ಸೋಮಾಲಿಯಾ ಕಡಲ್ಗಳ್ಳರ ಮನೆಯಲ್ಲಿ ಡಾ.ಬ್ರೋ! ಇರೋದ್ ಒಂದೇ ಹೃದಯ, ಎಷ್ಟ್​ ಅಂತ ಗೆಲ್ತಿಯಾ ದೇವ್ರು ಎಂದ ಫ್ಯಾನ್ಸ್​

ಡಾ.ಬ್ರೋ ಖ್ಯಾತಿಯ ಗಗನ್​ ಅವರು ಸೋಮಾಲಿಯಾ ದೇಶಕ್ಕೆ ಭೇಟಿ ನೀಡಿ ಅಲ್ಲಿನ ಕಡಲ್ಗಳನ ಮನೆಗೇ ಹೋಗಿ  ಮಾತನಾಡಿಸಿದ್ದಾರೆ. ಇವರ ಧೈರ್ಯಕ್ಕೆ ಫ್ಯಾನ್ಸ್​ ಮೆಚ್ಚುಗೆ ಜೊತೆ ಆತಂಕವನ್ನೂ ಸೂಚಿಸಿದ್ದಾರೆ. 
 

Dr Bro visited Somalia and spoke to the Pirates there  Fans have expressed concern suc

ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ  ನಮಸ್ಕಾರ​ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇವರ ಹೆಸರು ಗಗನ್​. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ.  ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್​ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ.  
 

 ಇದೀಗ ಗಗನ್​ ಅವರು, ಸೋಮಾಲಿಯಾಕ್ಕೆ ಭೇಟಿ ನೀಡಿದ್ದು ಅಲ್ಲಿನ ಪರಿಚಯ ಮಾಡಿಸಿದ್ದಾರೆ. ಪುನಃ ಗಗನ್​ ಅವರು ಈ ಬಾರಿಯೂ ಅಕ್ಷರಶಃ ಜೀವವನ್ನು ಪಣಕ್ಕಿಟ್ಟು ಅಲ್ಲಿಯ ಕೆಲವು ವಿಡಿಯೋ ಮಾಡಿದ್ದಾರೆ. ಸದಾ ಬಂದೂಕುಧಾರಿಗಳು ಹಾಗೂ ಕಡಲ್ಗಳ್ಳರಿಂದ ತುಂಬಿ ಹೋಗಿರುವ ಸೋಮಾಲಿಯಾದಲ್ಲಿ 1990ರಲ್ಲಿ ದಶಕದಲ್ಲಿ ಆಗಿರುವ ಯುದ್ಧದ ನಂತರ ಪರಿಣಾಮ ಬಹಳ ಭೀಕರವಾದದ್ದು. ವಿದೇಶಿಗರು ಇಲ್ಲಿ ವಿಡಿಯೋ ಮಾಡುವುದು ದೂರದ ಮಾತು. ಇಲ್ಲಿಯ ಜನರ ಬಳಿ ಮಾತನಾಡುವುದೂ ಪ್ರಾಣಕ್ಕೆ ಸಂಚಕಾರ ತಂದುಕೊಂಡಂತೆಯೇ ಸರಿ. ಆದರೂ ಗಗನ್​ ಅವರು ಇಲ್ಲಿಯ ಪ್ರದೇಶಗಳ ಪರಿಚಯ ಮಾಡಿಸಿದ್ದಾರೆ.  ಟೂರಿಸ್ಟ್​ಗಳ ಸ್ವರ್ಗ ಎನ್ನಿಸಿದ ಲಕ್ಸುರಿ ಹೋಟೆಲ್​ನ ಕಥೆ ಹಾಗೂ ಕೆಲವು ಪ್ರೇಕ್ಷಣೀಯ ಸ್ಥಳಗಳು ಯುದ್ಧದ ನಂತರ ಹೇಗೆ ಹಾಳಾಗಿದೆ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.

ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಖುಷ್​

ಇಷ್ಟಾಗುತ್ತಿದ್ದಂತೆಯೇ ಅಲ್ಲಿಯ ಜನರು ಇವರ ಮೇಲೆ ದಾಳಿ ಮಾಡಿ ವಿಡಿಯೋ ಡಿಲೀಟ್​  ಮಾಡುವಂತೆ ಹೇಳಿದ್ದಾರೆ. ಇದರ ಬಗ್ಗೆ ಮೊದಲೇ ತಮಗೆ ಅರಿವಿದ್ದಿದ್ದರಿಂದ ಎಲ್ಲಾ ವಿಡಿಯೋಗಳನ್ನೂ ಬೇರೆ ಕಡೆ ಟ್ರಾನ್ಸ್​ಫರ್​ ಮಾಡಿಕೊಂಡಿರುವುದಾಗಿ ಗಗನ್​ ತಿಳಿಸಿದ್ದಾರೆ. ಅವರ ಮೊಬೈಲ್​ನಲ್ಲಿದ್ದ ವಿಡಿಯೋಗಳನ್ನು ಅಲ್ಲಿಯ ಜನ ಡಿಲೀಟ್​ ಮಾಡಿದ್ದಾರೆ. ಆದರೆ ಮೊದಲೇ ಅವುಗಳನ್ನು ಬೇರೆ ಕಡೆ ಟ್ರಾನ್ಸ್​ಫರ್​ ಮಾಡಿಕೊಂಡಿದ್ದ ಕಾರಣ, ಅವುಗಳನ್ನು ತೋರಿಸಲಾಗಿದೆ. ಇದಿಷ್ಟೇ ಅಲ್ಲ, ಗಗನ್​ ಅವರು ನೇರವಾಗಿ ಕಡಲ್ಗಳನ ಮನೆಗೇ ಹೋಗಿ ಅಲ್ಲಿರುವ ಕಡಲ್ಗಳನೊಬ್ಬನನ್ನು ಮಾತನಾಡಿಸಿದ್ದಾರೆ. ತಾವು ಹೇಗೆ ಹಡಗನ್ನು ದರೋಡೆ ಮಾಡಿ ಹೇಗೆ ಕೆಲಸ ಮಾಡುತ್ತೇವೆ ಎಂಬ ಬಗ್ಗೆ ಆ ಕಳ್ಳ ಮಾತನಾಡಿದ್ದಾನೆ. ಗಗನ್​  ಅವರ ಈ ಸಾಹಸಕ್ಕೆ ಸಹಸ್ರಾರು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇರುವುದು ಒಂದೇ ಹೃದಯ, ಎಷ್ಟು ಸಲ ಅಂತ ಗೆಲ್ತಿಯಾ ಗುರೂ ಎಂದಿದ್ದಾರೆ. ಸೋಮಾಲಿಯಾದ ಸ್ಥಿತಿ ನೋಡಿ ಇನ್ನು ಕೆಲವರು ಭಾರತದಲ್ಲಿ ಹುಟ್ಟಿದ್ದಕ್ಕೆ ಪುಣ್ಯ ಮಾಡಿರ್ಬೇಕು ಎಂದೂ ಹೇಳುತ್ತಿದ್ದಾರೆ. 

ಅಂದಹಾಗೆ ಗಗನ್​ ಕುರಿತು ಒಂದಿಷ್ಟು ಹೇಳಲೇಬೇಕು. ಬೆಂಗಳೂರಿನಲ್ಲಿ  ಹುಟ್ಟಿ ಬೆಳೆದಿರೋ ಗಗನ್​, ಹುಟ್ಟಿದ್ದು ಅರ್ಚಕರ ಮಗನಾಗಿ. ಇವರ ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿ ಪದ್ಮಾ ಗೃಹಿಣಿ.  ಗಗನ್ ಅವರಿಗೆ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದ ಗಗನ್​ ಅವರು,  ಖುದ್ದು  ದೇವಸ್ಥಾನದ ಪೂಜೆ ಮಾಡುವುದೂ ಉಂಟು.  ಓದಿಗಿಂತ ಹೆಚ್ಚಾಗಿ  ಹಾಡು, ನೃತ್ಯ, ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರೋ ಗಗನ್​ ಕೀರ್ತಿ ಈಗ ಕರ್ನಾಟಕದಾಚೆಗೂ ಸಾಗಿ, ದೇಶದಿಂದ ವಿದೇಶಕ್ಕೂ ಹೋಗಿದೆ.

ಚಿರತೆಯನ್ನು ಡಾ.ಬ್ರೋ ಹೊಗಳ್ತಿದ್ರೆ, ಸಿಟ್ಟಿಗೆದ್ದ ಸಿಂಹ ಅವ್ರ ಮೈಮೇಲೆ ಮೂತ್ರ ಮಾಡೋದಾ?

Latest Videos
Follow Us:
Download App:
  • android
  • ios