ಇನ್ಸ್ಟಾಗ್ರಾಮ್ ಪ್ರಭಾವಿಗಳಿಗೆ ಅಯೋಧ್ಯೆ ಹಾಟ್ಸ್ಪಾಟ್… ಎಲ್ಲಿ ನೋಡಿದ್ರೂ ರೀಲ್ಸ್.. ರೀಲ್ಸ್!
ಅಯೋಧ್ಯೆಯತ್ತ ಎಲ್ಲರ ಚಿತ್ತವಿದೆ. ರಾಮ ಮಂದಿರದ ದರ್ಶನ ಪಡೆಯಲು ಜನರು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಅಯೋಧ್ಯೆಗೆ ಹೋಗ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಪ್ರವಾಸಿಗರಿಗಿಂತ ಅಲ್ಲಿಗೆ ಬರ್ತಿರೋರು ರೀಲ್ಸ್ ಪ್ರೇಮಿಗಳು.
ಮುಖ್ಯವಾಹಿನಿಗಳು ಮಾತ್ರವಲ್ಲದೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಎಕ್ಸ್ ನಂತಹ ಸಾಮಾಜಿಕ ಜಾಲತಾಣಗಳ ಕೇಂದ್ರ ಬಿಂದು ಸದ್ಯ ಯುಪಿಯ ಅಯೋಧ್ಯೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರ ಕಣ್ಣು ಅಯೋಧ್ಯೆ ಮೇಲಿದೆ. ನೆನಪಿರಲಿ, ಜನವರಿ 22 ರಂದು ಭಗವಂತ ಶ್ರೀರಾಮನ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಇದಕ್ಕೆ ಮುನ್ನ ಅಂದ್ರೆ ಜನವರಿ 15 ರಂದು ಗರ್ಭಗುಡಿಯಲ್ಲಿ ರಾಮ್ ಲಾಲಾ ವಿಗ್ರಹ ಸ್ಥಾಪನೆಯಾಗಲಿದೆ. ಹಾಗಾಗಿಯೇ ಅಯೋಧ್ಯೆ ಇಡೀ ವಿಶ್ವದ ಜನರ ಗಮನ ಸೆಳೆಯುತ್ತಿದೆ. ಅಯೋಧ್ಯೆಗೆ ಸಂಬಂಧಿಸಿದ ಎಲ್ಲ ಸುದ್ದಿಗಳು ಮೀಡಿಯಾದಲ್ಲಿ ಮಾತ್ರ ಬರ್ತಿಲ್ಲ. ಹಿರಿಯರು ಮಾತ್ರ ಈ ಬಗ್ಗೆ ಚರ್ಚೆ ಮಾಡ್ತಿಲ್ಲ. ಮೊಬೈಲ್ ಕೈನಲ್ಲಿ ಹಿಡಿದ ಯುವಕರನ್ನೂ ಅಯೋಧ್ಯೆ ಆಕರ್ಷಿಸಿದೆ.
ಈಗಿನ ದಿನಗಳಲ್ಲಿ ರೀಲ್ಸ್ (Reels) ಮಾಡಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಒಳ್ಳೆ ಕಂಟೆಂಟ್ (Content) ನೀಡಿದ್ರೆ ಜನ ಹೆಚ್ಚಿಗೆ ಬರ್ತಾರೆ ಎನ್ನುವ ಅಭಿಪ್ರಾಯ ರೀಲ್ಸ್ ಪ್ರೇಮಿಗಳಲ್ಲಿದೆ. ಹಾಗಾಗಿಯೇ ಅವರು ಸಾಕಷ್ಟು ಪ್ರಯತ್ನ ನಡೆಸಿ, ಸಾಹಸಗಳನ್ನು ಮಾಡಿ, ವಿಡಿಯೋ (Video) ಫೋಸ್ಟ್ ಮಾಡ್ತಾರೆ.
ಹಸಿರೊಡಲ ಭೂಮಿ, ಧುಮ್ಮಿಕ್ಕುವ ಜಲಪಾತ; 2024ರಲ್ಲಿ ನೋಡಲೇಬೇಕಾದ ಜಾಗಗಳಿವು
ಈಗ ಅಯೋಧ್ಯೆ ಕಂಟೆಂಟ್ ಕ್ರಿಯೇಟರ್ ಗಳ ನೆಚ್ಚಿನ ಜಾಗವಾಗಿದೆ. ಅಯೋಧ್ಯೆಗೆ ಕಂಟೆಂಟ್ ಕ್ರಿಯೇಟರ್ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದಾರೆ. ಕೈನಲ್ಲಿ ಮೊಬೈಲ್ ಹಿಡಿದು ವಿಡಿಯೋ ಮಾಡ್ತಾ, ಅಯೋಧ್ಯೆಯ ಮೂಲೆ ಮೂಲೆಯ ಚಿತ್ರಣವನ್ನು ಜನರಿಗೆ ನೀಡ್ತಿದ್ದಾರೆ.
2024ರಲ್ಲಿ ರಾಜ್ಯದಲ್ಲಿರೋ ಈ ಅತ್ಯದ್ಭುತ ಜಾಗಗಳಿಗೆ ಮಿಸ್ ಮಾಡ್ದೆ ವಿಸಿಟ್ ಮಾಡಿ
ಈ ರೀಲ್ಸ್ ಪ್ರೇಮಿಗಳು ಅಯೋಧ್ಯೆ ಅಭಿವೃದ್ಧಿ ಬಗ್ಗೆ ಹೆಚ್ಚು ಚಿಂತೆ ಮಾಡ್ತಿಲ್ಲ. ಅಯೋಧ್ಯೆಯಲ್ಲಿ ಯಾವೆಲ್ಲ ಬೆಳವಣಿಗೆ ಆಗ್ತಿದೆ ಅಥವಾ ಆಗಬೇಕು ಎನ್ನುವ ಬಗ್ಗೆ ವಿಶ್ಲೇಷಣೆ ಮಾಡುವ, ಗಂಭೀರ ಚರ್ಚೆ ನಡೆಸುವ ಅಗತ್ಯವೂ ಅವರಿಗಿಲ್ಲ. ಅವರು ನಮ್ಮ ಖಾತೆಯ ಫಾಲೋವರ್ಸ್ ಹಾಗೂ ಲೈಕ್ಸ್ ಹೆಚ್ಚಾಗಲು ಆದ್ಯತೆ ನೀಡಿ, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತಿದ್ದಾರೆ. ಮೊದಲೇ ಹೇಳಿದಂತೆ ಅಯೋಧ್ಯೆಯ ಎಲ್ಲ ಭಾಗವನ್ನು ಇವರು ಕವರ್ ಮಾಡ್ತಿದ್ದಾರೆ. ದಶರಥ್ ಮಹಲ್‌ನಿಂದ ಸರಯು ಬೀಚ್‌ವರೆಗೆ ಇನ್ಸ್ಟಾಗ್ರಾಮ್ ಪ್ರಭಾವಿಗಳ ದೊಡ್ಡ ಗುಂಪು ಇದೆ. ಈ ಸ್ಥಳಗಳು ರೀಲ್‌ಗಳಿಗೆ ಹೊಸ ಹಾಟ್‌ಸ್ಪಾಟ್‌ಗಳಾಗಿವೆ. ಅಲ್ಲಿ ನೀವು ಸ್ಥಳ ವೀಕ್ಷಣೆ ಮಾಡುವುದಕ್ಕಿಂತ ರೀಲ್ಸ್ ಮಾಡೋರನ್ನು ಹೆಚ್ಚು ಕಾಣ್ಬಹುದು.
ಸಿನಿಮಾ ಹಾಡು, ಭಜನೆ ಎಲ್ಲವೂ ಇಲ್ಲಿ ರೀಲ್ಸ್ ಗೆ ಬಳಕೆಯಾಗ್ತಿವೆ. ನೆಟ್ಟಿರನ್ನು ತಮ್ಮತ್ತ ಸೆಳೆಯೋದು, ಹೆಚ್ಚು ಫಾಲೋವರ್ಸ್ ಪಡೆಯೋದು ಮಾತ್ರ ಈವರ ಗುರಿ. ಅಯೋಧ್ಯೆಯಲ್ಲಿ ಎಲ್ಲಿ ನೋಡಿದ್ರೂ ನೀವು ಮೊಬೈಲ್ ಫೋನ್ ಮೇಲೆ ಹಿಡಿದು ರೀಲ್ಸ್ ಮಾಡೋರನ್ನು ನೋಡ್ಬಹುದು. ಅಯೋಧ್ಯೆ ಮಾತ್ರವಲ್ಲ ಭಾರತದ ಅನೇಕ ಧಾರ್ಮಿಕ ಸ್ಥಳಗಳು ರೀಲ್ಸ್ ಪ್ರೇಮಿಗಳ ಫೆವರೆಟ್ ಸ್ಪಾಟ್. ಆದ್ರೆ ಅಯೋಧ್ಯೆ ಸದ್ಯ ಸುದ್ದಿಯಲ್ಲಿರುವ ಕಾರಣ ಅಲ್ಲಿಗೆ ಹೋಗ್ತಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಇತ್ತೀಚೆಗಷ್ಟೇ ಕೇದಾರನಾಥದಲ್ಲಿ ರೀಲುಗಳ ವಿಚಾರ ಹೆಚ್ಚು ಚರ್ಚೆಗೆ ಬಂದಿತ್ತು. ರೀಲ್ಸ್ ಮಾಡೋರ ಸಂಖ್ಯೆಯೇ ಹೆಚ್ಚಾದ ಕಾರಣ ದೇವಸ್ಥಾನಕ್ಕೆ ದರ್ಶನಕ್ಕೆ ಬರುವವರಿಗೆ ತುಂಬ ತೊಂದರೆ ಆಗ್ತಿದೆ ಎಂದು ದೇವಸ್ಥಾನ ಮಂಡಳಿ ಆರೋಪ ಮಾಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಚರ್ಚೆಗಳು ನಡೆದಿದ್ದವು. ನಂತ್ರ ದೇವಸ್ಥಾನಕ್ಕೆ ಫೋನ್ ತೆಗೆದುಕೊಂಡು ಹೋಗೋದನ್ನು ನಿಷೇಧಿಸಲಾಗಿತ್ತು. ಈಗ ಅಯೋಧ್ಯೆ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲಿ ನೋಡಿದ್ರೂ ರೀಲ್ಸ್ ಮಾಡೋರ ಸಂಖ್ಯೆ ಕಾಣ್ತಿದೆ. ಇದು ಪ್ರವಾಸಿಗರಿಗೆ ತೊಂದರೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸ್ಥಳೀಯ ಆಡಳಿತ ಯಾವ ಕ್ರಮಕೈಗೊಳ್ಳುತ್ತೆ ಎನ್ನುವುದನ್ನು ನೋಡ್ಬೇಕು.