ಅತಿಥಿಗಳಿಗಾಗಿ ವಿಮಾನಗಳು, ಹೆಲಿಕಾಪ್ಟರ್ ಗಿಫ್ಟ್, ಕೋಟಿ ಮೌಲ್ಯದ ಆಭರಣ, ಅತ್ಯಂತ ದುಬಾರಿ ಭಾರತೀಯ ವಿವಾಹ
ಭಾರತದಲ್ಲಿ ಅದೆಷ್ಟೋ ಅದ್ದೂರಿ ವಿವಾಹಗಳು ನಡೆದಿದೆ. ಒಂದಕ್ಕಿಂತ ಒಂದು ವಿಭಿನ್ನವಾಗಿ ನಡೆದಿದೆ. ಪ್ಲಾಟಿನಂ ಮಂಗಳಸೂತ್ರ ಹೆಲಿಕಾಫ್ಟರ್ ಗಿಫ್ಟ್, ಬಂಗಾರದ ಉಡುಗೊರೆಗಳಿಗೆ ಲೆಕ್ಕವಿಲ್ಲ. ಸರಾಸರಿ ಕುಟುಂಬಕ್ಕೆ ಮದುವೆಯು ಕೆಲವು ನೂರು ಅತಿಥಿಗಳೊಂದಿಗೆ ವಿಶೇಷ ಕೂಟವಾಗಿದ್ದರೆ, ಶ್ರೀಮಂತರು ಮತ್ತು ಪ್ರಸಿದ್ಧರಿಗೆ, ಇದು ಭವ್ಯವಾದ ಆಚರಣೆ ಮತ್ತು ಸಂಪತ್ತನ್ನು ಪ್ರದರ್ಶಿಸಲು ಒಂದು ಅವಕಾಶವಾಗಿದೆ. ದೇಶದ ಅಂತಹ ಅನೇಕ ಐಷಾರಾಮಿ ಮದುವೆಗಳ ಪಟ್ಟಿ ಇಲ್ಲಿದೆ.
ವನಿಶಾ ಮಿತ್ತಲ್ ಮತ್ತು ಅಮಿತ್ ಭಾಟಿಯಾ ಅವರ ವಿವಾಹ (2004): ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಪುತ್ರಿ ವನಿಷಾ ಮತ್ತು ಬ್ಯಾಂಕರ್ ಅಮಿತ್ ಭಾಟಿಯಾ ಅವರ ವಿವಾಹವು ಪ್ಯಾರಿಸ್‌ನಲ್ಲಿ ಆರು ದಿನಗಳ ಕಾಲ ನಡೆದಿತ್ತು. ಅಂದಾಜು 240 ಕೋಟಿ ರೂ. ಸಮಾರಂಭವು ಲೌವ್ರೆ ಮುಂಭಾಗದಲ್ಲಿರುವ ವಿಲಕ್ಷಣ ಜಾರ್ಡಿನ್ ಡಿ ಟ್ಯುಲೆರೀಸ್‌ನಲ್ಲಿ ಸಂಗೀತದೊಂದಿಗೆ ಪ್ರಾರಂಭವಾಯಿತು. ಬಾಲಿವುಡ್ ನೃತ್ಯ ಸಂಯೋಜಕಿ ಫರಾ ಖಾನ್ ಮತ್ತು ಪಾಪ್ ದಿವಾ ಕೈಲಿ ಮಿನೋಗ್ ಈವೆಂಟ್‌ನ ಹೈಲೈಟ್‌ಗಳಲ್ಲಿ ಸೇರಿದ್ದಾರೆ. ಇನ್ನು ಲಕ್ಷ್ಮಿ ಮಿತ್ತಲ್ ತಮ್ಮ ಪ್ರಮೋದ್ ಮಿತ್ತಲ್ ಅವರು ಕೂಡ ತಮ್ಮ ಮಗಳ ವಿವಾಹವನ್ನು ಅದ್ಧೂರಿಯಾಗಿ ಮಾಡಿದ್ದರು. ಮಗಳು ಸೃಷ್ಟಿ ಮಿತ್ತಲ್ ಮತ್ತು ಗುಲ್ರಾಜ್ ಬೆಹ್ಲ್ ಮದುವೆಯನ್ನು 2013ರಲ್ಲಿ ಯೂರೋಪ್‌ನಲ್ಲಿ ಮಾಡಿದ್ದು, 500 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದರು.
ಕಾಂಗ್ರೆಸ್ ನಾಯಕ ಕನ್ವರ್ ಸಿಂಗ್ ತನ್ವರ್ ಅವರ ಪುತ್ರನ ವಿವಾಹ (2011): ಕಾಂಗ್ರೆಸ್ ನಾಯಕ ಕನ್ವರ್ ಸಿಂಗ್ ತನ್ವರ್ ಅವರ ಪುತ್ರ ಲಲಿತ್ ಅವರ ವಿವಾಹವು ಹರಿಯಾಣದ ಜೌನಪುರ್ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಉಡುಗೊರೆಯಾಗಿ 21 ಕೋಟಿ ರೂ ಮೌಲ್ಯದ ಹೆಲಿಕಾಪ್ಟರ್ ನೀಡಲಾಗಿತ್ತು . ಒಂದು ವಾರದ ಅದ್ದೂರಿ ವಿವಾಹ ಆಚರಣೆಗಳು ದೇಶದ ವಿವಿಧ ಭಾಗಗಳಿಂದ ಜಾನಪದ ಪ್ರದರ್ಶನಗಳನ್ನು ಒಳಗೊಂಡಿತ್ತು. ಅತಿಥಿಗಳಿಗೆ 30 ಗ್ರಾಂ ಬೆಳ್ಳಿ ಬಿಸ್ಕತ್, ಸಫಾರಿ ಸೂಟ್ ಸೆಟ್, ಶಾಲು ಮತ್ತು 2,100 ರೂ ನಗದು ಸೇರಿದಂತೆ ರಿಟರ್ನ್ ಗಿಫ್ಟ್ ನೀಡಲಾಯಿತು.
ಎಸ್ ರವೀಂದ್ರ ಅವರ ಪುತ್ರರ ವಿವಾಹ (2011): ನ್ಯೂಜಿಲೆಂಡ್ ಮೂಲದ ಉದ್ಯಮಿ ಎಸ್ ರವೀಂದ್ರ ಅವರು ಹೈದರಾಬಾದ್‌ನಲ್ಲಿ ತಮ್ಮ ಪುತ್ರರಿಗಾಗಿ ಆಯೋಜಿಸಿದ್ದ ವಿವಾಹವು ದಕ್ಷಿಣ ಭಾರತದ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ವಧುಗಳು ಮನೀಷ್ ಮಲ್ಹೋತ್ರಾ ಅವರು ಡಿಸೈನ್ ಮಾಡಿರುವ ಬಟ್ಟೆ ಧರಿಸಿದ್ದರು ಮತ್ತು ಮಂಗಳ ಸೂತ್ರ ಕೋಟಿ ಮೌಲ್ಯದ್ದಾಗಿತ್ತು. ಸಮಾರಂಭವು ಬೆಂಗಾಲಿ, ರಾಜಸ್ಥಾನಿ, ಪಂಜಾಬಿ, ಜೋಧಾ ಅಕ್ಬರ್, ನೀರೊಳಗಿನ ಮತ್ತು ಅರೇಬಿಯನ್ ನೈಟ್ಸ್ ಸೇರಿದಂತೆ ವಿವಿಧ ಸಂಪ್ರದಾಯಗಳು ಮತ್ತು ವಿಚಾರಗಳನ್ನು ಪ್ರದರ್ಶಿಸಿತು. ಮದುವೆ ಆಮಂತ್ರಣಗಳನ್ನು ಮುತ್ತಿನಿಂದ ಪೋಣಿಸಿದ ಕವರ್ ನಲ್ಲಿ ಮಾಡಲಾಗಿತ್ತು. ನೂರಾರು ಕೋಟಿ ಖರ್ಚು ಮಾಡಲಾಗಿತ್ತು.
ಜನಾರ್ದನ ರೆಡ್ಡಿ ಅವರ ಮಗಳ ಮದುವೆ (2016): ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗಳ ಮದುವೆಯು ರಾಜಮನೆತನದವರು ನಡೆಸುವಂತಃ ರೀತಿಯಲ್ಲಿ ನಡೆಯಿತು. ಮದುವೆಯ ವೆಚ್ಚ ಸುಮಾರು 500 ಕೋಟಿ ರೂ. ಈ ಮದುವೆಗೆ ದೇವಾಲಯಗಳ ಸೆಟ್ ಹಾಕಲಾಗಿತ್ತು. ಬೃಹತ್ ಹವಾನಿಯಂತ್ರಿತ ಟೆಂಟ್ ಮತ್ತು 30 ಎಕರೆಗಳಲ್ಲಿ ಹರಡಿರುವ ಬಾಲಿವುಡ್ ಶೈಲಿಯ ಸೆಟ್‌ಗಳೊಂದಿಗೆ ವಿಸ್ತಾರವಾದ ಪ್ರವೇಶವನ್ನು ಒಳಗೊಂಡಿತ್ತು. ಮದುವೆಯ ಲೆಹೆಂಗಾಗೆ ಬರೋಬ್ಬರಿ 17 ಕೋಟಿ ರೂ. LCD ಮದುವೆಯ ಆಮಂತ್ರಣ ಪತ್ರಿಕೆಗಳು ಶೋಸ್ಟಾಪರ್ ಆಗಿದ್ದು, ರೆಡ್ಡಿ ಕುಟುಂಬದ ಅಪಾರ ಸಂಪತ್ತನ್ನು ಪ್ರತಿಬಿಂಬಿಸುತ್ತಿತ್ತು.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವಿವಾಹ (2017): ನಟ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ವಿವಾಹದ ಅಂದಾಜು ವೆಚ್ಚ ಸುಮಾರು 90 ಕೋಟಿ ರೂ. ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಇಬ್ಬರು ಮದುವೆಯಾದರು. ನಂತರ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆಗಳು ನಡೆದವು.
ಮುಕೇಶ್ ಅಂಬಾನಿ ಅವರ ಮಗಳು ಇಶಾ ಅವರ ವಿವಾಹ (2018): ಆನಂದ್ ಪಿರಮಾಲ್ ಅವರೊಂದಿಗೆ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅವರ ವಿವಾಹವು ಉದಯಪುರದಲ್ಲಿ ನಡೆದಿತ್ತು. ಸಿಂಗರ್ ಬೆಯೋನ್ಸ್ ಮದುವೆಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು ಮತ್ತು 100 ಕ್ಕೂ ಹೆಚ್ಚು ಚಾರ್ಟರ್ಡ್ ವಿಮಾನಗಳು ಪ್ರಪಂಚದಾದ್ಯಂತದ ಅತಿಥಿಗಳನ್ನು ಕರೆತಂದವು. ಅತಿಥಿಗಳ ಪಟ್ಟಿಯಲ್ಲಿ ಹಿಲರಿ ಕ್ಲಿಂಟನ್, ಲಕ್ಷ್ಮಿ ಮಿತ್ತಲ್, ದೇವೇಂದ್ರ ಫಡ್ನವಿಸ್, ಸಚಿನ್ ತೆಂಡೂಲ್ಕರ್, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರಂತಹ ಉನ್ನತ ಹೆಸರುಗಳು ಸೇರಿವೆ. ಮದುವೆಯ ಖರ್ಚು 7 ಬಿಲಿಯನ್ ರೂ (700 ಕೋಟಿ) ಎನ್ನಲಾಗಿದೆ. ಅಂಬಾನಿ ತಮ್ಮ ಹಿರಿಯ ಮಗ ಅಕಾಶ್ ಮತ್ತು ಶ್ಲೋಕಾ ಮದುವೆಗೆ 110 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರ ವಿವಾಹ (2018): ಉದಯಪುರದ ಉಮ್ಮದ್ ಅರಮನೆಯಲ್ಲಿ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಾಸ್ ಅವರ ವಿವಾಹವು 105 ಕೋಟಿ ರೂ. ನಲ್ಲಿ ನಡೆಯಿತು. ಭಾರತದ ಅತ್ಯಂತ ಶ್ರೀಮಂತ ಹೋಟೆಲ್‌ಗಳಲ್ಲಿ ಅತಿಥಿಗಳಿಗೆ ಐಷಾರಾಮಿ ವ್ಯವಸ್ಥೆ ಮಾಡಲಾಗಿತ್ತು.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ವಿವಾಹ (2018): ಬಾಲಿವುಡ್ ನಟರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ವಿವಾಹವು ಇಟಲಿಯ ಲೇಕ್ ಕೊಮೊದಲ್ಲಿ ಸುಮಾರು 77 ಕೋಟಿ ರೂ. ನಲ್ಲಿ ನಡೆಯಿತು. ದಂಪತಿಗಳು ತಮ್ಮ ಅತಿಥಿ ಸತ್ಕಾರವನ್ನು ಹೆಸರಾಂತ ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೊದಲ್ಲಿ ಆಯೋಜಿಸಿದ್ದರು, ಅಲ್ಲಿ ಒಂದು ಕೋಣೆಗೆ ದಿನಕ್ಕೆ 33,000 ರೂ.