Trending Video : ಇನ್ನೇನೂ ಕಮೋಡ್ ಮೇಲೆ ಕುಳಿತುಕೊಳ್ಬೇಕು… ಅಬ್ಬಾ ಬುಸ್ ಬುಸ್ ಹಾವು!
ಇನ್ಮುಂದೆ ಮೊಬೈಲ್ ಹಿಡಿದುಕೊಂಡೇ ಶೌಚಾಲಯಕ್ಕೆ ಹೋಗಿ ಹಂಗೆ ಕುಳಿತುಕೊಳ್ಬೇಡಿ. ಶೌಚಾಲಯದ ಸುತ್ತಮುತ್ತ, ಕಮೋಡ್ ಎಲ್ಲ ನೋಡಿ ಕುಳಿತುಕೊಳ್ಳಿ. ಇಲ್ಲ ಅಂದ್ರೆ ಯಡವಟ್ಟಾಗ್ಬಹುದು, ಪ್ರಾಣವೇ ಹೋಗ್ಬಹುದು.

ಕೆಲವರಿಗೆ ಶೌಚಾಚಯವೆಂದ್ರೆ ಸ್ವರ್ಗ. ಅಲ್ಲಿಯೇ ದಿನಗಟ್ಟಲೆ ಸಮಯ ಕಳೀರಿ ಅಂದ್ರೂ ಕಳೀತಾರೆ. ಶೌಚಾಲಯದಲ್ಲಿ ಮೊಬೈಲ್ ಹಿಡಿದು ಕುಳಿತ್ರೆ ಜನರಿಗೆ ಸಮಯದ ಜ್ಞಾನವೇ ಇರೋದಿಲ್ಲ. ಹಾಗೆ ಸಮಯ ಮರೆತು ಕುಳಿತಾಗ ಹಾವು ಬಂದ್ರೆ ಹೆಂಗಾಗಬೇಡ?
ಹಳ್ಳಿಯ ಶೌಚಾಲಯ (Toilet) ದ ಮೇಲ್ಭಾಗದಲ್ಲಿ, ಛಾವಣಿ ಮೇಲೆ ಆಗಾಗ ಹಾವುಗಳು ಕಾಣಿಸಿಕೊಳ್ಳುತ್ತಿರುತ್ತವೆ. ಅದೇ ಕಾರಣಕ್ಕೆ ರಾತ್ರಿ ಲೈಟ್ ಹಾಕಿಕೊಳ್ಳದೆ ಶೌಚಾಲಯಕ್ಕೆ ಹೋಗ್ಬೇಡಿ ಅಂತಾ ದೊಡ್ಡವರು ಸಲಹೆ ನೀಡ್ತಿರುತ್ತಾರೆ. ಛಾವಣಿ (Roof ) ಮೇಲೆ ಹಾವು ಕಾಣಿಸಿಕೊಳ್ಳಬಹುದೇನೋ ಆದ್ರೆ ಕಮೋಡ್ (Commode) ರಂಧ್ರದಿಂದ ಹಾವು ಬಂದಿದೆ ಅಂದ್ರೆ ನಂಬುತ್ತೀರಾ? ಹಾವು ಎಲ್ಲಿಂದ ಬೇಕಾದ್ರೂ ಬರಬಹುದು. ಅದಕ್ಕೆ ಈ ವೈರಲ್ ಸುದ್ದಿ ಸಾಕ್ಷಿ.
ಬರೀ ಲಿಫ್ಟ್ ಪಡೆದೇ 20 ಸಾವಿರ ಕಿಲೋ ಮೀಟರ್ ಸಂಚರಿಸಿದ ವಿದೇಶಿ ಪ್ರಜೆ
ಕಮೋಡ್ ನಲ್ಲಿ ಕಾಣಿಸಿಕೊಂಡ ಹಾವು : ಅರಿಝೋನಾದಲ್ಲಿ ಇಂಥ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲವೆಂದ್ರೆ ಮನೆ ಧೂಳಿನಿಂದ ಹಾಳು ಬಿದ್ದಂತೆ ಕಾಣುತ್ತದೆ. ಶಾಂತವಾಗಿರುವ, ಮನುಷ್ಯರ ಓಡಾಟ ಇರದ ಪ್ರದೇಶದಲ್ಲಿ ಹಾವುಗಳು ಓಡಾಡುತ್ತಿರುತ್ತವೆ. ಅರಿಝೋನಾದ ಮನೆಯಲ್ಲೂ ಅದೇ ಆಗಿದೆ. 4 ದಿನಗಳ ರಜೆಯ ನಂತರ, ಮಹಿಳೆ ತನ್ನ ಮನೆಗೆ ಬಂದಾಗ, ಅವಳು ಶೌಚಾಲಯಕ್ಕೆ ಹೋಗಿದ್ದಾಳೆ. ಅದೃಷ್ಟವಶಾತ್ ಕಮೋಡನ್ನು ನೋಡಿದ್ದಾಳೆ. ಆಗ ಅದ್ರಲ್ಲಿ ಕಪ್ಪಗೆ ಏನೋ ಇರೋದು ಕಾಣಿಸಿದೆ. ಅದೇನೂ ಅಂತಾ ಸೂಕ್ಷ್ಮವಾಗಿ ನೋಡಿದಾಗ ಅದು ಹಾವು ಎಂಬುದು ಗೊತ್ತಾಗಿದೆ.
ಹಾವು ನೋಡಿದ ಮಹಿಳೆ ದಿಗ್ಭ್ರಮೆಗೊಂಡಿದ್ದಾಳೆ. ಹಾವು ಕಾಣಿಸಿಕೊಂಡ ಮನೆಯಲ್ಲಿದ್ದ ಮಹಿಳೆಯ ಹೆಸರು ಮಿಚೆಲ್ ಲೆಸ್ಪ್ರಾನ್. ಲೆಸ್ಪ್ರಾನ್ ನಾಲ್ಕು ದಿನ ಮನೆಯಲ್ಲಿ ಇರಲಿಲ್ಲ. ರಜೆ ಮೇಲೆ ಹೊರಗೆ ಹೋಗಿದ್ದವಳು ಮನೆಗೆ ಬಂದ ನಂತ್ರ ಶೌಚಾಲಯಕ್ಕೆ ಹೋಗಿದ್ದಾಳೆ. ಶೌಚಾಲಯಕ್ಕೆ ಹೋಗಿ ಕಮೋಡ್‌ನ ಮುಚ್ಚಳವನ್ನು ಎತ್ತಿ ನೋಡಿದಾಗ ಶಾಕ್ ಆಗಿದ್ದಾಳೆ. ಕಮೋಡ್ ಗುಂಡಿಯಲ್ಲಿ ಕಪ್ಪು ಹಾವು ಸಿಕ್ಕಿಹಾಕಿಕೊಂಡಿರುವುದು ಕಂಡಿದೆ. ಲೆಸ್ಪ್ರಾನ್ ಹಾವನ್ನು ಓಡಿಸಲು ನಾನಾ ಪ್ರಯತ್ನ ಮಾಡಿದ್ದಾಳೆ. ಹಾವನ್ನು ಹಿಂದಕ್ಕೆ ಓಡಿಸಲು ಇಲ್ಲವೆ ಹೊರಗೆ ತರಲು ಆಕೆ ಮಾಡಿದ ಪ್ರಯತ್ನ ವಿಫಲವಾಗಿದೆ. ಏನೇ ಮಾಡಿದ್ರೂ ಹಾವು ಹೋಗ್ಲಿಲ್ಲ. ನಂತ್ರ ಕೀಟ ನಿಯಂತ್ರಣ ಕಂಪನಿ ರಾಟಲ್ ಸ್ನೇಕ್ ಸೊಲ್ಯೂಷನ್ಸ್ ಗೆ ಕರೆ ಮಾಡಿ ಹಾವನ್ನು ಹೊರ ತೆಗೆಯುವಂತೆ ಮನವಿ ಮಾಡಿದ್ದಾಳೆ.
ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷ್
ಕಮೋಡ್ ರಂಧ್ರದಲ್ಲಿ ಸಿಲುಕಿಕೊಂಡಿತ್ತು ಹಾವು : ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಹಾವು ಕಮೋಡ್‌ನಲ್ಲಿ ಸಿಕ್ಕಿಬಿದ್ದಿರುವುದನ್ನು ಕಾಣಬಹುದು. ಮಹಿಳೆ ಕರೆ ಮೇರೆಗೆ ಮನೆಗೆ ಬಂದ ಉದ್ಯೋಗಿ ಕಮೋಡ್‌ನಲ್ಲಿ ಕೈ ಹಾಕಿ ಹಾವನ್ನು ಹೊರತೆಗೆಯುತ್ತಾನೆ. ಒಮ್ಮೆ ಅವನಿಗೆ ಹಾವು ಕಚ್ಚಲು ಪ್ರಯತ್ನಿಸುತ್ತದೆ. ಹಾವು ಹೆದರಿಸಿದ್ರೂ ವ್ಯಕ್ತಿ ಒಂದು ಕೈಯಿಂದ ಹಾವನ್ನು ಹೊರತೆಗೆಯುತ್ತಾನೆ. ಇನ್ನೊಂದು ಕೈಯಿಂದ ಸೆಲ್ ಫೋನ್ ಹಿಡಿದು ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾನೆ.
ಕಮೋಡ್ ನಲ್ಲಿ ಸಿಕ್ಕಿಬಿದ್ದ ಹಾವು ಸಣ್ಣದಾಗಿರಲಿಲ್ಲ. ಅದು 3 ರಿಂದ 4 ಅಡಿಗಳಷ್ಟು ಉದ್ದವನ್ನು ಹೊಂದಿತ್ತು ಎನ್ನಲಾಗಿದೆ. ಹಾವನ್ನು ಹಿಡಿದ ಉದ್ಯೋಗಿ ಅದನ್ನು ಕಾಡಿಗೆ ಬಿಟ್ಟುಬಂದಿದ್ದಾನೆ. Mooha Swartz ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ಜನರು ಹೀಗೂ ಇರುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಹಾವು ಕೋಚ್‌ವಿಪ್ ಜಾತಿಗೆ ಸೇರಿದ್ದು : ಹಿಡಿದ ಹಾವು ಕೋಚ್‌ವಿಪ್ ಹಾವು ಎಂದು ಹೇಳಲಾಗಿದೆ. ಕೋಚ್‌ವಿಪ್‌ಗಳು ನಯವಾದ, ತೆಳ್ಳಗಿನ ಮತ್ತು ವೇಗವಾಗಿ ತೆವಳುವ ಹಾವುಗಳಾಗಿವೆ. ಈ ಹಾವುಗಳು ಸಾಮಾನ್ಯವಾಗಿ ದಕ್ಷಿಣ-ಪಶ್ಚಿಮ ಅಮೆರಿಕದ ಮರುಭೂಮಿಗಳಲ್ಲಿ ಕಂಡುಬರುತ್ತವೆ.