Asianet Suvarna News Asianet Suvarna News

ಅಂತರ್​ಧರ್ಮೀಯ ಪ್ರೇಮಿಗಳ ಕೌತುಕದ ಕಥೆ: ಗಂಟೆಗೊಮ್ಮೆ ಸ್ಮಾರಕಗಳ ಸಮಾಗಮ! ಡಾ.ಬ್ರೋ ಬಾಯಲ್ಲಿ ಕೇಳಿ...

ಜಾರ್ಜಿಯಾದಲ್ಲೊಂದು ಕುತೂಹಲದ ಅಂತರ್​ಧರ್ಮೀಯ ಪ್ರೇಮ ಕಥೆ ಸಾರುವ ಸ್ಮಾರಕದ ಪರಿಚಯ ಮಾಡಿಸಿದ್ದಾರೆ ಡಾ.ಬ್ರೋ.
 

Dr Bro has introduced a monument that tells a curious interfaith love story in Georgia suc
Author
First Published Jun 25, 2024, 5:05 PM IST

ಇದು ಮುಸ್ಲಿಂ ಹುಡುಗ ಮತ್ತು ಕ್ರಿಶ್ಚಿಯನ್ ಹುಡುಗಿಯ ಕುತೂಹಲದ ಪ್ರೇಮ ಕಥೆ. ಇದು ಜಾರ್ಜಿಯೋದಾ ಕಥೆ. ಪ್ರೀತಿಗೆ ಜಾತಿ-ಧರ್ಮದ ಭೇದವೇ ಇಲ್ಲವಲ್ಲ. ಇವರಿಬ್ಬರೂ ಪ್ರೀತಿಸುತ್ತಾರೆ. ಆದರೆ ಅಲ್ಲಿ ಅವರ  ಪ್ರೀತಿಗೆ ನಿಷೇಧ ಎದುರಾಗುತ್ತದೆ. ಅಷ್ಟಕ್ಕೂ ಹುಡುಗನ ಹೆಸರು ಅಲಿ. ಈಗ ಅಜರ್ಬೇಜಾನಿ (Azerbaijani) ದೇಶದವ. ಹುಡುಗಿ ಜಾರ್ಜಿಯಾದ ರಾಜಕುಮಾರಿ ನಿನೊ. ಇವರಿಬ್ಬರ ನಡುವೆ ಅಂತಸ್ತು, ಐಶ್ವರ್ಯದ ಜೊತೆ ಜೊತೆಗೇ ಧರ್ಮವು ಮದುವೆಗೆ ಅಡ್ಡಿಬರುತ್ತದೆ. ಆದರೆ ಎಲ್ಲಾ ಸವಾಲುಗಳನ್ನು ಎದುರಿಸಿ ಇವರು ಇನ್ನೇನು ಮದುವೆಯಾಗಬೇಕು ಎಂದುಕೊಳ್ಳುತ್ತಾರೆ. ತನ್ನ ದೇಶದಿಂದ ಅಲಿ ಹೊರಟ ತಕ್ಷಣವೇ ವಿಶ್ವ ಯುದ್ಧ ಶುರುವಾಗುತ್ತದೆ. ಅಲ್ಲಿ ಆತ ಪ್ರಾಣ ಕಳೆದುಕೊಳ್ಳುತ್ತಾನೆ.  ನಿನೊ ಕೂಡ ಸಾಯುತ್ತಾಳೆ. ಇವರ ಪ್ರೀತಿಯ ಸಂಕೇತವೆಂದು ಇದನ್ನು ಜಾರ್ಜಿಯಾದಲ್ಲಿ ನಿರ್ಮಿಸಲಾಗಿದೆ. 

ಜಾರ್ಜಿಯಾದಲ್ಲಿನ ಈ ಕುತೂಹಲದ ಮಾಹಿತಿ ತೆರೆದಿಟ್ಟಿದ್ದಾರೆ ಡಾ.ಬ್ರೋ. ನಿನೊ ಮತ್ತು ಅಲಿಯ ಪ್ರೇಮದ ಸಂಕೇತವಾಗಿ ಎರಡು ಆಕೃತಿಗಳನ್ನು ನಿರ್ಮಿಸಲಾಗಿದೆ. ಹತ್ತು ನಿಮಿಷಗಳ ಕಾಲ, ಆಕೃತಿಗಳು ತಮ್ಮ ನೃತ್ಯ ಪ್ರದರ್ಶಿಸುತ್ತವೆ, ಎರಡೂ ಆಕೃತಿಗಳು ಅಲ್ಲಿ ಇಲ್ಲಿ ರೌಂಡ್​ ಹಾಕುತ್ತಾ ಬಂದು ಸಮಾಗಮಗೊಳ್ಳುತ್ತವೆ.  ಗಂಟೆಗೊಮ್ಮೆ ಹೀಗ ಸಮಾಗಮಗೊಳ್ಳುತ್ತವೆ. ಪ್ರತಿಮೆಗಳ ಎತ್ತರವು ಸರಾಸರಿ ಮನುಷ್ಯನಿಗಿಂತ ಸ್ವಲ್ಪ ಎತ್ತರವಾಗಿದೆ, ಆದರೆ ಅವು ನಿಂತಿರುವ ಎತ್ತರದ ಪೀಠವು ಅವುಗಳನ್ನು ಸ್ಮಾರಕವನ್ನಾಗಿಸಲಾಗಿದೆ.  ಬಟುಮಿಯಲ್ಲಿನ ಅತ್ಯಂತ ರೋಮ್ಯಾಂಟಿಕ್ ಪ್ರತಿಮೆ ಇದು ಎನ್ನಲಾಗಿದೆ. ಇವರ ಅಮರ ಪ್ರೀತಿಯನ್ನು  ಚಲನೆಗಳಲ್ಲಿ ಜೀವಂತವಾಗಿದೆ. ಸಮುದ್ರದ ಜೊತೆಯಲ್ಲಿ ಸೂರ್ಯಾಸ್ತದ ಕಿರಣಗಳಲ್ಲಿ ಈ ಆಕೃತಿ ಮೋಡಿ ಮಾಡುತ್ತದೆ. 

ಅತಿದೊಡ್ಡ ಮುಸ್ಲಿಂ ರಾಷ್ಟ್ರಕ್ಕೆ ಗಣಪನ ಕಾವಲು! ಜ್ವಾಲಾಮುಖಿಯ ಬದಿ ಕುಳಿತ ಕೌತುಕದ ಸ್ಟೋರಿ ಡಾ.ಬ್ರೋ ಬಾಯಲ್ಲಿ...

ಅಂದಹಾಗೆ ಈ ಆಕೃತಿಯನ್ನು 2011 ರಲ್ಲಿ ಸ್ಥಾಪಿಸಲಾಯಿತು. ಆರಂಭದಲ್ಲಿ ಇದನ್ನು  ಸಮುದ್ರದ ಪಕ್ಕದಲ್ಲಿ ಇರಿಸಲಾಗಿತ್ತು.  ಆದರೆ ಕೆಟ್ಟ ಹವಾಮಾನದಿಂದಾಗಿ, ಕಲಾಕೃತಿಯು ಹಾನಿಗೊಳಗಾಗಬಹುದು ಎನ್ನುವ ಕಾರಣಕ್ಕೆ ಅದನ್ನು ಪಾರ್ಕ್ ಆಫ್ ವಂಡರ್ಸ್​ಗೆ  ಸ್ಥಳಾಂತರಿಸಲಾಗಿದೆ.  ಈಗ ಪ್ರತಿಮೆಗಳು ಫೆರ್ರಿಸ್ ಚಕ್ರದ ಬಳಿ ನೆಲೆಗೊಂಡಿವೆ. ಲೈಟಿಂಗ್ ಆನ್ ಮಾಡಿದಾಗ ಇಬ್ಬರು ಪ್ರೇಮಿಗಳ ನೃತ್ಯವು ಸೂರ್ಯಾಸ್ತದ ಸಮಯದಲ್ಲಿ ನಂಬಲಾಗದಷ್ಟು ಸುಂದರವಾಗಿ ಕಾಣುತ್ತದೆ, ಇದು ನಿನೋ ಮತ್ತು ಅಲಿ ಅವರ ಪ್ರೇಮಕಥೆಯನ್ನು ತೋರಿಸುತ್ತದೆ.    ಜಾರ್ಜಿಯನ್​ನ ವಿಶಿಷ್ಟ ವಾಸ್ತುಶಿಲ್ಪಿ ತಮಾರಾ ಕ್ವೆಸಿಟಾಡ್ಜೆ ಈ ಕಲಾಕೃತಿಯ ಸೃಷ್ಟಿಕರ್ತ. ಅವರು ಈ ಮೇರುಕೃತಿಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇದನ್ನು ಮೊದಲಿಗೆ  ವೆನಿಸ್ ಬಿನಾಲೆಯಲ್ಲಿ ಮತ್ತು ನಂತರ ಲಂಡನ್‌ನಲ್ಲಿ ಪ್ರದರ್ಶಿಸಲಾಯಿತು, ಅಲ್ಲಿ ಅದು ಉತ್ತಮ ಯಶಸ್ಸನ್ನು ಗಳಿಸಿದ ಬಳಿಕ ಇಲ್ಲಿ ಸ್ಥಳಾಂತರ ಮಾಡಲಾಗಿದೆ.

 ಸದ್ಯ ಜಾರ್ಜಿಯಾ ಪ್ರವಾಸದಲ್ಲಿರುವ ಡಾ.ಬ್ರೊ ಅರ್ಥಾತ್​ ಗಗನ್​ ಅವರು ತಮ್ಮದೇ ಆದ ಹಾಸ್ಯದ ಶೈಲಿಯಲ್ಲಿ ಕನ್ನಡದಲ್ಲಿಯೇ ಜಾರ್ಜಿಯಾದ ವಿವಿಧ ಸ್ಥಳಗಳ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ, ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ  ನಮಸ್ಕಾರ​ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. 

ಇಂಡೋನೇಷಿಯಾದಲ್ಲಿ 'ಎಂಚ ಉಲ್ಲರ್‌… ಎಂಚ ಉಲ್ಲರ್‌' ಎಂದು ಹೇಳುತ್ತಲೇ ಹವಾ ಸೃಷ್ಟಿಸಿದ ಡಾ.ಬ್ರೋ

Latest Videos
Follow Us:
Download App:
  • android
  • ios