ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹೆದ್ದಾರಿ, ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿದ ಫೋಟೋ ವೈರಲ್‌

ಸೋಶಿಯಲ್‌ ಮೀಡಿಯಾ ಅದರಲ್ಲೂ ಎಕ್ಸ್‌ನಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಆನಂದ್‌ ಮಹೀಂದ್ರಾ, ಪ್ರತಿದಿನ ಒಂದಲ್ಲಾ ಒಂದು ವಿಚಾರವನ್ನು ಪೋಸ್ಟ್‌ ಮಾಡುತ್ತಾರೆ. ಇತ್ತೀಚಿಗೆ ಅವರು ಮಧ್ಯಪ್ರದೇಶದಲ್ಲಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ನಿರ್ಮಿಸಲಾದ ಹೆದ್ದಾರಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ

Anand Mahindra shares pic of highway that was built through tiger reserve Vin

ಸೋಶಿಯಲ್‌ ಮೀಡಿಯಾದಲ್ಲಿ ಸಾಮಾನ್ಯ ಜನರಿಂದಲೂ ಮೆಚ್ಚುಗೆ ಪಡೆದಂಥ ಉದ್ಯಮಿಗಳಿದ್ದರೆ ಅದರಲ್ಲಿ ಆನಂದ್‌ ಮಹೀಂದ್ರಾ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.  ಬಿಲಿಯನೇರ್ ಉದ್ಯಮಿ ಮೈಕ್ರೋ ಬ್ಲಾಗಿಂಗ್ ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ಸಾಕಷ್ಟು ಸಕ್ರಿಯರು. ಆಗಾಗ ಹೊಸ ಹೊಸ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಮಾತ್ರವಲ್ಲ ಸಮಾಜದಲ್ಲಿ ನಡೆಯೋ ತಪ್ಪು ಘಟನೆಗಳ ಬಗ್ಗೆಯೂ ಪೋಸ್ಟ್ ಮಾಡುತ್ತಾರೆ. ಇತ್ತೀಚಿಗೆ ಆನಂದ್ ಮಹೀಂದ್ರಾ, ಮಧ್ಯಪ್ರದೇಶದಲ್ಲಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ನಿರ್ಮಿಸಲಾದ ಹೆದ್ದಾರಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ

ಮಧ್ಯಪ್ರದೇಶದ ಪೆಂಚ್ ಟೈಗರ್ ರಿಸರ್ವ್ ಮೂಲಕ ರಾಷ್ಟ್ರೀಯ ಹೆದ್ದಾರಿ 44ರ ಭಾಗವಾಗಿರುವ ಎಲಿವೇಟೆಡ್ ಹೆದ್ದಾರಿಯ ಕುರಿತಾದ ಮಾಹಿತಿ ಇದಾಗಿದೆ. ಇದು ವನ್ಯಜೀವಿ ಸಹಬಾಳ್ವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಸಾರವನ್ನು ಸೆರೆಹಿಡಿದಿದೆ.

'ನನ್ನ ಹೆಸರು 'Mahi-ndra' ಆಗಿರೋದಕ್ಕೆ ಖುಷಿ ಇದೆ..' ಧೋನಿ ಹ್ಯಾಟ್ರಿಕ್‌ ಸಿಕ್ಸರ್‌ಗೆ ಆನಂದ್‌ ಮಹೀಂದ್ರಾ ಫಿದಾ!

ಮಹೀಂದ್ರಾ ಅವರ ಪೋಸ್ಟ್‌ನಲ್ಲಿ ಎರಡು ಆಕರ್ಷಕ ಛಾಯಾಚಿತ್ರಗಳಿವೆ. ಮೊದಲ ಚಿತ್ರವು ಎಲಿವೇಟೆಡ್ ಹೆದ್ದಾರಿಯನ್ನು ತೋರಿಸುತ್ತದೆ. NH44 ನ ಒಂದು ಭಾಗ, ಪೆಂಚ್ ಟೈಗರ್ ರಿಸರ್ವ್‌ನ ಹಚ್ಚ ಹಸಿರಿನ ಪರಿಸರವನ್ನು ಸೆರೆಹಿಡಿದಿದೆ. ಎರಡನೆಯ ಚಿತ್ರವು ಎಲಿವೇಟೆಡ್ ಹೆದ್ದಾರಿಯ ಕೆಳಗೆ ಹುಲಿ ಅಡ್ಡಾಡುತ್ತಿರುವುದನ್ನು ಸೆರೆಹಿಡಿಯುತ್ತದೆ, ವನ್ಯಜೀವಿಗಳ ಅಡೆತಡೆಯಿಲ್ಲದ ಸಂಚಾರಕ್ಕಾಗಿ ನಿರ್ಮಿಸಲಾದ ಹಾದಿಯ ಸಂಪೂರ್ಣ ಪ್ರಯೋಜನವನ್ನು ತೋರುತ್ತಿದೆ.

'ಪೆಂಚ್ ಟೈಗರ್ ರಿಸರ್ವ್ ಮೂಲಕ NH 44 \ರ ಭಾಗವಾಗಿರುವ ಎಲಿವೇಟೆಡ್ ಹೆದ್ದಾರಿಯ ಚಿತ್ರಗಳ ಅದ್ಭುತ ಜೋಡಣೆ' ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಚಿತ್ರಗಳು ಆಧುನಿಕ ಮೂಲಸೌಕರ್ಯ ಮತ್ತು ನೈಸರ್ಗಿಕ ಪರಿಸರ ಸಾಮರಸ್ಯದ ಮಿಶ್ರಣವನ್ನು ಚಿತ್ರಿಸುತ್ತವೆ. ಇದು ಸುಸ್ಥಿರ ಅಭಿವೃದ್ಧಿ ಮತ್ತು ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಸಂಕೇತಿಸುತ್ತದೆ. ಆನಂದ್ ಮಹೀಂದ್ರಾ ಹಂಚಿಕೊಂಡಾಗಿನಿಂದ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಯೂಟ್ಯೂಬರ್ ಆಗಿ ಮನೆ ಖರೀದಿಸಿದ ಟ್ರಕ್ ಡ್ರೈವರ್; ಇದಕ್ಕಿಂತ ಸ್ಪೂರ್ತಿ ಇನ್ನೇನು ಅಂದ್ರು ಆನಂದ್ ಮಹೀಂದ್ರ

ಒಬ್ಬ ಬಳಕೆದಾರರು, 'ಗ್ರೇಟ್ ಇನಿಶಿಯೇಟಿವ್. ಎಲ್ಲಾ ಅಭಿವೃದ್ಧಿಯ ನಂತರ ಮತ್ತೆ ನಾವು ಕಾಡಿಗೆ ಹೋಗುತ್ತಿದ್ದೇವೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಹುಲಿ ಸಂರಕ್ಷಿತ ಪ್ರದೇಶದ ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಗತ್ಯವನ್ನು ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios