ಮೊಬೈಲ್ ಯುಗದಲ್ಲಿ ತಲೆ ಎತ್ತಿದೆ ಈ ಪುಸ್ತಕದ ಹಳ್ಳಿ. ಚೆಂದದ ಕಾನ್ಸೆಪ್ಟ್‌ಗೊಂದು ಬೈ ಹೇಳಿ!

ಪುಸ್ತಕ ಪ್ರೇಮಿಗಳ ಸಂಖ್ಯೆ ನಶಿಸ್ತಾ ಬರ್ತಿದೆ. ಇಂಟರ್ನೆಟ್ ಓದುಗರನ್ನು ತನ್ನತ್ತ ಸೆಳೆದಿದೆ. ಗ್ರಂಥಾಲಯಗಳು ಮುಚ್ಚುತ್ತಿರುವ ಈ ಸಮಯದಲ್ಲಿ ಊರಿಗೆ ಊರೇ ಗ್ರಂಥಾಲಯವಾಗಿ ಪರಿವರ್ತನೆಗೊಂಡ ಮಾದರಿ ಗ್ರಾಮದ ಮಾಹಿತಿ ಇಲ್ಲಿದೆ.
 

Book Village In Maharashtra roo

ಹಿಂದೆ ಒಂದು ಕಾಲವಿತ್ತು ಆಗ ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಬರುವ ಪತ್ರಿಕೆಯನ್ನು ಓದಲು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಹೊಸ ವಿಷಯ ಹೊಸ ಕಥೆಯನ್ನು ಓದಬಹುದೆಂಬ ಆತುರ ಇರುತ್ತಿತ್ತು. ಆದರೆ ಈಗ ಕೈಯಲ್ಲೇ ಇರುವ ಮೊಬೈಲ್ ಮೂಲಕವೇ ಎಲ್ಲವನ್ನೂ ತಿಳಿದುಕೊಳ್ಳಬಹುದಾಗಿದೆ. ಇಂಟರ್ನೆಟ್ ಸೌಲಭ್ಯದಿಂದ ನಮಗೆ ಬೇಕಾದ ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆದುಕೊಳ್ಳುವಷ್ಟು ಮುಂದುವರೆದ ತಂತ್ರಜ್ಞಾನದಲ್ಲಿ ನಾವಿದ್ದೇವೆ.

ಈ ಮುಂದುವರೆದ ತಂತ್ರಜ್ಞಾನ (Technology), ಆಧುನಿಕತೆಯಿಂದ ಇಂದು ಮನುಷ್ಯ ಪುಸ್ತಕ (book) ಗಳನ್ನು ಓದುವುದನ್ನೇ ಮರೆತಿದ್ದಾನೆ. ಯಾರನ್ನೇ ನೋಡಿದರೂ ಕೈಯಲ್ಲಿ ಮೊಬೈಲ್ ಹಿಡಿದು ಫಿಲ್ಮ್, ಗೇಮ್, ರೀಲ್ಸ್ ಮುಂತಾದವುಗಳನ್ನು ನೋಡುವುದರಲ್ಲೇ ಮಗ್ನರಾಗಿರುತ್ತಾರೆ. ಚಿಕ್ಕ ಮಕ್ಕಳು ಕೂಡ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿಲ್ಲ. ಈ ರೀತಿ ಪುಸ್ತಕದಿಂದ ದೂರವಿರುವ ಈ ಯುಗದಲ್ಲಿ ತೀರ ಅಪರೂಪವೇ ಎಂಬಂತೆ ಒಂದು ಪುಸ್ತಕದ ಹಳ್ಳಿ ತಲೆ ಎತ್ತಿದೆ. 

ಆಸ್ಟ್ರೇಲಿಯಾದಲ್ಲಿ ವಿಚಿತ್ರ ಪ್ರಾಣಿ ಜೊತೆ ಅನುಶ್ರೀ! ಈ ಪ್ರಾಣಿ ಯಾವ್ದು ಕಂಡು ಹಿಡಿರಿ ನೋಡೋಣ ಅಂತಿದ್ದಾರೆ ಮಾತಿನ ಮಲ್ಲಿ

ಪುಸ್ತಕ ಪ್ರೇಮಿಗಳ ಸ್ವರ್ಗ ಮಹಾರಾಷ್ಟ್ರ (Maharashtra) ದ ಈ ಹಳ್ಳಿ : ಮಹಾರಾಷ್ಟ್ರದ ಪುಣಾದಿಂದ 100 ಕಿಲೋಮೀಟರ್ ದೂರದ ಸತಾರಾ ಜಿಲ್ಲೆಯಲ್ಲಿರುವ ಭಿಲಾರ್ ಎಂಬ ಹಳ್ಳಿಯೇ ಪುಸ್ತಕದ ಹಳ್ಳಿಯಾಗಿದೆ. ಭಿಲಾರ್ ಹಳ್ಳಿ ಮೊದಲು ಅಲ್ಲಿ ಸಿಗುವ ಲೀಚಿ ಹಣ್ಣಿಗೆ ಹೆಸರುವಾಸಿಯಾಗಿತ್ತು. ಈಗ ಹಣ್ಣಿನ ಜೊತೆ ಪುಸ್ತಕದ ರುಚಿಯೂ ಎಲ್ಲರಿಗೆ ಸಿಗುತ್ತಿದೆ. ಇಲ್ಲಿರುವ ಹಲವು ಪುಸ್ತಕಗಳು ಜನರನ್ನು ಆಕರ್ಷಿಸುತ್ತವೆ. ಭಿಲಾರ್ ಊರಿನಲ್ಲಿರುವ ಸುಮಾರು 35 ಮನೆಗಳಲ್ಲಿ ಗ್ರಂಥಾಲಯವನ್ನು ಆರಂಭಿಸಲಾಗಿದೆ. ಅಲ್ಲಿನ ಮನೆ, ದೇವಸ್ಥಾನ, ಶಾಲೆ, ವಿಶ್ರಾಂತಿ ಧಾಮಗಳನ್ನು ಲೈಬ್ರರಿಯನ್ನಾಗಿ ಪರಿವರ್ತಿಸಲಾಗಿದೆ. ಈ ಹಳ್ಳಿಗೆ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡಿ ತಮಗೆ ಇಷ್ಟವಾಗುವ ಪುಸ್ತಕಗಳನ್ನು ಓದುತ್ತಾರೆ.

ಇದು ಜಗತ್ತಿನ Healthiest Place, 100 ವರ್ಷ ದಾಟಿದವರು ನೂರಾರು ಮಂದಿ ಇದ್ದಾರಿಲ್ಲಿ!

ಎಲ್ಲ ಬಗೆಯ ಪುಸ್ತಕಗಳೂ ಇಲ್ಲಿವೆ : ಈ ಪುಸ್ತಕದ ಹಳ್ಳಿಯಲ್ಲಿ ಬಹುತೇಕ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳೂ ಸಿಗುತ್ತವೆ. ಸಾಹಿತ್ಯ, ಕಲೆ, ರಾಜಕೀಯ ಮುಂತಾದ ಅನೇಕ ವಿಷಯಗಳಿಗೆ ಸಂಬಂಧಪಟ್ಟ ಸುಮಾರು 50 ಸಾವಿರ ಪುಸ್ತಕಗಳು ಇಲ್ಲಿವೆ. ಈ ಎಲ್ಲ ಪುಸ್ತಕಗಳನ್ನು ಓದುಗರು ಗಂಟೆಗಟ್ಟಲೆ ಕುಳಿತು ಓದಬಹುದಾಗಿದೆ. ಮಕ್ಕಳ ಪುಸ್ತಕಗಳೂ ಲಭ್ಯ: ಈ ಪುಸ್ತಕದ ಹಳ್ಳಿಗೆ ಭೇಟಿ ನೀಡುವ ಮಕ್ಕಳಿಗೆ ಬೇಸರವಾಗೋದಿಲ್ಲ. ಏಕೆಂದರೆ ಇಲ್ಲಿ ಮಕ್ಕಳು ಇಷ್ಟಪಡುವಂತಹ ಅನೇಕ ಪುಸ್ತಕಗಳಿವೆ. ಮಕ್ಕಳಿಗಾಗಿಯೇ ಬೇರೆ ಸೆಕ್ಷನ್ ಅನ್ನು ನಿರ್ಮಿಸಲಾಗಿದೆ. ಇಲ್ಲಿರುವ ಮೋಜಿನ ಪುಸ್ತಕಗಳು ಮಕ್ಕಳನ್ನು ಬೇರೆಯದೇ ಆದ ಕಾಲ್ಪನಿಕ ಲೋಕಕ್ಕೆ ಕೊಂಡೊಯ್ಯುತ್ತದೆ.

ಪುಸ್ತಕ ಓದಲು ಹಣ ನೀಡಬೇಕಾಗಿಲ್ಲ : ಪುಸ್ತಕ ಪ್ರೇಮಿಗಳಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ. ಪುಸ್ತಕ ಪ್ರೇಮಿಗಳು ಯಾವುದೇ ತೊಂದರೆ ಇಲ್ಲದೇ ಪುಸ್ತಕ ಓದಬೇಕೆನ್ನುವ ಕಾರಣಕ್ಕೆ ಇಲ್ಲಿ ಅನೇಕ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಉಳಿದ ಗ್ರಂಥಾಲಯಗಳಂತೆ ಇಲ್ಲಿ ಪುಸ್ತಕಗಳನ್ನು ಓದಲು ನೀವು ಯಾವುದೇ ರೀತಿಯ ಹಣವನ್ನು ಕೊಡಬೇಕಾಗಿಲ್ಲ. ನೀವು ಉಚಿತವಾಗಿ ನಿಮಗೆ ಇಷ್ಟವಾಗುವ ಯಾವ ಪುಸ್ತಕವನ್ನು ಎಷ್ಟು ಸಮಯ ಬೇಕಾದರೂ ಓದುವ ಅವಕಾಶ ಭಿಲಾರ್ ಹಳ್ಳಿಯಲ್ಲಿದೆ. ಭಿಲಾರ್ ಹಳ್ಳಿಯಲ್ಲಿ ಉಳಿದುಕೊಂಡು ಪುಸ್ತಕವನ್ನು ಓದುವವರಿಗೆ ಇಲ್ಲಿ ವಸತಿ ಸೌಲಭ್ಯ ಕೂಡ ಇದೆ. ಊಟ, ವಸತಿಯ ಖರ್ಚನ್ನು ಪ್ರವಾಸಿಗರೇ ಭರಿಸಬೇಕಾಗುತ್ತದೆ.

ಆಧುನಿಕತೆಯ ಹಿಂದೆ ಓಡುತ್ತಿರುವ ಈ ಕಾಲದಲ್ಲಿ ಪುಸ್ತಕವನ್ನು ಓದುವವರೇ ವಿರಳ. ಇದರಿಂದಾಗಿ ಇಂದು ಅನೇಕ ಗ್ರಂಥಾಲಯಗಳು ಮುಚ್ಚಿಹೋಗಿವೆ, ಪುಸ್ತಕಗಳು ಮೂಲೆಗುಂಪಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪುಸ್ತಕದ ಬಗ್ಗೆ ಅರಿವು ಮೂಡಿಸುವ ಮತ್ತು ಪುಸ್ತಕದ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿರುವ ಈ ಹಳ್ಳಿ ಎಲ್ಲರಿಗೂ ಮಾದರಿಯಾಗಿದೆ.
 

Latest Videos
Follow Us:
Download App:
  • android
  • ios