Asianet Suvarna News Asianet Suvarna News

ಸಿಗರೇಟ್ ಇಲ್ಲ ಅಂದ್ರೆ ವಧು ಇಲ್ಲ… ಚೀನಾದಲ್ಲಿ ಹಳೆ ಸಂಪ್ರದಾಯಕ್ಕೆ ಹೊಸ ಟಚ್

ಚೀನಾ ತನ್ನ ಆಹಾರದಿಂದ ಮಾತ್ರವಲ್ಲ ಮದುವೆ, ಸಂಪ್ರದಾಯದಿಂದಲೂ ಚರ್ಚೆಯಲ್ಲಿರುತ್ತದೆ. ಅಲ್ಲಿನ ಜನರು ಮದುವೆಯ ಹಳೆ ಸಂಪ್ರದಾಯವೊಂದಕ್ಕೆ ಹೊಸ ರೂಪ ನೀಡಿದ್ದಾರೆ. ಅದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

China Wedding Ritual Villagers Padlock Porsche Groom Demand Cigarettes roo
Author
First Published Dec 11, 2023, 3:45 PM IST

ಮದುವೆಗೆ ಸಂಬಂಧಿಸಿದಂತೆ ಪ್ರತಿಯೊಂದು ದೇಶ, ರಾಜ್ಯ, ಊರಿನಲ್ಲಿ ಒಂದೊಂದು ಪದ್ಧತಿ ಇದೆ. ಜಾತಿ, ಜನಾಂಗದ ಮೇಲೂ ಮದುವೆ ಸಂಪ್ರದಾಯಗಳು ಬದಲಾಗುತ್ತವೆ. ಮದುವೆಯಲ್ಲಿ ಅನುಸರಿಸುವ ಕೆಲ ಪದ್ಧತಿಗಳು ಕಠಿಣವಾಗಿದ್ದರೆ ಮತ್ತೆ ಕೆಲವು ಅಚ್ಚರಿ ಹುಟ್ಟಿಸುತ್ತವೆ. ಮದುವೆ ಮೊದಲ ದಿನ ನವ ದಂಪತಿ ಜೊತೆ ತಾಯಿ ಮಲಗುವುದರಿಂದ ಹಿಡಿದು ಮದುವೆ ದಿನ ವಧು – ವರರು ಉಪವಾಸ ಇರುವವರೆಗೆ ಅನೇಕಾನೇಕ ಪದ್ಧತಿ ಜಾರಿಯಲ್ಲಿದೆ. ಇದಕ್ಕೆ ನೆರೆ ದೇಶ ಚೀನಾ ಕೂಡ ಹೊರತಾಗಿಲ್ಲ. ಚೀನಾದಲ್ಲೂ ಮದುವೆಗೆ ಸಂಬಂಧಿಸಿದಂತೆ ಅನೇಕ ಪದ್ಧತಿಗಳನ್ನು ಪಾಲಿಸಿಕೊಂಡು ಬರಲಾಗ್ತಿದೆ. ಆದ್ರೆ ಈಗಿನ ದಿನಗಳಲ್ಲಿ ಹಳೆ ಸಂಪ್ರದಾಯಕ್ಕೆ ಹೊಸ ರೂಪ ನೀಡಲಾಗಿದೆ. ನಾವಿಂದು ಪದ್ಧತಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ವಧುವಿನ ಆಯ್ಕೆ ಚೀನಾ (China) ದಲ್ಲಿ ಹಿಂದಿನಿಂದಲೂ ಜಾರಿಯಲ್ಲಿರುವ ಒಂದು ಪದ್ಧತಿ. ಇಲ್ಲಿ ವರನಿಗೆ ಅನೇಕ ಸವಾಲು, ಆಟಗಳಿರುತ್ತವೆ. ಅವುಗಳನ್ನು ಗೆಲ್ಲುವ ಮೂಲಕ ವರ (Groom) , ವಧುವನ್ನು ಪಡೆಯಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ವರ ತನ್ನ ಸಂತೋಷ (Happiness) ವನ್ನು ಹಂಚಿಕೊಳ್ಳಲು ಮತ್ತು ಅತಿಥಿಗಳನ್ನು ಖುಷಿಗೊಳಿಸಲು ಅವರಿಗೆ ನಗದು, ಮಿಠಾಯಿ ಅಥವಾ ಸಿಗರೇಟ್ ಸೇರಿದಂತೆ ಕೆಲ ಉಡುಗೊರೆಗಳಿರುವ  ಕೆಂಪು ಲಕೋಟೆಗಳನ್ನು ನೀಡುವುದು ವಾಡಿಕೆ ಇದೆ. ಆದ್ರೀಗ ಈ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದಿದೆ.

ವಿಶ್ವದ ದೊಡ್ಡ ಗುಹೆ ಇದು, ಇದ್ರಲ್ಲಿಯೇ ತನ್ನದೇ ಆದ ವಿಶ್ವವೇ ಇದೆ!

ಕಾರಿಗೆ ಬೀಗ ಹಾಕಿ ಸಿಗರೇಟ್ ವಸೂಲಿ: ಸಾಮಾಜಿಕ ಜಾಲತಾಣದಲ್ಲಿ ನೀವು ಇದ್ರ ಫೋಟೋಗಳನ್ನು ನೋಡ್ಬಹುದು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಕೂಡ ಈ ಬಗ್ಗೆ ವರದಿ ಮಾಡಿದೆ. ಚೀನಾದ ಕೆಲವು ಭಾಗಗಳಲ್ಲಿ ಈ ಹೊಸ ಟ್ರೆಂಡ್ ಕಂಡು ಬರುತ್ತಿದೆ ಎಂದು ಅದು ಹೇಳಿದೆ. 

ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಕಪ್ಪು ಬಣ್ಣದ ಪೋರ್ಷೆ ಕಾರನ್ನು ನೋಡಬಹುದು. ಅದನ್ನು ಹೂಗಳಿಂದ ಅಲಂಕರಿಸಲಾಗಿದೆ. ಆದ್ರೆ  ಅದರ ಟೈರ್‌ಗಳಿಗೆ ಒಟ್ಟು 40 ಪ್ಯಾಡ್‌ಲಾಕ್‌ಗಳನ್ನು ಹಾಕಲಾಗಿದೆ. ಇದು ವರನ ಕಾರ್ ಆಗಿದ್ದು. ಆತ ಸ್ನೇಹಿತರು ಮತ್ತು ಸಂಬಂಧಿಕರು ಈ ಪ್ಯಾಡ್ ಲಾಕ್ ಹಾಕಿದ್ದಾರೆ. ಸಿಗರೇಟ್ ನೀಡಿದ ನಂತ್ರ ಪ್ಯಾಡ್ ಲಾಕ್ ತೆಗೆಯುವುದಾಗಿ ಷರತ್ತು ಹಾಕಿದ್ದಾರೆ. ಎರಡು ಬೀಗಗಳನ್ನು ತೆರೆಯಲು ಒಂದು ಕಾರ್ಟನ್ ಸಿಗರೇಟನ್ನು ವರ ನೀಡಬೇಕಾಗುತ್ತದೆ.  ಕಾರು ಲಾಕಿಂಗ್ ಪ್ರಾಚೀನ ಸಂಪ್ರದಾಯಕ್ಕೆ ಸಮಕಾಲೀನ ಸೇರ್ಪಡೆಯಾಗಿದೆ ಎಂದು ನಂಬಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳಾಗ್ತಿವೆ.  ಈ ಪ್ರದೇಶದ ಕೆಲವು ವಿವಾಹ ಉದ್ಯಮದ ವೃತ್ತಿಪರರು, ಈ ಅಭ್ಯಾಸವು ದೀರ್ಘಕಾಲದಿಂದಲೂ ಇದೆ ಎಂದಿದ್ದಾರೆ. ಹಿಂದೆ ಕೆಟ್ಟ ಪರಿಸ್ಥಿತಿ ಇದ್ದ ಸಮಯದಲ್ಲಿ ಕಾರ್ ಲಾಕ್ ಮಾಡೋದು ಅದೃಷ್ಟವನ್ನು ತರುತ್ತದೆ ಎಂದು ಜನರು ನಂಬಿದ್ದರಂತೆ.  

ಈ ದೇಶದಲ್ಲಿ ಆಫೀಸಿಗೇ ಹಲ್ಲುಜ್ಜೋ ಬ್ರಷ್ ತೆಗೆದುಕೊಂಡು ಹೋಗ್ತಾರಂತೆ! ಅದ್ಯಾಕೆ?

ಇದನ್ನು ಕೆಲವರು ತಳ್ಳಿ ಹಾಕಿದ್ದಾರೆ. ಹಿಂದೆ ಕಾರಿರಲಿಲ್ಲ. ಹೇಗೆ ಈ ಪದ್ಧತಿ ಜಾರಿಯಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಕಾರ್ ಲಾಕ್ ಮಾಡಿದ ನಂತ್ರ ವರ ಸಿಗರೇಟ್ ನೀಡ್ಬೇಕು ಎಂದೇನಿಲ್ಲ. ವಿನೋದಕ್ಕೆ ಇದು ನಡೆಯುತ್ತದೆ. ಸಿಗರೇಟ್ ಪಡೆಯುವುದು ಅವರ ನಿಜವಾದ ಉದ್ದೇಶವಲ್ಲ. ವರನು ಸಾಂಕೇತಿಕವಾಗಿ ಕೆಲ ಪ್ಯಾಕ್ ನೀಡಬಹುದು ಎಂದಿದ್ದಾರೆ. ಕಸ್ಟಮ್ ಅಧಿಕಾರಿಯೊಬ್ಬರು, ಇದೊಂದು ಸಂಪ್ರದಾಯವಾಗಿದ್ದು, ಸಿಗರೇಟ್ ಪಡೆಯದೆ ಕಾರ್ ಲಾಕ್ ತೆಗೆಯಲಾಗಿದೆ ಎಂದಿದ್ದಾರೆ. 

ಸಾಂಪ್ರದಾಯಿಕ ವಿವಾಹ ಸಮಾರಂಭಗಳ ಉದ್ದೇಶ ಸಂತೋಷ ಮತ್ತು ಸಮೃದ್ಧಿಯನ್ನು ಹಂಚಿಕೊಳ್ಳುವುದಾಗಿದೆ. ಆದರೆ, ಕೆಲವರು ಆರ್ಥಿಕ ಲಾಭಕ್ಕಾಗಿ ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಕೆಲ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

Follow Us:
Download App:
  • android
  • ios