MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ನಿಮಗೆ ಗೊತ್ತಾ? ಭಾರತದ ಪ್ರಮುಖ ನದಿಗಳಲ್ಲೊಂದಾದ ಈ ನದಿ ಭೂಮಿ ಮೇಲೆ ಇಲ್ವೇ ಇಲ್ಲ!

ನಿಮಗೆ ಗೊತ್ತಾ? ಭಾರತದ ಪ್ರಮುಖ ನದಿಗಳಲ್ಲೊಂದಾದ ಈ ನದಿ ಭೂಮಿ ಮೇಲೆ ಇಲ್ವೇ ಇಲ್ಲ!

ನದಿಗಳು ನಮ್ಮ ಜೀವನದ ಪ್ರಮುಖ ಭಾಗ. ನದಿಗಳಿಲ್ಲದೇ ನಮಗೆ ಜೀವಿಸಲು ಸಹ ಸಾಧ್ಯವಿಲ್ಲ ಅಲ್ವಾ? ದೇಶದ ಪ್ರಮುಖ ನದಿಗಳಲ್ಲಿ ಹಲವು ನದಿಗಳ ಹೆಸರು ಕೇಳಿರುತ್ತೀರಿ ನೀವು. ಆದರೆ ಇವುಗಳಲ್ಲಿ ಒಂದು ನದಿ ಭೂಮಿ ಮೇಲೆ ಇಲ್ವೇ ಇಲ್ಲ ಅಂದ್ರೆ ನೀವು ನಂಬುತ್ತೀರಾ?  

2 Min read
Suvarna News
Published : Sep 13 2023, 03:38 PM IST
Share this Photo Gallery
  • FB
  • TW
  • Linkdin
  • Whatsapp
110

ಭಾರತದಲ್ಲಿ ಹಲವು ನದಿಗಳು (river) ಹರಿಯುತ್ತವೆ, ಲೆಕ್ಕ ಮಾಡಿದ್ರೆ ಸುಮಾರು 200ಕ್ಕೂ ಅಧಿಕ ನದಿಗಳಿವೆ. ಇವುಗಳಲ್ಲಿ ಗಂಗಾ, ಯಮುನಾ, ನರ್ಮದಾ, ಕಾವೇರಿ, ಕೃಷ್ಣಾ, ಗೋದಾವರಿ ಪ್ರಮುಖ ನದಿಗಳಾಗಿವೆ. ಇವುಗಳ ರಾಜ್ಯಗಳ ಜನರ ಜೀವನಾಧಾರವೂ ಆಗಿದೆ. 
 

210

ನೀವು ಭಾರತದ ಪ್ರಮುಖ ನದಿಗಳ ಹೆಸರುಗಳನ್ನು ಹೇಳುವಾಗ ಸರಸ್ವತಿ ನದಿಯ (Saraswati River) ಹೆಸರು ಸಹ ಕೇಳಿರುತ್ತೀರಿ ಅಲ್ವಾ? ಆದರೆ ಇದು ಎಲ್ಲಿ ಹರಿಯುತ್ತೆ ಅನ್ನೋದು ಗೊತ್ತಾ? ಅಥವಾ ಯಾರದರೂ ಈ ನದಿ ಹರಿಯೋದನ್ನು ನೋಡಿದ್ದೀರಾ? ಖಂಡಿತಾ ಸಾಧ್ಯವಿಲ್ಲ. ಯಾಕಂದ್ರೆ ಈ ನದಿ ಭೂಮಿ ಮೇಲೆ ಇಲ್ವೇ ಇಲ್ಲ. 
 

310

ಈ ನದಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ, ಇದು ಬಹುಶಃ ಈ ನದಿಯ ರಹಸ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಬಿಚ್ಚಿಡಲು ಸಹಾಯ ಮಾಡುತ್ತದೆ. ಈ ನದಿಯ ಅಸ್ತಿತ್ವ ಎಲ್ಲಿದೆ ಮತ್ತು ಈ ನದಿ ಭೂಮಿ ಮೇಲೆ ಯಾಕಿಲ್ಲ, ಭೂಮಿಯಲ್ಲಿ ಇಲ್ಲದ ನದಿಯ ಉಲ್ಲೇಖವಾದರೂ ಇತಿಹಾಸದಲ್ಲಿ ಯಾಕಿದೆ? ಅದರ ಆಸಕ್ತಿದಾಯಕ ಕಥೆ ಏನು ಎಂದು ತಿಳಿಯೋಣ.
 

410

ಸರಸ್ವತಿ ನದಿಯ ಉಗಮದ ಬಗ್ಗೆ ಹೇಳೊದಾದ್ರೆ ರಾಜಸ್ಥಾನದ ಅರಾವಳಿ ಪರ್ವತ ಶ್ರೇಣಿಯ ಮಧ್ಯದಿಂದ ಹುಟ್ಟುತ್ತೆ. ಇದನ್ನು ಅಲಕನಂದಾ ನದಿಯ ಉಪನದಿ ಎಂದು ಕರೆಯಲಾಗುತ್ತದೆ, ಇದರ ಮೂಲ ಉತ್ತರಾಖಂಡದ ಬದರೀನಾಥ್ ಬಳಿ ಇದೆ. ರನ್ ಆಫ್ ಕಚ್ (Rann of Kutch) ಅನ್ನು ಸೇರುವ ಮೊದಲು ಈ ನದಿಯು ಪಟಾನ್ ಮತ್ತು ಸಿದ್ಧಪುರದ ಮೂಲಕ ಹಾದುಹೋಗುತ್ತದೆ. 
 

510

ಹಾಗಿದ್ರೆ ಈ ನದಿಯ ಕಾಣಿಸೋದಿಲ್ಲ ಯಾಕೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಅದೇನೆಂದರೆ ಈ ನದಿಯು ಹಲವಾರು ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತು ಮತ್ತು ಅದು ಈಗ ಒಣಗಿದೆ ಅಥವಾ ಅಳಿದುಹೋಗಿದೆ ಎಂದು ನಂಬಲಾಗಿದೆ. ಕೆಲವು ಗ್ರಂಥಗಳ ಪ್ರಕಾರ ಸರಸ್ವತಿ ನದಿ ಗುಪ್ತಗಾಮಿನಿಯಾಗಿ ಭೂಗರ್ಭದಲ್ಲಿ ಹರಿಯುತ್ತಾಳೆ ಎಂದು ಸಹ ಹೇಳಲಾಗಿದೆ. 

610

ಸರಸ್ವತಿ ನದಿಯ ಮೊದಲ ಉಲ್ಲೇಖವು ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿ ಕಂಡುಬರುತ್ತದೆ. ಇದನ್ನು ಉತ್ತರ ವೈದಿಕ ಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ. ಒಂದು ಕಾಲದಲ್ಲಿ ಹಿಂದೂ ಧರ್ಮದ ಅನುಯಾಯಿಗಳು ಪೂಜಿಸುತ್ತಿದ್ದ ಕೆಲವೇ ನದಿಗಳಲ್ಲಿ ಸರಸ್ವತಿ ನದಿಯೂ ಒಂದಾಗಿದೆ. 

710

ಪ್ರಯಾಗದಲ್ಲಿ ತ್ರಿವೇಣಿಯ ಸಂಗಮ (Triveni Sangama) ಸ್ಥಳವಿದೆ, ಅಲ್ಲಿ ಭಕ್ತರ ಪಾಪಗಳು ಸ್ನಾನ ಮಾಡುವ ಮೂಲಕ ತೊಳೆಯಲ್ಪಡುತ್ತವೆ ಎಂದು ನಂಬಲಾಗಿದೆ. ಇಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾಗುತ್ತದೆ ಎನ್ನಲಾಗುತ್ತದೆ. ಗಂಗಾ ಮತ್ತು ಯಮುನಾ ಎರಡು ದಿಕ್ಕಿನಲ್ಲಿ ಬಂದರೆ, ಸರಸ್ವತಿ ನದಿಯು ಭೂಗರ್ಭದಲ್ಲಿ ಹರಿದು ಇಲ್ಲಿ ಸಂಗಮವಾಗುತ್ತಾಳೆ.

810

ಸರಸ್ವತಿ ನದಿಯ ಶಾಪ 
ಒಮ್ಮೆ ವೇದವ್ಯಾಸರು ಸರಸ್ವತಿ ನದಿ ದಡದಲ್ಲಿ ಗಣೇಶನಿಗೆ ಮಹಾಭಾರತದ ಕಥೆಯನ್ನು (Mahabharat) ಹೇಳುತ್ತಿದ್ದರು ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಆ ಸಮಯದಲ್ಲಿ ಋಷಿ ಪಾಠವನ್ನು ಪೂರ್ಣಗೊಳಿಸಲು ನದಿಯನ್ನು ನಿಧಾನವಾಗಿ ಹರಿಯುವಂತೆ ವಿನಂತಿಸಿದರು. ಶಕ್ತಿಶಾಲಿ ಸರಸ್ವತಿ ನದಿಯು ಅವರ ಮಾತನ್ನು ಕೇಳದೆ, ವೇಗದಲ್ಲಿ ಹರಿದಳು. ನದಿಯ ಈ ವರ್ತನೆಯಿಂದ ಕೋಪಗೊಂಡ ಗಣೇಶನು ನದಿ ಒಂದು ದಿನ ಅಳಿದುಹೋಗುತ್ತದೆ ಎಂದು ಶಪಿಸಿದನು. ಹಾಗಾಗಿ ನದಿ ಅಳಿದು ಹೋಗಿದೆ ಎನ್ನಲಾಗಿದೆ. 

910

ಮತ್ತೊಂದು ದಂತಕಥೆ ಪ್ರಕಾರ, ಸರಸ್ವತಿ ದೇವಿಯು ಬ್ರಹ್ಮನ ತಲೆಯಿಂದ ಜನಿಸಿದಳು, ಅವಳು ಬ್ರಹ್ಮಾಂಡವನ್ನು ಸೃಷ್ಟಿಸಿದಳು. ಬ್ರಹ್ಮ ದೇವರು ನೋಡಿದ ಅತ್ಯಂತ ಸುಂದರ ಮಹಿಳೆಯರಲ್ಲಿ ಅವಳು ಒಬ್ಬಳು. ಅವಳ ಸೌಂದರ್ಯವನ್ನು ನೋಡಿ, ಅವರು ಸರಸ್ವತಿಯನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದರಂತೆ. ಆ ಸಮಯದಲ್ಲಿ ಮಾತಾ ಸರಸ್ವತಿ ಅವರ ಇಚ್ಛೆಯನ್ನು ಒಪ್ಪಲಿಲ್ಲ ಮತ್ತು ನದಿಯ ರೂಪದಲ್ಲಿ ನೆಲದ ಕೆಳಗೆ ಹರಿಯಲು ಪ್ರಾರಂಭಿಸಿದಳು ಎನ್ನಲಾಗಿದೆ. 
 

1010

ಇನ್ನೂ ಕೆಲವು ಗ್ರಂಥಗಳು ತಿಳಿಸುವಂತೆ, ದುರ್ವಾಸ ಮುನಿಗಳು ಸರಸ್ವತಿ ನದಿಗೆ ಶಾಪ ನೀಡಿದರಂತೆ. ಕಲಿಯುಗ ಬರುವವರೆಗೆ ನೀನು ಕಣ್ಮರೆಯಾಗು ಎನ್ನುವಂತೆ ಶಪಿಸಿದರಂತೆ. ಹಾಗಾಗಿ ಸರಸ್ವತಿ ಅಂತರ್ಗತಳಾದಳು. ಕಲ್ಕಿಯು ಭೂಮಿಯ ಮೇಲೆ ಜನ್ಮ ಎತ್ತಿ ಬಂದ ನಂತರವಷ್ಟೇ ಸರಸ್ವತಿ ನದಿ ಭೂಮಿ ಮೇಲೆ ಕಾಣಿಸೋದಂತೆ. 

About the Author

SN
Suvarna News
ನದಿ
ಪ್ರವಾಸ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved