ರೈಲಿನ ಬಾಗಿಲಲ್ಲಿ ನೇತಾಡುತ್ತಿದ್ದ ಪ್ರಯಾಣಿಕರನ್ನು ಶ್ವಾನವೊಂದು ಬೊಗಳಿ ಒಳಗೆ ಕಳುಹಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕೋಲ್ಕತ್ತಾದ ಹೌರಾ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ರೈಲಿನ ಬಾಗಿಲಲ್ಲಿ ಅಥವಾ ಬಸ್ಸಿನ ಬಾಗಿಲಲ್ಲೆಲ್ಲಾ ನೇತಾಡುತ್ತಾ ಸಾಗೋದು ಯುವಕರಿಗೊಂದು ಶೋಕಿ, ಕೆಲವು ಬಸ್ ಅಥವಾ ರೈಲಿನ ಒಳಗೆ ಆಸನಗಳು ಖಾಲಿ ಇದ್ದರೂ ಕೂಡ ಕೆಲವರು ಬಾಗಿಲಲ್ಲಿ ನೇತಾಡುತ್ತಿರುತ್ತಾರೆ. ಇನ್ನು ರೈಲಿನ ಬಾಗಿಲಲ್ಲಿ ಕುಳಿತು ಹೋಗುವುದು ಈಗ ಸಾಮಾನ್ಯ ಎನಿಸಿದೆ. ಆದರೆ ರೈಲ್ವೆಯ ನಿಯಮಗಳ ಪ್ರಕಾರ ಹೀಗೆ ರೈಲಿನ ಬಾಗಿಲುಗಳಲ್ಲಿ ನೇತಾಡುವಂತಿಲ್ಲ, ಆದರೂ ಜನ ಕೇಳುವುದಿಲ್ಲ, ಆದರೆ ಇಲ್ಲೊಂದು ಕಡೆ ಹೀಗೆ ರೈಲಿನ ಬಾಗಿಲಲ್ಲಿ ನಿಂತುಕೊಂಡು ಪ್ರಯಾಣಿಸುವವರನ್ನು ಶ್ವಾನವೊಂದು ಬೊಗಳಿ ಒಳಗೆ ಓಡಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಬಾಗಿಲಲ್ಲಿ ನೇತಾಡುತ್ತಿದ್ದವರ ಒಳಗಟ್ಟಿದ ಶ್ವಾನ

ಈ ವೀಡಿಯೋವನ್ನು ಕೌಶಿಕ್ ಎಂಬುವವರು ತಮ್ಮ rail_koush ಎಂಬ ಇನ್ಸ್ಟಾ ಪೇಜ್‌ನಿಂದ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ರೈಲು ನಿಲ್ದಾಣವೊಂದರಲ್ಲಿ ನಿಧಾನವಾದಿ ಸಂಚರಿಸಲು ಶುರು ಮಾಡಿದ್ದು, ಕಲವರು ಬಾಗಿಲಿನ ಬಳಿ ನೇತಾಡುತ್ತಿದ್ದಾರೆ. ಫ್ಲಾಟ್‌ಫಾರ್ಮ್‌ನಲ್ಲಿ ನಿಂತಿರುವ ಕಪ್ಪು ಬಣ್ಣದ ಶ್ವಾನವೊಂದು ಹೀಗೆ ಬಾಗಿಲಿನಲ್ಲಿ ನಿಂತಿರುವವರನ್ನು ಬೊಗಳಿ ಬೊಗಳಿ ಒಳಗೆ ಹೋಗುವಂತೆ ಓಡಿಸುತ್ತಿದೆ. ನಾಯಿ ಬೊಗಳುವುದನ್ನು ನೋಡಿ ಕೆಲವರು ಗಾಬರಿಯಾಗಿ ಒಳಗೆ ಹೋಗುವ ಪ್ರಯತ್ನ ಮಾಡಿದ್ದಾರೆ. ಕೋಲ್ಕತ್ತಾದ ಹೌರಾ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. 

ರೀಲ್ಸ್ ಮಾಡುವುದಕ್ಕಾಗಿ ಎಲ್‌ಪಿಜಿ ಲೀಕ್ ಮಾಡಿದ ಅತ್ತಿಗೆ ಮೈದುನ: ಭಾರಿ ಬೆಂಕಿ 8 ಫ್ಲಾಟ್‌ಗಳಿಗೆ ಹಾನಿ

ಶ್ವಾನದ ಕಾರ್ಯಕ್ಕೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಶ್ವಾನದ ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದು, ಈ ಶ್ವಾನ ರೈಲ್ವೆ ಪೊಲೀಸ್ ಪೋರ್ಸ್‌ಗೆ ನಿಯೋಜನೆಗೊಂಡಂತೆ ಕಾಣುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಶ್ವಾನ ಹೌರಾ ರೈಲು ನಿಲ್ದಾಣದಲ್ಲಿ ಸ್ಯಾಲರಿ ಇಲ್ಲದೇ ಕೆಲಸ ಮಾಡುವ ಸೆಕ್ರೆಟರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಷ್ಟೊಂದು ಚೆನ್ನಾಗಿ ಆರ್‌ಫಿಎಫ್ ಅಧಿಕಾರಿಗಳು ಕೂಡ ಕೆಲಸ ಮಾಡುವುದಿಲ್ಲ,ಅಷ್ಟೊಂದು ಚೆನ್ನಾಗಿ ಈ ಶ್ಬಾನ ಕೆಲಸ ಮಾಡುತ್ತಿದೆ. ಇದಕ್ಕೂ ಪೆನ್ಶನ್ ಸ್ಕೀಮ್ ನೀಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆಷ್ಟು ಸ್ಯಾಲರಿ ಕೊಡುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಶ್ವಾನಕ್ಕೊಂದು ಸಮವಸ್ತ್ರ ನೀಡಿ ಮೂರು ಹೊತ್ತು ಆಹಾರ ನೀಡಿ ಎಂದು ಮತ್ತೊಬ್ಬರು ಕರೆ ಮಾಡಿದ್ದಾರೆ. ಈ ಶ್ವಾನ ಕೇಂದ್ರ ಸರ್ಕಾರ ನೌಕರನಾಗಿದ್ದು, ಆರ್‌ಪಿಎಫ್ ಪೊಲೀಸ್ ಆಗಿ ಕೆಲಸ ಮಾಡುತ್ತಿದೆ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ.ಕನಿಷ್ಠ ಪಕ್ಷ ಈ ಶ್ವಾನ ಜನರ ಸುರಕ್ಷತೆಯ ಬಗ್ಗೆ ಯೋಚನೆ ಮಾಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ ಒಟ್ಟಿನಲ್ಲಿ ರೈಲ್ವೆಯ ಶ್ವಾನದ ವೀಡಿಯೋ ಸಖತ್ ವೈರಲ್ ಆಗಿದೆ. 

ಐಸ್‌ಕ್ರೀಂ ಕವರ್ ತೆಗೆದು ಬಾಯಿಗಿಡಲು ಹೊರಟವನಿಗೆ ಶಾಕ್: ಒಳಗಿದ್ದಿದ್ದೇನು ನೋಡಿ

ಶ್ವಾನದ ಮುದ್ದಾದ ವಿಡಿಯೋ ಇಲ್ಲಿದೆ ನೋಡಿ

View post on Instagram