ಇಂಡೋನೇಷಿಯಾದಲ್ಲಿ 'ಎಂಚ ಉಲ್ಲರ್‌… ಎಂಚ ಉಲ್ಲರ್‌' ಎಂದು ಹೇಳುತ್ತಲೇ ಹವಾ ಸೃಷ್ಟಿಸಿದ ಡಾ.ಬ್ರೋ

ಡಾ.ಬ್ರೋ ಗಗನ್​ ಇಂಡೋನೇಷಿಯಾ ಪ್ರವಾಸದಲ್ಲಿದ್ದು ಅಲ್ಲಿ 'ಎಂಚ ಉಲ್ಲರ್‌… ಎಂಚ ಉಲ್ಲರ್‌' ಎನ್ನುತ್ತಾ ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದಾರೆ. ಏನಿದು ವಿಷಯ?
 

Dr Bro Gagan is on a trip to Indonesia and talked to people in Tulu video viral suc

ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ  ನಮಸ್ಕಾರ​ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. 

ಡಾ. ಬ್ರೋ ನಿಜವಾದ  ಹೆಸರು ಗಗನ್​. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ.  ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್​ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ.  

ಚೀನಾದಲ್ಲಿ ರೋಬೋಗಳು ​ ಏನೆಲ್ಲಾ ಮಾಡ್ತಿವೆ ಗೊತ್ತಾ? ಇಂಟರೆಸ್ಟಿಂಗ್​ ಮಾಹಿತಿ ಹೇಳಿದ ಡಾ.ಬ್ರೋ

ಇದೀಗ ಇಂಡೋನೇಷಿಯಾಕ್ಕೆ ಪ್ರಯಾಣ ಬೆಳೆಸಿದ್ದು, ಅಲ್ಲಿ ತುಳು ಮಾತನಾಡಿ ಸಕತ್​ ಸದ್ದು ಮಾಡಿದ್ದಾರೆ. ಅಂದಹಾಗೆ ಗಗನ್​ ಅವರೇನೂ ತುಳುನಾಡಿನವರಲ್ಲ. ಬೆಂಗಳೂರಿನವರು. ಆದರೆ ತುಳುವಿನಲ್ಲಿ ಒಂದೇ ಒಂದು ವಾಕ್ಯ ಕಲಿತಿದ್ದು, ಅದನ್ನು ಇಂಡೋನೇಷಿಯಾದಲ್ಲಿಯೂ ಹೇಳುವ ಮೂಲಕ ಸಕತ್​ ವೈರಲ್​ ಆಗುತ್ತಿದ್ದಾರೆ. ಈ ಕುರಿತು ವಿಡಿಯೋ ತುಣುಕೊಂದನ್ನು ತುಳು ಕಂಟೆಂಟ್‌ ಕ್ರಿಯೇಟರ್‌ ಶರಣ್‌ ಚಿಲಿಂಬಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಅದೀಗ ವೈರಲ್​ ಆಗಿದೆ.  ಕೆಲ ದಿನಗಳ ಹಿಂದೆ ಗಗನ್​ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಆಗ  ಶರಣ್‌ ಚಿಲಿಂಬಿ ಅವರು ಹೇಗಿದ್ದೀರಿ ಎನ್ನುವುದಕ್ಕೆ ತುಳುವಿನಲ್ಲಿ ಏನು ಹೇಳುತ್ತಾರೆ ಎಂದು ಕಲಿಸಿಕೊಟ್ಟಿದ್ದರು. ಎಂಚ ಉಲ್ಲರ್‌ ಎಂದರೆ  ಹೇಗಿದ್ದೀರಿ ಎಂದು ಹೇಳಿದ್ದರು. ಇದನ್ನೇ ಗಗನ್​ ಅವರು,  ಇಂಡೋನೇಷಿಯಾದಲ್ಲಿಯೂ ಬಳಸಿದ್ದಾರೆ.   ಇಂಡೋನೇಷಿಯಾದಲ್ಲಿ ಡಾ. ಬ್ರೋ ಗಾಡಿಯಲ್ಲಿ ಹೋಗುತ್ತಿರುವಾಗ ಅಲ್ಲಿನ ಸ್ಥಳೀಯರಿಗೆ ಕೈಬೀಸಿ ಹಲೋ… ಎಂಚ ಉಲ್ಲರ್‌… ಎಂಚ ಉಲ್ಲರ್‌ ಎಂದು  ತುಳುವಿನಲ್ಲಿ  ಮಾತನಾಡಿರುವಂತಹ ದೃಶ್ಯವನ್ನು ಕಾಣಬಹುದು. ಇದರ ವಿಡಿಯೋ ತುಣುಕು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. 


ಅಂದಹಾಗೆ ಗಗನ್​ ಕುರಿತು ಒಂದಿಷ್ಟು ಹೇಳಲೇಬೇಕು. ಬೆಂಗಳೂರಿನಲ್ಲಿ  ಹುಟ್ಟಿ ಬೆಳೆದಿರೋ ಗಗನ್​, ಹುಟ್ಟಿದ್ದು ಅರ್ಚಕರ ಮಗನಾಗಿ. ಇವರ ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿ ಪದ್ಮಾ ಗೃಹಿಣಿ.  ಗಗನ್ ಅವರಿಗೆ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದ ಗಗನ್​ ಅವರು,  ಖುದ್ದು  ದೇವಸ್ಥಾನದ ಪೂಜೆ ಮಾಡುವುದೂ ಉಂಟು.  ಓದಿಗಿಂತ ಹೆಚ್ಚಾಗಿ  ಹಾಡು, ನೃತ್ಯ, ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರೋ ಗಗನ್​ ಕೀರ್ತಿ ಈಗ ಕರ್ನಾಟಕದಾಚೆಗೂ ಸಾಗಿ, ದೇಶದಿಂದ ವಿದೇಶಕ್ಕೂ ಹೋಗಿದೆ.

ರಾವಣನ ಅಪಾಯಕಾರಿ ಗುಹೆಯೊಳಗೆ ಡಾ. ಬ್ರೋ: ರಿಸ್ಕ್​ ತಗೋಬೇಡಪ್ಪಾ... ಭಯ ಆಗ್ತಿದೆ ಎಂದ ಫ್ಯಾನ್ಸ್...

 

Latest Videos
Follow Us:
Download App:
  • android
  • ios