದೆಸೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಲಕ್ಷದ್ವೀಪದಲ್ಲಿ ಹೂಡಿಕೆ ಮಾಡಲು ಹಲವರು ಉತ್ಸುಕರಾಗಿದ್ದಾರೆ. ಬೈಕಾಟ್​ ಮಾಲ್ಡೀವ್ಸ್​ ಟ್ರೆಂಡ್​ ಶುರು ಆಗುವುದರ ಜೊತೆಗೆ ಇತ್ತ ವೆಲ್​ಕಮ್​ ಟು ಲಕ್ಷದ್ವೀಪ್​ ಹ್ಯಾಷ್​ಟ್ಯಾಗ್​ ಕೂಡ ಶುರುವಾಗಿದೆ. ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣವೂ ಆಗಲಿದೆ ಎಂದು ಇದಾಗಲೇ ಘೋಷಿಸಲಾಗಿದೆ. ಹೀಗೆ ಲಕ್ಷದ್ವೀಪಕ್ಕೆ ಶುಕ್ರದೆಸೆ ಬರುತ್ತಲೇ ಭಾರತದಲ್ಲಿ ಕಡೆಗಣಿಸಲ್ಪಟ್ಟಿರುವ ಅತ್ಯಂತ ಸುಂದರ ತಾಣಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ. ಅದರ ಜೊತೆಗೆ ಉಡುಪಿಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. 

ಲಕ್ಷದ್ವೀಪಕ್ಕೆ ಸ್ವಾಗತ: ಇರುವೆ ಬಿಟ್ಕೊಂಡ ಮಾಲ್ಡೀವ್ಸ್​ಗೆ ಮುಟ್ಟುನೋಡಿಕೊಳ್ಳೋ ಪಾಠ ಕಲಿಸಿದ ಬಾಲಿವುಡ್​!

ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಮಾಡಿರುವ ಟ್ವೀಟ್​ ಸಾಕಷ್ಟು ವೈರಲ್​ ಆಗಿದ್ದು, ಅದಕ್ಕೆ ಬಾಲಿವುಡ್ ಬಿಗ್​-ಬಿ ಅಮಿತಾಭ್​ ಬಚ್ಚನ್​ ರಿಪ್ಲೈ ಮಾಡುವುದರ ಜೊತೆಗೆ ಉಡುಪಿ ಬೀಚ್​ನ ಹೆಸರೂ ಮುನ್ನೆಲೆಗೆ ಬಂದಿದೆ. ಉಡುಪಿ, ಪಾಂಡಿಚೆರಿ, ಅಂಡಮಾನ್​ ಮುಂತಾದ ಬೀಚ್​ಗಳು ಸುಂದರವಾಗಿವೆ. ಭಾರತದಲ್ಲಿ ಇಂಥ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಪ್ರವಾಸೋದ್ಯಮ ವೃದ್ಧಿಸಬೇಕು. ನಿಮಗೆ ತಿಳಿದಿರುವ ಇಂತಹ ಸ್ಥಳಗಳ ಬಗ್ಗೆ ಹೇಳಿ ಎಂದು ವೀರೇಂದ್ರ ಸೆಹ್ವಾಗ್​ ಟ್ವೀಟ್​ ಮಾಡಿದ್ದಾರೆ. ಇದರಲ್ಲಿ ಅವರು ಉಡುಪಿಯ ಬಗ್ಗೆಯೂ ಹಾಡಿ ಹೊಗಳಿದ್ದಾರೆ.   

ಇದಕ್ಕೆ ರಿಪ್ಲೈ ಮಾಡಿರುವ ಅಮಿತಾಭ್​ ಬಚ್ಚನ್​, ನೀವು ಹೇಳುತ್ತಿರುವುದು ಸರಿಯಾಗಿದೆ. ಇದು ಸೂಕ್ತ ಸಮಯ. ನಮ್ಮ ಸ್ಥಳಗಳೇ ಅತ್ಯುತ್ತಮವಾಗಿವೆ. ನಾನು ಅಂಡಮಾನ್​ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇನೆ. ಅವು ತುಂಬ ಸುಂದರವಾದ ಸ್ಥಳಗಳು. ಅಲ್ಲಿನ ಅಂಡರ್​ವಾಟರ್​ ಅನುಭವ ತುಂಬ ಚೆನ್ನಾಗಿದೆ ಎಂದಿದ್ದಾರೆ. ಈ ಟ್ವೀಟ್​ ವೈರಲ್​ ಆಗುತ್ತಲೇ ಸೋಷಿಯಲ್​  ಮೀಡಿಯಾಗಳಲ್ಲಿ ಉಡುಪಿಯ ಬಗ್ಗೆಯೂ ಹುಡುಕಾಟ ಜೋರಾಗಿದೆ. ಉಡುಪಿಯ ಬಗ್ಗೆ ಅರಿವಿಲ್ಲದ ಹೊರ ರಾಜ್ಯಗಳವರು ಇಲ್ಲಿಯ ಬೀಚ್​ ಬಗ್ಗೆ ಸರ್ಚ್​ ಮಾಡುತ್ತಿದ್ದಾರೆ.   ಅದೇ ಇನ್ನೊಂದೆಡೆ,  ಅಕ್ಷಯ್​ ಕುಮಾರ್​ ಕಂಗನಾ ರಣಾವತ್​, ಸಚಿನ್​ ತೆಂಡೂಲ್ಕರ್​, ಸುರೇಶ್ ರೈನಾ, ಇರ್ಫಾನ್​ ಪಠಾಣ್​ ಸೇರಿದಂತೆ ವಿವಿಧ ಕ್ಷೇತ್ರಗಳ  ಸೆಲೆಬ್ರಿಟಿಗಳು ಲಕ್ಷದ್ವೀಪಕ್ಕೆ ವೆಲ್​ಕಮ್​  ಟ್ರೆಂಡ್​ ಶುರು ಮಾಡಿದ್ದಾರೆ.

ಶ್ರೀರಾಮನ ಅವಹೇಳನ, ಲವ್​ ಜಿಹಾದ್​ಗೆ ಪ್ರೇರಣೆ: ಅನ್ನಪೂರ್ಣಿ, ನಯನತಾರಾ ವಿರುದ್ಧ ಎಫ್​ಐಆರ್ ದಾಖಲು
 

Follow Us:
Download App:
  • android
  • ios