ಒಂದೇ ಒಂದು ಹಾವು ಕಂಡುಬರದ ದೇಶ ಒಂದಿದೆ ಗೊತ್ತಾ?
ನಮ್ಮ ಕಡೆ ನಾವು ಹಾವನ್ನು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲೂ ನೋಡುತ್ತೇವೆ. ಆದರೆ ಐರ್ಲೆಂಡ್ ದೇಶದಲ್ಲಿ ನೀವು ಒಂದೇ ಒಂದು ಹಾವನ್ನು ನೋಡಲು ಸಾಧ್ಯವಿಲ್ಲ. ಹಾವುಗಳು ಇಲ್ಲಿ ಏಕೆ ಕಂಡುಬರುವುದಿಲ್ಲ ಅನ್ನೋದರ ಬಗ್ಗೆ ತಿಳಿಯಿರಿ.
ನಾವೆಲ್ಲರೂ ಹಾವುಗಳಿಗೆ ಹೆದರುತ್ತೇವೆ, ಏಕೆಂದರೆ ಅದನ್ನು ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಪ್ರಾಣಿ ಎಂದು ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತ ಅನೇಕ ಜಾತಿಯ ಹಾವುಗಳಿವೆ, ಆದರೆ ಒಂದೇ ಒಂದು ಹಾವು ಕಂಡು ಬರದ ದೇಶದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಹೀಗೂ ಒಂದು ದೇಶ ಇದೆಯೇ? ಎಂದು ಅಚ್ಚರಿ ಪಡ್ತಿದ್ದೀರಾ? ಇದೆ, ಅದು ಐರ್ಲೆಂಡ್ (Ireland).
ಐರ್ಲೆಂಡ್ ದೇಶದಲ್ಲಿ ನೀವು ಒಂದೇ ಒಂದು ಹಾವನ್ನು ಕಾಣಲು ಸಾಧ್ಯವಿಲ್ಲ.ಇದನ್ನ ಕೇಳಿ ಶಾಕ್ ಆಯ್ತಾ? ಎಲ್ಲಿಯೂ ಹಾವು ಇಲ್ಲದಿರುವುದು ಸಾಧ್ಯವಿಲ್ಲ ಎಂದು ನೀವು ಯೋಚಿಸುತ್ತಿರಬಹುದು. ಆದರೆ ನಿಜವಾಗಿಯೂ ಐರ್ಲೆಂಡ್ ನಲ್ಲಿ ಹಾವು ಇಲ್ಲ. ಇದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ.
ಐರ್ಲೆಂಡ್ ನಲ್ಲಿ ಹಾವುಗಳಿಲ್ಲದಿರುವುದಕ್ಕೆ ಕಾರಣಗಳೇನು?
ವಾಸ್ತವವಾಗಿ, ಐರ್ಲೆಂಡ್ನಲ್ಲಿ ಹಾವುಗಳು ಇಲ್ಲದಿರುವುದಕ್ಕೆ ಪೌರಾಣಿಕ ಕಾರಣವೊಂದಿದೆ. ಐರ್ಲೆಂಡ್ನಲ್ಲಿ ಕ್ರಿಶ್ಚಿಯನ್ ಧರ್ಮದ (Christian Religion) ರಕ್ಷಣೆಗಾಗಿ, ಸೇಂಟ್ ಪ್ಯಾಟ್ರಿಕ್ ಎಂಬ ಸಂತನು ದೇಶಾದ್ಯಂತದ ಹಾವುಗಳನ್ನು ದ್ವೀಪದಿಂದ ಹೊರಗೆ ತೆಗೆದುಕೊಂಡು ಸಮುದ್ರಕ್ಕೆ ಎಸೆದನು ಎಂದು ಹೇಳಲಾಗುತ್ತದೆ. ಅವರು 40 ದಿನಗಳ ಕಾಲ ಊಟ, ತಿಂಡಿ ಎಲ್ಲವನ್ನೂ ಬಿಟ್ಟು ಈ ಕೆಲಸವನ್ನು ಮಾಡಿದರು ಎನ್ನಲಾಗುತ್ತೆ.
ವಿಜ್ಞಾನಿಗಳು ಏನು ಹೇಳುತ್ತಾರೆ?
ಈ ದೇಶದಲ್ಲಿ ಹಾವುಗಳು ಎಂದಿಗೂ ಇರಲಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪಳೆಯುಳಿಕೆ ದಾಖಲೆಗಳ ಇಲಾಖೆಯು ಐರ್ಲೆಂಡ್ ದೇಶದಲ್ಲಿ ಹಾವುಗಳ ಯಾವುದೇ ದಾಖಲೆಗಳು, ಇಂದಿಗೂ ಸಿಕ್ಕಿಲ್ಲ ಎಂದು ಹೇಳುತ್ತೆ. ಐರ್ಲೆಂಡ್ ನಲ್ಲಿ ಹಾವುಗಳ ಅನುಪಸ್ಥಿತಿಯ ಬಗ್ಗೆ ಮತ್ತೊಂದು ಕಥೆ ಇದೆ.
ಹಿಂದೆ ಇಲ್ಲಿ ಹಾವುಗಳು ಇದ್ದವು
ಮೊದಲು ಇಲ್ಲಿ ಹಾವುಗಳು ಇದ್ದವಂತೆ, ಆದರೆ ಇಲ್ಲಿ ವಿಪರೀತ ಶೀತವಿರೋದರಿಂದ ಅವು ಅಳಿದುಹೋದವು. ಅಂದಿನಿಂದ, ಅತಿಯಾದ ಶೀತದಿಂದಾಗಿ ಹಾವುಗಳು ಇಲ್ಲಿ ಕಂಡುಬರುವುದಿಲ್ಲ ಎಂದು ನಂಬಲಾಗಿದೆ.
ಇಲ್ಲಿ ಅತ್ಯಂತ ಹಳೆಯ ಬಾರ್ ಇದೆ
ಐರ್ಲೆಂಡಿನಲ್ಲಿ ಮಾನವರ ಪುರಾವೆಗಳು ಕ್ರಿ.ಪೂ 12800 ರಷ್ಟು ಹಿಂದಿನವು ಅನ್ನೋದು ವಿಶೇಷವಾಗಿದೆ. ಇದಲ್ಲದೆ, ಇಲ್ಲಿ ಬಹಳ ಹಳೆಯ ಬಾರ್ (oldest bar) ಸಹ ಇದೆ, ಇದು 900 ರಲ್ಲಿ ತೆರೆಯಲ್ಪಟ್ಟಿತು. ಇಂದಿಗೂ ಚಾಲನೆಯಲ್ಲಿರುವ ಈ ಬಾರ್ ನ ಹೆಸರು ಸೀನ್ ಬಾರ್.
ನ್ಯೂಜಿಲೆಂಡ್ ನಲ್ಲಿ ಹಾವುಗಳಿಲ್ಲ.
ಮತ್ತೊಂದು ವಿಷ್ಯ ಏನಂದ್ರೆ ನ್ಯೂಜಿಲೆಂಡ್ನಲ್ಲಿ ಸಹ ಹಾವುಗಳಿಲ್ಲ. ದ್ವೀಪಗಳಿಂದ ಕೂಡಿದ ಈ ದೇಶದಲ್ಲಿ ಅನೇಕ ಕಾಡು ಪ್ರಾಣಿಗಳಿವೆ, ಆದರೆ ಅಚ್ಚರಿ ಎಂಬಂತೆ, ಇಲ್ಲಿಯವರೆಗೆ ಒಂದೇ ಒಂದು ಹಾವು ಇಲ್ಲಿ ಕಂಡುಬಂದಿಲ್ಲ. ಇಲ್ಲಿ ಹಲ್ಲಿಗಳು ಮಾತ್ರ ಕಂಡುಬರುತ್ತವೆ.