Interesting News : ಯಪ್ಪಾ..! ಕಣ್ಣು, ಹೃದಯ ತಿನ್ನೋ ಕೈದಿಗಳಿಲ್ಲಿದ್ದಾರೆ…

ಜೈಲಿನಲ್ಲಿ ಆಗಾಗ ಗಲಾಟೆ ನಡೆಯೋದನ್ನು ನಾವು ಕೇಳಿರ್ತೇವೆ ಇಲ್ಲ ಓದಿರ್ತೇವೆ. ಸಣ್ಣಪುಟ್ಟ ಗಲಾಟೆ, ಬಡಿದಾಟವನ್ನು ಜೈಲಿನ ಅಧಿಕಾರಿಗಳು ನಿಯಂತ್ರಿಸುತ್ತಾರೆ. ಕೈದಿಗಳ ಹತ್ಯೆ ಸುದ್ದಿ ಕೂಡ ಅಪರೂಪಕ್ಕೆ ಕೇಳೋದಿದೆ. ಆದ್ರೆ ಈ ಜೈಲು ಮಾತ್ರ ಭಯಾನಕವಾಗಿದೆ. ಗಲಾಟೆ ವೇಳೆ ಕೈದಿಗಳು ಏನೆಲ್ಲ ಮಾಡ್ತಾರೆ ಗೊತ್ತಾ? 
 

Brazil Anisio Jobim Prison Complex Where Inmates Eat Victims Hearts And Eyes roo

ಮಾಡಿದ ಅಪರಾಧ ಸಾಬೀತಾದ್ಮೇಲೆ ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಮರಣದಂಡನೆ ಶಿಕ್ಷೆಯಿದ್ರೂ ಅಪರಾಧಿಗಳನ್ನು ಮೊದಲು ಜೈಲಿಗೆ ಕಳುಹಿಸಿ ನಂತ್ರ ಮುಂದಿನ ಕ್ರಮತೆಗೆದುಕೊಳ್ಳಲಾಗುತ್ತದೆ. ಕೈದಿಗಳಿಂದ ಸಮಾಜಕ್ಕೆ ಹಾನಿಯಾಗ್ಬಾರದು ಹಾಗೂ ಜೈಲಿನಲ್ಲಿ ಅವರು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಅವಕಾಶ ಸಿಗಲಿ ಎನ್ನುವ ಉದ್ದೇಶ ಇದ್ರ ಹಿಂದಿರುತ್ತದೆ. 

ವಿಶ್ವ (World) ದಲ್ಲಿ ಕೆಲ ಜೈಲು (Jail) ಗಳಲ್ಲಿ ಕೈದಿಗಳಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಇನ್ನು ಕೆಲ ಜೈಲಿನಲ್ಲಿ ಕೈದಿಗಳನ್ನು ಸುಧಾರಿಸುವ ಕೆಲಸ ಕೂಡ ನಡೆಯುತ್ತಿದೆ. ಎಲ್ಲ ಕೈದಿಗಳನ್ನು ಸುಧಾರಿಸೋದು ಸುಲಭ ಕೆಲಸವಲ್ಲ. ಜೈಲಿಗೆ ಬಂದ ಕೈದಿಗಳು ಜೀವನದ ಮಹತ್ವ ಅರಿತು, ತಮ್ಮ ಸ್ವಭಾವದಲ್ಲಿ ಸುಧಾರಣೆ ತರುವ ಬದಲು ಮತ್ತಷ್ಟು ರಾಕ್ಷಸರಾಗ್ತಾರೆ. ಜೈಲಿನಲ್ಲಿ ಮಾಡಬಾರದ ಕೆಲಸಗಳನ್ನು ಮಾಡ್ತಾರೆ. ಜೈಲಿನಲ್ಲಿಯೇ ಗುಂಪು ಕಟ್ಟಿಕೊಂಡು ಹೊಡೆದಾಟಕ್ಕೆ ಇಳಿಯುತ್ತಾರೆ. ಜೈಲಿನಲ್ಲಿದ್ದೇ ಹೊರ ಪ್ರಪಂಚವನ್ನು ಆಳುವವರಿದ್ದಾರೆ. ಆದ್ರೆ ಬ್ರೆಜಿಲ್ ನಲ್ಲಿರುವ ಜೈಲೊಂದು ಭಯಾನಕವಾಗಿದೆ. ಆ ಜೈಲಿನಲ್ಲಿ ಅಪರಾಧಿಗಳೇ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಬ್ರೆಜಿಲ್ (Brazil) ಆ ಜೈಲನ್ನು ನರಕವೆಂದೇ ಕರೆಯಲಾಗುತ್ತದೆ. ನಾವಿಂದು ಬ್ರೆಜಿಲ್  ಯಾವ ಜೈಲನ್ನು ನರಕವೆಂದು ಕರೆಯಲಾಗುತ್ತೆ, ಅದಕ್ಕೆ ಕಾರಣವೇನು ಎಂಬುದನ್ನು ಹೇಳ್ತೇವೆ.

ಒಂದೇ ಒಂದು ಹಾವು ಕಂಡುಬರದ ದೇಶ ಒಂದಿದೆ ಗೊತ್ತಾ?

ಈ ಜೈಲಿನಲ್ಲಿದ್ದಾರೆ ರಾಕ್ಷಸರು : ಅತ್ಯಂತ ಕ್ರೂರರನ್ನು ಹೊಂದಿರುವ ಜೈಲು ಬ್ರೆಜಿಲ್ ನಲ್ಲಿದೆ. ಈ ಜೈಲಿನ ಹೆಸರು ಅನಿಸಿಯೊ ಜೊಬಿಮ್ (Anisio Jobim). ಈ ಜೈಲಿನಲ್ಲಿ ವಿಶ್ವದ ಖತರ್ನಾಕ್ ಕೈದಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ.  ಈ ಜೈಲಿನಲ್ಲಿರುವ ಖೈದಿಗಳು ಎಷ್ಟು ಅಪಾಯಕಾರಿ ಎಂದರೆ ಹಿಂಸಾಚಾರ ನಡೆದಾಗ ಪರಸ್ಪರರ ಕಣ್ಣು ಮತ್ತು ಹೃದಯವನ್ನು ಹಸಿಯಾಗಿ ತಿನ್ನುತ್ತಾರೆ. ಯಾವುದೇ ಕೆಲಸಕ್ಕೆ ಅವರು ಹೇಸೋದಿಲ್ಲ.

ಈ ಜೈಲಿನಲ್ಲಿರುವ ಕೈದಿಗಳು ಯಾರು? : ಡ್ರಗ್ಸ್ ಸರಬರಾಜು ಮಾಡಿ ಸಿಕ್ಕಿಬಿದ್ದ ಕೈದಿಗಳು ಅನಿಸಿಯೊ ಜೊಬಿಮ್ ಜೈಲಿಗೆ ಬರ್ತಾರೆ. ಜೈಲಿನಲ್ಲೂ ಇವರು ಗ್ಯಾಂಗ್ ವೈರತ್ವವನ್ನು ಮುದುವರೆಸ್ತಾರೆ. ತಮ್ಮ ಪ್ರತಿಸ್ಪರ್ಧಿ ಗ್ಯಾಂಗ್‌ಗಳ ಕೈದಿಗಳೊಂದಿಗೆ ಇವರು ಗಲಾಟೆ ಮಾಡಿಕೊಳ್ತಾರೆ. ಗಲಾಟೆ ದೊಡ್ಡದಾದಾಗ ಜೈಲಿನಲ್ಲಿ ಹರಿತವಾದ ಆಯುಧ ಹೊರಗೆ ಬೀಳುತ್ತದೆ. ಕೈದಿಗಳ ನಡುವೆ ದೊಡ್ಡ ಘರ್ಷಣೆ ನಡೆಯುತ್ತಿರುತ್ತದೆ. ಎರಡು ಗ್ಯಾಂಗ್‌ಗಳ ನಡುವಿನ ನಡೆಯುವ ಹೊಡೆದಾಟ, ಬಡಿದಾಟ ಸಣ್ಣಪ್ರಮಾಣದಲ್ಲಿರೋದಿಲ್ಲ. ಈ ಘರ್ಷಣೆಯಲ್ಲಿ ಒಬ್ಬರದ್ದಾದ್ರೂ ಪ್ರಾಣ ಹೋಗೇ ಹೋಗುತ್ತೆ. 

Unusual Temples: ಇವು ವಿಲಕ್ಷಣ ಕಾರಣಕ್ಕೆ ಭಕ್ತರನ್ನು ಸೆಳೆಯೋ ದೇವಾಲಯಗಳು..

ಕಣ್ಣು ಮತ್ತು ಹೃದಯ ತಿನ್ನುತ್ತಾರೆ ಕೈದಿಗಳು : ಕೈದಿಗಳ ಕ್ರೂರತ್ವ ಎಷ್ಟಿರುತ್ತೆ ಅಂದ್ರೆ ಅವರು ಪರಸ್ಪರ ಕಣ್ಣು, ಹೃದಯವನ್ನೇ ಕಿತ್ತು ಹಸಿಹಸಿಯಾಗಿ ತಿನ್ನುತ್ತಾರೆ.  ಬ್ರೆಜಿಲ್‌ನ ಅನಿಸಿಯೊ ಜೊಬಿಮ್ ಜೈಲಿನಲ್ಲಿ 2017 ರಲ್ಲಿ ಇಡೀ ವಿಶ್ವವೇ ಬೆಚ್ಚಿ ಬೀಳಿಸುವ ಘಟನೆ ನಡೆದಿತ್ತು. ಅನಿಸಿಯೋ ಜೋಬಿಮ್ ಜೈಲು ಸಂಕೀರ್ಣದಲ್ಲಿ ನೀರಿನ ಕೊರತೆಗೆ ಸಂಬಂಧಿಸಿದಂತೆ ಎರಡು ಗುಂಪಿನ ಮಧ್ಯೆ ಘರ್ಷಣೆ ಶುರುವಾಯ್ತು. ಹೊಸ ವರ್ಷದ ದಿನದಂದೇ  ಎರಡು ಗುಂಪುಗಳ ನಡುವೆ ಮಾರಾಮಾರಿ ಶುರುವಾಯ್ತು. ಎರಡು ಪ್ರಮುಖ ಅಪರಾಧಿ ಸಂಘಟನೆಗಳಾದ ಪ್ರೈಮಿರೋ ಕಮಾಂಡೋ ಡ ಕ್ಯಾಪಿಟಲ್ (ಪಿಸಿಸಿ) ಮತ್ತು ಕಮಾಂಡೋ ವರ್ಮೆಲ್ಹೋ (ಸಿವಿ) ಸದಸ್ಯರು ಜೈಲಿನಲ್ಲೇ ಕಿತ್ತಾಡಿಕೊಂಡ್ರು. 

ಈ ರಕ್ತಪಾತದಲ್ಲಿ ಸತ್ತಿದ್ದು ಎಷ್ಟು ಮಂದಿ ? : ಈ ಎರಡು ಸಂಘದ ಕೈದಿಗಳ ಹೊಡೆದಾಟ ಭಯ ಹುಟ್ಟಿಸುವಂತಿತ್ತು. ಜೈಲಿನಲ್ಲಿ ನಡೆದ ಮಾರಾಮಾರಿಗೆ ಬರೋಬ್ಬರಿ 56 ಮಂದಿ ಸಾವನ್ನಪ್ಪಿದ್ದರು. ಈ ಗಲಾಟೆ ಎಷ್ಟು ಭಯಾನಕವಾಗಿತ್ತೆಂದ್ರೆ ಜೈಲಿನ ಅಧಿಕಾರಿಗಳಿಗೆ 40 ಕೈದಿಗಳ ತಲೆ ಮಾತ್ರ ಸಿಕ್ಕಿತ್ತು. ಕೈದಿಗಳು ಒಬ್ಬರನ್ನೊಬ್ಬರು ಕೊಂದರಲ್ಲದೆ ಅವರ ಕಣ್ಣು ಹಾಗೂ ಹೃದಯವನ್ನು ತೆಗೆದು ಹಸಿ ಹಸಿಯಾಗೇ ತಿಂದಿದ್ದರು. 
 

Latest Videos
Follow Us:
Download App:
  • android
  • ios