ದಂಪತಿ ಮೈಯಲ್ಲಿ ವಾಸನೆ, ವಿಮಾನದಿಂದಲೇ ಕೆಳಗಿಳಿಸಿದ ಏರ್‌ಲೈನ್ಸ್!

ಅಮೆರಿಕನ್ ಏರ್ಲೈನ್ಸ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ಬೆವರಿನ ವಾಸನೆ ನೆಪ ಒಡ್ಡಿ ದಂಪತಿಗೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಿಲ್ಲ. ಎಲ್ಲರ ಮುಂದೆ ಅವಮಾನ ಎದುರಿಸದ ದಂಪತಿ ಏರ್ಲೈನ್ಸ್ ವಿರುದ್ಧ ದೂರು ನೀಡಿದ್ದಾರೆ.
 

Couple Body Smelling Bad In American Flight Air Hostess Took Both Of Them Off Plane roo

ಈಗಿನ ದಿನಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹಾಗೆ ವಿಮಾನದಲ್ಲಿ ನಡೆಯುವ ಚಿತ್ರವಿಚಿತ್ರ ಘಟನೆಗಳು ಕೂಡ ವರದಿ ಆಗ್ತಿವೆ. ಕೆಲ ದಿನಗಳ ಹಿಂದೆ ನಾಯಿ ಬಿಡ್ತಿದ್ದ ಗ್ಯಾಸ್ ವಾಸನೆಗೆ ಬೇಸತ್ತ ದಂಪತಿ ಟಿಕೆಟ್ ಹಣ ವಾಪಸ್ ಪಡೆದಿದ್ದರು. ಈಗ ಮನುಷ್ಯರ ಬೆವರು ವಾಸನೆ ಕಾರಣಕ್ಕೆ ವಿಮಾನದಿಂದ ಇಳಿಸಿದ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ದೇಹದಿಂದ ಕೆಟ್ಟ ಬೆವರು ವಾಸನೆ ಬರ್ತಾ ಇತ್ತು ಎನ್ನುವ ಕಾರಣ ಹೇಳಿ ವಿಮಾನ ಸಿಬ್ಬಂದಿ ದಂಪತಿಯನ್ನು ವಿಮಾನದಿಂದ ಕೆಳಗೆ ಇಳಿಸಿದ ಎನ್ನಲಾಗಿದೆ. ಈ ಘಟನೆ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ನಡೆದಿದೆ. ಅಮೆರಿಕನ್ ಏರ್ಲೈನ್ಸ್ ವಿರುದ್ಧ ದಂಪತಿ ದೂರು ದಾಖಲಿಸಿದ್ದಾರೆ. 

ವಿಮಾನದಿಂದ ಕೆಳಗಿಳಿಸಲು ನೀಡಿದರು ಈ ಕಾರಣ : ಅಮೆರಿಕನ್ ಏರ್‌ಲೈನ್ಸ್ (Airlines )ವಿಮಾನದಿಂದ ಕೆಳಗಿಳಿಸಿ ಮುಜುಗರ ತಂದಿದೆ ಎಂದು ದಂಪತಿ ಆರೋಪಿಸಿದ್ದಾರೆ. ಈ ಆರೋಪ ಮಾಡಿದ ವ್ಯಕ್ತಿಯ ಹೆಸರು ಯೋಸ್ಸಿ ಆಡ್ಲರ್.  ಅವರ ಹೆಂಡತಿಯ ಹೆಸರು ಜೆನ್ನಿ. ಈ ಪತಿ ಮತ್ತು ಪತ್ನಿ ಇಬ್ಬರೂ ಅಮೆರಿಕ  (America) ದ ಡೆಟ್ರಾಯಿಟ್ ನಿವಾಸಿಗಳು. ತಮ್ಮ 19 ತಿಂಗಳ ಮಗಳೊಂದಿಗೆ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇವರಿಬ್ಬರು ಪ್ರಯಾಣ ಬೆಳೆಸುವವರಿದ್ದರು. ದಂಪತಿ ತಮ್ಮ ಮನೆಗೆ ಹೋಗುತ್ತಿದ್ದರು. ಆದರೆ ವಿಮಾನ ಪ್ರಯಾಣ ಶುರುವಾಗುವ ಮುನ್ನವೇ ಅವರು ಅವಮಾನ ಎದುರಿಸಬೇಕಾಯ್ತು. ವಿಮಾನದಿಂದ ಅವರನ್ನು ಇಳಿಸಲಾಯ್ತು. ವಿಮಾನದಿಂದ ಕೆಳಗೆ ಇಳಿಸುವ ವೇಳೆ ಯಾವುದೇ ಕಾರಣವನ್ನು ಹೇಳಿರಲಿಲ್ಲ ಎಂದು ದಂಪತಿ ಆರೋಪ ಮಾಡಿದ್ದಾರೆ. ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಅವರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಕೊನೆಯಲ್ಲಿ ಈ ವಿಷಯ ತಿಳಿದಿದೆ. ಮಹಿಳೆ ಬೆವರಿನ  ವಾಸನೆ ಇಡೀ ವಿಮಾನವನ್ನು ಹರಡಿದ ಕಾರಣ, ಪ್ರಯಾಣಿಕರಿಗೆ ವಿಮಾನ ಪ್ರಯಾಣ ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಕೊನೆಯಲ್ಲಿ ತಿಳಿದಿದೆ.  ವಿಮಾನಯಾನ ಸಂಸ್ಥೆಯ ಈ ವರ್ತನೆಯಿಂದಾಗಿ ಅವರು ತಮ್ಮ ವಿಮಾನವನ್ನು ರದ್ದುಗೊಳಿಸಿದ್ರು.

ಇತಿಹಾಸದ ಪುಟ ಸೇರಿದ ಮುಂಬೈ ಡಬ್ಬಲ್ ಡೆಕ್ಕರ್ ಬಸ್‌: ಕೆಂಪು ಸುಂದರಿಗೆ ಮುಂಬೈ ಜನರ ಭಾವುಕ ವಿದಾಯ

ಅಮೆರಿಕಾ ಏರ್ಲೈನ್ಸ್ ಸ್ಪಷ್ಟನೆ : ಅಮೆರಿಕದ ವಿಮಾನಯಾನ ಸಂಸ್ಥೆಗಳು ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟನೆ ನೀಡಿದೆ. ದಂಪತಿ ವಿಮಾನ ಹತ್ತುವಾಗ ಅನೇಕ ಪ್ರಯಾಣಿಕರು ಅವರ ದೇಹದ ವಾಸನೆಯ ಬಗ್ಗೆ ದೂರು ನೀಡಿದ್ದರು. ಹಾಗಾಗಿ ಅವರನ್ನು ವಿಮಾನದಿಂದ ಇಳಿಸಲಾಯ್ತು. ಏರ್ಲೈನ್ಸ್ ಬರೀ ಅವರನ್ನು ವಿಮಾನದಿಂದ ಕೆಳಗೆ ಇಳಿಸಿಲ್ಲ, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಿತ್ತು, ಹೊಟೇಲ್ ರೂಮ್ ಹಾಗೂ   ಆಹಾರ ಚೀಟಿಗಳನ್ನು ಸಹ ನೀಡಲು ಮುಂದಾಗಿತ್ತು. ಆದ್ರೆ ದಂಪತಿ ಇದನ್ನು ಒಪ್ಪಿಕೊಳ್ಳಲಿಲ್ಲ ಎಂದು ಏರ್ಲೈನ್ಸ್ ಹೇಳಿದೆ.      

ವಿಮಾನದಿಂದ ಇಳಿಸಲು ಇದು ಅಸಲಿ ಕಾರಣವೇ ಅಲ್ಲ ಎನ್ನುತ್ತಾರೆ ಆಡ್ಲರ್ :  ಪತ್ನಿ ದೇಹದಿಂದ ಬೆವರಿನ ವಾಸನೆ ಬರ್ತಿದೆ ಎನ್ನುವ ಕಾರಣಕ್ಕೆ ನಮ್ಮನ್ನು ವಿಮಾನದಿಂದ ಇಳಿಸಿಲ್ಲ. ವಾಸ್ತವವಾಗಿ ಆಕೆ ದೇಹದಿಂದ ಯಾವುದೇ ಬೆವರಿನ ವಾಸನೆ ಬರ್ತಾ ಇರಲಿಲ್ಲ. ಇದಕ್ಕೆ ಬೇರೆಯದೇ ಕಾರಣವಿದೆ ಎಂದು ಆಡ್ಲರ್ ದೂರಿದ್ದಾರೆ. ಆಡ್ಲರ್ ವಾಸ್ತವವಾಗಿ ವ್ಯಾಪಾರಿ ಸಲಹೆಗಾರನರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸು. 

ನಿಮಗೆ ಗೊತ್ತಾ? ಭಾರತದ ಪ್ರಮುಖ ನದಿಗಳಲ್ಲೊಂದಾದ ಈ ನದಿ ಭೂಮಿ ಮೇಲೆ ಇಲ್ವೇ ಇಲ್ಲ!

ಆಡ್ಲರ್ ಪ್ರಕಾರ, ಅವರು ಯಹೂದಿಯಾಗಿರುವುದೇ ವಿಮಾನದಿಂದ ಕೆಳಗೆ ಇಳಿಸಲು ಕಾರಣವೆಂದು ಹೇಳಿದ್ದಾರೆ. ಧರ್ಮದ ಸೋಗಿನಲ್ಲಿ ಅಮೆರಿಕಾ ಏರ್ಲೈನ್ಸ್ ಪ್ರಯಾಣವನ್ನು ತಡೆದಿದೆ. ಆದ್ರೆ ಈ ವಿಷ್ಯವನ್ನು ಅಮೆರಿಕನ್ ಏರ್‌ಲೈನ್ಸ್ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಆದರೆ ಇದು ಸತ್ಯ ಎಂದು ಆಡ್ಲರ್ ದೂರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
 

Latest Videos
Follow Us:
Download App:
  • android
  • ios