ಹಡಗಿನೊಳಗೆನೇ ಸ್ವಿಮ್ಮಿಂಗ್ ಫೂಲ್: ಲಕ್ಷದ್ವೀಪಕ್ಕೆ ಕನೆಕ್ಟ್ ಆಗೋ ಕ್ರೂಸ್ ಬಗ್ಗೆ ಡಾ.ಬ್ರೋ ಇಂಟರೆಸ್ಟಿಂಗ್ ಮಾಹಿತಿ
ಹಡಗಿನೊಳಗೆ ಸ್ವಿಮ್ಮಿಂಗ್ ಫೂಲ್ ಇರುವ ಹಾಗೂ ಲಕ್ಷದ್ವೀಪಕ್ಕೆ ಕನೆಕ್ಟ್ ಆಗಿರುವ ಕ್ರೂಸ್ ಕುರಿತು ಡಾ.ಬ್ರೋ ಮಾಹಿತಿ ನೀಡಿದ್ದಾರೆ.
ಈಗ ಎಲ್ಲೆಲ್ಲೂ ಲಕ್ಷದ್ವೀಪದ್ದೇ ಹವಾ. ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಲಕ್ಷದ್ವೀಪ ಹಲ್ಚಲ್ ಸೃಷ್ಟಿಸಿಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ 3-4 ಫೋಟೋಗಳಿಂದಲೇ ಈ ಪರಿಯ ಬದಲಾವಣೆ ಆಗಿಬಿಟ್ಟಿದೆ. ಗೂಗಲ್ನಲ್ಲಿ ಲಕ್ಷದ್ವೀಪವನ್ನು ಹುಡುಕಿದವರ ಸಂಖ್ಯೆ ಸಾರ್ವಕಾಲಿಕ ದಾಖಲೆ ಬರೆದಿದೆ. ಭಾರತವನ್ನು ಎದುರು ಹಾಕಿಕೊಂಡ ಮಾಲ್ಡೀವ್ಸ್ಗೆ ಮಾಸ್ಟರ್ಸ್ಟ್ರೋಕ್ ಕೊಟ್ಟಿರೋ ಈ ಲಕ್ಷದ್ವೀಪಕ್ಕೆ ಭೇಟಿ ಕೊಡಲು ಜಗತ್ತಿನಾದ್ಯಂತದ ಪ್ರವಾಸಿಗರು ಇದಾಗಲೇ ಉತ್ಸುಕರಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಂತೂ ಬೈಕಾಟ್ ಮಾಲ್ಡೀವ್ಸ್ ಎನ್ನುತ್ತಲೇ ಲಕ್ಷದ್ವೀಪಕ್ಕೆ ಸ್ವಾಗತ ಎನ್ನುತ್ತಿದ್ದಾರೆ. ಇದರಿಂದ ಪ್ರವಾಸಿಗರಲ್ಲಿ ಇನ್ನಷ್ಟು ಉತ್ಸಾಹ ತುಂಬಿ ತುಳುಕಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಲಕ್ಷದ್ವೀಪದಲ್ಲಿ ಹೂಡಿಕೆ ಮಾಡಲು ಹಲವರು ಉತ್ಸುಕರಾಗಿದ್ದಾರೆ. ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣವೂ ಆಗಲಿದೆ ಎಂದು ಇದಾಗಲೇ ಘೋಷಿಸಲಾಗಿದೆ. ಹೀಗೆ ಲಕ್ಷದ್ವೀಪಕ್ಕೆ ಶುಕ್ರದೆಸೆ ಬರುತ್ತಲೇ ಭಾರತದಲ್ಲಿ ಕಡೆಗಣಿಸಲ್ಪಟ್ಟಿರುವ ಅತ್ಯಂತ ಸುಂದರ ತಾಣಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ.
ಆದರೆ ಅದೆಷ್ಟೋ ಮಂದಿಗೆ ಲಕ್ಷದ್ವೀಪವನ್ನು ಕಣ್ಣಾರೆ ಕಣ್ತುಂಬಿಸಿಕೊಳ್ಳುವ ಅವಕಾಶ ಸಿಗದೇ ಇರಬಹುದು. ಅಥವಾ ಈಕ್ಷಣದಲ್ಲಿ ಇಷ್ಟೆಲ್ಲಾ ಫೇಮಸ್ ಆಗಿರುವ ಲಕ್ಷದ್ವೀಪ ಹೇಗಿರಬಹುದು ಎಂದು ತಿಳಿದುಕೊಳ್ಳುವುದು ಕಷ್ಟ. ಇಂಟರ್ನೆಟ್ನಲ್ಲಿ ಇವುಗಳ ಬಗ್ಗೆ ತಿಳಿದುಬಂದರೂ ನಮ್ಮದೇ ಕನ್ನಡ ಭಾಷೆಯಲ್ಲಿ, ಅಷ್ಟೇ ಸುಂದರವಾಗಿ, ಅಷ್ಟೇ ಸೊಗಸಾಗಿ ಹೇಳುವವರು ಇದ್ದರೆ ಎಷ್ಟು ಚೆನ್ನಾಗಿತ್ತು ಎಂದುಕೊಳ್ಳುವ ಎಲ್ಲರಿಗೂ ಕೆಲ ದಿನಗಳ ಹಿಂದೆ ಕನ್ನಡದ ಕುವರ ಡಾ.ಬ್ರೋ ಖುಷಿಯ ವಿಡಿಯೋ ಶೇರ್ ಮಾಡಿದ್ದರು. ಅದರಲ್ಲಿ ಅವರು ಲಕ್ಷದ್ವೀಪದ ಸಂಪೂರ್ಣ ವಿವರಣೆ ನೀಡಿದ್ದರು.
ಸಕತ್ ಸುದ್ದಿಯಲ್ಲಿರೋ ಲಕ್ಷದ್ವೀಪ ಹೇಗಿದೆ? ರೋಚಕ ಮಾಹಿತಿ ನೀಡುತ್ತಲೇ ಸಂಪೂರ್ಣ ದರ್ಶನ ಮಾಡಿಸಿದ ಡಾ.ಬ್ರೋ...
ಇದೀಗ ಲಕ್ಷದ್ವೀಪಕ್ಕೆ ಕ್ರೂಜ್ ಮೂಲಕ ಪ್ರಯಾಣ ಬೆಳೆಸಬೇಕು ಎಂದುಕೊಳ್ಳುವವರಿಗೆ ಒಂದೊಳ್ಳೆ ಮಾಹಿತಿ ನೀಡಿದ್ದಾರೆ ಡಾ.ಬ್ರೋ. ಕಾರ್ಡಿಲಿಯಾ ಕ್ರೂಜ್ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ಕ್ರೂಜ್ನ ವಿಶೇಷತೆ ಎಂದರೆ ಇದರ ಒಳಗಡೆನೇ ಸ್ವಿಮ್ಮಿಂಗ್ ಫೂಲ್ ಇದೆ. ನೀರ ಮೇಲೆ ಹಡಗು ಇದ್ದು, ಹಡಗಿನೊಳಗೆ ನೀರಿನ ಕೊಳ! ಎಷ್ಟು ಇಂಟರೆಸ್ಟಿಂಗ್ ಆಗಿದೆ ಅಲ್ವಾ? ಇಂಥ ಒಂದು ವಿಶಿಷ್ಟ ಕ್ರೂಜ್ ಪರಿಚಯ ಮಾಡಿಸಿದ್ದಾರೆ ಡಾ.ಬ್ರೋ. ಅಂದಹಾಗೆ ಈ ಕ್ರೂಜ್ ಮುಂಬೈನಿಂದ ಶುರುವಾಗುತ್ತದೆ. ಯಾವಾಗಾದರೂ ಒಮ್ಮೊಮ್ಮೆ ಗೋವಾಗೆ ಹೋಗುತ್ತದೆ. ಗೋವಾದಿಂದ ಕೊಚ್ಚಿಗೆ ಹೋಗುತ್ತದೆ, ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ಪ್ರಯಾಣಿಸುತ್ತದೆ. ಮತ್ತೆ ಪುನಃ ಮುಂಬೈಗೆ ಬಂದು ತಲುಪುತ್ತದೆ, ಹೀಗೆ ಸುತ್ತು ಹೊಡೆಯುತ್ತಾ ಇರುತ್ತದೆ ಎನ್ನುವ ಮಾಹಿತಿ ನೀಡಿದ್ದಾರೆ ಅವರು.
ಈ ಕ್ರೂಸ್ ಮೇಲೆ ಮಾಲ್ಟಾ ದೇಶದ ಬಾವುಟ ಇದೆ. ಇದಕ್ಕೆ ಕಾರಣ, ಈ ಬೃಹತ್ ಹಡಗು ನೋಂದಣಿಯಾಗಿರುವುದು ಮಾಲ್ಟಾ ದೇಶದಲ್ಲಿ ಎನ್ನುವ ವಿವರಣೆ ನೀಡುತ್ತಲೇ ಅಲ್ಲಿರುವ ಕನ್ನಡಿಗರನ್ನು ಮಾತನಾಡಿಸಿದ್ದಾರೆ ಡಾ.ಬ್ರೋ. ನಂತರ ಕ್ರೂಸ್ ಓಡಿಸುವ ಬಗೆಯನ್ನೂ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿವರಿಸಿದ್ದಾರೆ. ಈ ಹಿಂದಿನ ವಿಡಿಯೋದಲ್ಲಿ ಲಕ್ಷದ್ವೀಪದ ಮಾಹಿತಿ ನೀಡಿದ್ದ ಗಗನ್ ಅವರು, ಇಲ್ಲಿ 36 ದ್ವೀಪಗಳು ಮಾತ್ರವಿದೆ. ಆದರೂ ಇವು ಲಕ್ಷದ ರೀತಿಯಲ್ಲಿ ಕಾಣಿಸುವ ಕಾರಣ ಲಕ್ಷದ್ವೀಪ ಎಂಬ ಹೆಸರು ಬಂದಿದೆ ಎಂದಿದ್ದರು. ಇದರಲ್ಲಿ ಪ್ರಮುಖವಾಗಿರುವ ಕಡ್ಮಟ್ ದ್ವೀಪಕ್ಕೆ ಭೇಟಿ ಕೊಟ್ಟು ಅಲ್ಲಿರುವ ಕುತೂಲಹದ ಮಾಹಿತಿಯನ್ನು ಡಾ.ಬ್ರೋ ಹಂಚಿಕೊಂಡಿದ್ದರು. ಇವರ ಈ ವಿಡಿಯೋಗೆ ಎಂದಿನಂತೆ ಫ್ಯಾನ್ಸ್ ಫಿದಾ ಆಗಿದ್ದು, ನಿಮ್ಮಿಂದ ಇಂಥ ಹಲವು ಮಾಹಿತಿಗಳನ್ನು ನಿರೀಕ್ಷಿಸುತ್ತಿದ್ದೇವೆ ಎನ್ನುತ್ತಿದ್ದಾರೆ.
ಲಕ್ಷದ್ವೀಪವೀಗ ಹಾಟ್ ಬೆಡಗಿಯರ ತಾಣ- ಏನಂದ್ರು ಕೇಳಿ ಈ ಬಾಲಿವುಡ್ ಸುಂದರಿಯರು