ಆಂಕರ್ ಅನುಶ್ರೀ ಆಸ್ಟ್ರೇಲಿಯಾ ಟೂರ್‌ನಲ್ಲಿದ್ದಾರೆ. ಅಲ್ಲೊಂದು ವಿಚಿತ್ರ ಪ್ರಾಣಿ ಜೊತೆ ಪೋಸ್ ಕೊಟ್ಟಿದ್ದಾರೆ. ಆ ಪ್ರಾಣಿ ಯಾವ್ದು ಅಂತ ಅವರಿಗೆ ಗೊತ್ತಿಲ್ವಂತೆ. ನಿಮಗೊತ್ತಾ? 

ಸಿಕ್ಕಾಪಟ್ಟೆ ಬ್ಯುಸಿ ಆಂಕರ್ ಅನುಶ್ರೀಗೆ ಕೊಂಚ ವಿರಾಮ ಬೇಕು ಅನಿಸಿದೆಯಂತೆ. ಸೋ ಆಸ್ಟ್ರೇಲಿಯಾಕ್ಕೆ ಟೂರ್ ಹೋಗಿದ್ದಾರೆ. ಅಲ್ಲೊಂದು ಕಡೆ ಮೃಗಾಲಯ ವಿಸಿಟ್ ಮಾಡುವಾಗ ಒಂದು ವಿಚಿತ್ರ ಪ್ರಾಣಿ ಅವರ ಗಮನ ಸೆಳೆದಿದೆ. ಆ ಪ್ರಾಣಿ ಜೊತೆಗೆ ನಿಂತು ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು. ಅಂದ ಹಾಗೆ ಈ ಮಾತಿನ ಮಲ್ಲಿಗೆ ಮೊದಲಿಂದಲೂ ಪ್ರಾಣಿಗಳು ಅಂದರೆ ಶ್ಯಾನೆ ಪಿರೂತಿ. ಮನೆಯಲ್ಲಿ ಮುದ್ದಾದ ನಾಯಿ ಸಾಕಿದ್ದರು. ಅದು ತೀರಿಕೊಂಡಾಗ ಬಹಳ ದಿನ ಡಿಪ್ರೆಶನ್‌ನಲ್ಲಿ ಇದ್ದರು. ಎಲ್ಲೇ ಹೋದರೂ ಈ ಹೆಣ್ಮಗಳ ಗಮನ ಸೆಳೆಯೋದು ಪ್ರಾಣಿಗಳು. ನಾಯಿಗಳನ್ನು ಕಂಡರಂತೂ ಬಹಳ ಮುದ್ದು. ಎಲ್ಲಿದ್ದರೂ ಅವರ ಕಣ್ಣು ಪ್ರಾಣಿಗಳ ಮೇಲೆ ಇರುತ್ತೆ.

ಇತ್ತೀಚೆಗೆ ಅನುಶ್ರೀ ಅವರ ಯೂಟ್ಯೂಬ್ ಸಖತ್ ಫೇಮಸ್ ಆಗ್ತಿದೆ. ಅನೇಕ ಸ್ಟಾರ್‌ಗಳನ್ನು ಅವರು ತಮ್ಮ ಯೂಟ್ಯೂಬ್‌ನಲ್ಲಿ ಸಂದರ್ಶನ ಮಾಡಿದ್ದಾರೆ. ಇತ್ತೀಚೆಗೆ ಟಗರು ಪಲ್ಯ ಸಿನಿಮಾದ ಟೀಮ್‌ ಅನ್ನು ಮಾತನಾಡಿಸುವಾಗ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮದುವೆ ವಿಚಾರವೂ ರಿವೀಲ್ ಆಗಿತ್ತು. ಇನ್ನು ರಿಯಾಲಿಟಿ ಶೋ ವಿಚಾರಕ್ಕೆ ಬಂದರೆ ಜೀ ಕನ್ನಡದ ಪ್ರಸಿದ್ಧ ಶೋಗಳಿಗೆ ಅವರೇ ಆಂಕರ್. ಪಟ ಪಟ ಅರಳು ಹುರಿದಂತೆ ಮಾತನಾಡ್ತಾ ನಡು ನಡುವೆ ಜೋಕ್ ಹಾರಿಸ್ತಾ ಎಲ್ಲರನ್ನು ಎಂಟರ್‌ಟೈನ್ ಮಾಡೋದ್ರಲ್ಲಿ ಇವರದು ಎತ್ತಿದ ಕೈ. ಇವರು ಎಷ್ಟೊತ್ತು ಮಾತಾಡಿದ್ರೂ ಬೋರ್ ಆಗೋದಿಲ್ಲ ಅನ್ನೋದು ಇವರ ಫ್ಯಾನ್ಸ್ ಹೇಳೋ ಮಾತು. ಅಂದಹಾಗೆ ಅನುಶ್ರೀ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಯಾವ ಸ್ಟಾರ್ ನಟಿಯರಿಗೂ ಇಲ್ಲದ ಫ್ಯಾನ್ ಫಾಲೊವಿಂಗ್ ಇವರಿಗೆ ಇದೆ.

ಸೀರಿಯಲ್​ನಲ್ಲಿ ಮೆಸ್​ ನಡೆಸ್ತಿರೋ ಪುಟ್ಟಕ್ಕನ ಮಕ್ಕಳು ನಿಜವಾಗ್ಲೂ ಹೇಗೆ ಅಡುಗೆ ಮಾಡ್ತಾರೆ ನೋಡಿ...

ಮಂಗಳೂರ ಪ್ರಾದೇಶಿಕ ಚಾನೆಲ್ ಒಂದರಲ್ಲಿ ಆಂಕರಿಂಗ್ ಜರ್ನಿ ಶುರು ಮಾಡಿದ ಅನುಶ್ರೀ ಈ ಎತ್ತರಕ್ಕೆ ಏರಿದ್ದೇ ಅಚ್ಚರಿ. ಅಂದ ಹಾಗೆ ಈ ಹೆಣ್ಣುಮಗಳು ಇದೀಗ ಆಸ್ಟ್ರೇಲಿಯಾ ಟೂರ್‌ನ ವಿವಿಧ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

ಇದೀಗ ಅನುಶ್ರೀ ಒಂದು ಕ್ಯೂಟ್ ಪ್ರಾಣಿ ಜೊತೆಗಿನ ಫೋಟೋ ಶೇರ್ (share) ಮಾಡಿದ್ದು ಸಾಕಷ್ಟು ಜನ ಲೈಕ್ ಮಾಡ್ತಿದ್ದಾರೆ.

'Can you guess the animal? - Not me' ಅಂತ ಕಾಲೆಳೆಯುತ್ತಾ ಇನ್‌ಸ್ಟಾದಲ್ಲಿ ಇದರ ಫೋಟೋ ಶೇರ್ ಮಾಡಿರೋ ಅನುಶ್ರೀ ಅದಕ್ಕೆ ಫನ್ನಿ ಕ್ಯಾಪ್ಶನ್ನೂ ಕೊಟ್ಟಿದ್ದಾರೆ. 'ಆಸ್ಟ್ರೇಲಿಯಾ ಈ ಪ್ರಾಣಿ ನೋಡಿ ನಂಗೆ ನೆನಪಾದ ಹಾಡು.. 'ಏಳಯ್ಯ ಎವೆರೆಸ್ಟು .. ಎಷ್ಟು ಮಾಡ್ತೀಯ ರೆಸ್ಟು.. ಸಕ್ಕತ್ ಮುದ್ದು ಆದ್ರೆ ಅಷ್ಟೇ ಸೋಂಬೇರಿ ಅಂತೆ. ಇದರ ಹೆಸರು ಗೊತ್ತ?' ಅಂತ ಅನುಶ್ರೀ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ರೆಸ್ಪಾನ್ಸ್ ಕೊಟ್ಟಿದ್ದಾರೆ.

View post on Instagram

ಅಂದಹಾಗೆ ಇದು ಕೋಲ ಬೇರ್‌ (koala bear) . ಇದು ಅಳಿವಿನಂಚಿನಲ್ಲಿರುವ ಮುದ್ದಾದ ಪ್ರಾಣಿ. ನೋಡೋದಕ್ಕೆ ಪಾಂಡಾದ ಹಾಗೆ ಕಾಣೋ ಇದು ಈ ಕರಡಿ ಜಾತಿಯ ಪ್ರಾಣಿ ಇರಬಹುದಾ ಅನ್ನೋ ಡೌಟ್ (doubt) ಬರಬಹುದು. ಆದರೆ ಅಲ್ಲ. ಇದು ಅಸ್ಟ್ರೇಲಿಯಾದಲ್ಲಿ ಕಂಡು ಬರುವ ಒಂದು ಪ್ರಾಣಿ ಪ್ರಭೇದ. ಸಾಮಾನ್ಯವಾಗಿ ಮರದಲ್ಲಿ ವಾಸಿಸುವ ಇದು ಸಸ್ಯಹಾರಿ. ಅಳಿವಿನಂಚಿನಲ್ಲಿ ಇರುವ ಮುದ್ದಾದ ಪ್ರಾಣಿಯ ಸಂತತಿ ಸಂಖ್ಯೆ ಈಗ ಕೊಂಚ ಹೆಚ್ಚಾಗುತ್ತಿದೆಯಂತೆ. ಈ ಪ್ರಾಣಿಯ ಮುಖದಲ್ಲೊಂದು ಮುಗ್ದತೆ ಇದೆ. ಹೊಳೆವ ಕಂಗಳು, ಮುಗ್ಧ ಮುಖ ಕಂಡು ಮನ ಸೋಲದವರಿಲ್ಲ. ಕೋಲ ಬೀರ್‌ಗಳು ಚಿಕ್ಕದಿರಲಿ, ದೊಡ್ಡದಿರಲಿ, ಮಲಗಿರಲಿ , ಎಚ್ಚರವಿರಲಿ ಹೇಗಿದ್ದರೂ ನೋಡಲು ಚೆಂದ. ಸಾಮಾಜಿಕ ತಾಣದಲ್ಲಿ (social media) ಕೋಲ ಬೇರ್‌ಗಳ ವೀಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಕರಡಿ ಮುದ್ದಿನ ಹುಡುಗಿ ಕೋಲ ಜೊತೆ ನಿಂತಿರೋ ಫೋಟೋ ಕೂಡ ವೈರಲ್ ಆಗ್ತಿದೆ.

ಆಸ್ಟ್ರೇಲಿಯಾದಲ್ಲಿ ಅನುಶ್ರೀ: ಮಾನವನಾಗಿ ಹುಟ್ಟಿದ ಮೇಲೆ ಏನೇನ್​ ಕಂಡೆ ಎಂದ ಕುಡ್ಲ ಬೆಡಗಿಗೆ ಫ್ಯಾನ್ಸ್​ ರಿಪ್ಲೈ ಹೀಗಿದೆ