ಪ್ರತಿಯೊಂದು ದೇಶವೂ ತನ್ನದೇ ಆದ ಆಹಾರ ಪದ್ಧತಿಯನ್ನು ಹೊಂದಿದೆ. ಕೆಲ ಆಹಾರಗಳು ವಲಸಿಗರ ಜೊತೆಗೆ ಆಯಾ ದೇಶಕ್ಕೆ ಬಂದಿರುತ್ತದೆ. ಜಿಬುಟಿ ಕೂಡ ಫ್ರೆಂಚ್ ಆಹಾರವನ್ನು ಪಾಲಿಸ್ತಿದೆ. ಅಲ್ಲಿನ ಸ್ಪೇಷಲ್ ಏನು, ಹೇಗೆ ತಯಾರಿಸ್ತಾರೆ ಎಂಬ ವಿವರ ಇಲ್ಲಿದೆ.  

ಡಾಕ್ಟರ್ ಬ್ರೋ ಅಂದ್ರೆ ಗಗನ್ ಜಿಬುಟಿ ದೇಶಕ್ಕೆ ಹೋಗಿ ಬಂದಿದ್ದಾರೆ. ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಜಿಬುಟಿ ದೇಶದ ಬಗ್ಗೆ ಅವರು ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದಾಗಿರುವ ಜಿಬುಟಿ ಜನರ ಆಹಾರ ಬ್ರೆಡ್. ನಾವು ತಿನ್ನುವ ಸಾಮಾನ್ಯ ಬ್ರೆಡ್ ಅವರು ತಿನ್ನೋದಿಲ್ಲ. ಅವರು ನಿತ್ಯ ಸೇವನೆ ಮಾಡೋದು ಫ್ರೆಂಚ್ ಬ್ರೆಡ್. ಉದ್ದುದ್ದ ಇರುವ ಈ ಫ್ರಾನ್ಸ್ ಬ್ರೆಡ್ ಅಲ್ಲಿ ನಿತ್ಯದ ಆಹಾರವಾಗಿದೆ. ಎಲ್ಲಿ ಜಿಬುಟಿ, ಎಲ್ಲಿ ಫ್ರಾನ್ಸ್ ಎನ್ನುವ ಗಗನ್, ಜಿಬುಟಿಯಲ್ಲೂ ಜನರು ಫ್ರಾನ್ಸ್ ಬ್ರೆಡ್ ನೆಚ್ಚಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಅದರ ರುಚಿ ಕೂಡ ನೋಡಿದ ಡಾ. ಬ್ರೋ ಚೆನ್ನಾಗಿದೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವಿಂದು ಫ್ರೆಂಚ್ ಬ್ರೆಡ್, ಜಿಬುಟಿ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

ಫ್ರೆಂಚ್ ಬ್ರೆಡ್ (French Bread) ಜಿಬುಟಿಯಲ್ಲಿ ಪ್ರಸಿದ್ಧಿಪಡೆಯಲು ಕಾರಣವೇನು? : 1862 ರಲ್ಲಿ ಫ್ರಾನ್ಸ್ ವಸಾಹತುಶಾಹಿಯಾಗಿ ಜಿಬುಟಿ (Djibouti) ಯನ್ನು ಪಡೆದಿತ್ತು. 1977 ರಲ್ಲಿ ಜಿಬುಟಿ ಸ್ವಾತಂತ್ರ್ಯ ಪಡೆಯುವವರೆಗೆ ಫ್ರಾನ್ಸ್ ಅಧಿಕೃತವಾಗಿ ಜಿಬುಟಿಯನ್ನು ನಿಯಂತ್ರಿಸಿತು. ಜಿಬುಟಿ ಫ್ರಾನ್ಸ್‌ನೊಂದಿಗೆ ಮಿಲಿಟರಿ ಮತ್ತು ಆರ್ಥಿಕ ಒಪ್ಪಂದಗಳನ್ನು ನಿರ್ವಹಿಸುತ್ತದೆ. ಇದು ನಿರಂತರ ಭದ್ರತೆ ಮತ್ತು ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಹಾಗಾಗಿ ಇಲ್ಲಿ ಫ್ರೆಂಚ್ ಬ್ರೆಡ್ ಪ್ರಸಿದ್ಧಿಪಡೆದಿದೆ.

ಉಪವಾಸ ಮಾಡೋದ್ರಿಂದ ನಿಜವಾಗ್ಲೂ ದೇಹದ ವಿಷ ಕಡಿಮೆಯಾಗುತ್ತಾ?

ಜಿಬುಟಿ ಉಪಹಾರವೇನು? : ಉಪಹಾರ ಜಿಬುಟಿ ಜನರಿಗೆ ಒಂದು ಪ್ರಮುಖ ಊಟವಾಗಿದೆ. ಅವರು ಸಾಮಾನ್ಯವಾಗಿ ಕೆಲವು ರೀತಿಯ ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಲಾಹೋ ಎಂದು ಕರೆಯಲ್ಪಡುವ ಪ್ಯಾನ್‌ಕೇಕ್ ತರಹದ ಬ್ರೆಡ್ ಸೇವನೆ ಮಾಡ್ತಾರೆ. ಇದನ್ನು ಸೂಪ್‌ನೊಂದಿಗೆ ತಿನ್ನುತ್ತಾರೆ. 

ಮೈಸೂರಲ್ಲಿ ಶಿಲ್ಪಾ ಶೆಟ್ಟಿ ವೆರೈಟಿ ವೆರೈಟಿ ಮೈಸೂರ್ ಪಾಕ್​ ಸವಿತಿದ್ರೆ ನೋಡೋರ ಬಾಯಲ್ಲಿ ನೀರೋ ನೀರು!

ಫ್ರೆಂಚ್ ಬ್ರೆಡ್ : ಜಿಬುಟಿ ಜನರು ಹೆಚ್ಚು ಸೇವನೆ ಮಾಡುವ ಫ್ರೆಂಚ್ ಬ್ರೆಡನ್ನು ಫ್ರಾನ್ಸ್ ನಲ್ಲಿ ಬ್ಯಾಗೆಟ್ ಎಂದು ಕರೆಯಲಾಗುತ್ತದೆ. ಅದನ್ನು ಗೋಧಿ ಹಿಟ್ಟು, ನೀರು, ಯೀಸ್ಟ್ ಮತ್ತು ಉಪ್ಪು ಈ ನಾಲ್ಕು ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಈ ನಾಲ್ಕು ಪದಾರ್ಥದಿಂದ ತಯಾರಾಗುವ ಬ್ರೆಡನ್ನು ಸಾಂಪ್ರದಾಯಿಕ ಫ್ರೆಂಚ್ ಬ್ರೆಡ್ ಎಂದು ಕರೆಯಲಾಗುತ್ತದೆ. ಆದ್ರೆ ಈಗ ಅದಕ್ಕೆ ಬೇರೆ ಪದಾರ್ಥಗಳನ್ನು ಬೆರೆಸುವ ರೂಢಿ ಬೇರೆ ದೇಶಗಳಲ್ಲಿದೆ. ಬ್ಯಾಗೆಟ್ ಸುಮಾರು 5 ರಿಂದ 6 ಸೆಂ.ಮೀ ವ್ಯಾಸವನ್ನು ಹೊಂದಿರುತ್ತದೆ. ಸುಮಾರು 65 ಸೆಂ.ಮೀ ಉದ್ದವನ್ನು ಹೊಂದಿರುತ್ತದೆ. ಬ್ಯಾಗೆಟ್ ಕ್ಲಾಸಿಕ್ ಒಂದು ಗರಿಗರಿಯಾದ ಕ್ರಸ್ಟ್ನೊಂದಿಗೆ ಬಿಳಿಯಾಗಿರುತ್ತದೆ ಮತ್ತು ಯೀಸ್ಟ್ನೊಂದಿಗೆ ಹುಳಿಯಾಗುತ್ತದೆ. ಫ್ರಾನ್ಸ್‌ ಕಾನೂನಿನ ಪ್ರಕಾರ, ಉದ್ದವಾದ ಬ್ರೆಡ್ ಗೆ ಎಣ್ಣೆ ಅಥವಾ ಕೊಬ್ಬನ್ನು ಸೇರಿಸಲಾಗುವುದಿಲ್ಲ.

ಫ್ರೆಂಚ್ ಬ್ರೆಡ್ ರೆಸಿಪಿ :
ಫ್ರೆಂಚ್ ಬ್ರೆಡ್ ಗೆ ಬೇಕಾಗುವ ಪದಾರ್ಥ :
 ಬೆಚ್ಚಗಿನ ನೀರು, ಯೀಸ್ಟ್ , ಸ್ವಲ್ಪ ಸಕ್ಕರೆ ಮತ್ತು ಎಣ್ಣೆ, ಉಪ್ಪು, ಹಿಟ್ಟು (ಬ್ರೆಡ್ ತಯಾರಿಸುವ ಹಿಟ್ಟು).

ಫ್ರೆಂಚ್ ಬ್ರೆಡ್ ಮಾಡುವ ವಿಧಾನ : ಒಂದುವರೆ ಕಪ್ ಈಸ್ಟ್ ಹಾಗೂ ನೀರನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದನ್ನು ಮೂರು ನಿಮಿಷ ಬಿಟ್ಟು ನಂತ್ರ ಅದಕ್ಕೆ ಉರಿಗೆ ತಕ್ಕಷ್ಟು ಉಪ್ಪು ಹಾಗೂ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಮಿಶ್ರಣ ಮೃದುವಾಗಿರಲಿ. ನಂತ್ರ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಗಾಳಿ ಆಡದಂತೆ ಮುಚ್ಚಿ ಒಂದು ಗಂಟೆ ಹಾಗೆ ಬಿಡಿ. ನಂತ್ರ ಅದನ್ನು ತೆಳುವಾಗಿ ಲಟ್ಟಿಸಿಕೊಂಡು, ನಂತ್ರ ಅದನ್ನು ರೋಲ್ ಮಾಡಿ. ಫ್ರೆಂಚ್ ಬ್ರೆಡ್ ಪಾನ್ ಗೆ ಅದನ್ನು ಹಾಕಿ. ಅದನ್ನು ಓವನ್ ನಲ್ಲಿಟ್ಟು ಮೂವತ್ತು ನಿಮಿಷಗಳ ಕಾಲ ಬೇಯಿಸಿ. ಅಗತ್ಯವಿರುವವರು ಮೊಟ್ಟೆಯ ರಸವನ್ನು ಅದಕ್ಕೆ ಹಾಕಿ ಬೇಯಿಸಬಹುದು.