ಭೂತ-ಪ್ರೇತಗಳ ದ್ವೀಪದಲ್ಲಿ ಡಾ.ಬ್ರೋ! ಹತ್ರ ಹೋದ್ರೆ ಅಲ್ಲೇ ಮಿಸ್ಸಿಂಗ್, ವಾಪಸಾಗೋ ಮಾತೇ ಇಲ್ಲ...
ಭೂತ-ಪ್ರೇತಗಳ ದ್ವೀಪದಲ್ಲಿ ಡಾ.ಬ್ರೋ! ಹತ್ರ ಹೋದ್ರೆ ಅಲ್ಲೇ ಮಿಸ್ಸಿಂಗ್, ವಾಪಸಾಗೋ ಮಾತೇ ಇಲ್ಲ. ಏನಿದು ದ್ವೀಪ ರಾಷ್ಟ್ರ?
ಡಾ.ಬ್ರೋ ಎಂದೇ ಫೇಮಸ್ ಆಗಿರೋ ಕನ್ನಡದ ಯುವಕ ಗಗನ್, ಒಂದಕ್ಕಿಂತ ಒಂದು ಭಯಾನಕ ರಾಷ್ಟ್ರಗಳಿಗೆ ಹೋಗಿ ಅಲ್ಲಿಯ ಮಾಹಿತಿ ಕೊಟ್ಟಿದ್ದಾರೆ. ತಾಲಿಬಾನ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ಅಸಾಧ್ಯ ಎನ್ನುವ ದೇಶಗಳಿಗೂ ಹೋಗಿದ್ದಲ್ಲದೇ, ತಾಲಿಬಾನ್ನಲ್ಲಿರೋ ಭಯೋತ್ಪಾದಕರನ್ನೂ ಮಾತನಾಡಿರುವ ಧೈರ್ಯ ತೋರಿದ್ದಾರೆ. ಸೋಮಾಲಿಯಾದ ಕಡಲ್ಗಳ್ಳರ ಮನೆಗೂ ನುಗ್ಗಿರೋ ಗಗನ್, ಅವರನ್ನೂ ಮಾತನಾಡಿಸಿ ಬಂದಿದ್ದಾರೆ. ಯಾವ ದೇಶಕ್ಕೆ ಹೋದರೂ ತಮಗೆ ಬರುವ ಅಲ್ಪಸ್ವಲ್ಪ ಇಂಗ್ಲಿಷ್, ಹಿಂದಿ ಭಾಷೆಯಲ್ಲಿಯೇ ಮಾತನಾಡಿಸಿ, ಅಪ್ಪಟ ಕನ್ನಡದಲ್ಲಿ ಅದರ ಮಾಹಿತಿ ನೀಡುವ ಡಾ.ಬ್ರೋ ಕನ್ನಡಿಗರ ನೆಚ್ಚಿನ ಯುವಕ ಆಗಿದ್ದಾರೆ. ಮನೆಮನೆ ಮಾತಾಗಿದ್ದಾರೆ. ಹೀಗೆಲ್ಲಾ ದೇಶ-ವಿದೇಶ ಸುತ್ತಾಡುತ್ತಿರುವ ಡಾ.ಬ್ರೋ ಇದೀಗ ಭೂತ-ಪ್ರೇತಗಳು ಇರುವ ದ್ವೀಪರಾಷ್ಟ್ರ ಒಂದಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿನ ರೋಚಕ ಅನುಭವಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ದ್ವೀಪದ ಹೆಸರು ಜಿಬುಟಿ. ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಜನಸಂಖ್ಯೆಯ ಭೂಖಂಡ ಆಫ್ರಿಕಾದಲ್ಲಿರುವ ಪುಟ್ಟ ರಾಷ್ಟ್ರವಿದು. ಇದರ ಬಗ್ಗೆ ರೋಚಕ ಅನುಭವಗಳನ್ನು ಡಾ.ಬ್ರೋ ಹೇಳಿದ್ದಾರೆ. ಪುಟಗೋಸಿ ಅಗಲದ ದೇಶಕ್ಕೆ ಯಾಕಿಷ್ಟು ಬೇಡಿಕೆ ಎಂಬ ಶೀರ್ಷಿಕೆ ಕೊಟ್ಟು ಅಲ್ಲಿಯ ಮಾಹಿತಿ ನೀಡಿದ್ದಾರೆ. ಅಸಲಿಗೆ ಹೇಳಬೇಕೆಂದರೆ, ಈ ದೇಶದ ವಿಸ್ತೀರ್ಣ ಕೇವಲ 23 ಸಾವಿರದ 200 ಚದರ ಕಿ.ಮೀ. ಹಾಗೆ ಹೇಳುವುದಾದರೆ ಇದು ಕೇರಳ ರಾಜ್ಯಕ್ಕಿಂತಲೂ ಕಡಿಮೆ ವಿಸ್ತೀರ್ಣ ಹೊಂದಿರುವ ದ್ವೀಪ ರಾಷ್ಟ್ರ. ಜಿಬುಟಿ ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿದೆ. ಇದೇ ಕಾರಣಕ್ಕೆ ಬಲಾಢ್ಯ ರಾಷ್ಟ್ರಗಳ ಮಿಲಿಟರಿಗೆ ಇದೇ ಅಚ್ಚುಮೆಚ್ಚಿನ ತಾಣ. ಇದರ ಆರ್ಥಿಕತೆ ನಡೆಯುತ್ತಿರುವುದೇ ಚೀನಿ ಸಾಲದ ಆಧಾರದಲ್ಲಿ. ಅಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಹಡಗುಗಳ ಸಂಚಾರ ಮಾರ್ಗವಾಗಿರುವ ಪ್ರಸಿದ್ಧ ಸುಯೇಜ್ ಕಾಲುವೆ, ಕೆಂಪು ಸಮುದ್ರ ಮತ್ತು ಗಲ್ಫ್ ಆಫ್ ಏಡನ್‌ಗೂ ಇದರ ನಂಟಿದ್ದು, ಇದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಡಾ.ಬ್ರೋ ನೀಡಿದ್ದಾರೆ.
ಅರೆರೆ! ಇಲ್ಲಿ ನಿಂತು ಡಾ.ಬ್ರೋ ಇದೇನ್ ಮಾಡ್ತಿದ್ದಾರೆ? ಚೀನಾದಲ್ಲಿ ನಕ್ಕು ನಗಿಸುವ ಆಟವಿದು!
ಅಷ್ಟಕ್ಕೂ ಡಾ.ಬ್ರೋ ಹೇಳಿರುವ ಭಯಾನಕ ಸ್ಟೋರಿಯೂ ಇದರಲ್ಲಿ ಇದೆ. ಈ ದ್ವೀಪವನ್ನು ಅಲ್ಲಿಯ ಜನ ಸೈತಾನ್ ಎಂದು ಕರೆಯುತ್ತಾರಂತೆ. ಅರ್ಥಾತ್ ಭೂತ-ಪ್ರೇತಗಳು ಇರುವ ಜಾಗ ಎಂದು. ಇದಕ್ಕೆ ಕಾರಣವೇನೆಂದರೆ, ಈ ದ್ವೀಪದ ಸಮೀಪ ಹೋದವರು ಯಾರೂ ವಾಪಸ್ ಬರುವುದೇ ಇಲ್ಲವಂತೆ. ಹಿಂದೆ ಹಡಗಿನಲ್ಲಿ ಹೋಗಿದ್ದ ಮೀನುಗಾರರ ಗುಂಪು ವಾಪಸಾಗಲೇ ಇಲ್ಲವಂತೆ. ಇಲ್ಲಿನ ಸುದ್ದಿ ಕೇಳಿದ ಪ್ರಯಾಣಿಕನೊಬ್ಬ ತಾನೂ ನೋಡೇ ಬಿಡೋಣ ಎಂದು ದ್ವೀಪದ ಸಮೀಪ ಹೋದಾಗ ಚಿತ್ರ-ವಿಚಿತ್ರ ಪ್ರಾಣಿಗಳು ಎದುರಾಗಿ ಸತ್ತೆನೋ ಎದ್ದೆನೋ ಎಂದು ವಾಪಸ್ ಓಡಿ ಬಂದಿರುವ ಬಗ್ಗೆ ಡಾ.ಬ್ರೋ ತಿಳಿಸಿದ್ದು, ಇದೇ ಕಾರಣಕ್ಕೆ ಯಾರೂ ಅದರ ಸಮೀಪ ಹೋಗುವುದಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ.
ಅಂದಹಾಗೆ, ಚೀನಾ ಸೇನೆ ಮೊಟ್ಟ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಸ್ಥಾಪಿಸಿದ ಬೃಹತ್ ಮಿಲಿಟರಿ ನೆಲೆ ಜಿಬುಟಿಯಲ್ಲಿದೆ ಎನ್ನುವ ಮಾಹಿತಿ ಇದೆ. ಇದನ್ನು 590 ದಶಲಕ್ಷ ಡಾಲರ್ (ಭಾರತದ ರೂಪಾಯಿಗೆ ಹೋಲಿಸಿದರೆ ಸುಮಾರು ನಾಲ್ಕೂವರೆ ಸಾವಿರ ಕೋಟಿ ರೂಪಾಯಿ) ವೆಚ್ಚದಲ್ಲಿ ಇದನ್ನು 2017ರಲ್ಲಿ ಸ್ಥಾಪಿಸಿದೆ. 10 ಸಾವಿರಕ್ಕೂ ಹೆಚ್ಚು ಚೀನಿ ಯೋಧರ ಪಡೆ ಅಲ್ಲಿ ಕಾರ್ಯನಿರತವಾಗಿದೆ.
ಜಿಬುಟಿಯಲ್ಲಿ ತಯಾರಿಸೋ ಫ್ರೆಂಚ್ ಬ್ರೆಡ್ ಮಹತ್ವ ತಿಳಿಸಿದ ಡಾ. ಬ್ರೋ