ವಿಮಾನ ಲ್ಯಾಂಡ್‌ ಆದ 30 ನಿಮಿಷಗಳ ಒಳಗೆ ಬ್ಯಾಗೇಜ್‌ ನೀಡಿ: ಏರ್‌ಲೈನ್ಸ್‌ ಕಂಪನಿಗಳಿಗೆ ಸರ್ಕಾರದ ಸೂಚನೆ!

Bureau of Civil Aviation Security ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿಯು ದೇಶದ ಪ್ರಮುಖ ಏಳು ಏರ್‌ಲೈನ್ಸ್‌ಗಳಿಗೆ ಸೂಚನೆಯನ್ನು ನೀಡಿದ್ದು, ವಿಮಾನ ಲ್ಯಾಂಡ್‌ ಆದ 30 ನಿಮಿಷಗಳ ಒಳಗಾಗಿ ಪ್ರಯಾಣಿಕರಿಗೆ ಅವರ ಬ್ಯಾಗೇಜ್‌ಗಳನ್ನು ನೀಡಬೇಕು ಎಂದು ಸೂಚಿಸಿದೆ.

Central Governament to Airlines ensure timely arrival of baggage at airports san

ನವದೆಹಲಿ (ಫೆ.18): ವಿಮಾ ನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್‌ ಆದ 30 ನಿಮಿಷಗಳ ಒಳಗಾಗಿ ಪ್ರಯಾಣಿಕರ ಎಲ್ಲಾ ಬ್ಯಾಗೇಜ್‌ಗಳನ್ನು ಅವರಿಗೆ ನೀಡಬೇಕು ಎಂದು ಬ್ಯೂರೋ ಆಫ್‌ ಸಿವಿಲ್‌ ಏಯಿಯೇಷನ್‌ ಸೆಕ್ಯುರಿಟಿ (ಬಿಸಿಎಎಸ್‌) ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ನಿಂದ ಏಳು ನಿಗದಿತ ವಿಮಾನಯಾನ ಸಂಸ್ಥೆಗಳಿಗೆ ಈ ನಿರ್ದೇಶನ ನೀಡಿದೆ, ವಿಮಾನ ಇಳಿದ ನಂತರ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಪಡೆಯುವಲ್ಲಿ ನಿರಂತರವಾಗಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಸೂಚನೆಯನ್ನು ನೀಡಿದೆ. ತಾನು ನೀಡಿದ ಈ ಆದೇಶ ಫೆಬ್ರವರಿ 26ರ ಒಳಗಾಗಿ ಜಾರಿಯಾಗಬೇಕು. ಸಮಯೋಚಿತವಾಗಿ ಪ್ರಯಾಣಿಕರಿಗೆ ಅವರ ಬ್ಯಾಗೇಜ್‌ಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಬಿಸಿಎಎಸ್‌ ವಿಮಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.   ಏಳು ಏರ್‌ಲೈನ್‌ಗಳಾದ ಏರ್ ಇಂಡಿಯಾ, ಇಂಡಿಗೋ, ಆಕಾಶ್‌ ಏರ್, ಸ್ಪೈಸ್ ಜೆಟ್, ವಿಸ್ತಾರಾ, ಎಐಎಕ್ಸ್ ಕನೆಕ್ಟ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಫೆಬ್ರವರಿ 16 ರಂದು ನಿರ್ದೇಶನವನ್ನು ನೀಡಲಾಗಿದೆ.

ಕಾರ್ಯಾಚರಣೆ, ನಿರ್ವಹಣೆ ಮತ್ತು ವಿತರಣಾ ಒಪ್ಪಂದದ (OMDA) ಸೇವಾ ಗುಣಮಟ್ಟ ಅಗತ್ಯತೆಗಳ ಪ್ರಕಾರ ವಿಮಾನ ಇಳಿದ 30 ನಿಮಿಷಗಳ ಒಳಗಾಗಿ ತನ್ನ ವಿಮಾನದಲ್ಲಿ ಪ್ರಯಾಣಿಸಿದ ಕೊನೆಯ ಪ್ರಯಾಣಿಕನ ಬ್ಯಾಗೇಜ್‌ ಕೂಡ ನೀಡಿರಬೇಕು. ಈ ಬಗ್ಗೆ ಏರ್‌ಲೈನ್ಸ್‌ಗಳು ಗಮನ ನೀಡಬೇಕು ಎನ್ನಲಾಗಿದೆ. 2024 ರ ಜನವರಿಯಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸೂಚನೆಗಳ ಅಡಿಯಲ್ಲಿ ಆರು ಪ್ರಮುಖ ವಿಮಾನ ನಿಲ್ದಾಣಗಳ ಬೆಲ್ಟ್‌ಗಳಲ್ಲಿ ಬ್ಯಾಗೇಜ್ ಆಗಮನವನ್ನು BCAS ಮೇಲ್ವಿಚಾರಣೆ ಮಾಡುತ್ತಿದೆ.

ಅತಿಥಿಗಳಿಗಾಗಿ ವಿಮಾನಗಳು, ಹೆಲಿಕಾಪ್ಟರ್ ಗಿಫ್ಟ್, ಕೋಟಿ ಮೌಲ್ಯದ ಆಭರಣ, ಅತ್ಯಂತ ದುಬಾರಿ ಭಾರತೀಯ ವಿವಾಹ

"ಪರಿಶೀಲನಾ ಹಂತದ ಆರಂಭದಿಂದಲೂ, ಎಲ್ಲಾ ವಿಮಾನಯಾನ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಸುಧಾರಿಸಿದೆ ಆದರೆ ಆದೇಶಗಳ ಪ್ರಕಾರ ನಡೆಯುತ್ತಿಲ್ಲ ಎಂದು ಹೇಳಿದೆ. "ವಿಮಾನದ ಇಂಜಿನ್ ಅನ್ನು ಸ್ಥಗಿತಗೊಳಿಸಿದ 10 ನಿಮಿಷಗಳಲ್ಲಿ ಮೊದಲ ಬ್ಯಾಗೇಜ್, ಬ್ಯಾಗೇಜ್ ಬೆಲ್ಟ್‌ಗೆ ತಲುಪಬೇಕು. ಅದೇ 30 ನಿಮಿಷಗಳಲ್ಲಿ ಕೊನೆಯ ಬ್ಯಾಗೇಜ್‌, ಬ್ಯಾಗೇಜ್‌ ಬೆಲ್ಟ್‌ನಲ್ಲಿ ಇರಬೇಕು ಎಂದು ಹೇಳಿಕೆ ತಿಳಿಸಿದೆ.

ವಿಮಾನದಲ್ಲಿ ತಾಂತ್ರಿಕ ಸಮಸ್ಯೆ: ಸಾವಿನ ಬಾಯಿಗೆ ಹೋಗಿ ಬಂದ ಅನುಭವ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

Latest Videos
Follow Us:
Download App:
  • android
  • ios