Asianet Suvarna News Asianet Suvarna News

ವಿಮಾನದಲ್ಲಿ ತಾಂತ್ರಿಕ ಸಮಸ್ಯೆ: ಸಾವಿನ ಬಾಯಿಗೆ ಹೋಗಿ ಬಂದ ಅನುಭವ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು, ಸಾವಿನ ಬಾಯಿಗೆ ಹೋಗಿ ಬಂದ ಅನುಭವ ಬಿಚ್ಚಿಟ್ಟಿದ್ದಾರೆ ರಶ್ಮಿಕಾ ಮಂದಣ್ಣ.
 

This is how we escaped death Rashmika Mandanna after flights technical snag suc
Author
First Published Feb 18, 2024, 11:40 AM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ಸದ್ಯ ಫೋರ್ಬ್ಸ್​ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡು ಬೀಗುತ್ತಿದ್ದಾರೆ. ಇದಕ್ಕೂ ಮುನ್ನ, ಅನಿಮಲ್​ ಚಿತ್ರದ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಸಕತ್​ ಸದ್ದು ಮಾಡುತ್ತಿದ್ದಾರೆ.  ಇವೆಲ್ಲವುಗಳ ನಡುವೆಯೇ, ರಶ್ಮಿಕಾ ಇದೀಗ ಭಯಾನಕ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ತಾವು ಸಾವಿನ ಬಾಯಿಗೆ ಹೋಗಿ ಬಂದಿರುವುದಾಗಿ ತಿಳಿಸಿದ್ದಾರೆ. ಹೌದು. ರಶ್ಮಿಕಾ ಮಂದಣ್ಣ ಮತ್ತು ಇನ್ನೋರ್ವ ನಟಿ ಶ್ರದ್ಧಾ ದಾಸ್ ಪ್ರಯಾಣ ಮಾಡುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು,  ವಿಮಾನ ತುರ್ತು ಭೂ ಸ್ಪರ್ಶ ಮಾಡಿತ್ತು. ಇದರಿಂದ  ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಾವು ಈ ಸಂದರ್ಭದಲ್ಲಿ ತಮಗೆ ಭಯಾನಕ ಅನುಭವ ಆಗಿತ್ತು ಎಂದಿರುವ ನಟಿ, ಸಾವಿನ ಬಾಯಿಯಿಂದ ತಪ್ಪಿಸಿಕೊಂಡಿದ್ದೇವೆ ಎಂದಿದ್ದಾರೆ. 

ರಶ್ಮಿಕಾ ಮಂದಣ್ಣ ತಾವು  ವಿಮಾನದಲ್ಲಿ ಕುಳಿತಿರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಈ ವಿಷಯವನ್ನು ತಿಳಿಸಿದ್ದಾರೆ.  ಇಂದು ಸಾವಿನಿಂದ ತಪ್ಪಿಸಿಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ನಿನ್ನೆ ಅಂದರೆ ಶನಿವಾರ ರಶ್ಮಿಕಾ ಅವರು, ಏರ್‌ ವಿಸ್ತಾರ ಮೂಲಕ ಮುಂಬೈಯಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದರು. ಶ್ರದ್ಧಾ ದಾಸ್​ ಕೂಡ ಒಟ್ಟಿಗೇ ಇದ್ದರು. ಆದರೆ ವಿಮಾನ ಟೇಕ್​ಆಫ್​ ಆದ  ಕೆಲವೇ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಪ್ರಯಾಣಿಕರು ಭಯಭೀತರಾದರು.

ಫೋರ್ಬ್ಸ್​ ಪಟ್ಟಿಯಲ್ಲಿ ಸ್ಥಾನ ಗಳಿಸುತ್ತಲೇ ಅಭಿಮಾನಿಯ ಮೇಲೆ ರಶ್ಮಿಕಾ ಮಂದಣ್ಣ ಗರಂ ಆಗಿದ್ದೇಕೆ?

 30 ನಿಮಿಷಗಳ ನಂತರ ವಿಮಾನ ಮತ್ತೆ ಮುಂಬೈಗೆ ಮರಳಿದ್ದು ಯಾರಿಗೂ ಏನೂ ಅನಾಹುತ ಆಗಲಿಲ್ಲ. ಪೈಲೆಟ್​ ತುರ್ತು ಭೂಸ್ಪರ್ಶ ಮಾಡಿಸಿದ್ದರಿಂದ ಎಲ್ಲರೂ ಸೇಫ್​ ಆಗಿದೆ. ಈ ವಿಷಯವನ್ನು ರಶ್ಮಿಕಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ತಿಳಿಸಿದ್ದು ಅಭಿಮಾನಿಗಳು ನಟಿಗೆ ಶುಭ ಹಾರೈಸಿದ್ದಾರೆ. ಸದ್ಯ ರಶ್ಮಿಕಾ  ʼಪುಷ್ಪ 2ʼ,‌ ತೆಲುಗಿನ ʼರೈನ್‌ ಬೋʼ, ʼದಿ ಗರ್ಲ್‌ ಫ್ರೆಂಡ್‌ʼ, ಬಾಲಿವುಡ್‌ನ ʼಛಾವಾʼ ಚಿತ್ರದಲ್ಲಿ ಬಿಜಿ ಇದ್ದಾರೆ.   

ನಟ ರಣಬೀರ್​ ಕಪೂರ್​ ಜೊತೆಗಿನ ಲಿಪ್​ಲಾಕ್​ ಸೇರಿದಂತೆ ಈ ಚಿತ್ರದಲ್ಲಿ ಇಂಟಿಮೇಟ್​ ಸೀನ್​ನಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದೆ. ಇದರಜೊತೆ,  ರಶ್ಮಿಕಾ ಮೊನ್ನೆಯಷ್ಟೇ  ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ರಶ್ಮಿಕಾ ಅವರ ಹೆಸರು ಸೇರ್ಪಡೆಗೊಂಡಿದ್ದು, ನಟಿ ಖುಷಿಯಲ್ಲಿ ತೇಲಾಡುತ್ತಿದ್ದಾರೆ.  ಪ್ರತಿವರ್ಷವೂ ಫೋರ್ಬ್ಸ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 30 ವರ್ಷ ವಯಸ್ಸಿನ ಒಳಗಿನವರ ಸಾಧಕರ ಪಟ್ಟಿಯನ್ನೂ ಅದು ಬಿಡುಗಡೆ ಮಾಡುತ್ತದೆ. ಅದರಲ್ಲಿ ಅನಿಮಲ್​ ಹಸಿಬಿಸಿ ನಟಿ ರಶ್ಮಿಕಾ ಹೆಸರೂ ಸೇರ್ಪಡೆಗೊಂಡಿದೆ. ಈ ಮೂಲಕ ನ್ಯಾಷನಲ್​ ಕ್ರಷ್​ ಎನಿಸಿಕೊಂಡಿರುವ ರಶ್ಮಿಕಾಗೆ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಏಕೆಂದರೆ ಈ ಪಟ್ಟಿಯಲ್ಲಿ ವಿಶ್ವದ ಸಾಧಕರ ಹೆಸರು ಇರುತ್ತದೆ. ಇದರಲ್ಲಿ  30 ಜನರು ಇರುತ್ತಾರೆ.  ಮನೊರಂಜನಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಸ್ಥಾನ ಸಿಕ್ಕಿದೆ. ಈಚೆಗಷ್ಟೇ ಮೀಡಿಯಾ ಕನ್ಸೆಲೆಟಿಂಗ್‌ ಫರ್ಮ್‌ ಅರ್ಮೋಕಸ್‌ ಮೀಡಿಯಾ ಜನವರಿ 2024ರ ಜನಪ್ರಿಯ ಬಾಲಿವುಡ್‌ ತಾರೆಯರ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ  ರಶ್ಮಿಕಾ  ಎಂಟನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಫೋರ್ಬ್ಸ್​ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣಗೆ ಮತ್ತೊಂದು ಗರಿ! ​ಪ್ರತಿಷ್ಠಿತ ಫೋರ್ಬ್ಸ್​ ಪಟ್ಟಿಯಲ್ಲಿ ದಕ್ಕಿದೆ ಸ್ಥಾನ

Follow Us:
Download App:
  • android
  • ios