ವಿಮಾನದಲ್ಲಿ 13 ಗಂಟೆ ಹೂಸು ಬಿಡ್ತಿದ್ದ ನಾಯಿ, ಸಹ ಪ್ರಯಾಣಿಕರು ಹೈರಾಣು!

ಪ್ರಯಾಣದ ವೇಳೆ ಚಿತ್ರವಿಚಿತ್ರ ಅನುಭವವಾಗುತ್ತದೆ. ಕೆಲವೊಂದನ್ನು ಸಹಿಸಿಕೊಂಡ್ರೆ ಮತ್ತೆ ಕೆಲವನ್ನು ವಿರೋಧಿಸಬೇಕಾಗುತ್ತದೆ. ಪ್ರಯಾಣದ ಒಂದೆರಡು ಗಂಟೆ ಸಮಸ್ಯೆಯಾದ್ರೆ ಹೇಗೋ ಮ್ಯಾನೇಜ್ ಮಾಡ್ಬಹುದು. ಬರೋಬ್ಬರಿ 13 ಗಂಟೆ ನರಕಯಾತನೆ ಅನುಭವಿಸಿದ್ರೆ..?
 

Dog Ruined Thirteen Hour Flight Traveling Couple Sue Singapore Airlines roo

ಸಮಯದ ಉಳಿತಾಯ ಹಾಗೂ ಆರಾಮದಾಯಕ ಪ್ರಯಾಣ ಎನ್ನುವ ಕಾರಣಕ್ಕೆ ನಾವೆಲ್ಲ ವಿಮಾನ ಏರ್ತೇವೆ. ಪ್ರಯಾಣದ ವೇಳೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗೋದು ಸಾಮಾನ್ಯ. ಸಹ ಪ್ರಯಾಣಿಕರ ಕಿರಿಕಿರಿ ಕೆಲವೊಮ್ಮೆ ಪ್ರಯಾಣದ ಮಜವನ್ನು ಹಾಳು ಮಾಡುತ್ತದೆ. ವಿಮಾನದಲ್ಲಿ ನಡೆಯುವ ಕೆಲ ಘಟನೆಗಳು ಮಾದ್ಯಮಗಳಲ್ಲಿ ಸುದ್ದಿಯಾಗ್ತಿರುತ್ತವೆ. ಈಗ ಮತ್ತೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ದಂಪತಿ ವಿಮಾನದಲ್ಲಿ ಚಿತ್ರ ಹಿಂಸೆ ಅನುಭವಿಸಿದ್ದಾರೆ. ಕೊನೆಯಲ್ಲಿ ದಂಪತಿ ಏರ್ಲೈನ್ಸ್ ಗೆ ದೂರು ನೀಡಿದ್ದಾರೆ. ಆದ್ರೆ ಆ 13 ಗಂಟೆ ಅವರು ಎದುರಿಸಿದ ನರಕ ಮಾತ್ರ ಮಾತಿನಲ್ಲಿ ಹೇಳೋಕೆ ಸಾಧ್ಯವಿಲ್ಲ ಎನ್ನುತ್ತಾರೆ. ಅಷ್ಟಕ್ಕೂ ವಿಮಾನದಲ್ಲಿ ಸಹ ಪ್ರಯಾಣಿಕನಾಗಿದ್ದ ಪ್ರಾಣಿ ನಾಯಿ ಮಾಡಿದ ಕೆಲಸವೇನು ಎಂಬುದನ್ನು ನಾವು ಹೇಳ್ತೇವೆ.

ಸಹ ಪ್ರಯಾಣಿಕ (Traveler) ನಾಯಿ ಗ್ಯಾಸ್ ಬಿಟ್ಟಿದ್ದೇ ಬಿಟ್ಟಿದ್ದು.. : ಘಟನೆ ನಡೆದಿದ್ದು ಪ್ಯಾರಿಸ್‌ನಿಂದ ಸಿಂಗಾಪುರ (Singapore) ಕ್ಕೆ ಹಾರುತ್ತಿದ್ದ ವಿಮಾನದಲ್ಲಿ. ಈ ಪ್ರಯಾಣ 13 ಗಂಟೆಯದ್ದು. ಗಿಲ್ ಮತ್ತು ವಾರೆನ್ ಪ್ರೆಸ್ ಸಂಕಷ್ಟ ಎದುರಿಸದ ಜೋಡಿ. ಗಿಲ್ ಮತ್ತು ವಾರೆನ್ ಪ್ರೆಸ್ ಬಹಳ ಸಂತೋಷದಿಂದ ಸಿಂಗಾಪುರಕ್ಕೆ ಹಾರಿದ್ದರು. 13 ಗಂಟೆಗಳ ವಿಮಾನ ಪ್ರಯಾಣವನ್ನು ಎಂಜಾಯ್ ಮಾಡುವ ಪ್ಲಾನ್ ನಲ್ಲಿದ್ದರು. ಅವರ ಯೋಜನೆಯನ್ನು ಸಂಪೂರ್ಣ ಪ್ಲಾಪ್ ಮಾಡಿದ್ದು ಸಹ ಪ್ರಯಾಣಿಕ ನಾಯಿ (Dog) .  

ವಿಮಾನದ ಲೈಟ್‌ ಆಫ್‌ ಆಗ್ತಿದ್ದಂತೆ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ತಿದ್ದ ಕಾಮಪಿಶಾಚಿ

ಪಕ್ಕದಲ್ಲಿ ಕುಳಿತ ನಾಯಿ ದೊಡ್ಡದಾಗಿ ಉಸಿರಾಡುತ್ತಿತ್ತು. ಅದ್ರ ಬಾಯಿ ಹಾಗೂ ಮೂಗಿನಿಂದ ದೊಡ್ಡ ಶಬ್ಧ ಬರ್ತಾ ಇತ್ತು. ಅದನ್ನು ದಂಪತಿ ಹೇಗೋ ಸಹಿಸಿಕೊಂಡಿದ್ದಾರೆ. ಆದ್ರೆ ಕಷ್ಟ ಶುರುವಾಗಿದ್ದು ನಾಯಿ ಹಿಂದಿನಿಂದ ಗಾಳಿ ಬರಲು ಶುರುವಾದಾಗ. ನಾಯಿ ಒಂದಾದ್ಮೆಲೆ ಒಂದರಂತೆ ಗ್ಯಾಸ್ ಹೊರ ಹಾಕಲು ಶುರು ಮಾಡಿದೆ.  13 ಗಂಟೆಗಳ ಕಾಲ ನಾಯಿ ಕೆಟ್ಟ ವಾಸನೆ ಹೊರ ಹಾಕ್ತನೆ ಇದ್ದಿದ್ದರಿಂದ ದಂಪತಿಗೆ ಅಲ್ಲಿ ಕುಳಿತುಕೊಳ್ಳೋದು ಕಷ್ಟವಾಗಿದೆ. ವಿಪರೀತ ವಾಸನೆಗೆ ವಾಂತಿ ಬಂದಂಗಾಗಿದೆ. ಅವರ ಪ್ರಯಾಣದ ಸುಖ ನಾಯಿಯಿಂದ ಹಾಳಾಗಿದೆ. 

ಸಿಂಗಾಪುರ್ ಏರ್ಲೈನ್ಸ್ ಗೆ ದೂರು : ನಾಯಿ ಹೊರ ಹಾಕ್ತಿದ್ದ ಅನಿಲ ದಂಪತಿಯನ್ನು ಹೈರಾಣ ಮಾಡಿದೆ. 13 ಗಂಟೆ ಪ್ರಯಾಣದಲ್ಲಿ ಅವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ನನಗೆ ಮೊದಲು ಗೊರಕೆಯ ಶಬ್ಧ ಕೇಳಿಸ್ತು. ನನ್ನ ಪತಿ ಮೊಬೈಲ್ ನಿಂದ ಈ ಶಬ್ಧ ಬರ್ತಿದೆ ಎಂದುಕೊಂಡೆ. ಆದ್ರೆ ಶಬ್ಧ ಅಲ್ಲಿಂದ ಬರ್ತಿಲ್ಲ ಎಂಬುದು ಗೊತ್ತಾದ ನಂತ್ರ ಹುಡುಕಾಟ ನಡೆಸಿದೆ. ನಮ್ಮ ಸೀಟ್ ಪಕ್ಕದ ಸೀಟ್ ಕೆಳಗೆ ನಾಯಿಯೊಂದು ಮಲಗಿತ್ತು. ಅದ್ರ ಉಸಿರಾಟದ ಶಬ್ಧವಾಗಿತ್ತು. ಬರೀ ಶಬ್ಧ ಮಾಡಿದ್ರೆ ಓಕೆ, ನಾಯಿ ಬಿಡ್ತಿದ್ದ ಅನಿಲದ ವಾಸನೆ ಇಡೀ ವಿಮಾನವನ್ನು ಹರಡಿಕೊಂಡಿತ್ತು ಎಂದು ಗಿಲ್ ಆರೋಪ ಮಾಡಿದ್ದಾಳೆ. ಇದ್ರಿಂದ ಕೋಪಗೊಂಡ ದಂಪತಿ ಸಿಂಗಾಪುರ್ ಏರ್ಲೈನ್ಸ್ ವಿರುದ್ಧ ದೂರು ನೀಡಿದ್ದಾರೆ. ಪ್ರೀಮಿಯಂ ಎಕಾನಮಿ ಸೀಟಿನಲ್ಲಿ ಪ್ರಯಾಣ ಬೆಳೆಸ್ತಿದ್ದ ಅವರು ತಮ್ಮ ಪ್ರಯಾಣದ ಸುಖ ಹಾಳಾದ ಕಾರಣ ಟಿಕೆಟ್ ದರವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದರು. 

ಎಟಿಎಂನಲ್ಲಿ ಬರುತ್ತೆ ಚಿನ್ನ... ದುಬೈನಲ್ಲಿ ಮಾತ್ರ ಕಾಣಸಿಗುವ ಕೆಲ ಅದ್ಭುತಗಳಿವು

ದಂಪತಿಗೆ ಸಿಕ್ತು ಪರಿಹಾರ : ಸಿಂಗಾಪುರ್ ಏರ್ಲೈನ್ಸ್ ದಂಪತಿಗೆ ಪರಿಹಾರ ನೀಡಿದೆ. ದೂರು ನೀಡಿದ ನಾಲ್ಕೈದು ವಾರದ ನಂತ್ರ 9,854 ರೂಪಾಯಿಯ ಟ್ರಾವೆಲ್ ವೋಚರ್ ನೀಡಿದೆ. ಆದ್ರೆ ದಂಪತಿ ಇದನ್ನು ಖಂಡಿಸಿದ್ದಾರೆ. ವಿಮಾನದಲ್ಲಿ ನಾವು ಎದುರಿಸಿದ ಸಮಸ್ಯೆಗೆ ಇದು ಸಾಲುವುದಿಲ್ಲ ಎಂದಿದ್ದಾರೆ. ಈ ಸಂಬಂಧ ಸಿಂಗಾಪುರ್ ಏರ್ಲೈನ್ಸ್ ಕ್ಷಮೆ ಕೇಳಿ, ಮುಂದೆ ಹೀಗಾಗದಂತೆ ನೋಡಿಕೊಳ್ಳೋದಾಗಿ ಹೇಳಿದೆ.  

Latest Videos
Follow Us:
Download App:
  • android
  • ios